12 ನೇ ದಿನವೂ ನಿಲ್ಲದ 'ಕೆಜಿಎಫ್ 2' ನಾಗಾಲೋಟ: 1000 ಕೋಟಿಗೆ ಇನ್ನೆಷ್ಟು ಬೇಕು?

'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್‌ನಲ್ಲಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಸೆನ್ಸೇಷನಲ್ ಬ್ಲಾಕ್ ಬಸ್ಟರ್ ಎಂದು ಸಾಬೀತಾಗಿದೆ. ಎರಡು ವಾರ ಕಳೆದು ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಥಿಯೇಟರ್‌ನಲ್ಲಿ ಈ ಸಿನಿಮಾ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದೆ.

'ಕೆಜಿಎಫ್ 2' ಪ್ರಾಂಚೈಸಿ ಈ ಮಟ್ಟಿಗೆ ಸದ್ದು ಮಾಡುತ್ತಿರೋದ್ರಿಂದ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ. ಒಂದೊಂದೇ ಹಂತವನ್ನು ದಾಟಿ ಬಂದಿರೋ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಈಗಾಗಲೇ 900 ಕೋಟಿ ಗಟಿದಾಟಿರುವ 'ಕೆಜಿಎಫ್ 2' ಮುಂದಿನ ಗುರಿ ಸಾವಿರ ಕೋಟಿ. ಇದ್ಯಾವಾಗ ಗಳಿಕೆ ಮಾಡುತ್ತೆ ಎನ್ನುವುದೇ ಸದ್ಯ ಎಲ್ಲರ ಕುತೂಹಲ.

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಈ ಮಟ್ಟಕ್ಕೆ ಸದ್ದು ಮಾಡುತ್ತೆ ಎಂದು ಬಹುಶ: ಯಾರೂ ಗೆಸ್ ಮಾಡಿರಲಿಕ್ಕೆ ಸಾಧ್ಯವಿಲ್ಲ. 'ಕೆಜಿಎಫ್ 2' ರಿಲೀಸ್ ಆದಲ್ಲಿಂದ ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಚಮತ್ಕಾರವನ್ನೇ ಮಾಡಿದೆ. ಸದ್ಯ 12ನೇ ದಿನವೂ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಗಳಿಕೆನೇ ಮುಂದುವರೆದಿದೆ. ಇಲ್ಲಿವರೆಗೂ 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಸಾವಿರ ಕೋಟಿ ಕ್ಲಬ್‌ಗೆ ಯಾವಾಗ ಸೇರಬಹುದು? ಎಂದು ತಿಳಿಯಲು ಮುಂದೆ ಓದಿ.

2 ನೇ ಸೋಮವಾರ ' ಕೆಜಿಎಫ್ 2' ಗಳಿಸಿದ್ದೆಷ್ಟು?

2 ನೇ ಸೋಮವಾರ ' ಕೆಜಿಎಫ್ 2' ಗಳಿಸಿದ್ದೆಷ್ಟು?

'ಕೆಜಿಎಫ್ 2' ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ. 2ನೇ ಸೋಮವಾರ 'ಕೆಜಿಎಫ್ 2' ಸಿನಿಮಾದ ಕಲೆಕ್ಷನ್ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಇದೆ. ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಸಿಕ್ಕಾಪಟ್ಟೆ ಡ್ರಾಪ್ ಏನೂ ಆಗಿಲ್ಲ. ಹೀಗಾಗಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು 12ನೇ ದಿನವೂ ಬೇಜಾನ್ ಸದ್ದು ಮಾಡುತ್ತಿದ್ದು, 2ನೇ ಸೋಮವಾರ ಬಾಕ್ಸಾಫೀಸ್‌ನಲ್ಲಿ 30 ಕೋಟಿಗೂ ಅಧಿಕ ಗಳಿಕೆಯನ್ನು ದಾಖಲಿಸಿದೆ.

12 ದಿನಗಳ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

12 ದಿನಗಳ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ಇಡೀ ವಿಶ್ವದಲ್ಲಿಯೇ ಕ್ರೇಜಿ ಹುಟ್ಟಾಕಿದ 'ಕೆಜಿಎಫ್ 2' ಮೊದಲ ದಿನದಿಂದಲೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಿನಿಮಾ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದ ಸಿನಿಮಾ ವಿಶ್ವದ ಮಾರುಕಟ್ಟೆಯಲ್ಲಿ ಇನ್ನೂ ಸದ್ದು ಮಾಡುತ್ತಲೇ ಇದೆ. ಈ 12 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾದ ಒಟ್ಟು ಗಳಿಕೆ 930 ಕೋಟಿ ದಾಟಿದೆ. 1 ಸಾವಿರ ಕೋಟಿ ಕ್ಲಬ್ ಸೇರಲು ಇನ್ನು 70 ಕೋಟಿ ಅಷ್ಟೆ ಬಾಕಿ ಉಳಿದಿದೆ.

