KGF 2 Records: 4 ದಿನಗಳಲ್ಲಿ 'ಕೆಜಿಎಫ್ 2' ಸೃಷ್ಟಿಸಿದ ದಾಖಲೆಗಳ ಪಟ್ಟಿ ಹೇಗಿದೆ ನೋಡಿ?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬಿಡುಗಡೆಗೂ ಮುನ್ನ ವಿಶ್ವದಾದ್ಯಂತ ಕ್ರೇಜ್ ಹುಟ್ಟಾಕಿತ್ತು. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ ಅನ್ನುವಾಗಲೇ ಭರ್ಜರಿ ಪ್ರಚಾರ ಮಾಡಲಾಗಿತ್ತು. ಹೀಗಾಗಿ ಬಿಡುಗಡೆಯಾದ ದಿನದಿಂದಲೇ 'ಕೆಜಿಎಫ್ 2' ದಾಖಲೆಗಳ ಮೇಲೆ ದಾಖಲೆ ಬರೆದಿದೆ.

'ಕೆಜಿಎಫ್ 2' ಸಿನಿಮಾ ಕ್ರೇಜ್ ಹೇಗಿತ್ತು ಅನ್ನೋದು ಇಡೀ ವಿಶ್ವವೇ ಕಣ್ಣಾರೆ ಕಂಡಿದೆ. ಅಡ್ವಾನ್ಸ್ ಬುಕಿಂಗ್‌ನಿಂದ ಹಿಡಿದು, ಪ್ರಿಮಿಯರ್ ಶೋ ಹಾಗೂ ನಾಲ್ಕು ದಿನಗಳ ಗಳಿಕೆಯಲ್ಲಿ ಹೊಸ ಹೊಸ ರೆಕಾರ್ಡ್‌ಗಳನ್ನು ಸೃಷ್ಟಿ ಮಾಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಆ ಮಟ್ಟಕ್ಕೆ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಹಾಗಿದ್ದರೆ, ಮೊದಲ ನಾಲ್ಕು ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ ಎನೆಲ್ಲಾ ದಾಖಲೆಗಳನ್ನು ಮಾಡಿದೆ ಅನ್ನುವುದನ್ನ ತಿಳಿಯಲು ಮುಂದೆ ಓದಿ.

ಕರ್ನಾಟಕದ ಕೆಜಿಎಫ್ 2 ದಾಖಲೆ ಏನು?

ಕರ್ನಾಟಕದ ಕೆಜಿಎಫ್ 2 ದಾಖಲೆ ಏನು?

ಕಳೆದ ನಾಲ್ಕು ದಿನಗಳಿಂದ 'ಕೆಜಿಎಫ್ 2' ಬರೆದ ದಾಖಲೆಗಳೇನು ಅನ್ನೋದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಕರ್ನಾಟಕದಲ್ಲಿ ಏನೆಲ್ಲಾ ದಾಖಲೆಗಳನ್ನು ಬರೆದಿದೆ ಅನ್ನುವ ಪಟ್ಟಿ ಇಲ್ಲಿದೆ.

ಕರ್ನಾಟಕದಲ್ಲಿ ಅತೀ ಹೆಚ್ಚು ಓಪನಿಂಗ್ ಪಡೆದ ಸಿನಿಮಾ
ಕರ್ನಾಟಕದಲ್ಲಿ ವೀಕೆಂಡ್‌ನಲ್ಲಿ ದಾಖಲೆ ಓಪನಿಂಗ್
ಎರಡನೇ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ
ಮೂರನೇ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ
ನಾಲ್ಕನೇ ದಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ
ಅತೀ ಹೆಚ್ಚು ಕೆಲಕ್ಷನ್ ಮಾಡಿದ ಸಿನಿಮಾ 'ಕೆಜಿಎಫ್ 2'

ಹಿಂದಿ ಬೆಲ್ಟ್‌ನಲ್ಲಿ ಕೆಜಿಎಫ್ 2 ದಾಖಲೆ

ಹಿಂದಿ ಬೆಲ್ಟ್‌ನಲ್ಲಿ ಕೆಜಿಎಫ್ 2 ದಾಖಲೆ

'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಹಿಂದಿ ಬೆಲ್ಟ್‌ನಲ್ಲೂ ಹಲವು ದಾಖಲೆಗಳನ್ನು ಬರೆದಿದೆ. ಅದರ ಲಿಸ್ಟ್ ಇಲ್ಲಿದೆ.

