Toxic Trailer: ಟ್ರೈಲರ್‌ಗೂ ಮುನ್ನ ಮತ್ತೊಂದು ಟೀಸರ್.. 'ಧುರಂಧರ್ 2'ಗೆ 'ಟಾಕ್ಸಿಕ್' ಮಾಸ್ಟರ್ ಸ್ಟ್ರೋಕ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಕ್ರೇಜ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜೋರಾಗಿದೆ. ಒಂದೇ ಒಂದು ಟೀಸರ್ ಇನ್ನೂ ಚರ್ಚೆಯನ್ನು ಹುಟ್ಟಾಕಿದೆ. 'ಕೆಜಿಎಫ್ ಚಾಪ್ಟರ್ 2' ಬಳಿಕ 'ಟಾಕ್ಸಿಕ್' ಹೇಗಿರುತ್ತೋ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ 'ಧುರಂಧರ್ 2' ಟೀಮ್‌ನವರು ಯಶ್ ಅಭಿಮಾನಿಗಳಿಗೆ ಟೆನ್ಷನ್ ಕೊಟ್ಟಿದ್ದಾರೆ. ಹೀಗಾಗಿ ಬಿಡುಗಡೆಗೂ ಮುನ್ನ ಏನೆಲ್ಲ ನೋಡುವುದಕ್ಕೆ ಸಿಗುತ್ತೆ ಅಂತ ಎದುರು ನೋಡುತ್ತಿದ್ದಾರೆ.

ಒಂದೇ ಒಂದು ಟೀಸರ್ 'ಟಾಕ್ಸಿಕ್' ಹೇಗಿರುತ್ತೆ ಅನ್ನೋ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಹೀಗಾಗಿ ಟ್ರೈಲರ್ ಯಾವಾಗ ರಿಲೀಸ್ ಆಗುತ್ತೋ ಅಂತ ಕಾದು ಕೂತಿದ್ದಾರೆ. ಈ ಮಧ್ಯೆ 'ಟಾಕ್ಸಿಕ್' ಟೀಮ್ ಯಶ್ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುವುದಕ್ಕೆ ಎದುರು ನೋಡುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಮಸ್ತ್ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ.

Yash starrer Toxic second teaser and trailer release date and other details

'ಟಾಕ್ಸಿಕ್' ಟ್ರೈಲರ್ ರಿಲೀಸ್‌ಗೂ ಮುನ್ನ ಮತ್ತೊಂದು ಟೀಸರ್ ರಿಲೀಸ್ ಮಾಡುವುದಕ್ಕೆ ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ. ಇದು ಯಶ್‌ ಮೇಲಿರುತ್ತಾ? ಇಲ್ಲಾ ನಾಯಕಿಯನ್ನು ಇಂಟ್ರುಡ್ಯೂಸ್ ಮಾಡುವ ಟೀಸರ್ ಆಗಿರುತ್ತಾ? ಅನ್ನೋ ಪ್ರಶ್ನೆ ಹುಟ್ಟಿಸಿದೆ. ಪಿಂಕ್‌ವಿಲ್ಲ ವರದಿ ಪ್ರಕಾರ, ಟೀಸರ್ ಹಾಗೂ ಟ್ರೈಲರ್ ಎರಡೂ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಎರಡೂ ಯಾವಾಗ ರಿಲೀಸ್ ಆಗುತ್ತೆ? ಅನ್ನೋದರ ಡಿಟೈಲ್ಸ್ ಇಲ್ಲಿದೆ.

