8 ದಿನ 'ಕೆಜಿಎಫ್ 2' ದೋಚಿದ್ದೆಷ್ಟು? ಆಮಿರ್ ಖಾನ್ 'PK' ದಾಖಲೆ ಮುರಿಯೋಕೆ ಆಗುತ್ತಾ?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ವಿಶ್ವ ಮಟ್ಟದಲ್ಲಿ ಇಷ್ಟೊಂದು ಸದ್ದು ಮಾಡಬಹುದೆಂದು ಯಾರೂ ಊಹಿಸಿರಲಿಲ್ಲ. ಸಿನಿಮಾ ರಿಲೀಸ್ ಆದ ದಿನದಿಂದಲೂ 'ಕೆಜಿಎಫ್ 2' ಬೇಜಾನ್ ಸೌಂಡ್ ಮಾಡುತ್ತಲೇ ಇದೆ. ದಿನಕ್ಕೆ ಒಂದಿಷ್ಟು ದಾಖಲೆಗಳನ್ನು ಉಡೀಸ್ ಮಾಡುತ್ತಲೇ ಇದೆ. ಅದರಲ್ಲೂ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಲೂಟಿ ಮಾಡುತ್ತಿರುವುದು ದೊಡ್ಡ ಅಚ್ಚರಿಗೆ ಕಾರಣವಾಗಿದೆ.

'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ(ಏಪ್ರಿಲ್ 21) ಒಂದು ವಾರವನ್ನು ಯಶಸ್ವಿಯಾಗಿ ಮುಗಿಸಿದೆ. ಇಂದಿನಿಂದ (ಏಪ್ರಿಲ್ 22) ಎರಡನೇ ವಾರ ಆರಂಭ ಆಗಿದೆ. ಆದರೂ, 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ನಾಗಾಲೋಟವನ್ನು ಮುಂದುವರೆಸಿದೆ. ಹಾಗಿದ್ದರೆ ಎಂಟು ದಿನಗಳಲ್ಲಿ 'ಕೆಜಿಎಫ್ 2' ಎಷ್ಟು ಗಳಿಕೆ ಮಾಡಿದೆ? ವಿಶ್ವದಾದ್ಯಂತ ಈ ಸಿನಿಮಾಗೆ ಎಲ್ಲೆಲ್ಲಿ ಎಷ್ಟೆಷ್ಟು ಕ್ರೇಜ್ ಇದೆ ಅನ್ನೋದು ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿರೋ 'ಕೆಜಿಎಫ್ 2' 7 ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, 700 ಕೋಟಿ ಗಡಿದಾಟಿತ್ತು. ಹೀಗಾಗಿ ಎರಡನೇ ವಾರವೂ ಇದೇ ಕ್ರೇಜ್ ಇದೆಯಾ? ವಿಶ್ವದಾದ್ಯಂತ 8ನೇ ದಿನ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

8 ನೇ ದಿನ ಕೆಜಿಎಫ್ 2 ಗಳಿಸಿದ್ದೆಷ್ಟು?

8 ನೇ ದಿನ ಕೆಜಿಎಫ್ 2 ಗಳಿಸಿದ್ದೆಷ್ಟು?

'ಕೆಜಿಎಫ್ 2' ವಿಶ್ವದಾದ್ಯಂತ ಸದ್ದು ಮಾಡಿದೆ. ಕನ್ನಡದ ಸಿನಿಮಾವೊಂದು ಇಷ್ಟೊಂದು ಗಳಿಕೆ ಮಾಡಲು ಸಾಧ್ಯನಾ? ಅನ್ನುವಂತಹ ಪ್ರಶ್ನೆಯನ್ನು ಹುಟ್ಟಾಕಿದೆ. ಎಲ್ಲಕ್ಕಿಂತ ಆಶ್ಚರ್ಯ ಅಂದ್ರೆ, 8ನೇ ದಿನವೂ 'ಕೆಜಿಎಫ್ 2' ಕ್ರೇಜ್ ಕಮ್ಮಿಯಾಗಿಲ್ಲ. ಬಾಲಿವುಡ್‌ ಮೂಲಗಳ ಪ್ರಕಾರ, 'ಕೆಜಿಎಫ್ 2' ಏಪ್ರಿಲ್ 21ರಂದು 30 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಇದು 8ನೇ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದು ರಾಕಿ ಭಾಯ್ ಅಭಿಮಾನಿಗಳು ಈಗಾಗಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

8 ದಿನಗಳ ಒಟ್ಟು 'ಕೆಜಿಎಫ್ 2' ಗಳಿಕೆ ಎಷ್ಟು?

8 ದಿನಗಳ ಒಟ್ಟು 'ಕೆಜಿಎಫ್ 2' ಗಳಿಕೆ ಎಷ್ಟು?

'ಕೆಜಿಎಫ್ 2' ಸಿನಿಮಾ ಸಾಗರದಾಚೆಗೂ ಬೇಜಾನ್ ಸೌಂಡ್ ಮಾಡುತ್ತಿದೆ. ಈ ಎಂಟು ದಿನಗಳಲ್ಲಿ 30ಕ್ಕೂ ಹೆಚ್ಚು ದಾಖಲೆಗಳನ್ನು ಉಡೀಸ್ ಮಾಡಿದೆ. ರಾಕಿ ಭಾಯ್ ಖದರ್, ಪ್ರಶಾಂತ್ ನೀಲ್ ಪವರ್‌ ಎರಡೂ ವರ್ಕ್‌ಔಟ್ ಆಗಿದೆ ಅನ್ನೋದು ಪ್ರತಿ ದಿನ ಸಾಬೀತಾಗಿದೆ. ಈ ಎಂಟು ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ ಗಳಿಸಿದ ಗಳಿಕೆ ಹೀಗಿದೆ.

