ಯೋಗಿ ದಿಗಂತ್‌ನ, ದಿಗಂತ್ ರಕ್ಷಿತ್ ಶೆಟ್ಟಿಯನ್ನ ಮದ್ವೆ ಆಗ್ತಿದ್ರಂತೆ; ಏನಿವರ ಮ್ಯಾಟರ್?

ಯಾವುದೇ ಸಿನಿಮಾ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ ಅಂದ್ರೆ, ಅದು ಮುಲಾಜಿಲ್ಲದೆ ಹಿಟ್ ಆದಂತೆಯೇ. ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಹಾಸ್ಯ ಪ್ರಿಯರಿಗೆ ಅಂತ ಸಿನಿಮಾಗಳು ಬಂದಿರಲಿಲ್ಲ. ಆದ್ರೀಗ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದಕ್ಕೆ ಬ್ಯಾಚುಲರ್‌ಗಳು ರೆಡಿಯಾಗಿದ್ದಾರೆ. ಅಂದರೆ, 'ಬ್ಯಾಚುಲರ್ ಪಾರ್ಟಿ' ಸಿನಿಮಾ ರಿಲೀಸ್ ಆಗುತ್ತಿದೆ.

ಜನವರಿ 26ಕ್ಕೆ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಸಖತ್ ಆಗಿರೋ ಟ್ರೈಲರ್ ರಿಲೀಸ್ ಮಾಡಲಾಗಿದೆ. ಅದನ್ನು ನೋಡಿದ್ಮೇಲೆ ಯಾರೆಲ್ಲ ಬ್ಯಾಚುಲರ್ ಲೈಫ್‌ ಎಂಜಾಯ್ ಮಾಡಿದವರು, ಮಾಡದೇ ಇದ್ದವರು, ಮಾಡುತ್ತಿರುವವರು ಎಲ್ಲರೂ ಈ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಸಿನಿಮಾ ಅಂದ್ಮೇಲೆ, ಸಹಜವಾಗಿಯೇ ನಿರೀಕ್ಷೆಯಿರುತ್ತೆ.

Yogi likes to marry Diganth, and Diganth wants to marry Raskhit Shetty Why do they say

ಇದರ ಜೊತೆಗೆ ಲೂಸ್ ಮಾದ ಯೋಗಿ, ದೂದ್ ಪೇಡಾ ದಿಗಂತ್ ಹಾಗೂ ಅಚ್ಯುತ್ ಕುಮಾರ್ ಕಾಂಬಿನೇಷನ್ ಅಂದ್ಮೇಲೆ ನಗದೆ ಇರೋದಕ್ಕೆ ಸಾಧ್ಯವೇ ಇಲ್ಲ. ಈ ಮೂವರೂ ಸೇರಿ ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯದ ಹೊಳೆಯನ್ನು ಹರಿಸುವ ಚಾಲೆಂಜ್ ತೆಗೆದುಕೊಂಡಿದ್ದಾರೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೋ ಅದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ.

ಆದರೆ, ಅದಕ್ಕೂ ಮುನ್ನ ಫಿಲ್ಮಿಬೀಟ್‌ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಯೋಗಿ ಹಾಗೂ ದಿಗಂತ್ ಇಬ್ಬರೂ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಯೋಗಿ ದಿಗಂತ್ ಅನ್ನ, ದಿಗಂತ್ ರಕ್ಷಿತ್ ಶೆಟ್ಟಿಯನ್ನ ಮದ್ವೆ ಆಗುತ್ತಿದ್ದೆ ಅಂತ ಹೇಳಿಕೊಂಡಿದ್ದಾರೆ. ಅದ್ಯಾಕೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಫಿಲ್ಮಿಬೀಟ್ ಸಂದರ್ಶನದಲ್ಲಿ ದಿಗಂತ್, ಯೋಗಿ ಮುಂದೆ ವಿಚಿತ್ರವಾದ ಸವಾಲನ್ನು ಮುಂದಿಡಲಾಗಿತ್ತು. ಈ ವ್ಯಕ್ತಿ ಹುಡುಗಿದಿದ್ರೆ ಖಂಡಿತಾ ಮದುವೆ ಆಗುತ್ತಿದ್ದೆ ಅನ್ನುವಂತಹ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಅದಕ್ಕೆ ಯೋಗಿ ಹಾಗೂ ದಿಗಂತ್ ಒಬ್ಬರು ವ್ಯಕ್ತಿಯ ಹೆಸರನ್ನು ಸೂಚಿಸಿದ್ದರು. ಅದನ್ನು ಕೇಳಿ ಇಬ್ಬರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Yogi likes to marry Diganth, and Diganth wants to marry Raskhit Shetty Why do they say