ಯಶ್ 'ಟಾಕ್ಸಿಕ್' ಬಗ್ಗೆ ಇನ್ನೂ ಎಲ್ಲೂ ಮಾತಾಡಿಲ್ಲ. ನಿರ್ಮಾಣ ಸಂಸ್ಥೆ ಕೂಡ ಚಿಕ್ಕದೊಂದು ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಎರಡನೇ ಟೀಸರ್ ಬಗ್ಗೆ ಫ್ಯಾನ್ಸ್‌ಗೆ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಆದ್ರೀಗ ಪಿಂಕ್ ವಿಲ್ಲಾ ಮಾಹಿತಿ ನೀಡಿರುವ ಮೂಲಗಳು 'ಟಾಕ್ಸಿಕ್' ಎರಡನೇ ಟೀಸರ್ ರಿಲೀಸ್ ಆಗುತ್ತೆ ಎಂಬ ಮಾಹಿತಿಯನ್ನು ನೀಡಿದೆ. ಈ ಟೀಸರ್ ಸಿನಿಮಾದ ಅಸಲಿ ಝಲಕ್ ಅನ್ನು ತೋರಿಸಲಿದೆಯಂತೆ.

2ನೇ ಟೀಸರ್ ಫೆಬ್ರವರಿ ಕೊನೆಯ ವಾರದಲ್ಲಿ ರಿಲೀಸ್ ಆಗಬಹುದು ಎಂದು ಹೇಳಲಾಗುತ್ತಿದೆ. ಇದು ಸಿನಿಮಾದ ಟೋನ್, ಕ್ಯಾರೆಕ್ಟರ್ ಅನ್ನು ರಿವೀಲ್ ಮಾಡಲಿದೆ. ಅಷ್ಟೇ ಅಲ್ಲದೆ ಟಾಕ್ಸಿಕ್ ವರ್ಲ್ಡ್ ಅನ್ನು ಇನ್ನೂ ಡೀಪ್ ಆಗಿ ತೋರಿಸಲಿದೆ. ಈಗಾಗಲೇ 'ಟಾಕ್ಸಿಕ್' ಟೀಮ್ ಎರಡನೇ ಟೀಸರ್ ಮೇಲೆ ಕೆಲಸ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಹೊರ ಬೀಳಬಹುದು ಎಂದು ಹೇಳಲಾಗುತ್ತಿದೆ.

ಇನ್ನೊಂದು ಕಡೆ ಟೀಸರ್ ಜೊತೆಗೆ ಟ್ರೈಲರ್ ರಿಲೀಸ್ ಕೂಡ ನಡೆಯುತ್ತಿದೆ ಎನ್ನಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಟ್ರೈಲರ್ ರಿಲೀಸ್ ಆಗುತ್ತಿದೆಯಂತೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್‌ ಇಬ್ಬರೂ ಸಿನಿಮಾ ಪ್ರಮೋಷನಲ್ ಕಂಟೆಂಟ್ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೊಂದಿದ್ದಾರಂತೆ. ಎರಡನೇ ಟೀಸರ್ ಹಾಗೂ ಮೊದಲ ಟ್ರೈಲರ್ ಎರಡೂ ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತವೆಂದು ಎಂದು ಮೂಲಗಳು ಹೇಳಿವೆ.

ಟೀಸರ್ ಹಾಗೂ ಟ್ರೈಲರ್ ರಿಲೀಸ್ ಮಾಡುವ ಮೂಲಕ 'ಧುರಂಧರ್ 2' ಸಿನಿಮಾಗೆ ಟಕ್ಕರ್ ಕೊಡುತ್ತಿದೆ 'ಟಾಕ್ಸಿಕ್' ಟೀಮ್. ಗೀತು ಮೋಹನ್‌ದಾಸ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಕ್ರೇಜ್ ಸಹಜವಾಗಿಯೇ ಇದೆ. ಅಲ್ಲದೆ 'ಧುರಂಧರ್ 2' ಹೇಗೆ ಟಕ್ಕರ್ ಕೊಡುತ್ತೆ ಅನ್ನೋದನ್ನು ಕುತೂಹಲದಿಂದ ನೋಡಲಾಗುತ್ತಿದೆ.

More from Filmibeat

Read more about: yash toxic kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X