KGF 2: ಇದೇ ಫೈನಲ್.. 10 ಸಾವಿರ ಸ್ಕ್ರೀನ್‌ಗಳಲ್ಲಿ 'ಕೆಜಿಎಫ್ 2' ರಿಲೀಸ್
ಕನ್ನಡ ಚಿತ್ರರಂಗ ಹೊಸ ಇತಿಹಾಸ ಬರೆಯುವುದಕ್ಕೆ ಸಜ್ಜಾಗಿ ನಿಂತಿದೆ. ಕ್ಷಣ ಕ್ಷಣಕ್ಕೂ 'ಕೆಜಿಎಫ್ 2' ಎದೆ ಬಡಿತವನ್ನು ಹೆಚ್ಚಿಸುತ್ತಿದೆ. ಪ್ರತಿಯೊಂದು ಕ್ಷಣಕ್ಕೂ 'ಕೆಜಿಎಫ್ 2' ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಇನ್ನೂ ಸಿನಿಮಾ ಬಿಡುಗಡೆಯಾಗಿಲ್ಲ. ಆಗಲೇ ಕೆಜಿಎಫ್ 2 ಕ್ರೇಜ್ ನೋಡಿ ಪ್ರೇಕ್ಷಕರು ದಂಗಾಗಿ ಹೋಗಿದ್ದಾರೆ.
'ಕೆಜಿಎಫ್ 2' ಕೇವಲ ಕನ್ನಡದ ಗಲ್ಲಾಪೆಟ್ಟಿಗೆಗಷ್ಟೇ ಮುಖ್ಯ ಅಲ್ಲ. ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ಗಷ್ಟೆ ಅಲ್ಲ. ಇಡೀ ವಿಶ್ವದ ಬಾಕ್ಸಾಫೀಸ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಎಲ್ಲೆಲ್ಲಿ ಬಿಡುಗಡೆ ಆಗಿಲ್ಲವೋ ಅಲ್ಲೆಲ್ಲಾ ರಿಲೀಸ್ ಆಗುತ್ತಿದೆ.
ವಿಶ್ವದ ಪ್ರಮುಖ ದೇಶಗಳಲ್ಲಿ 'ಕೆಜಿಎಫ್ 2' ತಲುಪಿದೆ. ಫಸ್ಟ್‌ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ. 'ಕೆಜಿಎಫ್ 2' ಬಿಡುಗಡೆಗೆ ಇನ್ನೇನು ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿದೆ ಅನ್ನುವಾಗಲೇ ಎಷ್ಟು ಸ್ಕ್ರೀನ್‌ಗಳಲ್ಲಿ 'ಕೆಜಿಎಫ್ 2' ಅಬ್ಬರಿಸಲಿದೆ ಅನ್ನುವ ಹೊಸ ಪಟ್ಟಿಯನ್ನು ಹೊಂಬಾಳೆ ಫಿಲ್ಮ್ಸ್ ರಿಲೀಸ್ ಮಾಡಿದೆ.
Recommended Video


ವಿಶ್ವದಾದ್ಯಂತ 10 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆ
ಏಪ್ರಿಲ್ 14ರಿಂದ 'ಕೆಜಿಎಫ್ 2' ಹಬ್ಬ ಆರಂಭ ಆಗುತ್ತಿದೆ. ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಸಿನಿಮಾ ನೋಡಲು ಕಾದು ಕೂತಿದ್ದಾರೆ. ಬೆಂಗಳೂರಿನಲ್ಲಿ ಮಧ್ಯರಾತ್ರಿ 12 ಗಂಟೆಗೆ 'ಕೆಜಿಎಫ್ 2' ಅಭಿಮಾನಿಗಳಿಗಾಗಿಯೇ ಗ್ರ್ಯಾಂಡ್ ಆಗಿ ಪ್ರದರ್ಶನ ಆಗುತ್ತಿದೆ. 'ಕೆಜಿಎಫ್ 2' ಕ್ರೇಜ್ ನೋಡಿ ವಿಶ್ವದಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದ ಯಾವುದೇ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಇದೂವರೆಗೂ ಬಿಡುಗಡೆಯಾಗಿಲ್ಲ.

