ರೆಕ್ಟಲ್ ಕ್ಯಾನ್ಸರ್‌ನಿಂದ ಬಳಲುತ್ತಿರೋ ಅಭಿಮಾನಿಗೆ ಯಶ್ ವಿಡಿಯೋ ಕಾಲ್; ರಾಕಿ ಭಾಯ್ ಧೈರ್ಯ ತುಂಬಿದ್ದು ಹೀಗೆ

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರೋ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ವಿಷಯ ಬಂದರೆ ಎಲ್ಲಿದ್ದರೂ ಹಾಜರಿ ಹಾಕಿಬಿಡುತ್ತಾರೆ. ಅದೆಷ್ಟೇ ದೂರವಿರಲಿ, ಅದೆಂತಹದ್ದೇ ಕೆಲಸವಿದ್ದರೂ ಅಷ್ಟೇ ಯಶ್ ಸ್ಪಂದಿಸುವುದನ್ನು ಬಹಳ ಹಿಂದಿನಿಂದಲೂ ನೋಡಿದ್ದೇವೆ. ಈಗ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಅಭಿಮಾನಿಗೆ ಧೈರ್ಯ ತುಂಬುವುದಕ್ಕೆ ಯಶ್ ಮುಂದಾಗಿದ್ದು ಎಲ್ಲೆಡೆ ಮೆಚ್ಚಿಗೆ ವ್ಯಕ್ತವಾಗಿದೆ.

ಯಶ್ ತಮ್ಮದೇ ಎರಡು ಸಿನಿಮಾಗಳನ್ನು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಒಂದ್ಕಡೆ 'ಟಾಕ್ಸಿಕ್' ಅನ್ನು ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಅವರ ಮತ್ತೊಂದು ಕನಸು 'ರಾಮಾಯಣ'ದ ಶೂಟಿಂಗ್ ಕೂಡ ನಡೆಯುತ್ತಿದೆ. ಹೀಗಾಗಿ ಬಹುತೇಕ ಮುಂಬೈನಲ್ಲಿಯೇ ಬೀಡು ಬಿಟ್ಟಿರುವ ಯಶ್ ಈ ಎರಡು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Yash supports his fan in Shivamogga who is battling cancer via video call

ಇಷ್ಟು ಬ್ಯುಸಿ ನಡುವೆಯೂ 'ರೆಕ್ಟಲ್ ಕ್ಯಾನ್ಸರ್‌'ನಿಂದ ಬಳಲುತ್ತಿರುವ ತನ್ನ ಅಭಿಮಾನಿಯನ್ನು ವಿಡಿಯೋ ಕಾಲ್ ಮೂಲಕ ಮಾತಾಡಿಸಿದ್ದಾರೆ. ಆತಂಕದಲ್ಲಿರುವ ಅವರ ಅಭಿಮಾನಿಗೆ ಧೈರ್ಯ ತುಂಬಿದ್ದಾರೆ. ನಿನ್ನ ಹೋರಾಟದಲ್ಲಿ ನಾನು ಜೊತೆಗಿರುತ್ತೇನೆಂದು ಭರವಸೆ ನೀಡಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿ ಹಾಗೂ ಯಶ್ ನಡುವಿನ ಸಂಭಾಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಭಿಮಾನಿ ನೋವಿಗೆ ಯಶ್ ಸ್ಪಂದನೆ

ಯಶ್ ಅವರ ಶಿವಮೊಗ್ಗದ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷರಾಗಿರುವ ಸುನಿಲ್ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ರೆಕ್ಟಲ್ ಕ್ಯಾನ್ಸರ್ (Rectal Cancer) ನಿಂದ ಬಳಲುತ್ತಿದ್ದಾರೆ. ಇದು ಈಗ ನಾಲ್ಕನೇ ಹಂತ ತಲುಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ತಮ್ಮ ಅಭಿಮಾನಿ ಅನಾರೋಗ್ಯದಿಂದ ಬಳಲುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಯಶ್ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ್ದಾರೆ. ತನ್ನ ಅಭಿಮಾನಿ ಸುನೀಲ್ ಜೊತೆ ಮಾತಾಡಿದ್ದಾರೆ.

Also Read
ನವೀನ್ ಕುಮಾರ್ ಎನ್ನುವುದು ಯಶ್ ಒರಿಜಿನಲ್ ಹೆಸ್ರು ಅಲ್ಲ; ವಿಕಿಪೀಡಿಯದಲ್ಲಿ ಕೂಡ ಬದಲಾಯ್ತು
ನವೀನ್ ಕುಮಾರ್ ಎನ್ನುವುದು ಯಶ್ ಒರಿಜಿನಲ್ ಹೆಸ್ರು ಅಲ್ಲ; ವಿಕಿಪೀಡಿಯದಲ್ಲಿ ಕೂಡ ಬದಲಾಯ್ತು

ಕುಟುಂಬಕ್ಕೂ ಧೈರ್ಯ ತುಂಬಿದ ಯಶ್

ಯಶ್ ತನ್ನ ಅಭಿಮಾನಿಯಿಂದ ಆರೋಗ್ಯದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಅವರ ಕುಟುಂಬಕ್ಕೂ ಧೈರ್ಯ ತುಂಬಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಈ ಕಷ್ಟದ ಪರಿಸ್ಥಿತಿಯ ವಿರುದ್ಧ ಧೈರ್ಯದಿಂದ ಹೋರಾಡಲು ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಸುನಿಲ್ ಜೊತೆ ಯಶ್ ಕೂಡ ಭಾವುಕರಾಗಿ ಮಾತಾಡಿದ್ದಾರೆ. ಯಾಕೆ ಬೇಗನೇ ತೋರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಹೋರಾಟದಲ್ಲಿ ಜೊತೆಯಾಗಿ ನಿಲ್ಲುವ ಭರವಸೆ ನೀಡಿದ್ದಾರೆ.

