'ಕೆಜಿಎಫ್ 2' 9ನೇ ದಿನದ ಗಳಿಕೆಯನ್ನೂ ಮೀರಿಸಲಿಲ್ಲ 'ಜೆರ್ಸಿ': 2 ಸಿನಿಮಾಗಳ ಕಲೆಕ್ಷನ್ ರಿಪೋರ್ಟ್ ಏನು?

'ಕೆಜಿಎಫ್ 2' ಸಿನಿಮಾಗ ಟಕ್ಕರ್ ಕೊಡೋಕೆ ಬಂದ ಸಿನಿಮಾ ಒಂದಾ, ಎರಡಾ? ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡಾ', ದಳಪತಿ ವಿಜಯ್ ಸಿನಿಮಾ 'ಬೀಸ್ಟ್', ಶಾಹಿದ್ ಕಪೂರ್ ಸಿನಿಮಾ 'ಜೆರ್ಸಿ' ಅಖಾಡಕ್ಕೆ ಇಳಿದಿದ್ದವು. ಆದರೆ, ಆಮಿರ್ ಖಾನ್ 'ಕೆಜಿಎಫ್ 2' ಜೊತೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಹಿಂದೆ ಸರಿದಿದ್ದರು. 'ಕೆಜಿಎಫ್ 2'ಗೆ ಟಕ್ಕರ್ ಕೊಡಲು ಹೋಗಿ 'ಬೀಸ್ಟ್ ' ಕೈ ಸುಟ್ಟುಕೊಂಡಿದ್ದು ಗೊತ್ತೇ ಇದೆ. ಈಗ ಶಾಹಿದ್ ಕಪೂರ್ 'ಜೆರ್ಸಿ' ಕೂಡ ಸೋತು ಸೈಲೆಂಟಾಗಿದೆ.

ಶಾಹಿದ್ ಕಪೂರ್ 'ಜೆರ್ಸಿ', ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಜೊತೆನೇ ಬಿಡುಗಡೆಗೆ ಸಜ್ಜಾಗಿ ನಿಂತಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಿಡುಗಡೆಯನ್ನು ಒಂದು ವಾರ ಮುಂದಕ್ಕೆ ತಳ್ಳಿತ್ತು. ಅದರಂತೆ 'ಜೆರ್ಸಿ' ಏಪ್ರಿಲ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಆದರೆ, ಮೊದಲ ದಿನವೇ 'ಕೆಜಿಎಫ್ 2' ಗೆ ಟಕ್ಕರ್ ಕೊಡಲು ಪರದಾಡಿದೆ.

'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿ 9 ದಿನಗಳು ಕಳೆದಿವೆ. ಆದರೂ, ಕಲೆಕ್ಷನ್ ವಿಚಾರದಲ್ಲಿ ಯಾವ ಸಿನಿಮಾನೂ ಹಿಂದಿಕ್ಕಲು ಆಗುತ್ತಿಲ್ಲ. ನಿರೀಕ್ಷೆಯಂತೆ ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಹಿನ್ನೆಲೆ ಅನುಭವಿಸಿದ್ದರೂ, ಚಿತ್ರರಂಗದ ಮಟ್ಟಕ್ಕೆ ಇದು ದೊಡ್ಡ ಗಳಿಕೆನೇ. ಎರಡನೇ ವೀಕೆಂಡ್‌ನಲ್ಲೂ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿರುವ 'ಕೆಜಿಎಫ್ 2' ಕಲೆಕ್ಷನ್ ಬಗ್ಗೆ ಸಹಜವಾಗಿಯೇ ಕ್ಯೂರಿಯಾಸಿಟಿ ಇದೆ. ಹಾಗಿದ್ದರೆ, 9 ದಿನ 'ಕೆಜಿಎಫ್ 2' ಗಳಿಸಿದ್ದೆಷ್ಟು? ಪ್ಯಾನ್ ಇಂಡಿಯಾ ಸಿನಿಮಾಗೆ ಟಕ್ಕರ್ ಕೊಡಲು ಹೋದ 'ಜೆರ್ಸಿ' ಮೊದಲ ದಿನ ಗಳಿಸಿದ್ದೆಷ್ಟು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಕೆಜಿಎಫ್ 2' ಮುಂದೆ 'ಜೆರ್ಸಿ'ಗೆ ಸೋಲು

