2ನೇ ವೀಕೆಂಡ್‌ನಲ್ಲಿ 900 ಕೋಟಿ ಕ್ಲಬ್ ಸೇರಿತಾ 'KGF 2'? ಸಿನಿಮಾ ಪಂಡಿತರ ಲೆಕ್ಕಾಚಾರವೇನು?

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾದ ಆರ್ಭಟ ನಿಲ್ಲುತ್ತಿಲ್ಲ. ಯಾವುದೇ ಸಿನಿಮಾ ಬಂದರೂ, 'ಕೆಜಿಎಫ್ 2' ನಾಗಲೋಟವನ್ನು ತಡೆದು ನಿಲ್ಲಿಸುವುದಕ್ಕೆ ಆಗುತ್ತಿಲ್ಲ. ದೇಶ-ವಿದೇಶದಲ್ಲಿ 'ಕೆಜಿಎಫ್ 2' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಅದರಲ್ಲೂ ಎರಡನೇ ವೀಕೆಂಡ್‌ನಲ್ಲಿ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

ಬಾಲಿವುಡ್‌ನಲ್ಲಿ ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಸಿನಿಮಾ ರಿಲೀಸ್ ಆಗಿದ್ದರೂ, 'ಕೆಜಿಎಫ್ 2' ಠುಸ್ ಪಟಾಕಿಯಂತಾಗಿದೆ. ಎರಡನೇ ವಾರದಲ್ಲಿ ರಾಕಿ ಭಾಯ್‌ಯನ್ನು ಹಿಂದಿ ಬೆಲ್ಟ್‌ನಲ್ಲಿ ಕಟ್ಟಿ ಹಾಕಬಹುದೆಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ, 'ಕೆಜಿಎಫ್ 2' ಆರ್ಭಟದ ಮುಂದೆ 'ಜೆರ್ಸಿ' ಕಳೆದು ಹೋಗಿದೆ. ಹಾಗಿದ್ದರೆ, 11ನೇ ದಿನ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ದೋಚಿದ್ದೆಷ್ಟು? ಒಟ್ಟು ಎಷ್ಟು ಕೋಟಿ ಕಲೆಹಾಕಿದೆ? ಅಂತ ತಿಳಿಯಲು ಮುಂದೆ ಓದಿ.

Recommended Video

'KGF 2' 11th Day Collection | 11 ದಿನದಲ್ಲಿ ದೋಚಿದ್ದೆಷ್ಟು ?
11 ನೇ ದಿನ 'ಕೆಜಿಎಫ್ 2' ಕಲೆಕ್ಷನ್ ಎಷ್ಟು?

11 ನೇ ದಿನ 'ಕೆಜಿಎಫ್ 2' ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಮೌತ್ ಟಾಕ್‌ ಮೂಲಕ ಇಡೀ ವಿಶ್ವವನ್ನು ಆವರಿಸಿಕೊಂಡಿದ್ದಾಗಿದೆ. ಹೀಗಾಗಿ ಎರಡನೇ ವಾರದ ಆರಂಭದಲ್ಲಿ ಕಲೆಕ್ಷನ್‌ನಲ್ಲಿ ಸ್ವಲ್ಪ ಏರು-ಪೇರಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಅಂತಹ ಏಟು ಬಿದ್ದಿಲ್ಲ. ಅದೇ ವೀಕೆಂಡ್ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿದ್ದು, ಚಿತ್ರತಂಡಕ್ಕೆ ಹೊಸ ಹುರುಷು ನೀಡಿದೆ. ಎರಡನೇ ಭಾನುವಾರ (ಏಪ್ರಿಲ್ 24) ರಂದು 'ಕೆಜಿಎಫ್ 2' ಸಿನಿಮಾ ಕೇವಲ ಭಾರತದಲ್ಲಿಯೇ 45 ಕೋಟಿ ಗಳಿಕೆ ಕಂಡಿದೆ. ವಿಶ್ವದಾದ್ಯಂತ ಸಿನಿಮಾದ ಕಲೆಕ್ಷನ್ 60 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ.

'ಕೆಜಿಎಫ್ 2' 11 ದಿನಗಳಲ್ಲಿ ಒಟ್ಟು ಗಳಿಸಿದ್ದೆಷ್ಟು?

'ಕೆಜಿಎಫ್ 2' 11 ದಿನಗಳಲ್ಲಿ ಒಟ್ಟು ಗಳಿಸಿದ್ದೆಷ್ಟು?

