ವೀಕೆಂಡ್‌ನಲ್ಲಿ ಗಗನಕ್ಕೇರಿದ 'ಕೆಜೆಎಫ್ 2' ಕಲೆಕ್ಷನ್: 10ನೇ ದಿನ ಗಳಿಸಿದ್ದು ಎಷ್ಟು?

ಬಾಕ್ಸಾಫೀಸ್‌ನಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ಓಟ ಇನ್ನೂ ನಿಂತಿಲ್ಲ. ಎರಡನೇ ವೀಕೆಂಡ್‌ ಬಂದರೂ, 'ಕೆಜಿಎಫ್ 2' ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಬಾಕ್ಸಾಫೀಸ್‌ ಪ್ರತಿ ದಿನ ಕೊಳ್ಳೆ ಹೊಡೆಯುತ್ತಲೇ ಇದೆ.

'ಕೆಜಿಎಫ್ 2' ರಿಲೀಸ್ ಆಗಿ ಬರೋಬ್ಬರಿ 10 ದಿನಗಳಾಗಿದೆ. ಇನ್ನು ಎಷ್ಟು ದಿನ ಚಿತ್ರಮಂದಿರದಲ್ಲಿ ಆರ್ಭಟ ಮಾಡುತ್ತೋ ಕುತೂಹಲವಂತೂ ಇದ್ದೇ ಇದೆ. ಯಾಕಂದ್ರೆ, ಇನ್ನೂ ಮೂರು ಸಿನಿಮಾಗಳ ದಾಖಲೆಯನ್ನು ಮುರಿಯಬೇಕಿದೆ. 'ಬಾಹುಬಲಿ 2', ದಂಗಲ್ ಹಾಗೂ RRR ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಧೂಳಿಪಟ ಮಾಡಬೇಕಿದೆ. ಆದರೆ, ಮುಂದಿನ ದಿನಗಳಲ್ಲಿ 'ಕೆಜಿಎಫ್ 2' ಈ ದಾಖಲೆಯನ್ನು ಮುರಿಯಲು ಸಾಧ್ಯಾನಾ? ಅನ್ನುವ ಪ್ರಶ್ನೆಯಂತೂ ಇದ್ದೇ ಇದೆ.

ದಕ್ಷಿಣ ಭಾರತದ ಮತ್ತೊಂದು ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದೊಂದಾ ರೆಕಾರ್ಡ್ ಅನ್ನು ಅಳಿಸುತ್ತಾ ಮುನ್ನುಗ್ಗುತ್ತಿದೆ. ಅದರಲ್ಲೂ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಹೊಸ ದಾಖಲೆ ಬರೆದಿದ್ದು, 'ದಂಗಲ್' ಹಾಗೂ 'ಬಾಹುಬಲಿ 2' ಕಲೆಕ್ಷನ್ ಹಿಂದಿಕ್ಕಲು ವೇಗವಾಗಿ ಮುನ್ನಗ್ಗುತ್ತಿದೆ. ಅಂದ್ಹಾಗೆ ಈ ಹತ್ತು ದಿನಗಳ ಕಲೆಕ್ಷನ್ ಹೇಗಿದೆ? ಅಂತ ತಿಳಿಯಲು ಮುಂದೆ ಓದಿ..

Recommended Video

KGF 2 Collection | 'ದಂಗಲ್' ಹಾಗೂ 'ಬಾಹುಬಲಿ 2' ಕಲೆಕ್ಷನ್ ಹಿಂದಿಕ್ಕಲು 'KGF2' ರೆಡಿ | Yash | Prashanth Neel

ವೀಕೆಂಡ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ ಹೇಗಿದೆ?

ವೀಕೆಂಡ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ ಹೇಗಿದೆ?

'ಕೆಜಿಎಫ್ ಚಾಪ್ಟರ್ 2' ನಿರಂತರ 10 ದಿನಗಳಿಂದ ಬೇಜಾನ್ ಸದ್ದು ಮಾಡುತ್ತಿದೆ. ಒಂದು ವಾರ ಸಿನಿಮಾ ಓಡುತ್ತೆ ಎಂದು ಭವಿಷ್ಯ ನುಡಿದವರ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ. 10ನೇ ದಿನವೂ 'ಕೆಜಿಎಫ್ 2' ಕಲೆಕ್ಷನ್ ಭರ್ಜರಿಯಾಗಿಯೇ ಇದೆ. 'ಕೆಜಿಎಫ್ 2' 10ನೇ ದಿನ ಬಾಕ್ಸಾಫೀಸ್‌ನಲ್ಲಿ ಸುಮಾರು 40 ಕೋಟಿ ಗಳಿಕೆ ಕಂಡಿದೆ. ವೀಕೆಂಡ್‌ನಲ್ಲಿ ಶೇಕಡಾ 65ರಷ್ಟು ಏರಿಕೆ ಕಂಡಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

10 ದಿನಗಳಲ್ಲಿ 'ಕೆಜಿಎಫ್ 2' ಗಳಿಸಿದ್ದೆಷ್ಟು?

10 ದಿನಗಳಲ್ಲಿ 'ಕೆಜಿಎಫ್ 2' ಗಳಿಸಿದ್ದೆಷ್ಟು?

ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ರಿಲೀಸ್ ಆದಲ್ಲೆಲ್ಲಾ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಹತ್ತು ದಿನಗಳಲ್ಲಿ 'ಕೆಜಿಎಫ್ 2' ಮಸ್ತ್ ಕಲೆಕ್ಷನ್ ಮಾಡಿದೆ. ಅದರಲ್ಲೂ ಈ ಶನಿವಾರ (ಏಪ್ರಿಲ್ 23) ಹಾಗೂ ಭಾನುವಾರ (ಏಪ್ರಿಲ್ 24) ಈ ಎರಡೂ ದಿನವೂ ಕಲೆಕ್ಷನ್ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

1ನೇ ದಿನ Rs 164.20 Cr (ಅಂದಾಜು)
2ನೇ ದಿನ Rs 128.90 Cr (ಅಂದಾಜು)
3ನೇ ದಿನ: Rs 137.10 Cr (ಅಂದಾಜು)
4ನೇ ದಿನ: Rs 127.25 Cr (ಅಂದಾಜು)
5ನೇ ದಿನ: Rs 66.35 Cr (ಅಂದಾಜು)
6ನೇ ದಿನ: Rs 52.35 Cr (ಅಂದಾಜು)
7ನೇ ದಿನ: Rs 43.15 Cr (ಅಂದಾಜು)
8ನೇ ದಿನ: Rs 31.05 Cr (ಅಂದಾಜು)
9ನೇ ದಿನ: Rs 25.00 Cr (ಅಂದಾಜು)
10ನೇ ದಿನ: Rs 40.00 Cr (ಅಂದಾಜು)

ಒಟ್ಟು: Rs 815.40 Cr (ಅಂದಾಜು)

300 ಕೋಟಿ ದಾಟಿತಾ ಬಾಲಿವುಡ್ ಬಾಕ್ಸಾಫೀಸ್?

300 ಕೋಟಿ ದಾಟಿತಾ ಬಾಲಿವುಡ್ ಬಾಕ್ಸಾಫೀಸ್?

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ ಜೋರಾಗಿಯೇ ಇದೆ. ಶನಿವಾರ (ಏಪ್ರಿಲ್ 23)ರಂದು ಸುಮಾರು 18 ಕೋಟಿ ಗಳಿಸಿದೆ ಎಂದು ಬಾಲಿವುಡ್ ಮೂಲಗಳು ಹೇಳುತ್ತಿವೆ. ಈ ಲೆಕ್ಕಾಚಾರದ ಪ್ರಕಾರ, ಹಿಂದಿ ಬೆಲ್ಟ್‌ನಲ್ಲಿ ಸುಮಾರು 298 ಕೋಟಿ ಆಗಿದೆ ಎನ್ನಲಾಗಿದ್ದು, ಈ ವೀಕೆಂಡ್‌ನಲ್ಲಿ ಸಿನಿಮಾದ ಗಳಿಕೆ ಆರಾಮಾಗಿ 300 ಕೋಟಿ ದಾಟಲಿದೆ.

'ದಂಗಲ್', 'ಬಾಹುಬಲಿ 2' ರೆಕಾರ್ಡ್ ಬ್ರೇಕ್ ಮಾಡಲು ಎಷ್ಟು ಬೇಕು?

'ದಂಗಲ್', 'ಬಾಹುಬಲಿ 2' ರೆಕಾರ್ಡ್ ಬ್ರೇಕ್ ಮಾಡಲು ಎಷ್ಟು ಬೇಕು?

ಆಮಿರ್‌ ಖಾನ್ ಅಭಿನಯದ 'ದಂಗಲ್' ಹಿಂದಿ ಬೆಲ್ಟ್‌ನಲ್ಲಿ 375 ಕೋಟಿ ಗಳಿಸಿದೆ. ಅದೇ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2' 511 ಕೋಟಿ ಲೂಟಿ ಮಾಡಿತ್ತು. ಸದ್ಯ ಪರಿಸ್ಥಿತಿಯಲ್ಲಿ 'ಕೆಜಿಎಫ್ 2' ಹಿಂದಿ ಬೆಲ್ಟ್‌ನಲ್ಲಿ 'ದಂಗಲ್' ದಾಖಲೆಯನ್ನು ಮುರಿಯೋದು ಕನ್ಫರ್ಮ್. ಯಾಕಂದ್ರೆ, ಈ ವೀಕೆಂಡ್ ಮುಗಿಯುವುದರೊಳಗೆ ಕಮ್ಮಿ ಅಂದರೂ ಕಲೆಕ್ಷನ್ 320 ಕೋಟಿ ದಾಟಿರುತ್ತೆ. ಹೀಗಾಗಿ ಇನ್ನೊಂದು ವಾರದೊಳಗೆ 'ದಂಗಲ್' ದಾಖಲೆಯನ್ನು ಹಿಂದಕ್ಕೆ ಹಾಕುವುದು ಕನ್ಫರ್ಮ್. ಹಾಗೇ ಇನ್ನೊಂದು ವಾರದೊಳಗೆ 1000 ಕೋಟಿ ಕ್ಲಬ್ ಸೇರಿದರೂ ಅಚ್ಚರಿ ಪಡಬೇಕಿಲ್ಲ.

More from Filmibeat

English summary
Yash Starrer KGF Chapter 2 Day 10 Worldwide Box Office Collection Report. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X