'ಭೂಲ್ ಭುಲಯ್ಯ 2' Vs 'ಕೆಜಿಎಫ್ 2': 39ನೇ ದಿನವೂ ಕಮ್ಮಿಯಾಗಿಲ್ಲ ರಾಕಿ ಖದರ್!

'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದು 9 ದಿನಗಳಾಗಿವೆ. ಆದರೂ 'ಕೆಜಿಎಫ್ 2' ಅನ್ನು ಅಲ್ಲಾಡಿಸುವುದಕ್ಕೂ ಆಗಿಲ್ಲ. ಯಾವ್ಯಾವ ಥ್ರಿಯೇಟರ್‌ನಲ್ಲಿ ಸಿನಿಮಾ ಇದೆಯೋ ಅಲ್ಲೆಲ್ಲಾ 'ಕೆಜಿಎಫ್ 2' ಕಲೆಕ್ಷನ್ ಸ್ಟಡಿಯಾಗಿಯೇ ಇದೆ. ವಿಶ್ವದಾದ್ಯಂತ ರಾಕಿ ಭಾಯ್ ಖದರ್ ಇನ್ನು ನಡೆಯುತ್ತಲೇ ಇದೆ.

ಏಪ್ರಿಲ್ 14 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದ 'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಪ್ರೇಕ್ಷಕರ ಮನಗೆದ್ದಿತ್ತು. ರಾಕಿ ಭಾಯ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಪ್ರಿಯರನ್ನು ಮೋಡಿ ಮಾಡುವಲ್ಲಿ ಗೆದ್ದಿತ್ತು. ಅಲ್ಲಿಂದ ಶುರುವಾದ 'ಕೆಜಿಎಫ್ 2' ಪಯಣ ಇಂದಿಗೂ ಮುಂದುವರೆದಿದೆ.

Recommended Video

KGF 2 Collection | 39 ನೇ ದಿನವು ಕಲೆಕ್ಷಷನ್ ವಿಚಾರದಲ್ಲಿ ಜಗ್ಗದ 'KGF 2' | Bhool Bhulaiyaa 2
'ಕೆಜಿಎಫ್ 2'39ನೇ ದಿನದ ಗಳಿಕೆ ಎಷ್ಟು?

'ಕೆಜಿಎಫ್ 2'39ನೇ ದಿನದ ಗಳಿಕೆ ಎಷ್ಟು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಇದೂವರೆಗೂ ನಿಂತಿದ್ದೇ ಇಲ್ಲ. ಬಿಡುಗಡೆಯಾದಲ್ಲಿಂದ ಸಿನಿಮಾ ಓಡುತ್ತಲೇ ಇದೆ. ವಿಶ್ವದಾದ್ಯಂತ 'ಕೆಜಿಎಫ್' ಅನ್ನೋದು ಬ್ರ್ಯಾಂಡ್ ಅನ್ನು ಬಿಲ್ಡ್ ಮಾಡಿದೆ. ಈ ಕಾರಣಕ್ಕೆ 'ಕೆಜಿಎಫ್ 2' ಸಿನಿಮಾ 39ನೇ ದಿನದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಪ್ರಕಾರ, 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್ 39ನೇ ದಿನದಂದೂ 4 ಕೋಟಿ ರೂಪಾಯಿ ಗಳಿಕೆ ಕಂಡಿದೆ.

39ನೇ ದಿನ 'ಕೆಜಿಎಫ್ 2' ಲೂಟಿ ಮಾಡಿದ್ದೆಷ್ಟು?

39ನೇ ದಿನ 'ಕೆಜಿಎಫ್ 2' ಲೂಟಿ ಮಾಡಿದ್ದೆಷ್ಟು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' 39 ದಿನಗಳಲ್ಲಿ ಕಲೆಕ್ಷನ್ ಒಂದು ದಾಖಲೆ ಎಂದೇ ಹೇಳಬಹುದು. ಈ 39 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾದ ಗಳಿಕೆ 1221.13 ಕೋಟಿ ರೂಪಾಯಿ ಆಗಿದೆ. ಹೀಗಾಗಿ ಹೊಸ ಸಿನಿಮಾಗಳು ರಿಲೀಸ್ ಆಗಿದ್ದರೂ, ಓಟಿಟಿಯಲ್ಲಿ ಸಿನಿಮಾ ಲಭ್ಯವಿದ್ದರೂ, ಥಿಯೇಟರ್‌ನಿಂದ ಆಗುತ್ತಿರುವ ಕಲೆಕ್ಷನ್‌ನಲ್ಲಿ ಮೋಸ ಆಗಿಲ್ಲ.

