ಗೀತು ಮೋಹನ್‌ದಾಸ್ ಬರ್ತ್‌ಡೇಗೆ ಮೇಕಿಂಗ್ ವಿಡಿಯೋ.. 'ಟಾಕ್ಸಿಕ್' ರಿಲೀಸ್ ಡೇಟ್ ಫಿಕ್ಸ್ ಆಯ್ತಾ?
ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ರಿಲೀಸ್ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಅದರಲ್ಲೂ ಎರಡೆರಡು ಬಾರಿ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುತ್ತಿದ್ದಂತೆ ಸಿನಿಪ್ರೇಮಿಗಳು ಕನ್ಫ್ಯೂಸ್ ಆಗಿದ್ದಾರೆ. ಯಾಕಂದ್ರೆ, ಇದೂವರೆಗೂ 'ಟಾಕ್ಸಿಕ್' ಟೀಮ್ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ. ಹೀಗಾಗಿ ಟೀಮ್ ಅಲ್ಲಿ ಏನಾಗ್ತಿದೆ ಅನ್ನೋ ಸುಳಿವು ಸದ್ಯಕ್ಕಂತೂ ಇಲ್ಲ.
ಒಂದಿಷ್ಟು ದಿನ ಸೈಲೆಂಟ್ ಆಗಿದ್ದ 'ಟಾಕ್ಸಿಕ್' ಟೀಮ್ ಮತ್ತೆ ತನ್ನ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಇಂದು (ಜನವರಿ 8) ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ಖುಷಿಯನ್ನು ತಮ್ಮ ಫ್ಯಾನ್ಸ್ ಜೊತೆ ಟೀಮ್ ಹಂಚಿಕೊಂಡಿದೆ. ಕೆವಿಎನ್ ಪ್ರೊಡಕ್ಷನ್ಸ್ 'ಟಾಕ್ಸಿಕ್' ಸೆಟ್ಟಿನಲ್ಲಿ ಗೀತು ಮೋಹನ್‌ದಾಸ್ ಹೇಗಿರುತ್ತಾರೆ? ಅವರ ಸಿನಿಮಾ ಮೇಕಿಂಗ್ ಸ್ಟೈಲ್ ಹೇಗಿದೆ? ಅನ್ನೋದಕ್ಕೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಮೇಲೆ 'ಟಾಕ್ಸಿಕ್' ಬಗ್ಗೆ ಆಸೆಯನ್ನೇ ಕಳೆದುಕೊಂಡಿದ್ದವರಿಗೆ ಮತ್ತೆ ಜೀವ ಬಂದಂತೆ ಆಗಿದೆ. 'ಟಾಕ್ಸಿಕ್' ಟೀಮ್‌ನಲ್ಲಿ ಏನೋ ದೊಡ್ಡದು ನಡೀತಿದೆ ಅನ್ನೋ ಸುಳಿವಂತೂ ಸಿಕ್ಕಿದೆ. ಮೇಕಿಂಗ್ ವಿಡಿಯೋ ರಿಲೀಸ್ ಆಗುತ್ತಿದ್ದಂತೆ 'ಟಾಕ್ಸಿಕ್' ರಿಲೀಸ್ ಡೇಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹಬ್ಬುವುದಕ್ಕೆ ಶುರುವಾಗಿದೆ. ಇತ್ತ ಗಾಂಧಿನಗರನೂ ಆ ಡೇಟ್ ಬಗ್ಗೆನೇ ಚರ್ಚೆ ಮಾಡುತ್ತಿದೆ.
'ಟಾಕ್ಸಿಕ್' ಮೇಕಿಂಗ್
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಇಷ್ಟೊತ್ತಿಗೆ ರಿಲೀಸ್ ಆಗಬೇಕಿತ್ತು. ಆದರೆ, ಮಾರ್ಚ್‌ನಿಂದ ಪೋಸ್ಟ್‌ಪೋನ್ ಆಗುತ್ತಲೇ ಇದೆ. ಹೀಗಾಗಿ ಸಹಜವಾಗಿಯೇ ಅವರ ಫ್ಯಾನ್ಸ್ ಲೈಟ್ ಆಗಿ ತಾಳ್ಮೆಯಿಂದ ಕಾಯಬೇಕಿದೆ. ಸದ್ಯ ಮೇಕಿಂಗ್ ವಿಡಿಯೋ ನೋಡಿ ಖುಷಿಯಾಗಿರೋ ಹಾಕಿದೆ. 'ಟಾಕ್ಸಿಕ್' ಮೇಕಿಂಗ್ ವಿಡಿಯೋದಲ್ಲಿ ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡುತ್ತಿರುವ ದೃಶ್ಯಗಳಿವೆ. ಹೀಗಾಗಿ ಇದೊಂದು ಜಬರ್ದಸ್ತ್ ಆಕ್ಷನ್ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ ಅಂತ ಅನಿಸುತ್ತಿದೆ. ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಯಶ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಒಂದನ್ನು ನೀಡಿವೆ. ಶೂಟಿಂಗ್ ಸೆಟ್‌ನ ವಿಶೇಷ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನಿರ್ದೇಶಕಿಗೆ ಚಿತ್ರತಂಡ ಶುಭ ಕೋರಿದೆ.
