ಉತ್ತರ ಕರ್ನಾಟಕದಲ್ಲಿ 'ಉಡಾಳ'ನದ್ದೇ ಟ್ರೆಂಡ್; ಖಡಕ್ ರೊಟ್ಟಿ ತಿಂದು ಸಿನಿಮಾ ನೋಡೋಣ ಎಂದ ಮಂದಿ

ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದ ಮೇಲೊಂದು ಅರೋಪವಿತ್ತು. ಉತ್ತರ ಕರ್ನಾಟಕ ಭಾಗದ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡೋದಿಲ್ಲ. ಬೆಂಗಳೂರು, ಮಂಡ್ಯ, ಮೈಸೂರಿನಿ ಹಿನ್ನೆಲೆಯನ್ನಿಟ್ಟುಕೊಂಡ ಸಿನಿಮಾ ಮಾಡಲಗುತ್ತಿದೆ. ಇಲ್ಲ ಮಂಗಳೂರು ಕಡೆಯ ಆಚಾರ-ವಿಚಾರಗಳನ್ನೇ ಸಿನಿಮಾಗಳಲ್ಲಿ ತೋರಿಸಲಾಗುತ್ತಿದೆ ಎಂದು ಟೀಕೆಗಳು ಕೇಳಿ ಬಂದಿದ್ದವು. ಹೀಗಾಗಿ ಈ ಹಿಂದೆ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ಈ ಪ್ರಯತ್ನ ದೊಡ್ಡ ಮಟ್ಟಕ್ಕೆ ಕೈ ಹಿಡಿದಿಲ್ಲ.

ಈಗ ಯೋಗರಾಜ್‌ ಭಟ್ ಹಾಗೂ ರವಿ ಶಾಮನೂರು ಇಬ್ಬರೂ ಸೇರಿ ತಮ್ಮ ಬ್ಯಾನರ್‌ನಲ್ಲಿ 'ಉಡಾಳ' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಮೋಲ್ ಪಾಟೀಲ್ ನಿರ್ದೇಶನದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಉತ್ತರ ಕರ್ನಾಟಕ ಭಾಗದ 'ಉಡಾಳ' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಉತ್ತರ ಕರ್ನಾಟಕದ ಮಂದಿ ಈ ಟೀಸರ್ ನೋಡಿ ಫುಲ್ ಖುಷಿಯಾಗಿದ್ದಾರೆ.

Yogaraj Bhat produced Pruthvi Shamanur acted Udaala movie teaser trending in Uttara Karnataka region

'ಉಡಾಳ' ಸಿನಿಮಾದ ಟೀಸರ್‌ ರಿಲೀಸ್ ಆದಲ್ಲಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಬಿಜಾಪುರದ ಹಿನ್ನೆಲೆಯ ಕಥೆಯಾಗಿದ್ದರಿಂದ ಸಿನಿಮಾದ ಬಹುತೇಕ ಚಿತ್ರೀಕರಣ ಅಲ್ಲೇ ನಡೆದಿದೆ. ಅಲ್ಲದೆ, ಬಿಜಾಪುರ ಅಪ್ಪಟ ಜವಾರಿ ಭಾಷೆಯನ್ನು ಇಲ್ಲಿ ಬಳಸಲಾಗಿದೆ. ಈಗಾಗಲೇ 'ಪದವಿಪೂರ್ವ' ಸಿನಿಮಾದ ಮೂಲಕ ಗಮನ ಸೆಳೆದಿರುವ ಪೃಥ್ವಿ ಶಾಮನೂರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ಈ ಸಿನಿಮಾದ ಟೀಸರ್ ನೋಡಿ ಉತ್ತರ ಕರ್ನಾಟಕದ ಮಂದಿ ಏನಂದ್ರು? ತಿಳಿಯುವುದಕ್ಕೆ ಮುಂದೆ ಓದಿ.

ಹೆಸರಿಗೆ ತಕ್ಕಂತೆ 'ಉಡಾಳ' ಸಿನಿಮಾದ ಟೀಸರ್ ಕೂಡ ಹಾಗೇ ಇದೆ. ಕನ್ನಡ ಚಿತ್ರರಂಗದ ಯುವ ನಟ ಪೃಥ್ವಿ ಶಾಮನೂರು ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೃಥ್ವಿ ಶಾಮನೂರ್‌ಗೆ ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸಿದ್ದಾರೆ. ಇವರೊಂದಿಗೆ ಬಲ ರಾಜ್ವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದರ್, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಸೇರಿದಂತೆ ಹಲವು ಮಂದಿ ಕಲಾವಿದರು ನಟಿಸಿದ್ದಾರೆ.

