"ಎತ್ತು ಎತ್ತು ಇನ್ನೂ ಮೇಲಕ್ಕೆ ಎತ್ತು..": ವ್ಹೀಲಿಂಗ್ ಮಾಡೋರಿಗೆ 'ಕಾಂತಾರ' ಡೈಲಾಗ್ ಬಿಟ್ಟ ಟ್ರಾಫಿಕ್ ಪೊಲೀಸ್

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿಯೇ ದ್ವಿಚಕ್ರ ವಾಹನ ಸವಾರರು ಯಾವುದೇ ಅಂಜಿಕೆ ಇಲ್ಲದೆ ವ್ಹೀಲಿಂಗ್ ಮಾಡುತ್ತಾರೆ. ಬೆಂಗಳೂರಿನ ಯುವಕರಿಗೆ ಇದೊಂದು ಕ್ರೇಜ್ ಆಗಿಬಿಟ್ಟಿದೆ.

ರಾತ್ರಿ ವೇಳೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ, ಪ್ಲೈ ಓವರ್‌ನಲ್ಲಿ ಯುವಕರು ವ್ಹೀಲಿಂಗ್ ಮಾಡುತ್ತಾರೆ. ಏರ್‌ಪೋರ್ಟ್ ರಸ್ತೆ ಸೇರಿದಂತೆ ಪ್ರಮುಖ ರೋಡ್‌ಗಳಲ್ಲಿ ಆಗಾಗಾ ಯುವಕರು ಅಪಾಯವನ್ನೂ ಲೆಕ್ಕಿಸದೆ ವ್ಹೀಲಿಂಗ್ ಮಾಡುವುದನ್ನು ನೋಡಬಹುದು.

Yeshwanthpur Traffic Police warning for wheeling through Kantara Movie Dialogue

ಬೆಂಗಳೂರಿನ ಪೊಲೀಸರು ಆಗಾಗ ಯುವಕರಿಗೆ ವ್ಹೀಲಿಂಗ್ ಮಾಡುವುದರ ವಿರುದ್ಧ ವಾರ್ನಿಂಗ್ ಕೊಡುತ್ತಲೇ ಬಂದಿದ್ದಾರೆ. ಈಗ ಯಶವಂತಪುರ ಟ್ರಾಫಿಕ್ ಪೊಲೀಸರು ಕ್ರಿಯೇಟಿವ್ ಆಗಿ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. 'ಕಾಂತಾರ' ಸಿನಿಮಾ ಡೈಲಾಗ್ ಬಳಸಿ ವಾರ್ನಿಂಗ್ ಕೊಟ್ಟಿದ್ದಾರೆ.

ವ್ಹೀಲಿಂಗ್ ಮಾಡೋರಿಗೆ 'ಕಾಂತಾರ' ಡೈಲಾಗ್

ರಿಷಬ್ ಶೆಟ್ಟಿ ನಟನೆಯ 'ಕಾಂತಾರ' ಸಿನಿಮಾವನ್ನು ದೇಶವೇ ಮೆಚ್ಚಿಕೊಂಡಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಸಿನಿಮಾದ ಒಂದೊಂದು ಸೀನ್ ಒಂದೊಂದು ಡೈಲಾಗ್ ಕೂಡ ಫೇಮಸ್. ಹೀಗಾಗಿ ಬೆಂಗಳೂರಿನ ಯಶವಂತಪುರದ ಟ್ರಾಫಿಕ್ ಪೊಲೀಸರು 'ಕಾಂತಾರ' ಡೈಲಾಗ್ ಬಳಸಿ, ತಮ್ಮದೇ ಸ್ಟೈಲ್‌ನಲ್ಲಿ ವ್ಹೀಲಿಂಗ್ ಮಾಡೋರಿಗೆ ಎಚ್ಚರಿಕೆಯ ಸಂದೇಶವನ್ನು ಟ್ವೀಟ್ ಮೂಲಕ ರವಾನೆ ಮಾಡಿದ್ದಾರೆ.

