ಅಪ್ಪು ಅಗಲುವ ಎರಡು ದಿನ ಮುನ್ನ ಯಶ್ ಹೇಳಿದ್ದ ಮಾತೇನು? 3 ವರ್ಷಗಳ ಬಳಿಕ ಮತ್ತೆ ವಿಡಿಯೋ ವೈರಲ್ ಆಗ್ತಿರೋದ್ಯಾಕೆ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ವರ್ಷಗಳಾಗಿದೆ. ಇಂತಹದ್ದೊಂದು ಸನ್ನಿವೇಶ ಎದುರಾಗುತ್ತೆ ಎಂದು ಕನ್ನಡಿಗರು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಫಿಟ್‌ನೆಸ್‌ಗೆ ಐಕಾನ್ ಆಗಿದ್ದ ಅಪ್ಪುಗೆ ಹೀಗಾಯಿತು ಎಂದರೆ ಯಾರು ತಾನೆ ನಂಬುವುದಕ್ಕೆ ಸಾಧ್ಯ ಹೇಳಿ? ಪುನೀತ್ ರಾಜ್‌ಕುಮಾರ್ ಕಣ್ಮರೆಯಾದ ದಿನ ಅಭಿಮಾನಿಗಳ ಪಾಲಿಗಂತೂ ಕಪ್ಪು ದಿನವೇ ಸರಿ.

ಪುನೀತ್ ರಾಜ್‌ಕುಮಾರ್ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ. ಇಡೀ ವಿಶ್ವದಲ್ಲೇ ಅಭಿಮಾನಿಗಳನ್ನು ಹೊಂದಿದ್ದರು. ಅಪ್ಪು ಆಕ್ಷನ್‌ಗಾಗಿ, ಡ್ಯಾನ್ಸ್‌ಗಾಗಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು. ಅದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಾಗಂತ ಇದು ಕೇವಲ ಸಾಮಾನ್ಯ ಜನರಿಗೆ ಹಾಗೂ ಅಭಿಮಾನಿಗಳಿಗಷ್ಟೇ ಅಲ್ಲ. ಕನ್ನಡ ಪ್ಯಾನ್ ಇಂಡಿಯಾ ಸ್ಟಾರ್ ಯಶ್‌ಗೂ ಸ್ಪೂರ್ತಿಯಾಗಿತ್ತು.

Yash statement on stage before Puneeth Rajkumar death went viral on social media

ಅಪ್ಪು ಅಪಾರ ಅಭಿಮಾನಿ ಬಳಗದಿಂದ ಕಾಣೆಯಾಗುವ ಎರಡು ದಿನಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುನೀತ್ ರಾಜ್‌ಕುಮಾರ್ ಜೊತೆ ಯಶ್ ಹಾಗೂ ಶಿವರಾಜ್‌ಕುಮಾರ್ ವೇದಿಕೆಯನ್ನು ಹಂಚಿಕೊಂಡಿದ್ದರು. ಈ ವೇಳೆ ಅಪ್ಪು ಜೊತೆ ಯಶ್ ಹೆಜ್ಜೆ ಹಾಕಿದ್ದರು. ಅಲ್ಲದೇ ಪುನೀತ್ ರಾಜ್‌ಕುಮಾರ್ ತಮ್ಮ ಬದುಕಿಗೆ ಹೇಗೆ ಸ್ಪೂರ್ತಿ ಅನ್ನೋದನ್ನು ಹೇಳಿದ್ದರು. ಅದೇ ಕೊನೆ. ಎರಡು ದಿನಗಳ ಬಳಿಕ ನಗು ಮುಖದ ದೇವರು ಈ ಲೋಕವನ್ನೇ ಬಿಟ್ಟು ಹೋಗಿದ್ದರು. ಅಷ್ಟಕ್ಕೂ ಅಂದು ಯಶ್ ಏನು ಹೇಳಿದ್ದರು? ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ? ತಿಳಿಯಲು ಮುಂದೆ ಓದಿ.

