KGF Verse: ಇನ್ನೊಂದು ವಾರ ಅಷ್ಟೇ ನೀವಿದ್ದ ಸ್ಥಳದಿಂದಲೇ ರಾಕಿ ಪ್ರಪಂಚ ನೋಡ್ಬಹುದು: ಏನಿದು 'ಕೆಜಿಎಫ್ ವರ್ಸ್'?
ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಎಲ್ಲಿ ನೋಡಿದರೂ ಕೆಜಿಎಫ್.. ಯಾರ ಬಾಯಲ್ಲಿ ನೋಡಿದರೂ ಕೆಜಿಎಫ್. ಇಲ್ಲಿವರೆಗೂ RRR ಅಂತಿದ್ದವರು. ಈಗ 'ಕೆಜಿಎಫ್ 2' ಜಪ ಮಾಡುತ್ತಿದ್ದಾರೆ. ಯಾವ ಸಿನಿಮಾ ಥಿಯೇಟರ್‌ಗೆ ಬರುತ್ತೋ? ನಾವು ಯಾವಾಗಾ ಸಿನಿಮಾ ನೋಡುತ್ತೇವೋ? ಅಂತ ಕಾದು ಕೂತಿದ್ದಾರೆ. ಈ ಗ್ಯಾಪ್‌ನಲ್ಲಿ ಹೊಂಬಾಳೆ ಫಿಲಂಸ್ ಹೊಸ ಹೊಸ ಸಾಹಸಕ್ಕೆ ಮುಂದಾಗಿದೆ.
'ಕೆಜಿಎಫ್ 2' ಟ್ರೈಲರ್ ರಿಲೀಸ್ ಮಾಡುವಾಗಲೇ ಹೊಂಬಾಳೆ ಫಿಲಂಸ್ 'ಕೆಜಿಎಫ್ ವರ್ಸ್' ಬಗ್ಗೆ ಅನೌನ್ಸ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೂ 'ಕೆಜಿಎಫ್ ವರ್ಸ್' ಅಂದರೆ ಏನು? ಇದು ಯಾವ ಟೆಕ್ನಾಲಜಿ? ಇದರಿಂದ ಯಾವ ರೀತಿಯ ಅನುಭವ ಆಗುತ್ತೆ? ಎನ್ನುವ ಗೊಂದಲಕ್ಕೆ ಬಿದ್ದಾರೆ. ಇದೆಲ್ಲದಕ್ಕೂ ಮಾರ್ಚ್ 30ಕ್ಕೆ ಉತ್ತರ ಸಿಗುತ್ತೆ ಎಂದೇ ನಂಬಲಾಗಿತ್ತು. ಅಲ್ಲೂ ಒಂದು ಟ್ವಿಸ್ಟ್ ಸಿಕ್ಕಿದೆ.
'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಮುನ್ನ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಹೊಸ ಟೆಕ್ನಾಲಿಜಿಯನ್ನು ಬಳಸಿಕೊಂಡು ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದೆ. ಅದುವೇ 'ಕೆಜಿಎಫ್ ವರ್ಸ್'. ಇದರ ಮೂಲಕ ಪ್ರೇಕ್ಷಕರನ್ನು ಸೆಳೆಯುವುದಷ್ಟೇ ಅಲ್ಲ. ತಂತ್ರಜ್ಞಾನದ ಮೂಲಕ ಭರ್ಜರಿ ಉದ್ಯಮಕ್ಕೂ ಇಳಿದಿದೆ.
Recommended Video


