Yash 19: ಲಂಡನ್‌ನಲ್ಲಿ ಹಾಲಿವುಡ್‌ ಆಕ್ಷನ್ ಡೈರೆಕ್ಟರ್ ಭೇಟಿ.. ರಾಕಿ ಭಾಯ್ ಲುಕ್‌ ಟೆಸ್ಟ್‌.. ಏನಿದು ಯಶ್ 19 ಕಥೆ?

ಯಶ್ 19ನೇ ಸಿನಿಮಾ ಯಾವ ಶುರುವಾಗುತ್ತೆ ಅನ್ನೋದೇ ಗೊತ್ತಾಗುತ್ತಿಲ್ಲ. ರಾಕಿ ಭಾಯ್ ಅಭಿಮಾನಿಗಳು ಕಾದೂ ಕಾದೂ ಸುಸ್ತಾದರೇ ಹೊರತು ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ಮಾತ್ರ ಏನೂ ಇಲ್ಲ. ಸಿನಿಮಾ ಆಗ ಶುರುವಾಗುತ್ತೆ. ಈಗ ಶುರುವಾಗುತ್ತೆ ಅನ್ನೋ ಗಾಳಿ ಸುದ್ದಿ ಬಿಟ್ಟರೆ, ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಯಶ್ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಅನೌನ್ಸ್ ಆಗುತ್ತೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿನೂ ಅದೆಷ್ಟು ನಿಜವೋ ? ಸುಳ್ಳೋ ಗೊತ್ತಿಲ್ಲ. ಆದರೆ, ಮುಂದಿನ ತಿಂಗಳು ಘೋಷಣೆ ಆಗುವ ಬಗ್ಗೆಯಂತೂ ಸದ್ದು ಮಾಡುತ್ತಿದೆ.

Yash with Hollywood stunt Director JJ Perry in London also undergoing look tests

ಇದೇ ಗೊಂದಲದಲ್ಲಿರುವಾಗೇ ಯಶ್ ಹಾಲಿವುಡ್‌ನ ಜನಪ್ರಿಯ ಸ್ಟಂಟ್ ಡೈರೆಕ್ಟರ್ ಅನ್ನು ಭೇಟಿ ಮಾಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಮತ್ತದೇ ನಾನಾ ರೀತಿಯ ಸುದ್ದಿಗಳು ಓಡಾಡುತ್ತಿದೆ. ಆ ಸುದ್ದಿಗಳು ಏನು? 'ಯಶ್ 19' ಸಿನಿಮಾ ಬಗ್ಗೆ ಅಪ್‌ಡೇಟ್ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಹಾಲಿವುಡ್ ಸ್ಟಂಟ್ ನಿರ್ದೇಶಕನ ಭೇಟಿ

'ಕೆಜಿಎಫ್ ಚಾಪ್ಟರ್ 2' ಅಂತಹ ಮೆಗಾ ಸಿನಿಮಾಗಳನ್ನು ಕೊಟ್ಮೇಲೆ ಯಶ್ ಹೊಸ ಸಿನಿಮಾ ಆದಷ್ಟು ಬೇಗ ಅನೌನ್ಸ್ ಮಾಡಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಆದರೆ, 'ಕೆಜಿಎಫ್ 2' ದೊಡ್ಡ ಸಿನಿಮಾ ಕೊಡಬೇಕು ಅನ್ನೋದು ಯಶ್ ಹಠ. ಹೀಗಾಗಿ ಯಶ್ 19 ಅನೌನ್ಸ್ ಮಾಡುವುದಕ್ಕೆ ತಡವಾಗುತ್ತಿದೆ. ಆದರೆ, ಕಳೆದ ಒಂದೂವರೆ ವರ್ಷದಿಂದ ತೆರೆ ಮರೆಯಲ್ಲೇ ತಯಾರಿ ನಡೆಸಿರೋ ಯಶ್ ಇತ್ತೀಚೆಗೆ ಲಂಡನ್‌ನಲ್ಲಿ ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿಯನ್ನು ಭೇಟಿ ಮಾಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭರ್ಜರಿ ಸ್ಟಂಟ್‌ಗೆ ಯಶ್ ತಯಾರಿ?

ಜೆಜೆ ಪೆರ್ರಿ ಹಾಲಿವುಡ್‌ನ ಮೆಗಾ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. 'ಅವತಾರ್', 'ಫಾಸ್ಟ್ ಆಂಡ್ ಫ್ಯೂರಿಯಸ್', 'ಎರ್ಗೋ', 'ಸ್ಕೈಕ್ರೀಪರ್', 'ಎಕ್ಸ್​ಎಕ್ಸ್​ಎಕ್ಸ್', 'ಜಾನ್ ವಿಕ್', 'ಜಾಂಗೋ ಅನ್​ಚೇನ್ಡ್', 'ಸ್ಪೈ', 'ದಿ ಎಕ್ಸ್​ಪ್ಯಾಂಡೆಬಲ್ಸ್ 3' ಅಂತಹ ಹಾಲಿವುಡ್ ಆಕ್ಷನ್ ಸಿನಿಮಾಗಳಿಗೆ ಜೆಜೆ ಪೆರ್ರಿ ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇವರ ಭೇಟಿ ಯಶ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಭರ್ಜರಿ ಸ್ಟಂಟ್‌ಗೆ ರೆಡಿಯಾಗುತ್ತಿದ್ದಾರೆ ಎಂದು ಊಹಿಸಲಾಗಿದೆ.

ಲುಕ್ ಟೆಸ್ಟ್‌ ನಡೀತಾ ಇದೆಯಾ?

'ಯಶ್ 19' ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದಿದೆ ಎನ್ನಲಾಗುತ್ತಿದೆ. ಸದ್ಯ ಯಶ್ ಲುಕ್ ಟೆಸ್ಟ್‌ ನಡೆಯುತ್ತಿದೆ ಎಂದು ತಮಿಳಿನ ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯ ಬಾಲನ್ ಈ ಫೋಟೊ ಜೊತೆಗೆ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇದೇ ಅಕ್ಟೋಬರ್ ತಿಂಗಳಲ್ಲಿ ಬಿಗ್ ಸಿನಿಮಾವನ್ನು ಅನೌನ್ಸ್ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಡಿಸೆಂಬರ್‌ನಿಂದ ಸಿನಿಮಾ ಶೂಟಿಂಗ್?

ಸೋಶಿಯಲ್ ಮೀಡಿಯಾದಲ್ಲಿ ಯಶ್ 19 ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಡಿಸೆಂಬರ್‌ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಇನ್ನೂ ನಿರ್ಮಾಣ ಸಂಸ್ಥೆ ಯಾವುದು? ಸ್ಕ್ರಿಪ್ಟ್ ಎಲ್ಲಿಗೆ ಬಂದಿದೆ? ಎಲ್ಲಿ ನಡೀತಿದೆ? ಇಂತಹ ಒಂದೇ ಒಂದು ಸುಳಿವನ್ನೂ ಯಶ್ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಅಧಿಕೃತ ಘೋಷಣೆಗಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

More from Filmibeat

English summary
Yash with Hollywood stunt Director JJ Perry in London
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X