twitter
    For Quick Alerts
    ALLOW NOTIFICATIONS  
    For Daily Alerts

    KGF verse: ಮಾರ್ಚ್ 30ಕ್ಕೆ 'KGF verse' ರಿಲೀಸ್: ಕೆಜಿಎಫ್ ತಂಡದ ಹೊಸ ಸಾಹಸವೇನು?

    |

    ಇಲ್ಲಿವರೆಗೂ ಸೈಲೆಂಟಾಗಿದ ಕೆಜಿಎಫ್ ತಂಡ ಇನ್ಮುಂದೆ ವೈಲೆಂಟ್ ಆಗುತ್ತಿದೆ. ಟ್ರೈಲರ್ ರಿಲೀಸ್‌ ಆಗೋವರೆಗೂ ಸೈಲೆಂಟ್ ಆಗೇ ಇತ್ತು. ಈಗ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಒಂದೊಂದು ಪ್ರಚಾರದ ತಂತ್ರವನ್ನು ಹೊರಗೆ ಬಿಡುತ್ತಿದೆ. 'ಕೆಜಿಎಫ್ 2' ಟ್ರೈಲರ್ ನೋಡಿ ಥ್ರಿಲ್ ಆದವರಿಗೆ ಮತ್ತೊಂದು ಸರ್ಪ್ರೈಸ್ ನೀಡಲಿದೆ. ಮಾರ್ಚ್ 30ಕ್ಕೆ ಕೆಜಿಎಫ್ ತಂಡ ಸಿನಿಮಾ ಅಭಿಮಾನಿಗಳಿಗೆ ಹೊಸ ತಂತ್ರಜ್ಞಾನದ ಮೂಲಕ ರಂಜಿಸಲು ಮುಂದಾಗಿದೆ.

    ಸಿನಿಮಾರಂಗದಲ್ಲಿ ತಂತ್ರಜ್ಞಾನ ಮುಂದುವರೆಯುತ್ತಿದೆ. ದಿನದಿಂದ ದಿನಕ್ಕೆ ಕ್ಯಾಮರಗಳು ಅಪ್‌ಡೇಟ್ ಆಗುತ್ತಿವೆ. ಗ್ರಾಫಿಕ್ಸ್ ವಿಭಾಗದಲ್ಲಿ ಹೊಸ ತಂತ್ರಜ್ಞಾನ ಬರುತ್ತಿದೆ. ಆ ತಂತ್ರಜ್ಞಾನದ ಮೂಲಕವೇ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತಿವೆ. 'ಅವತಾರ್' ಅಂತಹ ಸಿನಿಮಾಗಳು ಚಿತ್ರರಂಗಕ್ಕೆ ಹೊಸ ಅನುಭವವನ್ನು ನೀಡುತ್ತಿವೆ. ಈ ಮಧ್ಯೆ ಚಿತ್ರರಂಗ ಹೊಸ ಟೆಕ್ನಾಲಜಿಯೊಂದನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು 'ಕೆಜಿಎಫ್ ವರ್ಸ್' ರಿಲೀಸ್ ಮಾಡಲಿದೆ. ಅದೇನು ಅಂತ ತಿಳಿಯುವ 'ಮೆಟಾವರ್ಸ್'ಬಗ್ಗೆ ತಿಳಿಯಲೇಬೇಕು.

    'ಕೆಜಿಎಫ್' ಬಳಸುತ್ತಿರುವ ಮೆಟಾ ವರ್ಸ್ ತಂತ್ರಜ್ಞಾನವೇನು?