'ಕೆಜಿಎಫ್ ವರ್ಸ್' ಎಂದರೇನು?
'ಕೆಜಿಎಫ್ 2' ಟ್ರೈಲರ್ ಬಿಡುಗಡೆ ಮಾಡುವ ವೇಳೆ 'ಕೆಜಿಎಫ್ ವರ್ಸ್' ರಿಲೀಸ್ ಮಾಡುತ್ತಿರುವುದರ ಬಗ್ಗೆ ಘೋಷಣೆ ಮಾಡಿದ್ದರು. 'ಕೆಜಿಎಫ್ ವರ್ಸ್' ಅನ್ನೋದು ಆರ್ಟಿಫಿಷಿಯಲ್ ಆಗಿ ಸೃಷ್ಟಿ ಮಾಡಿದ ರಾಕಿ ಭಾಯ್ ಲೋಕ. ಇದಕ್ಕೆಂದೇ ಸೃಷ್ಟಿ ಮಾಡಿದ ಲೋಕದೊಳಗೆ ಒಂದು ಡಿವೈಸ್ ಮೂಲಕ ತಲುಪಬಹುದು. ನೀವು ಈ ಡಿವೈಸ್ ಅನ್ನುಕಣ್ಣಿಗೆ ಹಾಕಿಕೊಂಡರೆ, ನೀವು ಕೂತಲ್ಲಿಂದಲೇ ರಾಕಿ ಭಾಯಿ ಪ್ರಪಂಚದೊಳಗೆ ಪ್ರವೇಶ ಮಾಡಬಹುದು. ಅಲ್ಲಿ ನಿಮಗೆ ವಿಶಿಷ್ಟವಾದ ಅನುಭವ ಆಗಲಿದೆ. ಅದು ಹೇಗೆ ಆಗುತ್ತೆ? ಅನ್ನೋದು ಇನ್ನೊಂದು ವಾರದಲ್ಲಿ ಗೊತ್ತಾಗುತ್ತೆ.

ಒಂದು ವಾರ ಮುನ್ನ ಕೆಜಿಎಫ್ ವರ್ಸ್ ಸೇಲ್
'ಕೆಜಿಎಫ್ 2' ಸಿನಿಮಾ ಬಿಡುಗಡೆ ಏಪ್ರಿಲ್ 14ರಂದು ರಿಲೀಸ್ ಆಗಲಿದೆ. ಅದಕ್ಕೂ ಒಂದು ವಾರ ಮುನ್ನ 'ಕೆಜಿಎಫ್ ವರ್ಸ್' ಸೇಲ್ ಆರಂಭ ಆಗಲಿದೆ. ಡಿಜಿಟಲ್ ಪ್ರಪಂಚದಲ್ಲಿ ಸದ್ಯ ಭಾರಿ ಚಾಲ್ತಿಯಲ್ಲಿರುವ ಅವತಾರ್ ಎನ್‌ಎಫ್‌ಟಿ ಯನ್ನು ಹಾಗೂ ಡಿಜಿಟಲ್ ಆರ್ಟ್ ಅನ್ನು ಬಳಸಲಾಗಿದೆ. ಅವತಾರ್ ಎನ್‌ಎಫ್‌ಟಿ ಅನ್ನೋದು ಡಿಜಿಟಲ್ ಪ್ರೊಪೈಲ್ ಪಿಕ್ಚರ್ ಇದ್ದಂತೆ. ಇಲ್ಲಿರುವ ಒಂದೊಂದೂ ಕ್ಯಾರೆಕ್ಟರ್‌ಗಳೂ ಡಿಫ್ರೆಂಟ್ ಆಗಿ ಇರುತ್ತವೆ. ಕ್ಯಾರೆಕ್ಟರ್‌ಗಳೂ ಧರಿಸುವ ಬಟ್ಟೆ, ಬಣ್ಣ, ಮುಖಭಾವ ಎಲ್ಲವೂ ವಿಭಿನ್ನವಾಗಿರುತ್ತೆ. ಸೋಶಿಯಲ್ ಮೀಡಿಯಾದಲ್ಲೂ ಈ ಎನ್‌ಎಫ್‌ಟಿ ಭಾರೀ ಫೇಮಸ್ ಆಗುತ್ತಿದೆ. ಹೀಗಾಗಿ ಈ ಹೊಸ ಪ್ರಪಂಚಕ್ಕೆ ಲಗ್ಗೆಇಟ್ಟಿರುವ ಕೆಜಿಎಫ್ ತಂಡ ಅಭಿಮಾನಿಗಳಿಗೆ ಯಾವ ರೀತಿ ಹೊಸ ಅನುಭವ ನೀಡುತ್ತೆ? ಎನ್ನುವುದು ಸದ್ಯಕ್ಕೆ ಕುತೂಹಲ.