ಪವರ್‌ಸ್ಟಾರ್ ಎಷ್ಟು ಜನರನ್ನು ಪ್ರೀತಿಯನ್ನು ಸಂಪಾಧನೆ ಮಾಡಿದ್ದಾರೆ ಅನ್ನೋದು ಅವರು ಅಗಲಿದ ಬಳಿಕ ಗೊತ್ತಾಗಿತ್ತು. ಅಪ್ಪು ಸಿನಿಮಾಗಳಿಗಿಂತ ಅವರು ಮಾಡಿದ ಸಮಾಜಮುಖಿ ಕೆಲಸಗಳಿಂದ ಫೇಮಸ್ ಆಗಿದ್ದರು. ವಿಶ್ವದ ಮೂಲೆ ಮೂಲೆಯಲ್ಲಿರುವ ಅಪ್ಪು ಫ್ಯಾನ್ಸ್ ಕಂಬನಿ ಮಿಡಿದಿದ್ದರು. ಎಲ್ಲಿದ್ದಾರೋ ಅಲ್ಲಿಂದಲೇ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಇಷ್ಟೊಂದು ಹೆಸರು, ಅಭಿಮಾನ ಸಂಪಾದಿಸಿದ್ದ ಪುನೀತ್ ರಾಜ್‌ಕುಮಾರ್ ಅಗಲುವ ಎರಡು ದಿನಗಳ ಹಿಂದಷ್ಟೇ ಎಷ್ಟು ಆಕ್ಟಿವ್ ಆಗಿದ್ದರು ಅನ್ನೋದನ್ನು ಈಗ ವೈರಲ್ ಆಗುತ್ತಿರುವ ವಿಡಿಯೋ ಹೇಳುತ್ತಿದೆ. ದಿವಂಗತ ಪುನೀತ್ ರಾಜ್‌ಕುಮಾರ್ ವೇದಿಕೆ ಮೇಲೆ ಕಾಣಿಸಿಕೊಂಡ ವಿಡಿಯೋವನ್ನು ನೋಡಿ ಅಭಿಮಾನಿಗಳು ಮತ್ತೆ ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೆನೆದು ಭಾವುಕರಾಗುತ್ತಿದ್ದಾರೆ. ಇದೇ ವಿಡಿಯೋದಲ್ಲಿ ಯಶ್ ಕೂಡ ಅಪ್ಪು ಗುಣಗಾನ ಮಾಡಿದ್ದರು. ಅಷ್ಟಕ್ಕೂ ಅಂದು ಯಶ್ ಏನು ಹೇಳಿದ್ದರು?

"ನಾನು ಕಾಲೇಜು ದಿನಗಳಲ್ಲಿ , ಸ್ಕೂಲ್ ದಿನಗಳಲ್ಲಿ ಇವರ ಡ್ಯಾನ್ಸ್ ನೋಡಿ, ಇವರ ಫೈಟ್ ನೋಡಿ, ಇವರ ಹಾಗೆ ಡ್ಯಾನ್ಸ್ ಮಾಡಬೇಕು. ಇವರತರ ಫೈಟ್ ಮಾಡಬೇಕು ಅಂತ ಪ್ರೇರಣೆ ಹೊಂದಿ ಚಿತ್ರರಂಗಕ್ಕೆ ಬಂದವರು." ಎಂದು ಯಶ್ ವೇದಿಕೆ ಹೇಳಿದ್ದರು. ರಾಕಿ ಭಾಯ್ ಮಾತುಗಳನ್ನು ಕೇಳುತ್ತಿದ್ದಂತೆ ಪುನೀತ್ ರಾಜ್‌ಕುಮಾರ್ ನಾಚಿ ನೀರಾಗಿದ್ದರು. ಯಶ್ ಹೊಗಳಿಕೆ ಮಾತುಗಳನ್ನು ನಿಲ್ಲಿಸಲು ಯತ್ನಿಸಿದ್ದರು. ಜೊತೆಗೆ ಯಶ್, ಶಿವಣ್ಣ ಜೊತೆ ಅಪ್ಪು ಹೆಜ್ಜೆ ಕೂಡ ಹಾಕಿದ್ದರು.

ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ನಾಳೆಗೆ (ಅಕ್ಟೋಬರ್ 29)ಮೂರು ವರ್ಷಗಳಾಗುತ್ತಿದೆ. ಇದೇ ಕಹಿ ನೆನಪಿನಲ್ಲಿ ಅಪ್ಪು ಅಭಿಮಾನಿಗಳು ಭಾವುಕರಾಗಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಪ್ಪು ಫ್ಯಾನ್ಸ್ ಎಮೋಷನಲ್‌ ಆಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Yash's statement on stage before Puneeth Rajkumar's death went viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X