'ಕೆಜಿಎಫ್ 2' ರಿಲೀಸ್‌ಗೆ 50 ದಿನಗಳು ಮಾತ್ರ ಬಾಕಿ: 'ರಾಧೆಶ್ಯಾಮ್', 'RRR' ಜೊತೆ ಮಾಸ್ಟರ್‌ ಪ್ಲ್ಯಾನ್?

'ಕೆಜಿಎಫ್ 2' ಇಡೀ ಭಾರತೀಯ ಚಿತ್ರರಂಗದ ಎಲ್ಲಾ ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾದು ಕೂತಿರುವ ಸಿನಿಮಾಗಳಲ್ಲೊಂದು. 'ಕೆಜಿಎಫ್ ಚಾಪ್ಟರ್ 1' ಎಲ್ಲಾ ಭಾಷೆಗಳನ್ನು ಮೀರಿ ಭಾರತೀಯ ಸಿನಿಮಾವಾಗಿ ಅಭಿಮಾನಿಗಳನ್ನು ರಂಜಿಸಿತ್ತು. ಕನ್ನಡದ ಸ್ಟಾರ್ ನಟ ಯಶ್‌ರನ್ನು ನ್ಯಾಷನಲ್ ಸ್ಟಾರ್ ಮಾಡಿತ್ತು. ನಿರ್ದೇಶಕ ಪ್ರಶಾಂತ್ ನೀಲ್‌ಗೆ ಸ್ಟಾರ್ ನಿರ್ದೇಶಕನ ಪಟ್ಟ ಕೊಟ್ಟಿತ್ತು. ಇದೇ 'ಕೆಜಿಎಫ್ 1'ರ ಮುಂದುವರಿದ ಭಾಗ 'ಕೆಜಿಎಫ್ 2' ರಿಲೀಸ್ ಆಗುತ್ತಿದೆ. ಕೊರೊನಾದಿಂದ ಹಲವಾರು ಬಾರಿ ಮುಂದೂಡಲ್ಪಟ್ಟ ಈ ಚಿತ್ರದ ಬಿಡುಗಡೆಗೆ ಇನ್ನು 50 ದಿನ ಮಾತ್ರ ಬಾಕಿ ಉಳಿದಿದೆ.

ಕೆಜಿಎಫ್ ಫ್ರಾಂಚೈಸಿಗಾಗಿ ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಆರು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮುಗಿಯುವವರೆಗೂ ಬೇರೆ ಯಾವುದೇ ಚಿತ್ರಕ್ಕೂ ಕಮಿಟ್ ಆಗಿರಲಿಲ್ಲ. ತೆಲುಗಿನಲ್ಲಿ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ 'ಬಾಹುಬಲಿ'ಯಂತ ಎರಡು ಭಾಗಗಳಲ್ಲಿ 'ಕೆಜಿಎಫ್' ಕೂಡ ಬಿಡುಗಡೆ ಆಗ್ಬೇಕು ಅಂತ ತೀರ್ಮಾನಿಸಿದ್ದಾಗ 6 ವರ್ಷ ಬರೀ ಎರಡು ಚಿತ್ರಗಳಿಗೆ ಮೀಸಲಿಡಲಾಗಿತ್ತು. ಈಗ ಕೊನೆಗೂ ಏಪ್ರಿಲ್ 14ರಂದು 'ಕೆಜಿಎಫ್ 2' ರಿಲೀಸ್ ಆಗುತ್ತಿದೆ. ಅದಕ್ಕೆ ಅಭಿಮಾನಿಗಳೇ ಅಭಿಯಾನ ಶುರುಮಾಡಿದ್ದಾರೆ.

'KGF 2' ರಿಲೀಸ್‌ಗೆ 50 ದಿನ

'KGF 2' ರಿಲೀಸ್‌ಗೆ 50 ದಿನ

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು 'KGF 2 50days to go' ಅಭಿಯಾನವನ್ನು ಆರಂಭಿಸಿದ್ದಾರೆ. ಟ್ವಿಟರ್‌ನಲ್ಲಿ 'ಕೆಜಿಎಫ್ 2' 50 ದಿನಗಳ ಪೋಸ್ಟರ್ ಅಭಿಮಾನಿಗಳ ಖಾತೆಯಲ್ಲಿ ರಾರಾಜಿಸುತ್ತಿವೆ. ಇಂದಿನಿಂದ ಯಶ್ ಅಭಿಮಾನಿಗಳೇ ಸಿನಿಮಾದ ಪ್ರಚಾರಕ್ಕೆ ಇಳಿದಿದ್ದಾರೆ. ಇದಕ್ಕೂ ಮುನ್ನ ಚಿತ್ರತಂಡವೇ ಪ್ರಚಾರಕ್ಕೆ ಇಳಿಯುತ್ತಾ? ಕಾದು ನೋಡಿತ್ತು. ಆದರೆ,, ಕೆಜಿಎಫ್ 2 ತಂಡದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಯಶ್ ಫ್ಯಾನ್ಸ್ ಅಖಾಡಕ್ಕಿಳಿದಿದ್ದಾರೆ.

