40ನೇ ದಿನವೂ ಜಗ್ಗಲಿಲ್ಲ 'ಕೆಜಿಎಫ್ 2' ಕಲೆಕ್ಷನ್: 'ಭೂಲ್ ಭೂಲಯ್ಯ 2' ಲೆಕ್ಕಕ್ಕಿಲ್ಲ!

ಭಾರತೀಯ ಚಿತ್ರರಂಗ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದೆ. 'ಪುಷ್ಪ', RRR, 'ಕೆಜಿಎಫ್ 2' ಸಿನಿಮಾಗಳು ಬಾಕ್ಸಾಫೀಸ್ ಅನ್ನೇ ಕೊಳ್ಳೆ ಹೊಡೆದಿದ್ದವು. 'ಪುಷ್ಪ' ಹಾಗೂ RRR ಬಳಿಕ 'ಕೆಜಿಎಫ್ 2' ಸಿನಿಮಾ ಮೇಲಿಟ್ಟ ನಂಬಿಕೆನೂ ಹುಸಿಯಾಗಿಲ್ಲ. ಕನ್ನಡದ ಪ್ಯಾನ್ ಇಂಡಿಯಾ ಮಾಡಿದ ಸದ್ದಿಗೆ ಇಡೀ ವಿಶ್ವವೇ ಬೆರೆಗು ಕಣ್ಣಿನಿಂದ ನೋಡಿತ್ತು.

'ಕೆಜಿಎಫ್ 2' ಸಿನಿಮಾ ಇದೂವರೆಗೂ ಮಾಡಿರುವ ದಾಖಲೆಗಳಿಗೆ ಬೇರೆ ಭಾಷೆಯ ಚಿತ್ರರಂಗ ಸುಸ್ತಾಗಿದೆ. 'ಕೆಜಿಎಫ್ 2' ಮುಂದೆ ತೊಡೆತಟ್ಟಿ ನಿಂತ ಸಿನಿಮಾಗಳು ಸದ್ದೇ ಮಾಡದೆ ಹಿಂದಿ ಸರಿದಿದ್ದು ಈಗ ಇತಿಹಾಸ. ಅದರಲ್ಲೂ ಪ್ರಾದೇಶಿಕ ಸಿನಿಮಾವೊಂದು ಈ ಮಟ್ಟಿಗೆ ದಾಖಲೆ ಮಾಡಿದ್ದು, ಬೇರೆಲ್ಲಾ ಚಿತ್ರರಂಗಕ್ಕೂ ಪ್ರೇರಣೆ. ಹಾಗಂತ ಈ ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ತನ್ನ ಓಟವನ್ನು ನಿಲ್ಲಿಸಿಲ್ಲ. ಇಂದಿಗೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ.

'ಕೆಜಿಎಫ್ 2' ಬಹುತೇಕ ಎಲ್ಲಾ ದಾಖಲೆಗಳನ್ನು ಒಡೆದು ಹಾಕಿದೆ. ಇನ್ನೆರಡು ದಾಖಲೆಗಳನ್ನು ಮುರಿಯೋದು ಬಾಕಿಯಿದೆ. ರಾಜಮೌಳಿ ನಿರ್ದೇಶನ 'ಬಾಹುಬಲಿ 2' ಹಾಗೂ ಆಮಿರ್ ಖಾನ್ ನಟನೆಯ 'ದಂಗಲ್' ಸಿನಿಮಾದ ಕಲೆಕ್ಷನ್‌ ಅನ್ನು ಹಿಂದಕ್ಕೆ ಹಾಕುತ್ತಾ? ಅನ್ನೋದು ಕುತೂಹಲ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಸದ್ಯ 40ನೇ ದಿನವೂ 'ಕೆಜಿಎಫ್ 2' ಸಿನಿಮಾ ದಾಖಲೆ ಗಳಿಕೆ ಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಜಗ್ಗದೆ ಮುನ್ನುಗ್ಗುತ್ತಿದೆ.

'ಕೆಜಿಎಫ್ 2' 40ನೇ ದಿನದ ಗಳಿಕೆ ಎಷ್ಟು?

'ಕೆಜಿಎಫ್ 2' 40ನೇ ದಿನದ ಗಳಿಕೆ ಎಷ್ಟು?

'ಕೆಜಿಎಫ್ 2' ಸಿನಿಮಾ ವಿಶ್ವದಲ್ಲಿ ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. 40ನೇ ದಿನವೂ ಅಚ್ಚರಿಯ ಗಳಿಕೆಯನ್ನೇ ಕಂಡಿದೆ. ಯಾವುದೇ ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲಿ ತನ್ನ ಆಟವನ್ನು ನಿಧಾನವಾಗಿ ಮುಗಿಸಿಬಿಡುತ್ತೆ. ಆದರೆ, 'ಕೆಜಿಎಫ್ 2' 40ನೇ ದಿನವೂ ಸುಮಾರು ₹ 4.68 ಕೋಟಿ ಕಲೆಕ್ಷನ್ ಮಾಡಿದೆ. 39ನೇ ದಿನಕ್ಕೆ ಹೋಲಿಸಿದರೆ, 'ಕೆಜಿಎಫ್ 2' ಕಲೆಕ್ಷನ್‌ನಲ್ಲಿ ಮತ್ತೆ ಏರಿಕೆ ಯಾಗಿದೆ. ವಿಶೇಷ ಅಂದ್ರೆ, 40ನೇ ದಿನಕ್ಕೆ ಸುಮಾರು 64 ಲಕ್ಷ ಏರಿಕೆಯಾಗಿದೆ.

'ಕೆಜಿಎಫ್ 2' 40 ದಿನಗಳ ಗಳಿಕೆ ಎಷ್ಟು?

