'KGF 2' 14ನೇ ದಿನವೂ ಅದ್ಭುತ ಕಲೆಕ್ಷನ್? ಅತೀ ಹೆಚ್ಚು ಗಳಿಕೆ ಕಂಡ 3ನೇ ಬಾಲಿವುಡ್ ಸಿನಿಮಾ!
ರಾಕಿ ಭಾಯ್ ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್.. ಎಂದಿದ್ದೇ ತಡ ಬಾಕ್ಸಾಫೀಸ್ ಕಲೆಕ್ಷನ್ ದಾಖಲೆಗಳನ್ನು ಬರೆದಿತ್ತು. ನಿನ್ನೆಗೆ (ಏಪ್ರಿಲ್ 27) 'ಕೆಜಿಎಫ್ 2' ಸಿನಿಮಾ ಕಲೆಕ್ಷನ್‌ನಲ್ಲಿ ಹೆಚ್ಚೇನು ವ್ಯತ್ಯಾಸ ಆಗಿಲ್ಲ. ಕಳೆದ 14 ದಿನಗಳಿಂದ ಈ ಸಿನಿಮಾದ ಗಳಿಕೆ 1000 ಕೋಟಿ ದಾಟುತ್ತಾ ಎಂದು ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ.
Recommended Video

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಕಲೆಕ್ಷನ್ ವಿಶ್ವದಾದ್ಯಂತ ಚೆನ್ನಾಗಿದೆ. 14ನೇ ದಿನವೂ ಈ ಸಿನಿಮಾದ ಗಳಿಕೆ ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿದೆ. ಮೂರನೇ ವಾರವೂ ಯಶ್ ಹಾಗೂ ಪ್ರಶಾಂತ್ ನೀಲ್ ಜೋಡಿ ಥಿಯೇಟರ್‌ನಲ್ಲಿ ಕಮಾಲ್ ಮಾಡುತ್ತಲೇ ಇದೆ.
ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾ ಉತ್ತರ ಭಾರತದಲ್ಲೂ ಕಮಾರ್ ಮಾಡುತ್ತಿದೆ. ಹಿಂದಿ ಬೆಲ್ಟ್, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ 'ಕೆಜಿಎಫ್ 2'ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಕಾರಣಕ್ಕೆ ಸಾವಿರ ಕೋಟಿ ಗಡಿ ಯಾವಾಗ ದಾಟುತ್ತೋ? ಯಾವಾಗ ಸಂಭ್ರಮಿಸುತ್ತೆವೋ ಎಂದು ಕಾದು ಕೂತಿದ್ದಾರೆ. ಈ ನಡುವೆನೇ 'ಕೆಜಿಎಫ್ 2' ಕಲೆಕ್ಷನ್ ವಿಶ್ವ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗೆ ಡೌನ್ ಆಗಿರೋದು ಗೋಚರವಾಗುತ್ತಿದೆ.

14ನೇ ದಿನ 'ಕೆಜಿಎಫ್ 2' ಕಲೆಕ್ಷನ್ ಎಷ್ಟು?
'ಕೆಜಿಎಫ್ 2' ಥಿಯೇಟರ್‌ಗೆ ಲಗ್ಗೆ ಇಟ್ಟು ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದ ಆರಂಭದಲ್ಲಿಯೇ 'ಕೆಜಿಎಫ್ 2' ಸಿನಿಮಾದ ಕಲೆಕ್ಷನ್‌ನಲ್ಲಿ ಸ್ವಲ್ಪ ಡ್ರಾಪ್ ಆಗಿದ್ದರೂ, ಮೂರನೇ ವಾರದಲ್ಲಿ ಇನ್ನೂ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡುತ್ತಿರೋದು ಸಿನಿಮಾದ ತಾಕತ್ತನ್ನು ತೋರಿಸಿದೆ. ಅಂದ್ಹಾಗೆ 'ಕೆಜಿಎಫ್ 2' ಸಿನಿಮಾ 14ನೇ ದಿನಕ್ಕೆ ವಿಶ್ವದ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 15 ಕೋಟಿ ಗಳಿಸಿರಬಹುದು ಎಂದು ಟ್ರೇಡ್ ಅನಲಿಸ್ಟ್ ಅಂದಾಜು ಮಾಡಿದ್ದಾರೆ.

