ರಿಲೀಸ್‌ಗೂ ಮುನ್ನವೇ 'ಟಾಕ್ಸಿಕ್' ₹1000 ಕೋಟಿ ಬ್ಯುಸಿನೆಸ್? ಚರಿತ್ರೆ ಬರೆದ ಯಶ್.. ಯಾವುದಕ್ಕೆ ಎಷ್ಟೆಷ್ಟು?

ಈ ವರ್ಷ ಕನ್ನಡ ಚಿತ್ರರಂಗದಲ್ಲಿ ರಿಲೀಸ್ ಆಗುತ್ತಿರುವ ಅತೀ ದೊಡ್ಡ ಸಿನಿಮಾ 'ಟಾಕ್ಸಿಕ್'. 'ಕೆಜಿಎಫ್ ಚಾಪ್ಟರ್ 2' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಬಾರಿಗೆ ಪ್ಯಾನ್ ಇಂಡಿಯಾನೂ ದಾಟಿ ಗ್ಲೋಬಲ್ ಸಿನಿಮಾವಾಗಿ ಹೊರ ಹೊಮ್ಮುತ್ತಿದೆ. ಈಗಾಗಲೇ 'ಟಾಕ್ಸಿಕ್' ಸಿನಿಮಾದ ಪ್ರೀ-ರಿಲೀಸ್ ಬ್ಯುಸಿನೆಸ್ ನಡೆಯುತ್ತಿದೆ. 'ಟಾಕ್ಸಿಕ್' ಖರೀದಿಗೆ ಜನಪ್ರಿಯ ನಿರ್ಮಾಣ ಸಂಸ್ಥೆಗಳು ಮುಗಿಬಿದ್ದಿವೆ.

ಆಂಧ್ರ-ತೆಲಂಗಾಣ ವಿತರಣೆ ಹಕ್ಕು ಸೋಲ್ಡ್ ಆಗುತ್ತಿದ್ದಂತೆ ಮತ್ತೊಂದು ಡೀಲ್ ಅನ್ನು ಮುಗಿಸಿದೆ. ಓವರ್‌ಸೀಸ್ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಂಗ್ಲಿಷ್ ಭಾಷೆಯನ್ನು ಹೊರತು ಪಡಿಸಿ ಭಾರತದ ಎಲ್ಲಾ ಭಾಷೆಗಳ ಹಕ್ಕುಗಳನ್ನು ವಿದೇಶದಲ್ಲಿ PHF ವಿತರಣಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

Yash starrer Toxic movie pre release business may reach Rs 1000 crore here is breakthrough

PHF ವಿತರಣಾ ಸಂಸ್ಥೆ ರಿಲೀಸ್‌ಗೂ ಮುನ್ನ ಮಿಡಲ್ ಈಸ್ಟ್‌ನ ಅತೀ ದೊಡ್ಡ ಸಿನಿಮಾ ವಿತರಣಾ ಸಂಸ್ಥೆಯಾಗಿದೆ. ಇದು ಹಾಲಿವುಡ್, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳನ್ನು ವಿತರಣೆ ಮಾಡುತ್ತಿದೆ. ವಿದೇಶಗಳಲ್ಲಿ ವರ್ಷಕ್ಕೆ ಸುಮಾರು 350ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡುವ ಈ ಸಂಸ್ಥೆ ಈಗ 'ಟಾಕ್ಸಿಕ್' ಒವರ್‌ಸೀಸ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಹಿಂದೇನೆ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ₹1000 ಕೋಟಿ ಬ್ಯುಸಿನೆಸ್ ಮಾಡಲಿದೆ ಎಂದು ಅಂದಾಜು ಮಾಡಲಿದೆ. ಈಗಾಗಲೇ ಒಂದಿಷ್ಟು ಬ್ಯುಸಿನೆಸ್ ನಡೆದಿದೆ.

₹1000 ಕೋಟಿ ಬ್ಯುಸಿನೆಸ್?

'ಟಾಕ್ಸಿಕ್' ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಒಂದೇ ಒಂದು ಟೀಸರ್ ವಿಶ್ವದ ಗಮನ ಸೆಳೆದಿದೆ. ಹೀಗಾಗಿ ಸಿನಿಮಾದ ಬ್ಯುಸಿನೆಸ್‌ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನ ಸುಮಾರು ₹1000 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ವಿತರಣೆ, ಓಟಿಟಿ, ಸ್ಯಾಟಲೈಟ್‌ ಹಕ್ಕುಗಳ ಮಾತುಕತೆ ನಡೆಯುತ್ತಿದೆ. ಹೀಗಾಗಿ ದೊಡ್ಡ ಮಟ್ಟದಕ್ಕೆ ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡಿ ದಾಖಲೆ ಮಾಡಿ ಚರಿತ್ರೆ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ.

ಇಂಡಸ್ಟ್ರಿಯಲ್ಲಿ ಹೇಗಿದೆ ಟಾಕ್?

ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಮೇಲೆ ಭಾರತೀಯ ಚಿತ್ರರಂಗವೇ ಕಣ್ಣಿಟ್ಟಿದೆ. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, "ಟಾಕ್ಸಿಕ್ ಪ್ರೀ ರಿಲೀಸ್ ಬ್ಯುಸಿನೆಸ್ ಚರಿತ್ರೆಯನ್ನು ಸೃಷ್ಟಿಸುತ್ತೆ. ಒಂದು ಸಾವಿರ ಕೋಟಿ ಡೀಲ್ ಮಾಡುತ್ತೆ. ಇಡೀ ಸಿನಿಮಾ ಬಿಡುಗಡೆಗೂ ಮುನ್ನವೇ ಫುಲ್ ಸೇಫ್ ಆಗಿರುತ್ತೆ. ಈಗಾಗಲೇ ಆಂಧ್ರ, ತೆಲಂಗಾಣ ₹120 ಕೋಟಿ ಬ್ಯುಸಿನೆಸ್ ಆಗಿದೆ. ಓವರ್‌ಸೀಸನ್ ₹100 ಕೋಟಿ ಬ್ಯುಸಿನೆಸ್ ಆಗಿರಬಹುದು. ಇನ್ನೂ ತಮಿಳುನಾಡು, ಹಿಂದಿ, ಕೇರಳ, ಓಟಿಟಿ ಹಾಗೂ ಟಿವಿಗಳ ಬ್ಯುಸಿನೆಸ್ ಕೂಡ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಆಗುತ್ತೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

'ಟಾಕ್ಸಿಕ್' ಪ್ರೀ-ರಿಲೀಸ್ ಅಂದಾಜು ಬ್ಯುಸಿನೆಸ್

ಸ್ಯಾಂಡಲ್‌ವುಡ್ ಎಕ್ಸ್‌ಪರ್ಟ್‌ಗಳು 'ಟಾಕ್ಸಿಕ್' ಸಿನಿಮಾ ಅಂದಾಜು ಬ್ಯುಸಿನೆಸ್ ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದಾರೆ. ಈಗಾಗಲೇ ಆಂಧ್ರ, ತೆಲಂಗಾಣ ಬ್ಯುಸಿನೆಸ್ ರಿವೀಲ್ ಆಗಿದೆ. ಇನ್ನು ಯಾವ್ಯಾವುದರಿಂದ ಎಷ್ಟೆಷ್ಟು ಬ್ಯುಸಿನೆಸ್ ಆಗಬಹುದೆಂದು ಲೆಕ್ಕ ಹಾಕುತ್ತಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ.

ಆಂಧ್ರ-ತೆಲಂಗಾಣ ₹120 ಕೋಟಿ (ಅಂದಾಜು)
ಓವರ್‌ಸೀಸ್ ₹100 ಕೋಟಿ (ಅಂದಾಜು)
ತಮಿಳುನಾಡು ₹100 ಕೋಟಿ (ಅಂದಾಜು)
ಕೇರಳ ₹50-80 ಕೋಟಿ (ಅಂದಾಜು)
ಹಿಂದಿ ₹300-350 ಕೋಟಿ (ಅಂದಾಜು)
ಓಟಿಟಿ+ ಟಿವಿ ರೈಟ್ಸ್ ₹300 ಕೋಟಿ (ಅಂದಾಜು)

ಒಟ್ಟು ₹1020+ ಕೋಟಿ

Yash starrer Toxic movie pre release business may reach Rs 1000 crore here is breakthrough

'ಟಾಕ್ಸಿಕ್' ಕರ್ನಾಟಕ ಬ್ಯುಸಿನೆಸ್?

ಇನ್ನು 'ಟಾಕ್ಸಿಕ್' ಕರ್ನಾಟಕ ಮಾರುಕಟ್ಟೆಯಲ್ಲಿ ಎಷ್ಟು ಬ್ಯುಸಿನೆಸ್ ಆಗಬಹುದೆಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಅವರದ್ದೇ ವಿತರಣಾ ಸಂಸ್ಥೆ ಇರುವುದರಿಂದ 'ಟಾಕ್ಸಿಕ್‌' ಸಿನಿಮಾ ಅವರೇ ವಿತರಣೆ ಮಾಡುವ ಸಾಧ್ಯತೆ ಇದೆ. ಒಂದು ಅಂದಾಜಿನ ಪ್ರಕಾರ, ಈ ಸಿನಿಮಾ ಕರ್ನಾಟಕದಲ್ಲಿಯೇ ಸುಮಾರು ₹300 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

Disclaimer: ಟಾಕ್ಸಿಕ್ ಸಿನಿಮಾದ ಅಂಕಿ-ಅಂಶಗಳನ್ನು ಚಿತ್ರರಂಗದ ಬೇರೆ ಬೇರೆ ಮೂಲಗಳು ಹಾಗೂ ಟ್ರೇಡ್ ಎಕ್ಸ್‌ಪರ್ಟ್‌ಗಳಿಂದ ಮಾಹಿತಿ ಸಂಗ್ರಹಿಸಿ ವರದಿ ಮಾಡಲಾಗಿದೆ. ಈ ಬಗ್ಗೆ ಸಿನಿಮಾ ತಂಡವಾಗಲಿ, ಸಂಬಂಧ ಪಟ್ಟವರಾಗಲಿ ಅಧಿಕೃತವಾಗಿ ಎಲ್ಲೂ ಮಾಹಿತಿ ನೀಡಬೇಕಿದೆ.

More from Filmibeat

English summary
Yash starrer Toxic movie pre release business may reach Rs.1000 crore here is breakthrough.
Read more about: yash toxic business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X