'ಕೆಜಿಎಫ್ 2' ಮುಂದೆ 'ಜೆರ್ಸಿ'ಗೆ ಸೋಲು

'ಕೆಜಿಎಫ್' ಎರಡು ಚಾಪ್ಟರ್‌ಗಳು ದಿಗ್ಗಜರಿಗೆ ಟಕ್ಕರ್ ಕೊಟ್ಟಿದೆ. 'ಕೆಜಿಎಫ್ ಚಾಪ್ಟರ್ 1' ತೆರೆಕಂಡಾಗ ಶಾರುಖ್ ಸಿನಿಮಾ ಸೋತಿತ್ತು. 'ಕೆಜಿಎಫ್ 2' ಬಿಡುಗಡೆ ವೇಳೆ 'ಬೀಸ್ಟ್' ಹಾಗೂ 'ಜೆರ್ಸಿ' ಸೋಲುಂಡಿವೆ. ಸದ್ಯ 'ಕೆಜಿಎಫ್ 2' 9ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ 9ನೇ ದಿನ ಹೆಚ್ಚು ಕಡಿಮೆ 25 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅದೇ 'ಜೆರ್ಸಿ' ಮೊದಲ ದಿನ ಕೇವಲ 4 ಕೋಟಿ ಕಲೆಹಾಕಿದೆ. 'ಕೆಜಿಎಫ್ 2' ಬಿಡುಗಡೆಯಾದ 9 ದಿನಗಳ 'ಜೆರ್ಸಿ' ರಿಲೀಸ್ ಆದರೂ, ಬಾಕ್ಸಾಫೀಸ್‌ನಲ್ಲಿ ಗೆಲ್ಲಲೂ ಸಾಧ್ಯವಿಲ್ಲ.

9 ದಿನಗಳಲ್ಲಿ 'ಕೆಜಿಎಫ್‌ 2' ಗಳಿಸಿದ್ದೆಷ್ಟು?

9 ದಿನಗಳಲ್ಲಿ 'ಕೆಜಿಎಫ್‌ 2' ಗಳಿಸಿದ್ದೆಷ್ಟು?

'ಕೆಜಿಎಫ್ 2' ಓಟ ಇನ್ನೂ ನಿಂತಿಲ್ಲ. ಅದರಲ್ಲೂ ವೀಕೆಂಡ್‌ನಲ್ಲಿ 'ಕೆಜಿಎಫ್ 2' ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ಒಂಬತ್ತು ದಿನಗಳಲ್ಲಿ 'ಕೆಜಿಎಫ್ 2' ಗಳಿಕೆ 775 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ.

1ನೇ ದಿನ Rs 164.20 Cr (ಅಂದಾಜು)
2ನೇ ದಿನ Rs 128.90 Cr (ಅಂದಾಜು)
3ನೇ ದಿನ Rs 137.10 Cr (ಅಂದಾಜು)
4ನೇ ದಿನ Rs 127.25 Cr (ಅಂದಾಜು)
5ನೇ ದಿನ Rs 66.35 Cr (ಅಂದಾಜು)
6ನೇ ದಿನ Rs 52.35 Cr (ಅಂದಾಜು)
7ನೇ ದಿನ Rs 43.15 Cr (ಅಂದಾಜು)
8ನೇ ದಿನ Rs 31.05 Cr (ಅಂದಾಜು)
9ನೇ ದಿನ Rs 25.00 Cr (ಅಂದಾಜು)
ಒಟ್ಟು Rs 775.35 Cr (ಅಂದಾಜು)
'ಕೆಜಿಎಫ್ 2' ಭಾರತದ 7ನೇ ಸಿನಿಮಾ

'ಕೆಜಿಎಫ್ 2' ಭಾರತದ 7ನೇ ಸಿನಿಮಾ

'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾಗಳ ಪೈಕಿ ಏಳನೇ ಸ್ಥಾನದಲ್ಲಿದೆ. ಇನ್ನೂ 6 ಸಿನಿಮಾ ಕಲೆಕ್ಷನ್ ದಾಖಲೆಯನ್ನು ಹಿಂದಕ್ಕೆ ಹಾಕಬೇಕಿದೆ. ದಂಗಲ್, RRR, ಬಾಹುಬಲಿ 2, ಭಜರಂಗಿ ಭಾಯಿ ಜಾನ್, ಸೀಕ್ರೆಟ್ ಸೂಪರ್‌ಸ್ಟಾರ್, ಪಿಕೆ ಸಿನಿಮಾಗಳ ಕಲೆಕ್ಷನ್‌ ವಿಚಾರದಲ್ಲಿ ಹಿಂದುಳಿದಿದೆ. 'ಕೆಜಿಎಫ್ 2' ಹೀಗೆ ಮುಂದುವರೆದರೆ, ಈ ವೀಕೆಂಡ್ ಮುಗಿಯುವ ವೇಳೆಗೆ ಇನ್ನೆರಡು ಸಿನಿಮಾಗಳ ಕಲೆಕ್ಷನ್ ಬೀಟ್ ಮಾಡಲಿದೆ.

ಹಿಂದಿ ಬೆಲ್ಟ್‌ನಲ್ಲಿ 300 ಕೋಟಿ

ಹಿಂದಿ ಬೆಲ್ಟ್‌ನಲ್ಲಿ 300 ಕೋಟಿ

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಹಿಂದಿ ಬೆಲ್ಟ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ 280 ಕೋಟಿ ಕಲೆಕ್ಷನ್ ಮಾಡಿದ್ದು, 9ನೇ ದಿನ 11 ಕೋಟಿ ಗಳಿಸಿದೆ. ಟ್ರೇಡ್ ಅನಲಿಸ್ಟ್ ಪ್ರಕಾರ ಈ ವಾರಾಂತ್ಯದ ವೇಳೆ 300 ಕೋಟಿ ಕ್ರಾಸ್ ಮಾಡಲಿದೆ ಎಂದು ಅಂದಾಜು ಮಾಡಲಾಗುತ್ತಿದೆ.

More from Filmibeat

English summary
Yash Starrer KGF Chapter 2 Day 9 Worldwide Box Office Collection Report. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X