'ಕೆಜಿಎಫ್ 2' ಡಬ್ಬಿಂಗ್ ಫಿನಿಶ್

ಇತ್ತೀಚೆಗಷ್ಟೇ ಯಶ್ 'ಕೆಜಿಎಫ್ 2' ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಈ ಮೂಲಕ ಆರು ವರ್ಷಗಳ ಕೆಜಿಎಫ್ ಪಯಣಕ್ಕೆ ಯಶ್ ಪುಲ್ ಸ್ಟಾಪ್ ಹಾಕಿದ್ದಾರೆ ಎನ್ನಲಾಗಿದೆ. ಇನ್ನೇನಿದ್ದರೂ ಕೇವಲ ಪ್ರಚಾರ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಸಿನಿಮಾದ ಭರ್ಜರಿ ಪ್ರಚಾರಕ್ಕೆ 'ಕೆಜಿಎಫ್ 2 ತಂಡ ಪ್ಲ್ಯಾನ್ ಮಾಡಿದೆ. ಕನ್ನಡದಲ್ಲಿ ಹೆಚ್ಚು ಪ್ರಚಾರದ ಅವಶ್ಯಕತೆ ಇಲ್ಲ. ಹೀಗಾಗಿ ಬೇರೆ ಭಾಷೆಗಳ ಕಡೆಗೆ ಗಮನ ಹರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸದ್ಯ ಡಬ್ಬಿಂಗ್ ಮುಗಿಸಿರುವ ಯಶ್, ಮುಂಬೈನಿಂದ ಪ್ರಚಾರ ಆರಂಭಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

'ರಾಧೆಶ್ಯಾಮ್', RRR ಜೊತೆ ಟೈ ಅಪ್

'ರಾಧೆಶ್ಯಾಮ್', RRR ಜೊತೆ ಟೈ ಅಪ್

'ಕೆಜಿಎಫ್ 2' ತಂಡ ಮಾರ್ಚ್ ತಿಂಗಳಿಂದ ನಿರಂತರವಾಗಿ ಪ್ರಚಾರ ಆರಂಭಿಸಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಮಾರ್ಚ್ 11ಕ್ಕೆ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಿಡುಗಡೆ ವೇಳೆ ಥಿಯೇಟರ್‌ನಲ್ಲಿ ಟ್ರೈಲರ್ ತೋರಿಸಲಿದ್ದಾರೆ ಎನ್ನುವ ಚರ್ಚೆಯಾಗುತ್ತಿದೆ. ಇದರ ಜೊತೆ ರಾಜಮೌಳಿಯ RRR ಸಿನಿಮಾ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಸಿನಿಮಾ ಬಿಡುಗಡೆ ವೇಳೆ ಪ್ರಚಾರ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಚಾರದ ಬಗ್ಗೆ ಇನ್ನೂ ತಂಡ ಅಧಿಕೃತವಾದ ಮಾಹಿತಿಯನ್ನು ಹೊರಹಾಕಿಲ್ಲ.

ಯಶ್ ಲುಕ್ ಇನ್ನೂ ಬದಲಾಗಿಲ್ಲ

ಯಶ್ ಲುಕ್ ಇನ್ನೂ ಬದಲಾಗಿಲ್ಲ

'ಕೆಜಿಎಫ್ 2' ಮುಗಿದಿದೆ. ಆದರೂ ಯಶ್ ಲುಕ್ ಬದಲಾಗಿಲ್ಲ. ಬಹುಶ: ಇದೇ ಲುಕ್‌ನಲ್ಲಿಯೇ ಸಿನಿಮಾ ಪ್ರಚಾರ ಮಾಡಲಿದ್ದಾರೆ ಮಾತುಗಳು ಕೂಡ ಹರಿದಾಡುತ್ತಿದೆ. ಮತ್ತೊಂದು ಕಡೆ ಪ್ರಶಾಂತ್ ನೀಲ್ ಸಿನಿಮಾದ ಚಿಕ್ಕ ಚಿಕ್ಕ ಫೇಮ್ ಅನ್ನೂ ಸರಿಮಾಡಲು ಮುಂದಾಗಿದ್ದಾರೆ. ಹೀಗಾಗಿ ಇಂಟ್ರುಡಕ್ಷನ್ ಸಾಂಗ್ ಅನ್ನು ಹೊಸದಾಗಿ ಶೂಟ್ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಕಾರಣಕ್ಕೆ ಯಶ್ ಲುಕ್ ಬದಲಾಯಿಸಿಲ್ಲ. ಸಿನಿಮಾ ಬಿಡುಗಡೆ ಆಗುವವರೆಗೂ ಇದೇ ಲುಕ್‌ನಲ್ಲಿ ಇರುತ್ತಾರೆ ಎನ್ನಲಾಗಿದೆ.

More from Filmibeat

English summary
Yash starrer KGF 2 released in 50 days rocking star fans counting days. KGF 2 50 days to go poster going viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X