    Recommended Video

    KGF Verse | ಅಷ್ಟಕ್ಕೂ Meta Verse ನಿಂದ KGF 2 ಗೆ ಆಗೋ ಲಾಭ ಏನು..? | Yash | Sanjay Dutt | Raveena Tandon

    ಹೌದು, ಕೆಜಿಎಫ್ ತಂಡ ಟ್ರೈಲರ್ ಲಾಂಚ್ ಮಾಡಿದ ಬಳಿಕ 'ಕೆಜಿಎಫ್ ವರ್ಸ್' ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅಸಲಿಗೆ ಕೆಜಿಎಫ್ ತಂಡ ಬಾರಿ ಚರ್ಚೆಯಲ್ಲಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದೆ. ಅದುವೇ 'ಮೆಟಾ ವರ್ಸ್'. ಇದು ಇಂಟರ್‌ನೆಟ್ ಪ್ರಪಂಚದ ಮತ್ತೊಂದು ಆವಿಷ್ಕಾರ. ಇದನ್ನು 'ಡಿಜಿಟರ್ ಅವತಾರ್' ಎಂದೂ ಕರೆಯುತ್ತಾರೆ. ಮನೆಯಲ್ಲೇ ಕೂತು ನಿಮ್ಮ ಕಣ್ಣಿಗೆ ಒಂದು ಹೆಡ್ ಸೆಟ್ ಹಾಕಿಕೊಂಡು ನೀವು ಕೆಲಸ ಮಾಡಬಹುದು.

    ಈ ಹೆಡ್ ಸೆಟ್ ಹಾಕಿಕೊಂಡು ನೀವು ಓದಬಹುದು. ಶಾಪಿಂಗ್ ಮಾಡಬಹುದು. ನೀವು ನಿಮ್ಮ ದೈನಂದಿನ ಚಟುವಟಿಕೆಗಳನ್ನು ಈ ಹೆಡ್ ಸೆಟ್ ಮೂಲಕ ಮಾಡಬಹುದು. ನೀವು ರಿಯಲ್ ಲೈಫ್‌ನಲ್ಲಿ ಏನು ಮಾಡುತ್ತಿರೋ ಅದನ್ನೇ ಆರ್ಟಿಫಿಷಿಯಲ್ ಆಗಿ ಸೃಷ್ಟಿಸಿದ ಲೋಕದೊಳಗೆ ನೀವು ಈ ಚಟುವಟಿಕೆಗಳನ್ನು ಮಾಡುತ್ತೀರಾ. ಇದೇ ತಂತ್ರಜ್ಞಾನವನ್ನು ಈಗ ಕೆಜಿಎಫ್ ತಂಡ ಕೂಡ ಬಳಸಿಕೊಳ್ಳಲಿದೆ. ಅದುವೇ 'ಕೆಜಿಎಫ್ ವರ್ಸ್'.

    'ಕೆಜಿಎಫ್ ವರ್ಸ್' ಮೂಲಕ ಏನು ನೋಡಬಹುದು?

    'ಕೆಜಿಎಫ್ ವೆರ್ಸ್' ಕೂಡ ಮೆಟಾವೆರ್ಸ್ ತಂತ್ರಜ್ಞಾನದ ಒಂದು ಭಾಗ. ಈ ತಂತ್ರಜ್ಞಾನ ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಟೆಕ್ನಾಲಜಿ. ಅದನ್ನು ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಗಳಕೆ ಮಾಡಬೇಕು ಎಂಬುವುದರ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿತ್ತು. ಆ ಸಾಲಿಗೆ ಕೆಜಿಎಫ್ ಕೂಡ ಸೇರಿಕೊಂಡಿದೆ. ಈ ಟೆಕ್ನಾಲಜಿ ಬಳಸಿ ಸಿನಿಮಾ ತೋರಿಸುವುದರಿಂದ ಮುನ್ನ ಕೆಜಿಎಫ್ ಪ್ರಪಂಚದೊಳಗೆ ಕರೆದೊಯ್ಯುಲು ಮುಂದಾಗಿದೆ.

