'S'ನಿಂದ ಶುರು 'H'ನಿಂದ ಅಂತ್ಯ, 7 ಪದದ ಟೈಟಲ್:ನೆಟ್ಟಿಗರ ಊಹೆಯ 7 ಅಕ್ಷರದ ಶೀರ್ಷಿಕೆ ಯಾವ್ದು?

ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾದ ಟೈಟಲ್ ಅನೌನ್ಸ್‌ಮೆಂಟ್‌ಗೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 8ರಂದು ಬೆಳಗ್ಗೆ 9.55ಕ್ಕೆ ಟೈಟಲ್ ಘೋಷಣೆಯಾಗುತ್ತಿದೆ. ಇಷ್ಟು ದಿನ ಇದೊಂದು ಘಳಿಗೆಗಾಗಿ ಕಾಯುತ್ತಿರುವ ಯಶ್ ಅಭಿಮಾನಿಗಳು ಈ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ.

'ಕೆಜಿಎಫ್ 2' ಮೆಗಾ ಸಕ್ಸಸ್ ಬಳಿಕ ಯಶ್ ತಮ್ಮ 19ನೇ ಸಿನಿಮಾದ ಬಗ್ಗೆ ಚಿಕ್ಕದೊಂದು ಸುಳಿವನ್ನೂ ಬಿಟ್ಟಿಕೊಟ್ಟಿರಲಿಲ್ಲ. ಇದೂವರೆಗೂ ನಿರ್ದೇಶಕರು ಯಾರು? ಅನ್ನೋದು ಗೊತ್ತಿಲ್ಲ. ತಂತ್ರಜ್ಞರ ಬಗ್ಗೆ ಸುಳಿವಿಲ್ಲ. ನಾಯಕಿಯರು ಯಾರು ಅನ್ನೋದನ್ನು ಬಾಯಿ ಬಿಟ್ಟಿಲ್ಲ. ಕೇವಲ ನಿರ್ಮಾಣ ಸಂಸ್ಥೆಯಷ್ಟೇ ಇದೂವರೆಗೂ ರಿವೀಲ್ ಆಗಿದೆ.

Yash19 Movie Official Title Released on 8th Dec Know what twitter audience says and Buzz on it

ಯಶ್ 19 ಟೈಟಲ್ ಅನೌನ್ಸ್‌ಮೆಂಟ್ ಆಗುತ್ತೆ ಅನ್ನೋ ಸುಳಿವು ಸಿಗುತ್ತಿದ್ದಂತೆ ನೆಟ್ಟಿಗರು ಫುಲ್ ಅಲರ್ಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾದ ಟೈಟಲ್ ಬಗ್ಗೆ ಗೆಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಯಶ್ 19 ಹ್ಯಾಶ್‌ಟ್ಯಾಗ್‌ಗೆ ತಿಲಾಂಜಲಿ ಇಡುವುದಕ್ಕೆ ಸಜ್ಜಾಗಿದ್ದಾರೆ. ಹಾಗಿದ್ದರೆ, ಟ್ವಿಟರ್ (X)ನಲ್ಲಿ ಏನೇನು ಚರ್ಚೆಯಾಗುತ್ತಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