"ಆತರ ಅಂದರೆ, ನಾನು ದಿಗಂತ್ ಅನ್ನೇ ಮದ್ವೆ ಆಗುತ್ತಿದ್ದೆ" ಎಂದು ಲೂಸ್ ಮಾದ ಯೋಗಿ ಪ್ರತಿಕ್ರಿಯೆ ನೀಡಿದ್ದಾರೆ. ಅತ್ತ ದೂದ್ ಪೇಡಾ ದಿಗಂತ್ " ನಾನು ಬಹುಶ: ರಕ್ಷಿತ್ ಅನ್ನು ಮದುವೆ ಆಗುತ್ತಿದೆ. ಯಾಕಂದ್ರೆ, ಅವನು ಕೂತ್ರೂ ನಿಂತ್ರೂ ಮೂವಿ ಬಗ್ಗೆನೇ ಯೋಚನೆ ಮಾಡುತ್ತಾನೆ. ಹಾಗಾಗಿ ನನ್ನ ತಲೆ ತಿನ್ನುತ್ತಿರಲಿಲ್ಲ. ಹಾಗಾಗಿ ಅವನನ್ನು ಮದುವೆ ಆಗಿಬಿಡುತ್ತಿದ್ದೆ. ಯಾಕಂದ್ರೆ ಅವನ ಪಾಡಿಗೆ ಅವನು ಇರುತ್ತಾರೆ. ನೀನು ಮಾಡಿದ್ದ ಕಿತ್ತೋದ್ ಆಮ್ಲೆಟ್ ಬೇಕಾದರೂ ತಿನ್ನಿತ್ತೇನೆ ಅಂತಾನೆ." ಎಂದು ದಿಗಂತ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

'ಬ್ಯಾಚುಲರ್ ಪಾರ್ಟಿ' ಇಂತಹ ಹಾಸ್ಯದ ಸನ್ನಿವೇಶಗಳನ್ನು ಒಳಗೊಂಡಿರೋ ಸಿನಿಮಾ. ನಿರ್ದೇಶಕ ಅಭಿಜಿತ್ ಮಹೇಶ್ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾವಿದು. ಪತ್ನಿ ಜೊತೆ ದಿನಾ ಜಗಳ ಮಾಡುತ್ತಾ ಸಂತೋಷವನ್ನೇ ನೋಡಿರದ ಪಾತ್ರದಲ್ಲಿ ದಿಗಂತ್ ನಟಿಸಿದ್ರೆ, ಬ್ಯಾಂಕಾಕ್‌ನಲ್ಲಿ ಒಂದು ಮಗುವಿನ ತಾಯಿ ಜೊತೆ ಯೋಗಿಯ ಲವ್ ಟ್ರ್ಯಾಕ್ ಇದೆ. ಇನ್ನೂ ವ್ಹೀಲ್ ಚೇರ್‌ನಲ್ಲಿ ಕೂತೇ ಇರುವ ಅಚ್ಯುತ್ ಕುಮಾರ್. ಈ ಮೂವರ ಪಾತ್ರಗಳು ಸಿನಿಮಾದ ಹೈಲೈಟ್.

More from Filmibeat

English summary
Diganth, Yogi, Rakshit Shetty, Achyuth Kumar Bachelor Party Interview
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X