'ಕೆಜಿಎಫ್ 2' ವಿಶ್ವದಾದ್ಯಂತ ಕಲೆಕ್ಷನ್ ರಿಪೋರ್ಟ್

1 ರಿಂದ 5ನೇ ವಾರದ ಗಳಿಕೆ ₹ 1210.53 ಕೋಟಿ
6ನೇ ವಾರ ಮೊದಲ ದಿನ ₹ 3.10 ಕೋಟಿ
ಎರಡನೇ ದಿನ ₹ 3.48 ಕೋಟಿ
ಮೂರನೇ ದಿನ ₹ 4.02 ಕೋಟಿ

ಒಟ್ಟು ₹ 1221.13 ಕೋಟಿ

'ಕೆಜಿಎಫ್ 2'ಗೆ 'ಭೂಲ್ ಭುಲಯ್ಯ 2' ಟಕ್ಕರ್

'ಕೆಜಿಎಫ್ 2'ಗೆ 'ಭೂಲ್ ಭುಲಯ್ಯ 2' ಟಕ್ಕರ್

'ಕೆಜಿಎಫ್ 2' ಸಿನಿಮಾದ ಮುಂದೆ ಯಾವ ಸಿನಿಮಾನೂ ಸದ್ದು ಮಾಡಿಲ್ಲ. ಅದರಲ್ಲೂ ಬಾಲಿವುಡ್ ಸಿನಿಮಾ ಮಕಾಡೆ ಮಲಗಿದ್ದೇ ಹೆಚ್ಚು. ಈಗ ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಅಭಿನಯದ 'ಭೂಲ್ ಭುಲಯ್ಯ 2' ಟಕ್ಕರ್ ಕೊಡುತ್ತಿದೆ. ಆದರೆ, ಇದು 'ಕೆಜಿಎಫ್ 2' ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ. ಮೂರು ದಿನಕ್ಕೆ 50 ಕೋಟಿ ರೂಪಾಯಿಗೂ ಅಧಿಕ ಹಣ ಕಲೆ ಹಾಕಿರುವ ಸಿನಿಮಾ ಹೆಚ್ಚೆಂದರೆ 150 ಕೋಟಿ ಲೂಟಿ ಮಾಡಬಹುದು ಎನ್ನಲಾಗಿದೆ. ಬಾಲಿವುಡ್ ಮಂದಿ ಇಷ್ಟಕ್ಕೆ ಖುಷಿ ಪಟ್ಟುಕೊಳ್ಳಬೇಕಿದೆ.

ಸೂಪರ್‌ಸ್ಟಾರ್‌ಗಳಿಗೂ ಖ್ಯಾರೆ ಅನ್ನಲಿಲ್ಲ 'ಕೆಜಿಎಫ್ 2'

ಸೂಪರ್‌ಸ್ಟಾರ್‌ಗಳಿಗೂ ಖ್ಯಾರೆ ಅನ್ನಲಿಲ್ಲ 'ಕೆಜಿಎಫ್ 2'

'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಮುನ್ನವೇ ರಾಜಮೌಳಿ ನಿರ್ದೇಶನದ RRR ಸಿನಿಮಾ ರಿಲೀಸ್ ಆಗಿತ್ತು. 'ಕೆಜಿಎಫ್ 2' ರಿಲೀಸ್‌ಗೂ ಒಂದು ದಿನ ಮುನ್ನ ದಳಪತಿ ವಿಜಯ್ ಅಭಿನಯದ ಬೀಸ್ಟ್' ರಿಲೀಸ್ ಆಗಿತ್ತು. 'ಕೆಜಿಎಫ್ 2' ರಿಲೀಸ್ ಆದ್ಮೇಲೂ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗಿದ್ದವು. ಆದರೂ, 'ಕೆಜಿಎಫ್ 2' ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ ಅಲ್ಲಾಡಿಸುವುದಕ್ಕೆ ಸಾಧ್ಯವಾಗಿಲ್ಲ. ಈಗ 'ಭುಲ್‌ ಭೂಲಯ್ಯ 2' ತೆರೆಕಂಡು ಬಾಲಿವುಡ್ ಮಂದಿಗೆ ಕೊಂಚ ಜೀವ ಬಂದಂತಾಗಿದೆ.

More from Filmibeat

English summary
Yash Starrer KGF Chapter 2 Box Office Collection Day 39 Earns Rs 1221 Crore, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X