'S'ನಿಂದ ಶುರುವಾಗಿ 'H' ಅಕ್ಷರದಲ್ಲಿ ಕೊನೆ

ಯಶ್ 19 ಸಿನಿಮಾ ಯಾವಾಗ ಅನೌನ್ಸ್‌ಮೆಂಟ್ ಆಗುತ್ತೋ ಅಂತ ತಲೆಕೆಡಿಸಿಕೊಂಡಿದ್ದ ಫ್ಯಾನ್ಸ್ ಈಗ ಟೈಟಲ್ ಏನು ಅಂತ ಹುಳಬಿಟ್ಟಿಕೊಂಡಿದ್ದಾರೆ. ಕೆಲ ಅಭಿಮಾನಿಗಳು ಯಾವ ಅಕ್ಷರದಿಂದ ಶುರುವಾಗುತ್ತೆ. ಎಷ್ಟು ಅಕ್ಷರದ ಟೈಟಲ್ ಅಂತೆಲ್ಲ ಊಹೆ ಮಾಡುವುದಕ್ಕೆ ಶುರು ಮಾಡಿದ್ದಾರೆ. "ಎಕ್ಸ್‌ಕ್ಲ್ಯೂಸಿವ್ ಬಝ್: ಯಶ್ 19 ಸಿನಿಮಾದ ಟೈಟಲ್ 'S'ನಿಂದ ಶುರುವಾಗಿ 'H' ಅಕ್ಷರದಲ್ಲಿ ಕೊನೆಗೊಳ್ಳುತ್ತದೆ. ಇದು 7 ಅಕ್ಷರದ ಟೈಟಲ್. ಸೋ.. ಮೆಸೇಜ್ ಸ್ಪಷ್ಟವಾಗಿದೆ. ಊಹೆ ಮಾಡುತ್ತಲೇ ಇರಿ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಯಶ್ 19 ಹ್ಯಾಶ್‌ಟ್ಯಾಗ್‌

'ಕೆಜಿಎಫ್ 2' ರಿಲೀಸ್ ಬಳಿಕ ಯಶ್ 19ನೇ ಸಿನಿಮಾ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಯಶ್19 ಹ್ಯಾಶ್‌ಟ್ಯಾಗ್ ಬಳಸುತ್ತಿದ್ದರು. ಆದ್ರೀಗ ಅದಕ್ಕೆ ತಿಲಾಂಜಲಿ ಹೇಳುವ ಸಮಯ ಬಂದಿದೆಯೆಂದು ಚರ್ಚೆ ಮಾಡುತ್ತಿದ್ದಾರೆ. "ಯಶ್ 19 ಹ್ಯಾಶ್‌ಟ್ಯಾಗ್‌ಗೆ ತಿಲಾಂಜಲಿ ಹೇಳಿ. 968 ದಿನಗಳ ಕಾಯುವಿಕೆ ಅಂತ್ಯಗೊಳ್ಳುತ್ತಿದೆ. ಜಾಯ್‌ಫುಲ್ ಎಂಡ್ ಸಿಗುತ್ತಿದೆ. ನಾಳೆ ಬಿಗ್ ಡೇ." ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.

ನಾಳೆ ಕೊನೆ ದಿನ

ಯಶ್ 19 ಟೈಟಲ್ ಬಗ್ಗೆ ಜೋರಾಗಿಯೇ ಚರ್ಚೆಯಾಗುತ್ತಿದೆ. ಅದರಲ್ಲೂ ಯಶ್ 19 ಹ್ಯಾಶ್ ಟ್ಯಾಗ್‌ಗೆ ನಾಳೆನೇ (ಡಿಸೆಂಬರ್ 8) ಕೊನೆ ದಿನ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಈ ಟ್ಯಾಗ್ ಅನ್ನು ಬಿಡುವುದಿಲ್ಲ ಎಂದರೂ, ಬಹಳಷ್ಟು ಮಂದಿ ಅಂತ್ಯ ಹಾಡುವುದಕ್ಕೆ ರೆಡಿಯಾಗಿದ್ದಾರೆ. "#yash19 ಟ್ಯಾಗ್‌ಗೆ ನಾಳೆ ಕೊನೆ ದಿನ. ಸಮರ್ಪಣೆ ಮಾಡೋ ಸಮಯ ಹತ್ತಿರ ಬಂತು." ಎಂದಿದ್ದಾರೆ.

ನೆಟ್ಟಿಗರ ಅಪ್‌ಡೇಟ್ ಏನು?

"ಯಶ್ 19 ಅಪ್‌ಡೇಟ್.. ಇದು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಗ್ರೇ ಶೇಡ್ ಪಾತ್ರದಲ್ಇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂವರು ನಾಯಕಿಯರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಯಿ ಪಲ್ಲವಿ, ಶ್ರದ್ಧಾ ಕಪೂರ್ ಹಾಗೂ ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್‌ 19 ಟೈಟಲ್ ಅನ್ನು ಗೆಸ್ ಮಾಡಿ." ಎಂದು ಮತ್ತೊಬ್ಬ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Know What Twitter audience says about Yash19 Movie Title Release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X