    ಕೆಜಿಎಫ್‌ ಸಿನಿಮಾ ಮೆಟಾ ವರ್ಸ್ ಲೋಕಕ್ಕೆ ಕಾಲಿಟ್ಟಿದೆ. ಈ ಮೂಲಕ ಕೆಜಿಎಫ್ ಸಿನಿಮಾದ ನರಾಚಿ ಲೋಕದೊಳಗೆ ಕಾಲಿಡಬಹುದು. ಅಲ್ಲಿ ನೀವು ಓಡಾಡಬಹುದು. ನಿಮಗೆ ಬೇಕಾದ ಹಾಗೆ ಇರಬಹುದು. ಬೇಕಾದಲ್ಲಿ ಕೂರಬಹುದು. ಬೇಕಾದಲ್ಲಿ ಕೂತುಕೊಳ್ಳಬಹುದು. ಬೇಕಾದಲ್ಲಿ ಮಲಗಬಹುದು. ಎದ್ದೇಳಬಹುದು. ಫೈಟ್ ಮಾಡಬಹುದು. ಇಂತಹದೊಂದು ಪ್ರಪಂಚದೊಳಗೆ ಕೆಜಿಎಫ್ ತಂಡ ಮಾರ್ಚ್ 30ಕ್ಕೆ ಕರೆದೊಯ್ಯಲಿದೆ.

    Yash starrer KGF 2 team releasing metaverse on march 30th

    ಮೆಟಾ ವರ್ಸ್ ಅನ್ನೋದು ಒಂದು ಡಿಜಿಟರ್ ಪ್ರಪಂಚ

    ಮೆಟಾ ವರ್ಸ್ ಫ್ಯೂಚರ್ ಟೆಕ್ನಾಲಜಿ. ಇದೊಂದು ಕಾಲ್ಪನಿಕ ಡಿಜಿಟಲ್ ಪ್ರಪಂಚವೆಂದು ಕರೆಯಬಹುದು. ತಂತ್ರಜ್ಞರ ಪ್ರಕಾರ, ಈ ಮೆಟಾ ವರ್ಸ್ ಮುಂದೆ ಇಂಟರ್‌ನೆಟ್‌ಗೆ ಬದಲಿಯಾಗಿ ಬೆಳೆಯಬಹುದು. ಮೆಟಾ ವರ್ಸ್ ಮೂಲಕವೇ ಜನರು ಹೊಸ ಪ್ರಪಂಚವನ್ನು ಸೃಷ್ಟಿಸಿಕೊಳ್ಳಬಲ್ಲರು. ರಿಯಲ್ ಲೈಫ್‌ನಲ್ಲಿ ಏನೇನು ಪಡೆಯಲು ಸಾಧ್ಯವಿಲ್ಲವೋ ಅದೆಲ್ಲವನ್ನೂ ಈ ಮೆಟಾವರ್ಸ್‌ನಲ್ಲಿ ಮಾಡಬಹುದಾಗಿದೆ.

    ಇಂತಹ ಪ್ರಪಂಚಕ್ಕೆ ಸಿನಿಮಾ ಜಗತ್ತು ಎಂಟ್ರಿಕೊಟ್ಟಿದೆ. ನಿಧಾನವಾಗಿ ಡಿಜಿಟಲ್ ಪ್ರಪಂಚದೊಳಗೆ ಹೊಸ ಪ್ರಪಂಚವನ್ನು ಸೃಷ್ಟಿಸಲಿದೆ. ಇದೇ ತಂತ್ರಜ್ಞಾನವನ್ನು ಮೊದಲ ಬಾರಿಗೆ ಭಾರತದ ಪ್ಯಾನ್ ಇಂಡಿಯಾ ಸಿನಿಮಾವೊಂದು ಬಳಸಿಕೊಳ್ಳಲಿದೆ. ಈ ತಂತ್ರಜ್ಞಾನಕ್ಕೆ ಸಿಗುವ ಪ್ರತಿಕ್ರಿಯೆ ಮೇಲೆ ಭಾರತದಲ್ಲಿ ಮೆಟಾ ವರ್ಸ್ ಹೊಸ ಅಧ್ಯಾಯವನ್ನು ಬರೆಯಲಿದೆ.

    English summary
    Yash starrer KGF 2 team releasing metaverse on march 30th. Know more.
    Monday, March 28, 2022, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X