ಎರಡನೇ ವಾರ ಮುಗಿದರೂ ವರ್ಲ್ಡ್‌ವೈಡ್ 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿಲ್ಲ. ಎರಡನೇ ವಾರದ ಹೊತ್ತಿಗೆ 'ಕೆಜಿಎಫ್ ಚಾಪ್ಟರ್ 2' ಕಲೆಕ್ಷನ್ ಡ್ರಾಪ್ ಆಗುತ್ತೆ ಎಂದು ಭಾವಿಸಿದ್ದರ ಲೆಕ್ಕಾಚಾರ ಉಲ್ಟಾ ಆಗಿದೆ. 'ಕೆಜಿಎಫ್ 2' ವೀಕೆಂಡ್‌ನಲ್ಲಿ ಮತ್ತೆ ಬಾಕ್ಸಾಪೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಈ 11 ದಿನಗಳಲ್ಲಿ ಕೆಜಿಎಫ್ ಸಿನಿಮಾದ ಕಲೆಕ್ಷನ್ ಬಗ್ಗೆ ಪಂಡಿತರು ಒಂದೊಂದು ಲೆಕ್ಕ ನೀಡಿದ್ದಾರೆ.

11 ದಿನಗಳಲ್ಲಿ 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

1ನೇ ದಿನ Rs 164.20 Cr (ಅಂದಾಜು)
2ನೇ ದಿನ Rs 128.90 Cr (ಅಂದಾಜು)
3ನೇ ದಿನ: Rs 137.10 Cr (ಅಂದಾಜು)
4ನೇ ದಿನ: Rs 127.25 Cr (ಅಂದಾಜು)
5ನೇ ದಿನ: Rs 66.35 Cr (ಅಂದಾಜು)
6ನೇ ದಿನ: Rs 52.35 Cr (ಅಂದಾಜು)
7ನೇ ದಿನ: Rs 43.15 Cr (ಅಂದಾಜು)
8ನೇ ದಿನ: Rs 31.05 Cr (ಅಂದಾಜು)
9ನೇ ದಿನ: Rs 25.00 Cr (ಅಂದಾಜು)
10ನೇ ದಿನ: Rs 41.85 Cr (ಅಂದಾಜು)
11 ನೇ ದಿನ Rs 63.00 Cr (ಅಂದಾಜು)

ಒಟ್ಟು: Rs 880.25 Cr (ಅಂದಾಜು)

900 ಕೋಟಿ ಕ್ಲಬ್ ಸೇರಿತಾ 'ಕೆಜಿಎಫ್ 2'

'ಕೆಜಿಎಫ್ 2' 11 ನೇ ದಿನ 880 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಭಾನುವಾರ( ಏಪ್ರಿಲ್ 24) ದಂದು ಸುಮಾರು 60 ಕೋಟಿ ಅಧಿಕ ಗಳಿಕೆ ಕಂಡಿದೆ ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ, 'ಕೆಜಿಎಫ್ 2' 900 ಕೋಟಿ ಕ್ಲಬ್ ಸೇರಿದೆ ಎಂದು ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ. ಇವರ ಪ್ರಕಾರ, ಕಾಮ್‌ಸ್ಕೋರ್ ಉತ್ತರ ಅಮೆರಿಕದ ಗಳಿಕೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಅದೂ ಸೇರಿದರೆ 900 ಕೋಟಿ ಕಲೆಕ್ಷನ್ ಆಗುತ್ತೆ ಎಂದು ಹೇಳಲಾಗಿದೆ.

300 ಕೋಟಿ ದಾಟಿದ ಬಾಲಿವುಡ್‌ ಬಾಕ್ಸಾಫೀಸ್ ಕಲೆಕ್ಷನ್

'ಕೆಜಿಎಫ್ 2' ಹಿಂದಿ ಬೆಲ್ಟ್‌ನಲ್ಲೂ ಸೂಪರ್ ಕಲೆಕ್ಷನ್ ಮಾಡಿದೆ. ಭಾನುವಾರ (ಏಪ್ರಿಲ್ 24) ಕೇವಲ ಹಿಂದಿ ಬೆಲ್ಟ್‌ನಲ್ಲೇ ಸುಮಾರು 22.68 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ. ಈ ಲೆಕ್ಕಾಚಾರದ ಪ್ರಕಾರ, 'ಕೆಜಿಎಫ್ 2' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 321.21 ಕೋಟಿ ಕಲೆಕ್ಷನ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಮಿರ್ ಖಾನ್ ಅಭಿನಯದ ದಂಗಲ್ ಕಲೆಕ್ಷನ್ ಅನ್ನು ಬ್ರೇಕ್ ಮಾಡಲಿದೆ.

More from Filmibeat

English summary
Yash Starrer KGF Chapter 2 Day 11 Worldwide Box Office Collection Report. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X