ಹಿಂದಿ ಬೆಲ್ಟ್‌ನಲ್ಲಿ ದಾಖಲೆ ಓಪನಿಂಗ್ ಪಡೆದ ಚಿತ್ರ
ಹಿಂದಿ ಬೆಲ್ಟ್‌ನಲ್ಲಿ ದಾಖಲೆ ಗಳಿಕೆ ಕಂಡ ಸಿನಿಮಾ
ಹಿಂದಿ ಬೆಲ್ಟ್‌ ಒಂದೇ ದಿನ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ
ಎರಡನೇ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ
ಭಾನುವಾರ ಅತೀ ಹೆಚ್ಚು ಗಳಿಸಿದ ಸಿನಿಮಾ
ನಾಲ್ಕನೇ ದಿನ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ

ಕೇರಳದಲ್ಲಿ 'ಕೆಜಿಎಫ್ 2' ರೆಕಾರ್ಡ್ ಏನು?

ಕೇರಳದಲ್ಲಿ 'ಕೆಜಿಎಫ್ 2' ರೆಕಾರ್ಡ್ ಏನು?

'ಕೆಜಿಎಫ್ 2' ಕೇರಳದಲ್ಲಿ ಕಡಿಮೆ ದಾಖಲೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೂ, ಮಲಯಾಳಂನಲ್ಲೂ 'ಕೆಜಿಎಫ್ 2' ಹಲವು ರೆಕಾರ್ಡ್‌ಗಳನ್ನು ಮಾಡಿದೆ.

ಕೇರಳದಲ್ಲಿಯೂ ದಾಖಲೆ ಓಪನಿಂಗ್ ಪಡೆದ ಚಿತ್ರ
ವೀಕೆಂಡ್‌ನಲ್ಲಿ ದಾಖಲೆ ಓಪನಿಂಗ್
ನಾಲ್ಕು ದಿನವೂ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ
ಭಾನುವಾರದಂದು ಹೆಜ್ಜೆ ಗಳಿಕೆ ಕಂಡ ಚಿತ್ರ 'ಕೆಜಿಎಫ್ 2'

'ಕೆಜಿಎಫ್ 2' ಟಾಲಿವುಡ್‌ನಲ್ಲಿ ಬರೆದ ದಾಖಲೆ ಏನು?

'ಕೆಜಿಎಫ್ 2' ಟಾಲಿವುಡ್‌ನಲ್ಲಿ ಬರೆದ ದಾಖಲೆ ಏನು?

ಆಂಧ್ರ ಹಾಗೂ ತೆಲಂಗಾಣದಲ್ಲಿ 'ಕೆಜಿಎಫ್ 2' ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಟಾಲಿವುಡ್‌ನಲ್ಲಿ 'ಕೆಜಿಎಫ್ 2' ಹೊಸ ಅಧ್ಯಾಯವನ್ನೇ ಬರೆದಿದೆ.

ತೆಲುಗು ಅಲ್ಲದ ಸಿನಿಮಾದ ದಾಖಲೆ ಗಳಿಕೆ
ವಾರಾಂತ್ಯದಲ್ಲಿ ಅತೀ ಹೆಚ್ಚು ಗಳಿಸಿದ ಪರ ಭಾಷೆ ಸಿನಿಮಾ
ಮೊದಲ ನಾಲ್ಕು ದಿನವೂ ಅತೀ ಹೆಚ್ಚು ಗಳಿಸಿದ ಪರ ಭಾಷೆ ಸಿನಿಮಾ
ಭಾರತದಲ್ಲಿ ವೀಕೆಂಡ್‌ನಲ್ಲಿ ಐಮ್ಯಾಕ್ಸ್‌ನಲ್ಲಿ ದಾಖಲೆ ಗಳಿಕೆ

More from Filmibeat

English summary
Yash Starrer KGF 2 created many records. here is the more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X