ಭುವನ್ ಪೊನ್ನಣ್ಣ ಸ್ಯಾಂಡಲ್‌ವುಡ್ ರೀ-ಎಂಟ್ರಿಗೆ ಸಾಥ್ ಕೊಟ್ಟ ಯೋಗರಾಜ್ ಭಟ್-ವಿ.ಹರಿಕೃಷ್ಣ
ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೂ ಮುನ್ನವೇ ಚಿತ್ರಡರಂಗದಲ್ಲಿ ಇದ್ದವರು. ಈಗಾಗಲೇ ಹಲವು ಸಿನಿಮಾಗಳಲ್ಲಿ ಇಬ್ಬರೂ ಕೆಲಸ ಮಾಡಿದ್ದಾರೆ. ಕೇವಲ ಸಿನಿಮಾ ಅಷ್ಟೇ ಅಲ್ಲ. ಉದ್ಯಮಿಯಾಗಳಿಗೂ ಗುರುತಿಸಿಕೊಂಡಿದ್ದಾರೆ. ಆಗಾಗ ಸಮಾಜಮುಖಿ ಕೆಲಸಗಳನ್ನು ಭಾಗಿಯಾಗಿರುವುದನ್ನು ನೋಡಿದ್ದೇವೆ. ಕನ್ನಡದ ಚಿತ್ರರಂಗದ ಈ ಕ್ಯೂಟ್ ಜೋಡಿ ಕೆಲವು ವರ್ಷಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ಮದುವೆ ಬಳಿಕ ಫ್ಯಾಮಿಲಿ ಕಡೆಗೆ ಹೆಚ್ಚು ಗಮನ ಹರಿಸಿದ್ದ ಭುವನ್ ಪೊನ್ನಣ್ಣ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಮಗು ಜನಿಸಿದ ಕೆಲವು ತಿಂಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುವುದಕ್ಕೆ ಮುಂದಾಗಿದ್ದಾರೆ. ಈ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಸಿದ್ಧರಾಗಿ ಬಂದಿದ್ದಾರೆ. ಇವರಿಗ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರು ಸಾಥ್ ಕೊಟ್ಟಿದ್ದಾರೆ. ಹೀಗಾಗಿ ಭುವನ್ ಪೊನ್ನಣ್ಣ ರೀ ಎಂಟ್ರಿ ಸಿಕ್ಕಾಪಟ್ಟೆ ಅದ್ಧೂರಿಯಾಗಿದೆ.

'ರಾಂಧವ' ಸಿನಿಮಾ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಹುಟ್ಟಿಸಿದ್ದರು. ಸಿನಿಮಾ ಟೈಟಲ್‌ನಿಂದ ಹಿಡಿದು ತುಣುಕುಗಳು ಕೂಡ ಅಷ್ಟೇ ಮಾಸ್ ಆಗಿದ್ದವು. ಈಗ ಕ್ಲಾಸ್ ಡೈರೆಕ್ಟರ್ ಜೊತೆ ಖಯ ಜೋಡಿಸಿದ್ದಾರೆ. ಸ್ಯಾಂಡಲ್‌ವುಡ್‌ನ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಮ್ಯೂಸಿಕ್ ಮಾಂತ್ರಿಕ ವಿ. ಹರಿಕೃಷ್ಣ ಟ್ಯೂನ್ ಹಾಕಿದ್ದಾರೆ.
ಯೋಗರಾಜ್ ಭಟ್, ವಿ. ಹರಿಕೃಷ್ಣ ಹಾಗೂ ಭುವನ್ ಪೊನ್ನಣ್ಣ ಮೂವರು ಒಟ್ಟಿಗೆ ಮಾಡುತ್ತಿರುವ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈಗಾಗಲೇ ಸಿನಿಮಾ ಟೈಟಲ್ ಕೂಡ ಫಿಕ್ಸ್ ಆಗಿದೆ. ಯೋಗರಾಜ್ ಭಟ್ ಹಾಗೂ ಭುವನ್ ಮೊದಲ ಕಾಂಬಿನೇಷನ್ ಸಿನಿಮಾಗೆ 'ಹಲೋ 123' ಎಂದು ಟೈಟಲ್ ಇಡಲಾಗಿದೆ. ಈ ಪ್ರಾಜೆಕ್ಟ್ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ವಿಶಿಷ್ಠವಾದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ.

