KGF 2 Booking: ಯಶ್ 'ಕೆಜಿಎಫ್ 2' ಸಿನಿಮಾಗೆ ಬುಕ್ಕಿಂಗ್ ಆರಂಭ: ಮೊದಲ ಹಂತದಲ್ಲೇ ದಾಖಲೆ ಬರೆದಿದ್ದೆಲ್ಲಿ?

'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನು ಕೇವಲ 11 ದಿನ ಮಾತ್ರ ಬಾಕಿ ಉಳಿದಿದೆ. ಈ ಕಾರಣಕ್ಕೆ ಇಡೀ ಚಿತ್ರತಂಡ ಉತ್ತರ ಭಾರತದಿಂದ ಭರ್ಜರಿ ಪ್ರಚಾರ ಆರಂಭಿಸುತ್ತಿದೆ. ದೆಹಲಿ, ಮುಂಬೈ ಅಂತ ಓಡಾಡಿಕೊಂಡಿರುವ ಯಶ್, ಶ್ರೀನಿಧಿ ಶೆಟ್ಟಿ ಶೀಘ್ರದಲ್ಲಿಯೇ ದಕ್ಷಿಣ ಭಾರತದ ಕಡೆ ಮುಖ ಮಾಡಲಿದ್ದಾರೆ.

ಸಿನಿಮಾದ ಟ್ರೈಲರ್, ಸಾಂಗ್, ಟೀಸರ್ ಎಲ್ಲವೂ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ. 'ಕೆಜಿಎಫ್ 2' ಸಿನಿಮಾ ಹೇಗಿರುತ್ತೋ? ಅಧೀರ ಹಾಗೂ ಯಶ್ ಕಾಳಗ ಅದ್ಯಾವ ಲೆವೆಲ್‌ನಲ್ಲಿ ಇರುತ್ತೋ? ಅಂತ ಎದುರು ನೋಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ತಂಡ ಕೂಡ ದಿನದಿಂದ ದಿನಕ್ಕೆ ಪ್ರಚಾರದ ವೇಗವನ್ನು ಹೆಚ್ಚಿಸುತ್ತಲೇ ಇದೆ. ಈ ಮಧ್ಯೆ ಬಿಡುಗಡೆಗೂ ಮೊದಲೇ ಹೊಸ ದಾಖಲೆಯನ್ನು ಮಾಡಿದೆ.

Recommended Video

KGF 2| ವಿದೇಶದಲ್ಲಿ ಹೇಗಿದೆ ನೋಡಿ 'ಕೆಜಿಎಫ್2' ಟಿಕೆಟ್ ಬುಕ್ಕಿಂಗ್ ಕ್ರೇಝ್! | Filmibeat Kannada

ಹೌದು 'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಮಾಡಿದೆ. ಕೇವಲ 12 ಗಂಟೆಯಲ್ಲಿ ಈ ಸಿನಿಮಾದ ಟಿಕೆಟ್‌ಗಳು ಬಿಕರಿಯಾಗಿವೆ. ಕನ್ನಡದ ಯಾವುದೇ ಸಿನಿಮಾ ಬಿಡುಗಡೆಗೆ ಇನ್ನೂ 11 ದಿನಗಳ ಇರುವಾಗಲೇ ಇಂತಹದ್ದೊಂದು ಸಾಧನೆ ಮಾಡಿರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ಪಂಡಿತರು. ಹಾಗಿದ್ದರೆ, ಕೆಜಿಎಫ್ 2 ಟೀಮ್ ಮಾಡಿದ ಸಾಧನೆ ಏನು? ಎಲ್ಲಿ ಏನೇನು ಸಾಧನೆ ಮಾಡಿದೆ? ಅನ್ನುವುದನ್ನು ನೋಡೋಣ.

ಯುಕೆನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭ

ಯುಕೆನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭ

ಕನ್ನಡ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ನೋಡಲು ಇಡೀ ವಿಶ್ವವೇ ಕಾದು ಕೂತಿದೆ. ಹೀಗಾಗಿ ಚಿತ್ರತಂಡ ಮೊದಲು ಎಲ್ಲಿ ಬುಕ್ಕಿಂಗ್ ಶುರು ಮಾಡುತ್ತೆ ಎಂದು ಕಾತುರದಿಂದ ನೋಡುತ್ತಿದ್ದಾರೆ. ಈ ಅವಕಾಶ ಮೊದಲ ಯುಕೆ ಸಿನಿಪ್ರಿಯರಿಗೆ ಸಿಕ್ಕಿದೆ. 'ಕೆಜಿಎಫ್ 2' ಸಿನಿಮಾ ಯುಕೆ ವಿತರಕ ಈಗಾಗಲೇ ಸಿನಿಮಾ ಬುಕ್ಕಿಂಗ್ ಆರಂಭ ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್ ಆರಂಭ ಮಾಡುತ್ತಿದ್ದಂತೆ ಜನರು ಮುಗಿದ್ದಿದ್ದು ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ.

12 ಕೆಜಿಎಫ್ 2 ಹೊಸ ದಾಖಲೆ

ಯುಕೆ ವಿತರಕರು 'ಕೆಜಿಎಫ್ 2' ಸಿನಿಮ ಬಿಡುಗಡೆಗೆ ಇನ್ನೂ 11 ದಿನಗಳು ಬಾಕಿ ಇರುವಾಗಲೇ ಟಿಕೆಟ್ ಬಿಕ್ಕಿಂಗ್ ಶುರುಮಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಿನಿಪ್ರಿಯರು ಮುಗಿಬಿದ್ದು ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ. ಕೇವಲ 12 ಗಂಟೆಯಲ್ಲಿ ವಿದೇಶದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ. ಇದು ಕನ್ನಡ ಸಿನಿಮಾ ಮಟ್ಟಿಗೆ ದಾಖಲೆ ಎಂದೇ ಹೇಳಲಾಗುತ್ತಿದೆ. ಯುಕೆಯಲ್ಲಿ ಟಿಕೆಟ್ ಬುಕ್ ಆಗಿರುವ ಬಗ್ಗೆ ಸ್ವತ: ಯುಕೆಯಲ್ಲಿ ಸಿನಿಮಾ ವಿತರಣೆ ಮಾಡುತ್ತಿರುವ ಸಂಸ್ಥೆ ಆರ್‌ಎಫ್‌ಟಿ ಫಿಲಂಸ್ ಟ್ವೀಟ್ ಮೂಲಕ ಹೇಳಿಕೊಂಡಿದೆ.

ದಾಖಲೆ ಬರೆಯುತ್ತಾ ಕೆಜಿಎಫ್ 2?

ದಾಖಲೆ ಬರೆಯುತ್ತಾ ಕೆಜಿಎಫ್ 2?

'ಕೆಜಿಎಫ್ 2' ಸಿನಿಮಾ ಬುಕ್ಕಿಂಗ್ ವಿಚಾರದಲ್ಲಿ ಹೊಸ ದಾಖಲೆಯನ್ನು ಬರೆಯಬಹುದು ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇನ್ನೂ ಸಿನಿಮಾ ಕರ್ನಾಟಕ ಸೇರಿದಂತೆ ಹಲವೆಡೆ ಟಿಕೆಟ್ ಬುಕ್ಕಿಂಗ್ ಶುರು ಮಾಡಬೇಕಿದೆ. ಆಗ 'ಕೆಜಿಎಫ್ 2' ಮೊದಲ ಎಷ್ಟು ಗಳಿಸ ಬಹುದು ಎಂಬ ಅಂದಾಜು ಸಿಗಲಿದೆ. ಒಂದು ಅಂದಾಜಿನ ಪ್ರಕಾರ, 'ಕೆಜಿಎಫ್ 2' ಸಲೀಸಾಗಿ 100 ಕೋಟಿ ದಾಟಲಿದೆ ಎಂದು ಹೇಳಲಾಗುತ್ತಿದೆ.

'ಕೆಜಿಎಫ್ 2' Vs 'ಬೀಸ್ಟ್' Vs 'ಜೆರ್ಸಿ' ಫೈಟ್

'ಕೆಜಿಎಫ್ 2' Vs 'ಬೀಸ್ಟ್' Vs 'ಜೆರ್ಸಿ' ಫೈಟ್

'ಕೆಜಿಎಫ್ 2' ಜೊತೆ ದಳಪತಿ ವಿಜಯ್ ಅಭಿನಯದ ಬೀಸ್ಟ್ ಹಾಗೂ ಬಾಲಿವುಡ್ ಸಿನಿಮಾ 'ಜೆರ್ಸಿ' ಬಿಡುಗಡೆಗೆ ಸಜ್ಜಾಗಿದೆ. ಉತ್ತರ ಭಾರತದಲ್ಲಿ 'ಕೆಜಿಎಫ್ 2'ಗೆ 'ಜೆರ್ಸಿ' ಟಕ್ಕರ್ ಕೊಡುತ್ತಿದೆ. ಇನ್ನೊಂದು ದಕ್ಷಿಣ ಭಾರತದಲ್ಲಿ ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಅಖಾಡಕ್ಕೆ ಇಳಿದಿದೆ. ಈ ಸಂಬಂಧ ಬಾಕ್ಸಾಫೀಸ್ ಮೇಲೆ ಸವಾರಿ ಮಾಡಲು ಹೊರಟಿದ್ದ ಯಶ್‌ಗೆ ಎರಡು ಸಿನಿಮಾ ಯಾವ ರೀತಿ ಎದುರಾಗುತ್ತೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Yash Starrer KGF 2 sets new record 5000 plus tickets sold in UK. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X