'ಕೆಜಿಎಫ್ 2' 14 ದಿನಗಳ ಕಲೆಕ್ಷನ್ ಎಷ್ಟು?
ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಚಮತ್ಕಾರ ಮುಂದುವರೆದಿದೆ. ಥಿಯೇಟರ್‌ನಲ್ಲಿ ರಾಕಿ ಭಾಯ್ ಡೈಲಾಗ್ ಅಬ್ಬರ ಇನ್ನೂ ನಿಂತಿಲ್ಲ. ಥಿಯೇಟರ್‌ನಲ್ಲಿ ಯಶ್ ಖದರ್ ಇನ್ನೂ ಮುಂದುವರೆಯುತ್ತಲೇ ಇದೆ. ಈ 14 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾದ ಒಟ್ಟು ಗಳಿಕೆ 957 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಈ ವಾರದ ಅಂತ್ಯದ ವೇಳೆಗೆ 'ಕೆಜಿಎಫ್ 2' ಸಿನಿಮಾ ಸಾವಿರ ಕೋಟಿ ಗಡಿ ದಾಟುವ ಸಾಧ್ಯತೆಗಳಿವೆ. ಈ 14 ದಿನ ಸಿನಿಮಾದ ಕಲೆಕ್ಷನ್ ಹೀಗಿದೆ.
'KGF 2' 13 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
1ನೇ ದಿನ Rs 164.20 Cr (ಅಂದಾಜು)
2ನೇ ದಿನ Rs 128.90 Cr (ಅಂದಾಜು)
3ನೇ ದಿನ: Rs 137.10 Cr (ಅಂದಾಜು)
4ನೇ ದಿನ: Rs 127.25 Cr (ಅಂದಾಜು)
5ನೇ ದಿನ: Rs 66.35 Cr (ಅಂದಾಜು)
6ನೇ ದಿನ: Rs 52.35 Cr (ಅಂದಾಜು)
7ನೇ ದಿನ: Rs 43.15 Cr (ಅಂದಾಜು)
8ನೇ ದಿನ: Rs 31.05 Cr (ಅಂದಾಜು)
9ನೇ ದಿನ: Rs 25.05 Cr (ಅಂದಾಜು) (Updated)
10ನೇ ದಿನ: Rs 55.85 Cr (ಅಂದಾಜು) (Updated)
11 ನೇ ದಿನ Rs 69.30 Cr (ಅಂದಾಜು) (Updated)
12ನೇ ದಿನ Rs 24.80 Cr (ಅಂದಾಜು) (Updated)
13ನೇ ದಿನ Rs 17.40 Cr (ಅಂದಾಜು) (Updated)
14ನೇ ದಿನ Rs 15.00 Cr (ಅಂದಾಜು)
ಒಟ್ಟು: Rs 957.35 Cr (ಅಂದಾಜು)
ಬಾಲಿವುಡ್‌ನಲ್ಲಿ 'ಕೆಜಿಎಫ್ 2' ಎಷ್ಟು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಕೆಲಕ್ಷನ್ ಬಾಲಿವುಡ್‌ನಲ್ಲೂ ಜೋರಾಗೇ ಇದೆ. ಸದ್ಯ ಬಾಲಿವುಡ್‌ನಲ್ಲಿ ದಾಖಲೆ ಗಳಿಕೆ ಕಂಡ ಮೂರನೇ ಅತೀ ದೊಡ್ಡ ಬಾಲಿವುಡ್ ಸಿನಿಮಾ ಎಂಬ ಪಟ್ಟಿ ಸೇರಿದೆ. 14ನೇ ದಿನ ಹಿಂದಿ ಬೆಲ್ಟ್‌ನಲ್ಲಿ 6.25 ಕೋಟಿ ಗಳಿಸಿದೆ. ಈ ಮೂಲಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 343.13 ಕೋಟಿ ಗಳಿಸಿದ್ದು, ಹೊಸ ದಾಖಲೆ ಬರೆದಿದೆ.

KGF 2 ದಾಖಲೆಯನ್ನು ಬ್ರೇಕ್ ಮಾಡೋದ್ಯಾವಾಗ?
'ಬಾಹುಬಲಿ', 'ಪುಷ್ಪ', 'RRR', 'ಕೆಜಿಎಫ್ 2' ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಇತ್ತೀಚೆಗೆ ತೆರೆಕಂಡ ರಾಜಮೌಳಿ ನಿರ್ದೇಶನದ RRR ಸಿನಿಮಾ ಇದವರೆಗೂ ಬರೋಬ್ಬರಿ 1130 ಕೋಟಿ ಗಳಿಸಿದ್ದು, ಈ ದಾಖಲೆಯನ್ನು 'ಕೆಜಿಎಫ್ 2' ಯಾವಾಗ ಬ್ರೇಕ್ ಮಾಡುತ್ತೆ ಅನ್ನೋದು ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ. 'ಕೆಜಿಎಫ್ 2' ಕಲೆಕ್ಷನ್ ಹೀಗೆ ಮುಂದುವರೆದರೆ, ಈ ವಾರದೊಳಗೆ ಸಾವಿರ ಕೋಟಿ ಗಳಿಸುವ ಸಾಧ್ಯತೆಯಿದೆ.


Click it and Unblock the Notifications