'ಕೆಜಿಎಫ್ 2' ಸಿನಿಮಾ 8 ದಿನಗಳ ಒಟ್ಟು ಕಲೆಕ್ಷನ್

1ನೇ ದಿನ Rs 164.20 Cr (ಅಂದಾಜು)
2ನೇ ದಿನ Rs 128.90 Cr (ಅಂದಾಜು)
3ನೇ ದಿನ Rs 137.10 Cr (ಅಂದಾಜು)
4ನೇ ದಿನ Rs 127.25 Cr (ಅಂದಾಜು)
5ನೇ ದಿನ Rs 66.35 Cr (ಅಂದಾಜು)
6ನೇ ದಿನ Rs 52.35 Cr (ಅಂದಾಜು)
7ನೇ ದಿನ Rs 43.15 Cr (ಅಂದಾಜು)
8ನೇ ದಿನ Rs 30.00 Cr (ಅಂದಾಜು)

ಒಟ್ಟು Rs 749.30 Cr (ಅಂದಾಜು)

'ಕೆಜಿಎಫ್ 2', ಪಿಕೆ ದಾಖಲೆ ಮುರಿಯಯುತ್ತಾ?

'ಕೆಜಿಎಫ್ 2', ಪಿಕೆ ದಾಖಲೆ ಮುರಿಯಯುತ್ತಾ?

'ಕೆಜಿಎಫ್ 2' ಬಾಲಿವುಡ್‌ ದಿಗ್ಗಜರ ಸಿನಿಮಾಗಳ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಬರುತ್ತಿದೆ. ಸದ್ಯ 'ಕೆಜಿಎಫ್ 2' ಮುಂದಿರುವ ದಾಖಲೆ ಎಂದರೆ, ಅದು ಆಮಿರ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನಲ್ಲಿ ಬಂದಿದ್ದ ಪಿಕೆ. ಈ ಸಿನಿಮಾ ವಿಶ್ವದಾದ್ಯಂತ 845 ಕೋಟಿ ರೂಪಾಯಿಯನ್ನು ದೋಚಿತ್ತು. ಈ ದಾಖಲೆಯನ್ನು ಬೀಟ್ ಮಾಡಲು 'ಕೆಜಿಎಫ್ 2' ಸಿನಿಮಾ ಇನ್ನೂ 100 ಕೋಟಿ ಮೇಲೆ ಗಳಿಕೆ ಮಾಡಬೇಕಿದೆ.

ಸಾವಿರ ಕೋಟಿ ದಾಟಲು ಇನ್ನೆಷ್ಟು ದಿನ ಬೇಕು?

ಸಾವಿರ ಕೋಟಿ ದಾಟಲು ಇನ್ನೆಷ್ಟು ದಿನ ಬೇಕು?

ಸಾವಿರ ಕೋಟಿ ಮೇಲೆ 'ಕೆಜಿಎಫ್ 2' ಸಿನಿಮಾದ ಟಾರ್ಗೆಟ್ ಇದೆ. RRR ಸಿನಿಮಾದಂತೆಯೇ 'ಕೆಜಿಎಫ್ 2' ಕೂಡ ಸಾವಿರ ಕೋಟಿಯ ಗಡಿಯನ್ನು ದಾಖಲೇ ಬೇಕಿದೆ. ಹಾಗೇನಾದರೂ, 1 ಸಾವಿರ ಕೋಟಿ ಗಡಿ ದಾಟಿದರೆ, ಕನ್ನಡ ಚಿತ್ರರಂಗದ ಮಟ್ಟಿಗೆ 'ಕೆಜಿಎಫ್ 2' ಸಾಧನೆ ಕಮ್ಮಿ ಎನಿಸಿಕೊಳ್ಳುವುದಿಲ್ಲ. ಆದರೆ, ಒಂದು ಸಾವಿರ ಕೋಟಿ ಗಡಿಯನ್ನು ಇನ್ನೊಂದು ವಾರದಲ್ಲಿ ಮುಗಿಸುತ್ತಾ? ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ, ಈ ವಾರ ಬಾಲಿವುಡ್‌ನಲ್ಲಿ 'ಜೆರ್ಸಿ' ರಿಲೀಸ್ ಆಗಿದೆ. ಮುಂದಿನ ವಾರ ಮೆಗಾ ಸ್ಟಾರ್ ಚಿರಂಜೀವಿಯ 'ಆಚಾರ್ಯ' ಬಿಡುಗಡೆಯಾಗಲಿದೆ. ಹೀಗಾಗಿ 'ಕೆಜಿಎಫ್ 2'ಗೆ ಟಫ್ ಕಾಂಪಿಟೇಷನ್ ಶುರುವಾಗಲಿದೆ.

More from Filmibeat

English summary
Yash Starrer KGF Chapter 2 Day 8 Worldwide Box Office Collection Report. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X