ವ್ಹೀಲಿಂಗ್ ಅಂತಹ ದುಸ್ಸಾಹಸಕ್ಕೆ ಕೈ ಹಾಕಿ ಅದೆಷ್ಟೋ ಮಂದಿ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೊತೆ ಹಲವು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ವ್ಹೀಲಿಂಗ್‌ಗೆ ಕಡಿವಾಣ ಹಾಕಲೇಬೇಕು ಅಂತ ಪಣತೊಟ್ಟು ನಿಂತಿದ್ದಾರೆ.

"ಎತ್ತು ಎತ್ತು ಇನ್ನೂ ಮೇಲಕ್ಕೆ ಎತ್ತು.."

"ಎತ್ತು ಎತ್ತು ಇನ್ನೂ ಮೇಲಕ್ಕೆ ಎತ್ತು.. ದುರಹಂಕಾರದಿಂದ ಜನಗಳು ಓಡಾಡೋ ರಸ್ತೆ ಮಧ್ಯೆ ವ್ಹೀಲಿಂಗ್ ಮಾಡೋ ಕೆಟ್ಟ ನಿರ್ಧಾರ ನೀನು ಮಾಡು. ಕೋರ್ಟ್‌ನ ಮೆಟ್ಟಿಲ್ಮೇಲೆ/ಹಾಸ್ಪಿಟಲ್ ಬೆಡ್ ಮೇಲೆ ನಿನ್ನ ತೀರ್ಮಾನ ನಾನು ಮಾಡ್ತೇನೆ." ಹೀಗಂತ ಯಶವಂತಪುರ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಯಶವಂತಪುರ ಟ್ರಾಫಿಕ್ ಪೊಲೀಸರ ಕ್ರಿಯೇಟಿವಿಟಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವ್ಹೀಲಿಂಗ್ ಮಾಡೋರಿಕೆ ಎಚ್ಚರಿಕೆ ಕೊಟ್ಟು ಸುಮ್ಮನಾಗಬೇಡಿ. ಅವರನ್ನು ಹಿಡಿದು ಶಿಕ್ಷೆ ನೀಡಿ ಎಂದು ಸಲಹೆಗಳನ್ನೂ ನೀಡುತ್ತಿದ್ದಾರೆ.

ಸಾರ್ವಜನಿಕರ ರಿಯಾಕ್ಷನ್ ಏನು?

ಯಶವಂತರಪುರ ಟ್ರಾಫಿಕ್ ಪೊಲೀಸರ ಈ ಟ್ವೀಟ್‌ಗೆ ನೆಟ್ಟಿಗರು ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬರು "ದೈವ ತೀರ್ಮಾನ ಮಾಡುತ್ತೆ ಎಂದುಕೊಂಡು ನೀವು ಬಿಡಬೇಡಿ, ದೇವರ ಜೊತೆ ಇವರ ಭೇಟಿ ಮಾಡಿಸುವುದು ನಿಮ್ಮ ಕೆಲಸ ಸಾರ್." ಎಂದು ಕಮೆಂಟ್ ಮಾಡಿದ್ದಾರೆ.

ಹಾಗೇ ಇನ್ನೊಬ್ಬರು " ಸೀಜ್ ಮಾಡೋದು, ಸ್ಟ್ಯಾಪ್‌ಗೆ ಹಾಕಿ. ಯಾವತ್ತು ಹರಾಜು ಹಾಕಬೇಡಿ. ಅವರು ಮತ್ತೆ ಖರೀದಿ ಮಾಡುತ್ತಾರೆ. ಮತ್ತೆ ವ್ಹೀಲಿಂಗ್ ಮಾಡುತ್ತಾರೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಟ್ರಾಫಿಕ್ ಪೊಲೀಸರು ಎಚ್ಚರಿಕೆ ಜೊತೆಗೆ ಕ್ರಿಯೆಟಿವಿಟಿ ತೋರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುಯತ್ತಿದೆ.

More from Filmibeat

English summary
Yeshwanthpur Traffic Police warning for wheeling through Kantara Movie Dialogue, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X