ಯಶ್-ಫ್ಯಾನ್ ನಡುವಿನ ಸಂಭಾಷಣೆ

ಮೊದಲಿಗೆ ವೈದ್ಯರು ಪೈಲ್ಸ್ ಅಂತಾನೇ ಹೇಳಿದ್ದರು. ಆಮೇಲೆ ಪರೀಕ್ಷೆ ಮಾಡಿಸಿ ಅದು ವರದಿ ಬರುವ ಹೊತ್ತಿಗೆ ಮೂರು ತಿಂಗಳಲಾಗಿತ್ತು. ಪ್ರತಿ ಪರೀಕ್ಷೆಗೂ 15 ರಿಂದ 20 ದಿನ ತೆಗೆದುಕೊಳ್ಳುತ್ತಿತ್ತು. ಮೂರು ತಿಂಗಳಲ್ಲಿ ರೆಕ್ಟಲ್ ಕ್ಯಾನ್ಸರ್ ಅಂತ ಗೊತ್ತಾಗುವ ಹೊತ್ತಿಗೆ ಎಲ್ಲಾ ಕಡೆಗೆ ಆವರಿಸಿಕೊಂಡಿದೆ. ಈಗ ನಾಲ್ಕನೇ ಸ್ಟೇಜ್‌ನಲ್ಲಿ ಇದ್ದೇನೆ ಎಂದು ಯಶ್ ಅಭಿಮಾನಿ ಸುನಿಲ್ ಹೇಳಿಕೊಂಡಿದ್ದಾರೆ.

ನಂಬಿಕೆ ಇಟ್ಟುಕೊಳ್ಳಿ

"ಇರಿ ದೇವರು ಇದ್ದಾರೆ. ನೀವು ಹೋಪ್ ಇಟ್ಟುಕೊಳ್ಳಬೇಕು. ಯಾವ ಸ್ಟೇಜ್ ಏನು ಅದೆಲ್ಲ ವೈದ್ಯರ ಕೆಲಸ. ಮನುಷ್ಯರು ನಮ್ಮ ಕರ್ತವ್ಯವನ್ನು ನಾವು ಮಾಡಬೇಕು." ಎಂದು ಯಶ್ ಹೇಳಿದ್ದಾರೆ. ಅದಕ್ಕೆ ಅಭಿಮಾನಿ ಸಿನಿಮಾ ಬಗ್ಗೆ ವಿಚಾರಿಸಿದ್ದಾರೆ. ಆಗ ಯಶ್ "ಸಿನಿಮಾ ಬಿಡಪ್ಪ ಅದು ಬರುತ್ತೆ ಹೋಗುತ್ತೆ. ನೀವು ನಿಮ್ಮ ಲೈಫ್ ಅನ್ನು ನೋಡಬೇಕು. ನಾನು ಯಾವಾಗಲೂ ಅದನ್ನೇ ಹೇಳೋದು. ಹಣೆಬರಹ ಏನು ಮಾಡುವುದಕ್ಕೆ ಆಗುವುದಿಲ್ಲ. ಆದರೆ, ಹೋಪ್ ಇಟ್ಟುಕೊಳ್ಳಬೇಕು. ವೈದ್ಯರು ಏನು ಟ್ರೀಟ್ಮೆಂಟ್ ಹೇಳುತ್ತಾರೋ ಅದನ್ನೆಲ್ಲ ನೀವು ಮಾಡಿ." ಎಂದು ಯಶ್ ಧೈರ್ಯ ತುಂಬಿದ್ದಾರೆ.

ಯುಎಸ್‌ನಲ್ಲಿ ಇರುವ ಯಶ್

ಸದ್ಯ ರಾಕಿಂಗ್ ಸ್ಟಾರ್ ಯಶ್ ಅಮೆರಿಕದಲ್ಲಿ ಇದ್ದಾರೆ. ಅವರ ಆಪ್ತರಿಗೆ ಈ ವಿಷಯ ಮುಟ್ಟಿಸಿದಾಗ ಯಶ್ ಅಲ್ಲಿಯೇ ವಿಡಿಯೋ ಕಾಲ್ ಮೂಲಕ ಅಭಿಮಾನಿಯನ್ನು ಮಾತಾಡಿಸಿದ್ದಾರೆ. ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ. ಅಲ್ಲದೇ ಆರ್ಥಿಕವಾಗಿಯೂ ನೆರವಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

English summary
Yash supports his fan in Shivamogga who is battling cancer via video call. Yash is busy with Toxic and Ramayana Shooting. As soon as he know about his fan condition, Yash supported morally and financially
Read more about: yash fan kannada actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X