"ಮೌನವೇ ಕಥೆ ಹೇಳುತ್ತಿದೆ"
ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡ ವಿಡಿಯೋದಲ್ಲಿ ಗೀತು ಮೋಹನ್‌ದಾಸ್ ಅವರ ಡೈರೆಕ್ಷನ್ ಸ್ಟೈಲ್ ನೋಡೋಕೆ ಸಿಕ್ಕಿದೆ. ಮಹಿಳಾ ನಿರ್ದೇಶಕಿಯಾಗಿದ್ದರೂ, ಆಕ್ಷನ್ ಸೀಕ್ವೆನ್ಸ್ ಅನ್ನು ಶೂಟ್ ಮಾಡುವಾಗ ಅವರ ಎನರ್ಜಿಗೆ ಯಶ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹೀಗಾಗಿಯೇ "ಮಾತುಗಳಿಗಿಂತ ಮೌನವೇ ಹೆಚ್ಚು ಕಥೆ ಹೇಳುವಂತೆ, ಪ್ರತಿಯೊಂದು ಶಾಟ್ ಅನ್ನು ವಿಭಿನ್ನವಾಗಿ ತೆರೆಯ ಮೇಲೆ ತರುವ ಶಕ್ತಿ ಆಕೆಗಿದೆ. ಹ್ಯಾಪಿ ಬರ್ತ್‌ಡೇ ಗೀತು ಮೋಹನ್‌ದಾಸ್" ಎಂದು ಕೆವಿಎನ್ ಪ್ರೊಡಕ್ಷನ್ಸ್ ತನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಕ್ಯಾಪ್ಷನ್ ಕೊಟ್ಟಿದೆ.
'ಟಾಕ್ಸಿಕ್' ರಿಲೀಸ್ ಯಾವಾಗ?
ಗೀತು ಮೋಹನ್‌ದಾಸ್ ಬರ್ತ್‌ಡೇಗೆ ಮೇಕಿಂಗ್ ವಿಡಿಯೋ ಬಿಟ್ಟಿದ್ದೇನೋ ಆಯ್ತು. ಆದರೆ, ರಿಲೀಸ್ ಯಾವಾಗ ಅನ್ನೋ ಸುಳಿವು ಮಾತ್ರ ಬಿಟ್ಟುಕೊಟ್ಟಿಲ್ಲ. ಹೀಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್' ರಿಲೀಸ್ ಡೇಟ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಈ ವರ್ಷ ಸಿನಿಮಾ ರಿಲೀಸ್ ಆಗೋದು ಡೌಟು. ಯಶ್ ಬರ್ತ್‌ಡೇಗೆ ಅಂದರೆ, ಜನವರಿ 8, 2027ಗೆ ಸಿನಿಮಾ ರಿಲೀಸ್ ಆಗುತ್ತೆ ಎಂದು ಸುದ್ದಿ ಹರಿದಾಡುತ್ತಿದೆ. ಹಾಗೆ ನೋಡಿದೆ, ಯಶ್ ಬರ್ತ್‌ಡೇ ಶುಕ್ರವಾರವೇ ಬರಲಿದ್ದು, ಸಂಕ್ರಾಂತಿ ಕೂಡ ಹತ್ತಿರದಲ್ಲಿ ಇದೆ. ಹೀಗಾಗಿ ಈ ಅಂದೇ ರಿಲೀಸ್ ಆದರೂ ಅಚ್ಚರಿಯಿಲ್ಲ.
ಮತ್ತೊಬ್ಬ ನಿರ್ಮಾಪಕ ಎಂಟ್ರಿ?
'ಟಾಕ್ಸಿಕ್' ಸಿನಿಮಾ ರಿ-ಶೂಟ್ ಆಗುತ್ತಿದೆ ಅನ್ನೋ ಸುದ್ದಿಯಿದೆ. ಹೀಗಾಗಿ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಾಗಿದೆ ಅನ್ನೋ ಸುದ್ದಿನೂ ಗಾಂಧಿನಗರದ ಗಲ್ಲಿಯಲ್ಲಿ ಓಡಾಡುತ್ತಿದೆ. ಹೊಸ ನಿರ್ಮಾಪಕರು ಎಂಟ್ರಿ ಕೊಟ್ಟಿದ್ದಾರೆ ಅನ್ನೋ ಮಾತು ಕೂಡ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಯಶ್ ಜೊತೆ ದೊಡ್ಡ ಸ್ಟಾರ್‌ಕಾಸ್ಟ್ ಸಿನಿಮಾದಲ್ಲಿ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರಿ ಬಜೆಟ್‌ನ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದು, ಹಾಲಿವುಡ್‌ನ ಪ್ರಸಿದ್ಧ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ ಸಾಹಸ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications