For Quick Alerts
  ALLOW NOTIFICATIONS  
  For Daily Alerts

  'ಕಂಬ್ಳಿಹುಳ' ಇಷ್ಟ ಆಗದಿದ್ರೆ, ಟಿಕೆಟ್‌ನ ಅರ್ಧದ ದರ ಹಿಂತಿರುಗಿಸುತ್ತೇನೆ- ಸಿಂಪಲ್ ಸುನಿ ಸವಾಲ್!

  |

  ಕನ್ನಡ ಸಿನಿಮಾಗಳ ಪರ್ವ ಮುಂದುವರೆದಿದೆ. 'ಲವ್‌ ಮಾಕ್ಟೇಲ್ 2', 'ಕೆಜಿಎಫ್ 2', 'ಜೇಮ್ಸ್', 'ವಿಕ್ರಾಂತ್ ರೋಣ', '777 ಚಾರ್ಲಿ, 'ಗಾಳಿಪಟ', 'ಕಾಂತಾರ' ಬಳಿಕ ಮತ್ತೊಂದು ಸಿನಿಮಾ ಸದ್ದು ಮಾಡುತ್ತಿದೆ. ಅದುವೇ 'ಕಂಬ್ಳಿಹುಳ'.

  'ಕಂಬ್ಳಿಹುಳ' ಸಿನಿಮಾ ನವೆಂಬರ್ 4ರಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾ ನೋಡಿದವರು ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವೇ ಶುರುವಾಗಿದೆ. ಕನ್ನಡದ ಸೆಲೆಬ್ರೆಟಿಗಳು 'ಕಂಬ್ಳಿಹುಳ'ದ ಬೆಂಬಲಕ್ಕೆ ನಿಂತಿದ್ದಾರೆ.

  ನಾಲ್ವರು ನಾಯಕಿಯರಿಗೆ 'ಚಮಕ್': ಸಿಂಪಲ್ ಸುನಿ 'ಗತವೈಭವ' ಹೇಗಿದೆ ನೋಡಿ?ನಾಲ್ವರು ನಾಯಕಿಯರಿಗೆ 'ಚಮಕ್': ಸಿಂಪಲ್ ಸುನಿ 'ಗತವೈಭವ' ಹೇಗಿದೆ ನೋಡಿ?

  'ಕಂಬ್ಳಿಹುಳ' ಬಹುತೇಕ ಹೊಸಬರೇ ಸೇರಿ ಮಾಡಿದ ಸಿನಿಮಾ. ಮಲೆನಾಡಿನ ಪ್ರೇಮಕಥೆಯನ್ನು ಯುವ ನಿರ್ದೇಶಕ ನವನ್ ಶ್ರೀನಿವಾಸ್ ತೆರೆಮೇಲೆ ತಂದಿದ್ದಾರೆ. ಈ ಸಿನಿಮಾ ನೋಡಿ ಸ್ಯಾಂಡಲ್‌ವುಡ್ ನಟ-ನಟಿಯರೂ ಕಳೆದು ಹೋಗಿದ್ದಾರೆ. ಅದರಲ್ಲೂ ನಿರ್ದೇಶಕ ಸಿಂಪಲ್ ಸುನಿ ಸಿನಿಮಾ ನೋಡಿ ಫಿದಾ ಆಗಿದ್ದು, ಪ್ರೇಕ್ಷಕರಿಗೆ ಹೊಸ ಆಫರ್ ಇಟ್ಟಿದ್ದಾರೆ. ಅದೂ ಕೇವಲ 3 ದಿನಗಳು ಮಾತ್ರ. ಈ ಬಗ್ಗೆ ಸುನಿ ಫಿಲ್ಮಿಬೀಟ್‌ ಜೊತೆ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.

  ಸಿನಿಮಾ ಹಿಡಿಸಿಲ್ಲ ಅಂದ್ರೆ ಹಣ ವಾಪಸ್

  ಸಿನಿಮಾ ಹಿಡಿಸಿಲ್ಲ ಅಂದ್ರೆ ಹಣ ವಾಪಸ್

  ಸ್ಯಾಂಡಲ್‌ವುಡ್‌ ನಿರ್ದೇಶಕ ಸಿಂಪಲ್ ಸುನಿ 'ಕಂಬ್ಳಿಹುಳ' ಸಿನಿಮಾ ವೀಕ್ಷಿಸಿದ ಬಳಿಕ ಪ್ರೇಕ್ಷಕರಿಗೆ ಒಂದೊಳ್ಳೆ ಆಫರ್ ಕೊಟ್ಟಿದ್ದಾರೆ. ಈ ಸಿನಿಮಾ ಸೆಕೆಂಡ್ ಹಾಫ್ ನೋಡಿ ಚಿತ್ರಮಂದಿರದಿಂದ ಹೊರಬರೋರಿಗೆ ಸಿನಿಮಾ ಇಷ್ಟ ಆಗಿಲ್ಲ ಅಂದ್ರೆ, ಟಿಕೆಟ್ ಬೆಲೆಯ ಅರ್ಧದಷ್ಟು ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಆಫರ್ ಇನ್ನು ಮೂರು ದಿನಗಳು ಮಾತ್ರ ಇರುತ್ತೆ. ಹಾಗಂತ ಈ ಆಫರ್ ಅನ್ನು ಕೇವಲ ತಮಾಷೆಯಲ್ಲ. ನಿಜಕ್ಕೂ ಈ ಮೂರು ದಿನಗಳಲ್ಲಿ ಸಿನಿಮಾ ನೋಡುವವರಿಗೆ ಇಷ್ಟ ಆಗಿಲ್ಲ ಟಿಕೆಟ್‌ನ ಅರ್ಧ ಬೆಲೆಯನ್ನು ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  ಇದು ತಮಾಷೆಗೆ ಹೇಳಿದ ಮಾತಲ್ಲ

  ಇದು ತಮಾಷೆಗೆ ಹೇಳಿದ ಮಾತಲ್ಲ

  "ಅವರಿಗೆ ಶೋಗಳಿಲ್ಲ. ಕೇವಲ ಒಂದು ಐದಾರು ಶೋಗಳಿವೆ. ಅದಕ್ಕೆ ಜನ ಬರಬೇಕು. ಸಿನಿಮಾ ನೋಡೋಕೆ ಬಂದೋರಿಗೆ ನಿರಾಸೆ ಆಗಲ್ಲ ಅನ್ನೋ ಭರವಸೆ ಇದೆ. ಆದರೂ, ಸಿನಿಮಾ ನೋಡಿ ಇಷ್ಟ ಆಗಿಲ್ಲ ಅನ್ನೋರಿಗೆ ಟಿಕೆಟ್‌ನ ಅರ್ಧದಷ್ಟು ಬೆಲೆಯನ್ನು ವಾಪಸ್ ಮಾಡುತ್ತೇನೆ ಎಂದು ಹೇಳಿದ್ದೇನೆ. ಇದನ್ನು ಸೀರಿಯಸ್ ಆಗಿಯೇ ಹೇಳಿದ್ದೇನೆ. ನನ್ನ ಪೋಸ್ಟ್ ನೋಡಿ ಯಾರೋ ಒಂದಿಷ್ಟು ಜನ ಬಂದರೆ ಅಂತ. ಸಿನಿಮಾ ನೋಡಿ ಆಚೆ ಬರೋರ ಕಣ್ಣಲ್ಲಿ ನೀರು ತುಂಬೇ ತುಂಬುತ್ತೆ. ಯಾರೂ ಸಿನಿಮಾ ಚೆನ್ನಾಗಿಲ್ಲ ಅಂತ ಹೇಳಲ್ಲ. ಆದರ ಮೇಲೂ ಇಷ್ಟ ಆಗಿಲ್ಲ ಅಂದ್ರೆ ಟಿಕೆಟ್ ಬೆಲೆ ಏನಿದೆ ಅದರಲ್ಲಿ ಶೇ.50ರಷ್ಟು ಹಣವನ್ನು ಹಿಂತಿರುಗಿಸುತ್ತೇನೆ." ಎಂದು ಸಿಂಪಲ್ ಸುನಿ ಹೇಳಿದ್ದಾರೆ.

  ಹೊಸಬರ ತಂಡಕ್ಕೆ ಎಲ್ಲಿದೆ ಸವಾಲು?

  ಹೊಸಬರ ತಂಡಕ್ಕೆ ಎಲ್ಲಿದೆ ಸವಾಲು?

  'ಕಂಬ್ಳಿಹುಳ' ಸಿನಿಮಾ ರಿಲೀಸ್‌ ಆಗಿರೋದು ಸೋಶಿಯಲ್ ಮೀಡಿಯಾದಿಂದ ಗೊತ್ತಾಗುತ್ತಿದೆ. ಅಲ್ಲದೆ, ಸಿನಿಮಾ ನೋಡಿದವರು ಇಷ್ಟ ಆಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಶುರು ಮಾಡಿದ್ದಾರೆ. ಅಲ್ಲಿಂದ 'ಕಂಬ್ಳಿಹುಳ' ಅನ್ನೋ ಸಿನಿಮಾವಿದೆ ಅನ್ನೋದು ಅರಿವಿಗೆ ಬಂದಿದೆ. ಇತ್ತ ಸಿಂಪಲ್ ಸುನಿ ಕೂಡ ಇದೇ ಕಾರಣ ಕೊಡುತ್ತಾರೆ. "ಟ್ರೈಲರ್, ಸಾಂಗ್ ರೀಚ್ ಆಗಬೇಕು. ಆರಂಭದಲ್ಲಿ ಆಗಿಲ್ಲ. ಪ್ರಮೋಷನ್‌ ಕೂಡ ಸರಿಯಾಗಿ ಮಾಡಿಲ್ಲ. ಅದೇ ಪ್ರಮುಖ ಕಾರಣ ಅಂತ ಅನಿಸುತ್ತೆ. ಆದ್ರೀಗ ಈಗ ಎತ್ತಿಕೊಳ್ಳಬೇಕು.ಶೋಗಳು ಹೆಚ್ಚು ಸಿಗಬೇಕು." ಅಂತಾರೆ.

  'ಕಂಬ್ಳಿಹುಳ' ಒಂದೊಳ್ಳೆ ಸಿನಿಮಾ

  'ಕಂಬ್ಳಿಹುಳ' ಒಂದೊಳ್ಳೆ ಸಿನಿಮಾ

  'ಕಂಬ್ಳಿಹುಳ' ಸಿನಿಮಾವನ್ನು ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಕಂಬ್ಳಿಹುಳ' ನೋಡಿದವರು ನಿರ್ದೇಶನ ಹಾಗೂ ನಟನೆ ಎರಡಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ನಿರ್ದೇಶಕ ಸಿಂಪಲ್ ಸುನಿಗೂ ಸಿನಿಮಾ ಇಷ್ಟ ಆಗಿದೆ. "ಸಿನಿಮಾ ತುಂಬಾ ಇಷ್ಟ ಆಯ್ತು. ಸೆಕೆಂಡ್ ಹಾಫ್ ತುಂಬಾನೇ ಚೆನ್ನಾಗಿದೆ. ಫಸ್ಟ್ ಹಾಫ್‌ ತುಂಬಾನೇ ಕನ್‌ಫ್ಯೂಸ್ ಆಯ್ತು. ಕ್ಯಾರೆಕ್ಟರ್ ಸರಿಯಾಗಿ ಓಪನ್ ಆಗಿರಲಿಲ್ಲ. ಆದರೆ, ಸೆಕೆಂಡ್‌ ಹಾಫ್‌ನಲ್ಲಿ ಇದಕ್ಕೆ ಕಾರಣ ಕೊಡುವ ಸ್ಟೈಲ್ ಚೆನ್ನಾಗಿದೆ. ಯಾರೋ ಒಬ್ಬರು ಆಟೋದಿಂದ ಬಿದ್ದಾಗ, ಯಾರೋ ನೋಡಿದ್ರು ಒಂದು ಕ್ಲೋಸ್ ಶಾಟ್ ಹಾಕ್ತಾರೆ. ಇದೆಲ್ಲಾ ಏನಕ್ಕೆ ಬೇಕು ಅಂತ ಅನಿಸಿತ್ತು. ಆದರೆ, ಅದಕ್ಕೆ ಕೊಟ್ಟ ಕಾರಣ ಅದ್ಭುತವಾಗಿತ್ತು. ಪ್ರತಿಯೊಂದು ಶಾಟ್‌ಗೂ ಬೆಲೆ ಕೊಟ್ಟಿದ್ದಾರೆ. ಇಡೀ ಸಿನಿಮಾ ನೋಡಿ ಹೊರಬಂದಾಗ ಒಂದು ಒಳ್ಳೆ ಸಿನಿಮಾ ನೋಡಿದೆ ಅನ್ನೋ ಸಮಾಧಾನವಿತ್ತು." ಎಂದು 'ಕಂಬ್ಳಿಹುಳ'ಗೆ ಮೆಚ್ಚುಗೆ ಸೂಚಿಸಿದ್ದಾರೆ.

  English summary
  You Didn't Like Kamblihula Movie I Will Return Half Price Of The Ticket Says Simple Suni, Know More.
  Tuesday, November 8, 2022, 14:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X