Yogaraj Bhat produced Pruthvi Shamanur acted Udaala movie teaser trending in Uttara Karnataka region

ಈ ಸಿನಿಮಾ ಉತ್ತರ ಕರ್ನಾಟಕ ಭಾಗ ಪಕ್ಕ ಕಮರ್ಷಿಯಲ್ ಸಿನಿಮಾ. ಲವ್, ಕಾಮಿಡಿ, ಆಕ್ಷನ್ ಸೇರಿದಂತೆ ಸಿನಿಮಾಗೆ ಬೇಕಿರೋ ಎಲ್ಲಾ ಕಮರ್ಷಿಯಲ್ ಎಲಿಮೆಂಟ್‌ಗಳು ಕೂಡ ಇವೆ. ಈ ಸಿನಿಮಾವನ್ನು ಯೋಗರಾಜ್‌ ಭಟ್ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಅಮೋಲ್ ಪಾಟೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಇವರು ಕೂಡ ಬಿಜಾಪುರ ಮೂಲದವರೇ ಆಗಿದ್ದರಿಂದ ಅಲ್ಲಿನ ಅಸಲಿ ಸೊಗಡನ್ನು ನೋಡಬಹುದು.

'ಉಡಾಳ' ಸಿನಿಮಾದ ಟೀಸರ್ ನೋಡಿ ಉತ್ತರ ಕರ್ನಾಟಕದ ಮಂದಿಯ ದಿಲ್ ಖುಷಿಯಾಗಿ ಹಾರಾಡುತ್ತಿದೆ. ಟೀಸರ್ ನೋಡಿ ಅವರದ್ದೇ ಶೈಲಿಯಲ್ಲಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಎಲ್ಲಾ ಉತ್ತರ ಕರ್ನಾಟಕದ ಮಂದಿಯನ್ನು ಒಂದೇ ಸ್ಕ್ರೀನ್‌ನಲ್ಲಿ ನೋಡುವುದಕ್ಕೆ ಖುಷಿಯಾಗುತ್ತಿದೆ." ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು "ಪಕ್ಕ ಉತ್ತರ ಕರ್ನಾಟಕದ ಜನ ಸೇರ್ಕೊಂಡು ಈ ಸಿನಿಮಾ ಮಾಡಿದ್ದಾರೆ. ಎಲ್ಲರೂ ಒಂದು ಸಲಿ ಟೀಸರ್ ನೋಡಿ" ಎಂದಿದ್ದಾರೆ. "ಟೀಸರ್ ಬಾಳ ಚಂದೈತಿ. ಆದರೆ ಕನ್ನಡ ಭಾಷೆ ಹೆಸರು ಹಾಳು ಮಾಡಬ್ಯಾಡ್ರಿ. ನನಗ್ ಗೊತ್ತಾದೆ. ಇದು ಉತ್ತರ ಕರ್ನಾಟಕ ಜವಾರಿ ಭಾಷೆ. ಯಾಕಂದ್ರೆ ನಾನು ಪಕ್ಕ ಉತ್ತರ ಕರ್ನಾಟಕ ಬಿಜಾಪುರ್ ಮಂದಿ ಪಾ.. ಖಡಕ್ ರೊಟ್ಟಿ ಒಣಗಿ ತಿಂದು ಸಿನಿಮಾ ನೋಡೋಣ" ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಈ ಸಿನಿಮಾಗಾಗಿ ಯೋಗರಾಜ್ ಭಟ್ ಬರೋಬ್ಬರಿ 5 ಹಾಡುಗಳನ್ನು ಬರೆದಿದ್ದಾರೆ. ಇದಕ್ಕೆ ಚೇತನ್ ಡ್ಯಾವಿ ಸಂಗೀತ ನೀಡಿದ್ದು, ಕೃಷ್ಣಂ ಪ್ರಣಯ ಸಖಿ ಸಿನಿಮಾದ "ದ್ವಾಪರ" ಹಾಡು ಹಾಡಿರುವ ಜಸ್ಕರ್ಣ್ ಸಿಂಗ್, ಉತ್ತರ ಕರ್ನಾಟಕದ ಖ್ಯಾತಿಯ ಮಾಳು ನಿಫ್ನಾಳ್, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರ್ ಮತ್ತು ಚೇತನ್ ಸೋಸ್ಕ ಹಾಡಿದ್ದಾರೆ. ಶಿವಶಂಕರ್ ನೂರಂಬಡ ಅವರ ಛಾಯಾಗ್ರಹಣವಿದೆ.

More from Filmibeat

English summary
Yogaraj Bhat produced Pruthvi Shamanur acted Udaala movie teaser trending in Uttara Karnataka region;
Read more about: yogaraj bhat teaser kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X