KGF 2 Trailer Review: ಹೊರಬಿತ್ತು 'ಕೆಜಿಎಫ್ 2' ಟ್ರೈಲರ್ ಮೊದಲ ವಿಮರ್ಶೆ: ಸಿಕ್ಕಿದ್ದೆಷ್ಟು ಮಾರ್ಕ್ಸ್?
ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'KGF 2'. ಈ ಸಿನಿಮಾ ಟ್ರೈಲರ್ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 14ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ 'ಕೆಜಿಎಫ್ 2' ಫುಲ್ ಸ್ವಿಂಗ್‌ನಲ್ಲಿ ಅಖಾಡಕ್ಕಿಳಿದಿದೆ. ಈ ಮಧ್ಯೆ ಟ್ರೈಲರ್ ಹೇಗಿದೆ? ಅಂತ ನೋಡಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಅಂತ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.
'ಕೆಜಿಎಫ್ 2' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಬಿರುಗಾಳಿಯಂತೆ 'ತೂಫಾನ್' ಸಾಂಗ್ ಕೂಡ ರಿಲೀಸ್ ಆಗಿದೆ. ಇನ್ನು ಟ್ರೈಲರ್ ರಿಲೀಸ್ ಆಗುತ್ತಿರುವ ಸುದ್ದಿಯನ್ನು ಕಂಡು ಅಭಿಮಾನಿ ಬಳಗದಲ್ಲಿ ಸಂಭ್ರಮದ ಸುನಾಮಿಯೇ ಎದ್ದಿದೆ. 'ಕೆಜಿಎಫ್ 2' ಚಿತ್ರದ ಪ್ರಚಂಡ ಟ್ರೈಲರ್ ಮಾರ್ಚ್ 27 ರಂದು ಸಂಜೆ 6.40 ಹೊರಬರಲಿದೆ. ಈ ಕಾರಣ ಚಿತ್ರದ ಟ್ರೈಲರ್ ಹೇಗಿರುತ್ತೆ ಎಂಬುದೇ ಎಲ್ಲರ ಕುತೂಹಲ. ಈ ಮಧ್ಯೆ 'ಕೆಜಿಎಫ್ 2' ಚಿತ್ರದ ಮೊಟ್ಟ ಮೊದಲ ಟ್ರೈಲರ್ ವಿಮರ್ಶೆ ಹೊರಬಿದ್ದಿದೆ.