ಗೇಮ್ಸ್ ಕೂಡ ಇರುತ್ತೆ
ರಾಕಿ ಭಾಯ್ ಪ್ರಪಂಚದೊಳಗೆ ಎಂಟ್ರಿ ಕೊಟ್ಟರೆ, ನಿಮಗೆ ವಿಶೇಷ ಎಂಟ್ರಿ ಕೂಡ ಇರುತ್ತೆ. ರಾಕಿ ಭಾಯ್ ಪ್ರಪಂಚದೊಳಗೆ ಅದ್ಭುತವಾಗಿ ಗೇಮ್ಸ್, ಇವೆಂಟ್ಸ್ ಹಾಗೂ ಅವತಾರ್ ಎನ್‌ಎಫ್‌ಟಿ ಹಾಗೂ ಇನ್ನಿತರ ವಿಸ್ಮಯಗಳನ್ನು ನೋಡಬಹುದಾಗಿದೆ. 'ಕೆಜಿಎಫ್ ವರ್ಸ್' ಇದೇ ಏಪ್ರಿಲ್ 07ರಂದು ಸೇಲ್ ಆರಂಭ ಆಗಲಿದೆ.

ಮೆಟಾ ವರ್ಸ್ ಲೋಕದಲ್ಲಿ ಕೆಜಿಎಫ್
ಮೆಟಾ ವರ್ಸ್ ಅನ್ನುವುದು ಫ್ಯೂಚರ್ ಟೆಕ್ನಾಲಜಿ. ಇದೊಂದು ಕಾಲ್ಪನಿಕ ಡಿಜಿಟಲ್ ಪ್ರಪಂಚವೆಂದು ಎಂದುಕೊಳ್ಳಿ. ಇಲ್ಲಿ ನೀವೆ ನಿಮ್ಮ ಕಾಲ್ಪನಿಕ ಪ್ರಚಂಚವನ್ನು ಸೃಷ್ಟಿಸಿಕೊಳ್ಳಬಹುದು. ಸೋಶಿಯಲ್ ಮೀಡಿಯಾವನ್ನು ಬಳಿಸಿಕೊಳ್ಳಬಹುದು. ರಿಯಲ್ ವರ್ಲ್ಡ್‌ಗೆ ಪರ್ಯಾಯವಾಗಿ ಇನ್ನೊಂದು ಪ್ರಪಂಚವನ್ನು ಸೃಷ್ಟಿಸಿಕೊಳ್ಳಬಹುದು. ಈ ಪ್ರಪಂಚದ ಹಲವು ವಿಸ್ಮಯಗಳನ್ನು ಕಾಣಬಹುದು. ನೀವು ಇದ್ದ ಸ್ಥಳದಿಂದಲೇ ಖರೀದಿ ಮಾಡಬೇಕೆಂದಿರುವ ಸ್ಥಳಕ್ಕೆ ಹೋಗಿ ಶಾಪಿಂಗ್ ಮಾಡಬಹುದು. ಬೇರೆಲ್ಲೋ ಇರುವ ಸ್ನೇಹಿತರನ್ನು ಭೇಟಿ ಮಾಡಬಹುದು. ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳಬಹುದು. ಕಾಂಸರ್ಟ್‌ಗಳಿಗೆ ಹೋಗಬಹುದು. ಇವೆಂಟ್ಸ್‌ನಲ್ಲಿ ಭಾಗವಹಿಸಬಹುದು.


Click it and Unblock the Notifications











