'ಕೆಜಿಎಫ್ 2' 1000 ಕೋಟಿ ಕಲೆಕ್ಷನ್ ಆಯ್ತಾ? ಟ್ರೇಡ್ ಅನಲಿಸ್ಟ್‌ಗಳ ಗೊಂದಲದ ರಿಪೋರ್ಟ್!
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' 1000 ಕೋಟಿ ಕ್ಲಬ್ ಸೇರುವುದನ್ನು ನೋಡಲು ಎದುರು ನೋಡುತ್ತಿದ್ದಾರೆ. ಆದರೆ, 'ಕೆಜಿಎಫ್ 2' ಸಾವಿರ ಕೋಟಿ ಗಳಿಸಿತಾ? ಇಲ್ವಾ ಅನ್ನೋದು 16ನೇ ದಿನದಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಒಂದೊಂದು ಕಡೆ ಒಂದೊಂದು ರಿಪೋರ್ಟ್ ಬರುತ್ತಿದ್ದು, ಎರಡು ರಿಪೋರ್ಟ್‌ಗಳಲ್ಲಿ ಯಾವುದು ಸರಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
'ಕೆಜಿಎಫ್ 2' ಕಲೆಕ್ಷನ್ ಈ ವೀಕೆಂಡ್‌ನಲ್ಲಿ 1000 ಕೋಟಿ ಕ್ರಾಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಬಾಕ್ಸಾಫೀಸ್‌ನಲ್ಲಿ ರಾಕಿ ಭಾಯ್ ಸಿನಿಮಾ ಅಂದುಕೊಂಡಿದ್ದಕ್ಕಿಂತ ಮುಂಚೆನೇ ಸಾವಿರ ಕೋಟಿ ಗಡಿ ದಾಟಿದೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್‌ನಲ್ಲಿ ಈ ವಾರ 'ಹೀರೋಪಂತಿ 2', 'ರನ್ ವೇ 34' ಅಂತಹ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಇನ್ನೊಂದು ಕಡೆ ಟಾಲಿವುಡ್‌ನಲ್ಲಿ 'ಆಚಾರ್ಯ' ರಿಲೀಸ್ ಆಗಿದೆ. ತಮಿಳಿನಲ್ಲಿ ನಯನತಾರಾ ಹಾಗೂ ಸಮಂತಾ ಅಭಿನಯದ ' ಕಾತುವಾಕುಲ ರೆಂಡು ಕಾದಲ್' ಸಿನಿಮಾ ಬಿಡುಗಡೆಯಾಗಿದೆ. ಇಷ್ಟೂ ಸಿನಿಮಾ 'ಕೆಜಿಎಫ್'ಗೆ ಟಕ್ಕರ್ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಈ ಪೈಪೋಟಿ ಮಧ್ಯೆನೇ 'ಕೆಜಿಎಫ್ 2' 1000 ಕೋಟಿ ಎಂದು ಹೇಳಲಾಗುತ್ತಿದೆ. ಇಬ್ಬರು ಟ್ರೇಡ್ ಅನಲಿಸ್ಟ್‌ಗಳ ವಿಭಿನ್ನ ವರದಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
Recommended Video

ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಹೇಳಿದ್ದೇನು?
'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ಯಾವಾಗ ಲೂಟಿ ಮಾಡುತ್ತೋ? ನಾವು ಯಾವಾಗ ಸೆಲೆಬ್ರೆಟ್ ಮಾಡುತ್ತೇವೋ ಎಂದು ರಾಕಿ ಭಾಯ್ ಅಭಿಮಾನಿಗಳು ಎದುರು ನೋಡುತ್ತಿದ್ದರು. ಅದರಂತೆ ಇಂದು (ಏಪ್ರಿಲ್ 30) ಟ್ರೇಡ್ ಅನಲಿಸ್ಟ್ ರಮೇಶ್ ಬಾಲ 'ಕೆಜಿಎಫ್ 2' 1000 ಕೋಟಿ ಕ್ರಾಸ್ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಯಶ್ ಫ್ಯಾನ್ಸ್ ಹಾಗೂ ಕನ್ನಡಿಗರ ಹರ್ಷಕ್ಕೆ ಕಾರಣವಾಗಿದೆ.
ಮನೋಬಾಲ ರಿಪೋರ್ಟ್ ಏನು?
'ಕೆಜಿಎಫ್ 2' ಸಾವಿರ ಕೋಟಿ ಕ್ಲಬ್ ಸೇರಿದ ವಿಷಯ ತಿಳಿದು ಖುಷಿಯಾಗಿದ್ದರಂತೂ ನಿಜ. ಆದರೆ, ನಿನ್ನೆಯಷ್ಟೆ(ಏಪ್ರಿಲ್ 29) ಮತ್ತೊಬ್ಬ ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿ ವಿಶ್ವದಾದ್ಯಂತ 'ಕೆಜಿಎಫ್ 2' ಕಲೆಕ್ಷನ್ 959.10 ಕೋಟಿ ಆಗಿದೆ ಎಂದು ಹೇಳಿದ್ದರು. ನಿನ್ನೆ (ಏಪ್ರಿಲ್ 29) ರಂದು 'ಕೆಜಿಎಫ್ 2' 10 ಕೋಟಿ ಮೇಲೆ ಗಳಿಕೆ ಕಂಡರೂ, ಸಾವಿರ ಕೋಟಿ ದಾಟುವುದಿಲ್ಲ. ಹೀಗಾಗಿ ಇಬ್ಬರು ಟ್ರೇಡ್ ಅನಲಿಸ್ಟ್‌ಗಳು ಕೊಟ್ಟ ಲೆಕ್ಕದಲ್ಲಿ ಯಾವುದು ಸರಿ ಅನ್ನೋದು ಈಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

'ಕೆಜಿಎಫ್ 2' ಕಲೆಕ್ಷನ್ ಗೊಂದಲವೇನು?
'ಕೆಜಿಎಫ್ ಚಾಪ್ಟರ್ 2' ಕಲೆಕ್ಷನ್ 15ನೇ ದಿನ 950 ಕೋಟಿ ದಾಟಿದೆ ಎಂದು ಹೇಳಲಾಗಿತ್ತು. ಆದರೆ, ಒಂದೇ ದಿನದಲ್ಲಿ 50 ಕೋಟಿ ಕಲೆಕ್ಷನ್ ಮಾಡಲು ಸಾಧ್ಯವಿಲ್ಲ. ಇತ್ತ ಇಬ್ಬರು ಟ್ರೇಡ್ ಅನಲಿಸ್ಟ್‌ಗಳ ರಿಪೋರ್ಟ್ ಮ್ಯಾಚ್ ಆಗುತ್ತಿಲ್ಲ. ಇನ್ನೊಂದು ಕಡೆ ಹೊಂಬಾಳೆ ಫಿಲ್ಮ್ಸ್ ಕೂಡ ಕಲೆಕ್ಷನ್ ರಿಪೋರ್ಟ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ 'ಕೆಜಿಎಫ್ 2' ಕಲೆಕ್ಷನ್ ಸಾವಿರ ಕೋಟಿ ದಾಟಿದೆಯಾ? ಇಲ್ಲಾ ಇನ್ನೂ ಕೆಲವು ದಿನಗಳು ಬೇಕಾ? ಅನ್ನೋದು ಗೊಂದಲ.

16ನೇ ದಿನ ಹಿಂದಿ 'ಕೆಜಿಎಫ್ 2' ಗಳಿಸಿದ್ದೆಷ್ಟು?
'ಕೆಜಿಎಫ್ 2' ಸಿನಿಮಾ 16ನೇ ದಿನ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿಲ್ಲ. ಶುಕ್ರವಾರ (ಏಪ್ರಿಲ್ 29)ರಂದು ಹಿಂದಿ ಬೆಲ್ಟ್‌ನಲ್ಲಿ 4.25 ಕೋಟಿ ಕಲೆಕ್ಷನ್ ಆಗಿದ್ದು, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ 353 ಕೋಟಿ ಗಳಿಕೆ ಕಂಡಂತಾಗಿದೆ.


Click it and Unblock the Notifications