'ಕೆಜಿಎಫ್ 2' 40 ದಿನಗಳ ಗಳಿಕೆ ಎಷ್ಟು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಸಿನಿಮಾ 40 ದಿನಗಳ ಬಾಕ್ಸಾಫೀಸ್‌ ಜರ್ನಿಯನ್ನು ನೋಡುವುದಕ್ಕೆ ಖುಷಿ. ಕನ್ನಡ ಸಿನಿಮಾವೊಂದು ವಿಶ್ವ ಮಟ್ಟದ ಬಾಕ್ಸಾಫೀಸ್‌ನಲ್ಲಿ ಇಷ್ಟೆಲ್ಲಾ ಮೋಡಿ ಮಾಡಿದ್ದು ನಿಜಕ್ಕೂ ಖುಷಿ ಸಂಗತಿಯೇ. ಈ 40 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾದ ಗಳಿಕೆ ₹1225.81 ಕೋಟಿಗೆ ಏರಿಕೆಯಾಗಿದೆ.

'ಕೆಜಿಎಫ್ 2' ವಿಶ್ವದಾದ್ಯಂತ ಕಲೆಕ್ಷನ್ ರಿಪೋರ್ಟ್

1 ರಿಂದ 5ನೇ ವಾರದ ಗಳಿಕೆ ₹ 1210.53 ಕೋಟಿ
6ನೇ ವಾರ ಮೊದಲ ದಿನ ₹ 3.10 ಕೋಟಿ
ಎರಡನೇ ದಿನ ₹ 3.48 ಕೋಟಿ
ಮೂರನೇ ದಿನ ₹ 4.02 ಕೋಟಿ
ನಾಲ್ಕನೇ ದಿನ ₹ 4.68 ಕೋಟಿ

ಒಟ್ಟು ₹ 1221.13 ಕೋಟಿ

'ಬಾಹುಬಲಿ', 'ದಂಗಲ್' ದಾಖಲೆ ಬ್ರೇಕ್ ಆಗುತ್ತಾ?

'ಬಾಹುಬಲಿ', 'ದಂಗಲ್' ದಾಖಲೆ ಬ್ರೇಕ್ ಆಗುತ್ತಾ?

'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇನ್ನೂ ದರ್ಬಾರ್ ಮುಂದುವರೆಸಿದೆ. ಆದರೆ, ವಾರದಿಂದ ವಾರಕ್ಕೆ ಥಿಯೇಟರ್ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗೇ ಕಲೆಕ್ಷನ್ ಕೂಡ ಸಣ್ಣ ಪ್ರಮಾಣದಲ್ಲಿ ಕುಸಿಯುತ್ತಿದೆ. ಹೀಗಾಗಿ 'ಬಾಹುಬಲಿ 2' ಗಳಿಸಿದ 1810 ಕೋಟಿಯನ್ನು ಮೀರಿ ಗಳಿಸುತ್ತಾ? ಆಮಿರ್ ಖಾನ್ ನಟಿಸಿದ 'ದಂಗಲ್' ಸಿನಿಮಾದ ಗಳಿಸಿದ 2024 ಕೋಟಿಯನ್ನು ಲೂಟಿ ಮೀರಿ ಗಳಿಸುತ್ತಾ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಗುತ್ತಿಲ್ಲ. ಯಾಕೆಂದರೆ, ಈ ಎರಡೂ ಸಿನಿಮಾಗಳಿಗಿಂತಲೂ 'ಕೆಜಿಎಫ್ 2' ತುಂಬಾನೇ ಹಿಂದಿದ್ದರೂ, ಪ್ರತಿದಿನ 3 ರಿಂದ 4 ಕೋಟಿ ಕಲೆಹಾಕುತ್ತಿದೆ. ಹೀಗಾಗಿ ಇನ್ನೂ 'ಕೆಜಿಎಫ್ 2' ಭಾರತದ ನಂಬರ್ 1 ಸಿನಿಮಾ ಆಗುತ್ತೆ ಅನ್ನುವ ಅನುಮಾನ ಮಾತ್ರ ಕಮ್ಮಿಯಾಗಿಲ್ಲ.

'ಭೂಲ್ ಭುಲಯ್ಯ 2' ಬಲು ಜೋರು

'ಭೂಲ್ ಭುಲಯ್ಯ 2' ಬಲು ಜೋರು

'ಭೂಲ್ ಭುಲಯ್ಯ 2' ಬಾಲಿವುಡ್‌ಗೆ ಹೊಸ ಹುರುಪು ತಂದು ಕೊಟ್ಟಿದೆ. ಸಿನಿಮಾ ಬಿಡುಗಡೆಯಾದಲ್ಲಿಂದ ಅದ್ಭುತ ಅಂತ ಅನಿಸದೆ ಹೋದರೂ, ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಉತ್ತಮವಾಗಿದೆ. ವೀಕೆಂಡ್‌ನಲ್ಲಿ 50 ಕೋಟಿ ಕ್ಲಬ್ ಸೇರಿದ್ದ 'ಭೂಲ್ ಭುಲಯ್ಯ 2' ಸೋಮವಾರದ ಪರೀಕ್ಷೆಯಲ್ಲೂ ಗೆದ್ದಿದೆ. ಸೋಮವಾರ (ಮೇ 23) 'ಭೂಲ್ ಭುಲಯ್ಯ 2' 10 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಆದರೆ, 'ಕೆಜಿಎಫ್ 2' ಗಳಿಕೆ ಮುಂದೆ ಹತ್ತಿರಕ್ಕೂ ಬಂದಿಲ್ಲ.

More from Filmibeat

English summary
Yash Starrer KGF Chapter 2 Box Office Collection Day 40 Earns Rs 1225 Crore,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X