Toxic Vs Dhurandhar 2: 'ಟಾಕ್ಸಿಕ್' 3.20 ಗಂಟೆ.. 'ಧುರಂಧರ್ 2' 3.45 ಗಂಟೆ.. ಸಿಂಗಲ್‌ ಸ್ಕ್ರೀನ್‌ಗೆ ಟೆನ್ಷನ್ ಯಾಕೆ?

ಈ ತಿಂಗಳು ಎರಡು ಮೆಗಾ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದು 'ಟಾಕ್ಸಿಕ್'. ಇನ್ನೊಂದು 'ಧುರಂಧರ್ 2'. ಈ ಎರಡೂ ಸಿನಿಮಾಗಳ ಮೇಲೂ ನಿರೀಕ್ಷೆಗಳೇನು ಕಮ್ಮಿಯಿಲ್ಲ. ಒಂದು ರಾಕಿಂಗ್ ಸ್ಟಾರ್ ಯಶ್ ಮತ್ತೆ ಬಾಲಿವುಡ್ ಹೀರೋಗೆ ಟಕ್ಕರ್ ಕೊಡ್ತಾರಾ? ಅಂತ ಲೆಕ್ಕಾ ಹಾಕುತ್ತಾ ಕೂತಿದ್ದರೆ, ಇನ್ನೊಂದು ರಣ್‌ವೀರ್ ಸಿಂಗ್ ಸಿನಿಮಾ ಮತ್ತೆ ಸಾವಿರ ಕೋಟಿ ಕ್ಲಬ್ ಸೇರಿತ್ತಾ? ಅಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

'ಟಾಕ್ಸಿಕ್' ಹಾಗೂ 'ಧುರಂಧರ್ 2' ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಂತೂ ಸಿಕ್ಕಾಪಟ್ಟೆ ಸದ್ದು ಮಾಡೋದು ಗ್ಯಾರಂಟಿ. ಆದರೆ, ಈ ಎರಡು ಸಿನಿಮಾಗಳಲ್ಲಿ ಗೆಲ್ಲೋದು ಯಾರು? ಅನ್ನೋದನ್ನು ಯಶ್ ಹಾಗೂ ರಣ್‌ವೀರ್ ಸಿಂಗ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಫ್ಯಾನ್ಸ್‌ಗೆ ಈ ಎರಡು ಸಿನಿಮಾಗಳು ಹಬ್ಬ ಆಗಿದ್ದರೆ, ಇತ್ತ ಸಿಂಗಲ್ ಸ್ಕ್ರೀನ್‌ಗಳಿಗೆ ತಲೆ ನೋವಾಗಿದೆ.

Yash Toxic and Ranveer Singh Dhurandhar 2 Runtime effects in single Screens

ಯಶ್ 'ಟಾಕ್ಸಿಕ್' ಹಾಗೂ ರಣ್‌ವೀರ್ ಸಿಂಗ್ 'ಧುರಂಧರ್ 2' ಕೇವಲ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಮಾಡುತ್ತಿಲ್ಲ. ಬದಲಾಗಿ ಸಿನಿಮಾ ರನ್‌ಟೈಮ್‌ನಲ್ಲೂ ಕಾಂಪಿಟೇಷನ್‌ಗೆ ಬಿದ್ದಿದ್ದಾವೆ. ಹಾಗಿದ್ದರೆ, ಈ ಎರಡೂ ಸಿನಿಮಾಗಳ ರನ್‌ಟೈಮ್ ಏನು? ಇದರಿಂದ ಸಿಂಗಲ್ ಸ್ಕ್ರೀನ್‌ಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ಶೋಗಳಲ್ಲಿ ಏನೆಲ್ಲ ವ್ಯತ್ಯಾಸ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಟಾಕ್ಸಿಕ್' ರನ್‌ ಟೈಮ್ ಎಷ್ಟು?

ಸಿನಿಮಾ ಮಂದಿ 'ಟಾಕ್ಸಿಕ್' ರನ್‌ಟೈಮ್ ಬಗ್ಗೆ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ಕಾರಣವಿದೆ. ಇಲ್ಲಿವರೆಗೂ 'ಟಾಕ್ಸಿಕ್' ಚಿಕ್ಕ ಸಿನಿಮಾ ಅಂತ ನಂಬಲಾಗಿತ್ತು. ಆದರೆ, ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಯಶ್ 'ಟಾಕ್ಸಿಕ್' ಸಿನಿಮಾದ ಉದ್ದ ಬರೋಬ್ಬರು 3.20 ನಿಮಿಷ. ಸಿನಿಮಾ ಇಷ್ಟು ಉದ್ದವಿದ್ದರೆ, ಸಿಂಗಲ್‌ ಸ್ಕ್ರೀನ್‌ಗಳ ಶೋಗಳಿಗಾಗಿ ಪರದಾಡಬೇಕಾಗುತ್ತೆ. ಇಂತಹ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆದಾಗ ಒಂದು ಹೆಚ್ಚುವರಿ ಶೋಗಳನ್ನು ಪ್ಲ್ಯಾನ್ ಮಾಡುತ್ತಾರೆ. ಅದು ಸಾಧ್ಯವಾಗದೇ ಹೋಗಬಹುದು.