'ಹಲೋ 123' ಸಿನಿಮಾವನ್ನು ವಿಜಯ್ ಟಾಟಾ ಮತ್ತು ಪತ್ನಿ ಅಮ್ರಿತಾ ವಿಜಯ್ ಟಾಟಾ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಅಧಿಕೃತ ಸ್ಕ್ರಿಪ್ಟ್ ಪೂಜೆ ಹಾಗೂ ಟೈಟಲ್ ಅನ್ನು ಅನಾವರಣ ಮಾಡಲಾಗಿದೆ. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪುತ್ರಿ ತ್ರಿದೇವಿಯವ್ರ ಅಮೃತ ಹಸ್ತದಿಂದ ಈ ಸಿನಿಮಾಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ದೇವರ ಪೂಜೆ ಮಾಡುವ ಮೂಲಕ ನಾಯಕ ಭುವನ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣರವರಿಗೆ ಅಡ್ವಾನ್ಸ್ ಕೊಟ್ಟು ನಿರ್ಮಾಪಕ ವಿಜಯ್ ತಾತಾ ಸಿನಿಮಾಗೆ ಶುಭ ಕೋರಿದ್ದಾರೆ.
ಭುವನ್- ಯೋಗರಾಜ್ ಭಟ್ ಕಾಂಬಿನೇಷನ್ ಸಿನಿಮಾ ಸ್ಕ್ರಿಪ್ಟ್ ಪೂಜೆ ಮಾಡಿದ ಮರುದಿನವೇ ಸಿನಿಮಾಗೆ ಚಾಲನೆ ನೀಡಿದ್ದಾರೆ. ಇನ್ನು ಉಳಿದಿರುವ ಕೆಲಸಗಳು ಇನ್ನೇನು ಆರಂಭ ಆಗಬೇಕಿದೆಯಷ್ಟೇ. ಸದ್ಯ ಯೋಗರಾಜ್ ಭಟ್ ಅಮೆರಿಕಾ ಪ್ರವಾಸಕ್ಕೆ ಹೊರಟಿದ್ದಾರೆ. ಅಲ್ಲಿಂದ ಹಿಂತಿರುಗಿದ ಬಳಿಕವೇ ಯೋಗರಾಜ್ ಭಟ್ ಈ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, ಭಟ್ಟರು ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಅನ್ನು ಆರಂಭ ಮಾಡಲಿದ್ದಾರೆ. ಹಾಗೇ ಈ ಸಿನಿಮಾವನ್ನು ಮುಂದಿನ ಮಾರ್ಚ್ ವೇಳೆಗೆ ರಿಲೀಸ್ ಮಾಡುವುದಕ್ಕೂ ಪ್ಲ್ಯಾನ್ ಮಾಡಿದ್ದಾರೆ.
ಯೋಗರಾಜ್ ಭಟ್ ಕೂಡ ಸಿನಿಮಾದ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಇವರ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳಿವೆ. ಹೊಸಬರಿಗಾಗಿ ನಿರ್ಮಾಣ ಮಾಡುವುದರ ಜೊತೆಗೆ ಭುವನ್ ಜೊತೆ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇತ್ತ ಯೋಗರಾಜ್ ಭಟ್ ಹಾಗೂ ಭುವನ್ ಕಾಂಬಿನೇಷನ್ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿರೋದು ವಿಶೇಷ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ವಿಶೇಷ ಆದರೂ ಆಗಬಹುದು.


Click it and Unblock the Notifications