5 ಭಾಷೆಯಲ್ಲೂ 'ಕೆಜಿಎಫ್ 2' ಖದರ್
ಕನ್ನಡ ಪ್ರಮುಖ ಭಾಷೆಯಾಗಿದ್ದರೂ, 'ಕೆಜಿಎಫ್ 2' ಕ್ರೇಜ್ ಬೇರೆ ಭಾಷೆಗಳಲ್ಲಿಯೇ ಜೋರಾಗಿದೆ. ಹಿಂದಿಯಲ್ಲಿ 'ಕೆಜಿಎಫ್ 2'ಗಿರುವ ಕ್ರೇಜ್ ನೋಡಿದರೆ, ಮೊದಲ ದಿನ ದೊಡ್ಡ ಮೊತ್ತದ ಕಲೆಕ್ಷನ್ ಮಾಡೋದು ಕನ್ಫರ್ಮ್. ಇದರೊಂದಿಗೆ ತೆಲುಗು ಹಾಗೂ ಕನ್ನಡದಲ್ಲೂ 'ಕೆಜಿಎಫ್ 2' ಕ್ರೇಜ್ ಕಮ್ಮಿಯೇನಿಲ್ಲ. ತೆಲುಗಿನಲ್ಲೂ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಹಿಂದಿ ಬಿಟ್ಟರೆ, ತೆಲುಗಿನಲ್ಲೂ ಹವಾ ಜೋರಾಗೇ ಇದೆ. ಕನ್ನಡದಲ್ಲಿ 700ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ.

100 ಕೋಟಿ ಲೆಕ್ಕ ಹೇಗೆ?
'ಕೆಜಿಎಫ್ 2' 10 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿರೋದೆ ಅನ್ನುವುದನ್ನು ಅಧಿಕೃತವಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಹೀಗಾಗಿ ಇದು ಕೂಡ 'ಬಾಹುಬಲಿ' ಹಾಗೂ 'RRR' ಸಿನಿಮಾ ಸಿಕ್ಕ ಓಪನಿಂಗ್ ಈ ಚಿತ್ರಕ್ಕೂ ಸಿಗೋದು ಗ್ಯಾರಂಟಿ. ಈ ಕಾರಣಕ್ಕೆ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ಸುಮಾರು 100 ಕೋಟಿ ಗಳಿಕೆ ಮಾಡಲಿದೆ ಎಂದು ಟ್ರೇಡ್ ಅನಲಿಸ್ಟ್ ಭವಿಷ್ಯ ನುಡಿದಿದ್ದಾರೆ.

'ಕೆಜಿಎಫ್ 2' ಅಡ್ವಾನ್ಸ್ ಬುಕಿಂಗ್ ಲೆಕ್ಕ
'ಕೆಜಿಎಫ್ 2' ಸಿನಿಮಾ ಬಾಲಿವುಡ್‌ನಲ್ಲಿ ಲೆಕ್ಕ ಹಾಕುತ್ತಿದ್ದಾರೆ. 'ಕೆಜಿಎಫ್ 2' ಅಡ್ವಾನ್ಸ್ ಬುಕಿಂಗ್ ನಿಂದ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿಯೇ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ RRR ಅಡ್ವಾನ್ಸ್ ಬುಕಿಂಗ್‌ನಿಂದ 5 ಕೋಟಿ ಗಳಿಸಿತ್ತು. ರಾಜಮೌಳಿಯೇ ನಿರ್ದೇಶಿಸಿದ 'ಬಾಹುಬಲಿ 2' ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಿಂದ 35 ಕೋಟಿ ಲೂಟಿ ಮಾಡಿತ್ತು. ಹೀಗಾಗಿ 'ಕೆಜಿಎಫ್ 2' ಎಷ್ಟು ಕೋಟಿ ಗಳಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.


Click it and Unblock the Notifications