'ಧುರಂಧರ್ 2' ರನ್‌ ಟೈಮ್ ಎಷ್ಟು?

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾದ್ದೂ ಇದೇ ಕಥೆ. ಆದಿತ್ಯ ಧರ್ ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿರುವ ಈ ಸಿನಿಮಾ ಕೂಡ 3.45 ನಿಮಿಷ ಉದ್ದವಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸಿನಿಮಾದ ರನ್‌ ಟೈಮ್ ಇದೇ ಆಗಿದ್ದರೆ, ಸಿಂಗಲ್ ಸ್ಕ್ರೀನ್‌ಗಳಲ್ಲಿ ಶೋ ಕಡಿಮೆ ಆಗೋದು ಗ್ಯಾರಂಟಿ. ಅದು ಹೇಗೆ ಅಂತ ನೋಡುವುದಾರೇ,

Yash Toxic and Ranveer Singh Dhurandhar 2 Runtime effects in single Screens

ಸಿಂಗಲ್‌ ಸ್ಕ್ರೀನ್ ಶೋಗಳು ಕಡಿತ?

ಸಾಮಾನ್ಯವಾಗಿ ಎರಡು ಕಾಲು ಗಂಟೆಯ ಸೂಪರ್‌ಸ್ಟಾರ್ ಸಿನಿಮಾಗಳನ್ನು ಸಿಂಗಲ್ ಸ್ಕ್ರೀನ್‌ಗಳಲ್ಲಿ 5 ಶೋ ಹಾಕಿತ್ತಾರೆ. ಯಾಕಂದ್ರೆ, ಜನರು ಥಿಯೇಟರ್‌ಗೆ ನುಗ್ತಾರೆ. ಕಲೆಕ್ಷನ್ ಚೆನ್ನಾಗಿ ಆಗುತ್ತೆ ಅನ್ನೋ ನಂಬಿಕೆ. ಆದರೆ, ಟಾಕ್ಸಿಕ್ 3.15 ಗಂಟೆ, 'ಧುರಂಧರ್ 2' 3.45 ಗಂಟೆ ರನ್‌ ಟೈಮ್ ಇರುವಂತಹ ಸಿನಿಮಾ ಬಂದರೆ, ರೆಗ್ಯೂಲರ್ ಶೋ ಟೈಮ್‌ನಲ್ಲಿ ವ್ಯತ್ಯಾಸ ಆಗುತ್ತೆ. ಸಾಮಾನ್ಯವಾಗಿ ಬೆಳಗ್ಗೆ 10 ಗಂಟೆ, ಮಧ್ಯಾಹ್ನ ಒಂದು ಗಂಟೆ, ಸಂಜೆ 4 ಗಂಟೆ, 7 ಗಂಟೆ ಹಾಗೂ ರಾತ್ರಿ 10 ಗಂಟೆ ಶೋ ಮಾಡುತ್ತಾರೆ. ಈ ಎರಡು ಸಿನಿಮಾಗಳಿಗೆ ಬೆಳಗ್ಗೆ 10 ಗಂಟೆ, ಮಧ್ಯಾಹ್ನ 2 ಗಂಟೆ, ಸಂಜೆ 6 ಗಂಟೆ ಹಾಗೂ ರಾತ್ರಿ 10 ಗಂಟೆಗೆ ಶೋ ಮಾಡಬೇಕಾಗುತ್ತೆ. ಇದೂ ಒಂದು ಶೋನಿಂದ ಇನ್ನೊಂದು ಶೋಗೆ ಟೈಟ್ ಗ್ಯಾಪ್ ಇಟ್ಟು ಪ್ರದರ್ಶನ ಮಾಡಬೇಕಾಗಿ ಬರಬಹುದು.

ಯಾಕೆ ಹೀಗಾಗುತ್ತೆ?

ಸೂಪರ್ ಸಿನಿಮಾ ಆರಂಭದ ದಿನಗಳಲ್ಲಿ ಹೌಸ್‌ಫುಲ್ ಆಗುತ್ತವೆ. ಹೀಗಾಗಿ ಥಿಯೇಟರ್ ಒಳಗೆ ಎಂಟ್ರಿ ಕೊಡುವುದಕ್ಕೆ ಕಮ್ಮಿ ಅಂದರೂ 15 ನಿಮಿಷ ಬೇಕು. ಇನ್ನು ಇಂಟ್ರವಲ್ ಗ್ಯಾಪ್ ಅಂತ 15 ನಿಮಿಷ ಬೇಕು. ಹಾಗೇ ಸಿನಿಮಾ ಮುಗಿಸಿ ಹೊರಗೆ ಬರೋಕೆ 15 ನಿಮಿಷ ಬೇಕು. 600 ರಿಂದ 1000 ಆಸನಗಳಿರುವ ಸಿಂಗಲ್ ಸ್ಕ್ರೀನ್ಸ್‌ನಲ್ಲಿ ಒಂದು ಶೋನಿಂದ ಇನ್ನೊಂದು ಶೋಗೆ 45 ನಿಮಿಷ ಕಮ್ಮಿ ಅಂದರೂ ಬೇಕಾಗುತ್ತೆ.

More from Filmibeat

English summary
Yash Toxic and Ranveer Singh Dhurandhar 2 Runtime effects in single Screens.
Read more about: yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X