'KGF 2' 12 ದಿನಗಳ ಬಾಕ್ಸಾಫೀಸ್ ಕಲೆಕ್ಷನ್

1ನೇ ದಿನ Rs 164.20 Cr (ಅಂದಾಜು)
2ನೇ ದಿನ Rs 128.90 Cr (ಅಂದಾಜು)
3ನೇ ದಿನ: Rs 137.10 Cr (ಅಂದಾಜು)
4ನೇ ದಿನ: Rs 127.25 Cr (ಅಂದಾಜು)
5ನೇ ದಿನ: Rs 66.35 Cr (ಅಂದಾಜು)
6ನೇ ದಿನ: Rs 52.35 Cr (ಅಂದಾಜು)
7ನೇ ದಿನ: Rs 43.15 Cr (ಅಂದಾಜು)
8ನೇ ದಿನ: Rs 31.05 Cr (ಅಂದಾಜು)
9ನೇ ದಿನ: Rs 25.05 Cr (ಅಂದಾಜು) (Updated)
10ನೇ ದಿನ: Rs 55.85 Cr (ಅಂದಾಜು) (Updated)
11 ನೇ ದಿನ Rs 69.30 Cr (ಅಂದಾಜು) (Updated)
12ನೇ ದಿನ Rs 30.00 Cr (ಅಂದಾಜು)

ಒಟ್ಟು: Rs 930.55 Cr (ಅಂದಾಜು)

400 ಕೋಟಿ ಕ್ಲಬ್ ಸೇರುತ್ತಾ 'ಕೆಜಿಎಫ್ 2'?

400 ಕೋಟಿ ಕ್ಲಬ್ ಸೇರುತ್ತಾ 'ಕೆಜಿಎಫ್ 2'?

ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಮೂರನೇ ವಾರದ ಆರಂಭದಲ್ಲಿ ಶೇ. 30ರಷ್ಟು ಡ್ರಾಪ್ ಆಗಿದೆ. ಹಾಗಿದ್ದರೂ, 'ಕೆಜಿಎಫ್ 2' 12ನೇ ದಿನ 7.25 ಕೋಟಿ ಕಲೆಕ್ಷನ್ ಮಾಡಿದೆ. ಇಷ್ಟು ದಿನಗಳ ಗಳಿಕೆಯನ್ನು ಲೆಕ್ಕ ಹಾಕಿದರೆ, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 12 ದಿನಗಳ ಗಳಿಕೆ 322 ಕೋಟಿ ದಾಟಿದೆ. ಹೀಗಾಗಿ 'ಕೆಜಿಎಫ್ ಚಾಪ್ಟರ್ 2' ಈ ವಾರದ ಅಂತ್ಯದಲ್ಲಿ 400 ಕೋಟಿ ಕ್ಲಬ್ ಸೇರಿತ್ತಾ? ಅನ್ನುವ ಅನುಮಾನ ಕಾಡುತ್ತಿದೆ.

'ಕೆಜಿಎಫ್ 2' ನಾಗಾಲೋಟಕ್ಕೆ 4 ಸಿನಿಮಾ ಟಕ್ಕರ್

'ಕೆಜಿಎಫ್ 2' ನಾಗಾಲೋಟಕ್ಕೆ 4 ಸಿನಿಮಾ ಟಕ್ಕರ್

ಮೂರು ವಾರ 'ಕೆಜಿಎಫ್ 2' ಎದುರಾಳಿಗಳೇ ಇರಲಿಲ್ಲ. ಬಾಲಿವುಡ್‌ನಲ್ಲಿ 'ಜೆರ್ಸಿ' ಸಿನಿಮಾ ಬಿಡುಗಡೆಯಾಗಿದ್ದರೂ, 'ಕೆಜಿಎಫ್ 2' ಮುಂದೆ ಎದ್ದು ನಿಲ್ಲೋಕೆ ಆಗಲೇ ಇಲ್ಲ. ಆದರೆ, ಮುಂದಿನ ವಾರದಿಂದ ನಾಲ್ಕು ಸಿನಿಮಾಗಳು 'ಕೆಜಿಎಫ್ 2' ಟಕ್ಕರ್ ಕೊಡಲಿದೆ. ಮೆಗಾಸ್ಟಾರ್ ಅಭಿನಯದ 'ಆಚಾರ್ಯ', ಬಾಲಿವುಡ್‌ನಲ್ಲಿ 'ಹೀರೊಪಂತಿ 2', 'ರನ್‌ ವೇ 34' ಹಾಗೂ ಹಾಲಿವುಡ್‌ ಸಿನಿಮಾ 'ಡಾ.ಸ್ಟ್ರೇಂಜ್' ಸಿನಿಮಾ ನೋಡಲು ಅಡ್ವಾನ್ಸ್ ಬುಕಿಂಗ್ ಜೋರಾಗಿ ನಡೆಯುತ್ತಿದೆ. ಈ ಕಾರಣಕ್ಕೆ ಮೂರನೇ ವಾರದ ಕೊನೆಯಲ್ಲಿ 'ಕೆಜಿಎಫ್ 2' ಗಳಿಕೆಯಲ್ಲಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

More from Filmibeat

English summary
Yash Starrer KGF Chapter 2 Day 12 Worldwide Box Office Collection Report. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X