ಮೊದಲ ಟ್ರೈಲರ್ ವೀಕ್ಷಿಸಿದ ವ್ಯಕ್ತಿ ಯಾರು?
'ಕೆಜಿಎಫ್ 2' ಸಿನಿಮಾ ಟ್ರೈಲರ್ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ಒಬ್ಬ ವಿಶೇಷ ವ್ಯಕ್ತಿ ಈ ಟ್ರೈಲರ್ ಅನ್ನು ವೀಕ್ಷಿಸಿದ್ದಾನೆ. ಬಾಲಿವುಡ್, ಟಾಲಿವುಡ್ ಯಾವುದೇ ಸಿನಿಮಾ ವಿದೇಶದಲ್ಲಿ ಬಿಡುಗಡೆಯಾಗುತ್ತಿದೆ ಅಂದ್ರೆ, ಆ ಸಿನಿಮಾ ಹಾಗೂ ಅದರ ಟ್ರೈಲರ್ ಮೊದಲು ವೀಕ್ಷಣೆ ಮಾಡುವುದು ಉಮೈರ್ ಸಂಧು. ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯ ಹಾಗೂ ಪತ್ರಕರ್ತ ಉಮೈರ್ ಸಂಧು ಈಗಾಗಲೇ ಟ್ರೈಲರ್ ವೀಕ್ಷಣೆ ಮಾಡಿದ್ದು ಮೊದಲ ವಿಮರ್ಶೆ ಮಾಡಿದ್ದಾರೆ.
'ಕೆಜಿಎಫ್ 2' ಟ್ರೈಲರ್ ವಿಮರ್ಶೆಯಲ್ಲಿ ಏನಿದೆ?
'ಕೆಜಿಎಫ್ 2' ಸಿನಿಮಾ ಟ್ರೈಲರ್‌ನನ್ನು ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯ ಉಮೈರ್ ಸಂಧು ವೀಕ್ಷಿಸಿದ್ದಾರೆ. ಟ್ರೈಲರ್ ವಿಮರ್ಶೆ ಕೂಡ ಮಾಡಿದ್ದಾರೆ. ಟ್ವೀಟ್ ಮೂಲಕ ಟ್ರೈಲರ್ ಅನ್ನು ಹಾಡಿ ಹೊಗಳಿದ್ದಾರೆ. " ಸೆನ್ಸಾರ್ ಬೋರ್ಡ್‌ನಲ್ಲಿ KGF 2 ಟ್ರೈಲರ್ ಅನ್ನು ನೋಡಿದೆ. ಈ ಟ್ರೈಲರ್ ಸ್ಟೋಟಕವಾಗಿದೆ. ಮಾತೇ ಹೊರಬರುತ್ತಿಲ್ಲ. ಹಿಟ್ ಸಿನಿಮಾ ಶೀಘ್ರದಲ್ಲೇ ಬರಲಿದೆ. ಯಶ್ ಹ್ಯಾಟ್ಸ್ ಆಫ್." ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ದಾಖಲೆ ಉಡೀಸ್ ಮಾಡುತ್ತಾ 'ಕೆಜಿಎಫ್ 2' ಟ್ರೈಲರ್?
'ಕೆಜಿಎಫ್ 2' ಚಿತ್ರದ ಟೀಸರ್ ಬರೆದ ದಾಖಲೆಯನ್ನು ಇನ್ನೂ ಯಾವುದೇ ಸಿನಿಮಾ ಅಳಿಸಿ ಹಾಕಿಲ್ಲ. 'ಕೆಜಿಎಫ್ 2' ಚಿತ್ರದ ಟೀಸರ್ 246 ಮಿಲಿಯನ್ ವೀವ್ಸ್ ಪಡೆದು ದಾಖಲೆ ಬರೆದಿತ್ತು. ಈ ದಾಖಲೆಯನ್ನು 'ಬೀಸ್ಟ್' ಸಿನಿಮಾದ ಅರೇಬಿಕ್ ಕುತ್ತು ಸಾಂಗ್ ಬೀಟ್ ಮಾಡಬಹುದು ಎಂಬ ನಿರೀಕ್ಷೆಯಿದೆ. ಯಾಕಂದ್ರೆ, ಒಂದು ತಿಂಗಳ ಅಂತರದಲ್ಲಿಯೇ ಈ ಸಾಂಗ್ 232 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇನ್ನು ಇದರ ದಾಖಲೆಯನ್ನು 'ಕೆಜಿಎಫ್ 2' ಟ್ರೈಲರ್ ಮುರಿದು ಹಾಕುತ್ತೆ ಎನ್ನಲಾಗಿದೆ.

'ತೂಫಾನ್' ಸಾಂಗ್ ಬರೆದ ದಾಖಲೆ ಏನು?
ಆರು ದಿನಗಳ ಹಿಂದಷ್ಟೇ 'ಕೆಜಿಎಫ್ 2' ಸಿನಿಮಾದ 'ತೂಫಾನ್' ಸಾಂಗ್ ರಿಲೀಸ್ ಆಗಿದೆ. ಈ ಸಾಂಗ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಹಿಂದಿಯಲ್ಲಿ ಅತೀ ಹೆಚ್ಚು ವೀವ್ಸ್ ಪಡೆದಿದ್ದು, 15 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಕನ್ನಡದಲ್ಲಿ 7.5 ಮಿಲಿಯನ್, ತೆಲುಗಿನಲ್ಲಿ ಸಾಂಗಿಗೆ 7 ಮಿಲಿಯನ್ ವೀವ್ಸ್ ಸಿಕ್ಕಿದೆ. ಹಾಗೇ ತಮಿಳಿನಲ್ಲಿ 2.8 ಮಿಲಿಯನ್ ವೀವ್ಸ್ ಹಾಗೂ ಮಲಯಾಳಂನಲ್ಲಿ 1.2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಮೂಲಕ ಒಟ್ಟು ಆರು ದಿನಗಳಲ್ಲಿ 5 ಭಾಷೆಗಳಿಂದ 35 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.


Click it and Unblock the Notifications











