ಕನ್ನಡ ನಟರೊಂದಿಗೆ ಡಾ. ಬ್ರೋ ಸೆಲ್ಫಿ: "ಎಲ್ಲರನ್ನೂ ಒಟ್ಟಿಗೆ ನೋಡಿ ಸೈಕ್ ಆದೆ" ಎಂದ ಯೂಟ್ಯೂಬರ್

ಈ ಕನ್ನಡದ ಯೂಟ್ಯೂಬರ್‌ ಯಾರಿಗೇನು ಕಮ್ಮಿಯಿಲ್ಲ. ಕನ್ನಡಿಗರಿಗೆ ದೇಶ ವಿದೇಶವನ್ನು ತೋರಿಸೋ ಆ ಯೂಟ್ಯೂಬರ್ ಮತ್ಯಾರೂ ಅಲ್ಲ ಡಾ.ಬ್ರೋ. ಇವರ ನಿರೂಪಣೆ ಶೈಲಿಗೆ ಕನ್ನಡಿಗರೆಲ್ಲರೂ ಫಿದಾ ಆಗಿದ್ದಾರೆ. ಇವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿದ ಒಂದು ವಿಡಿಯೋ ಕ್ಷಣ ಮಾತ್ರದಲ್ಲಿ ಲಕ್ಷಗಟ್ಟಲೆ ವೀವ್ಸ್ ಗಿಟ್ಟಿಸಿಕೊಳ್ಳುತ್ತವೆ.

ನಮಸ್ಕಾರ ದೇವು.. ಅಂತ ವಿಡಿಯೋ ಶುರು ಮಾಡಿದರೆ ಮುಗಿದೇ ಹೋಯ್ತು. ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಪ್ರತಿಯೊಂದು ವಿಡಿಯೋ ಕೂಡ ಯೂಟ್ಯೂಬ್‌ನಲ್ಲಿ ಅದ್ಭುತವಾಗಿ ವೀವ್ಸ್ ಅನ್ನು ಗಿಟ್ಟಿಸಿಕೊಳ್ಳುತ್ತವೆ. ಇದೇ ಯೂಟ್ಯೂಬರ್ ಈಗ ಕನ್ನಡ ಚಿತ್ರರಂಗದ ನಟರನ್ನು ಅಚಾನಕ್ ಆಗಿ ಭೇಟಿ ಮಾಡಿದ್ದಾರೆ.

Youtuber Dr. Bro met Kannada stars Dhananjay, Loose Mada Yogi, and Darling Krishna in Dubai

ಕನ್ನಡದ ಸ್ಟಾರ್ ನಟರನ್ನು ಭೇಟಿ ಮಾಡಿದ ಖುಷಿಯಲ್ಲಿ ಡಾ. ಬ್ರೋ ತೇಲಾಡುತ್ತಿದ್ದಾರೆ. ಇದೇ ಖುಷಿಯನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಫೋಟೊಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳನ್ನು ಎಲ್ಲಿ ಭೇಟಿ ಮಾಡಿದ್ರು? ಈ ಫೋಟೊಗಳನ್ನು ನೋಡಿ ನೆಟ್ಟಿಗರು ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ

"ಎಲ್ಲರನ್ನೂ ಒಟ್ಟಾಗಿ ನೋಡಿ ಸೈಕ್ ಆದೆ"

ಡಾ.ಬ್ರೋಗೆ ಇನ್‌ಸ್ಟಾಗ್ರಾಂನಲ್ಲೇ ಸುಮಾರು 9 ಲಕ್ಷದ 20 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಇನ್ನು ಯೂಟ್ಯೂಬ್‌ನಲ್ಲಿ 1.69 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರ ಪ್ರತಿಯೊಂದು ವಿಡಿಯೋಗೆ ಲಕ್ಷಗಟ್ಟಲೆ ವೀವ್ಸ್ ಸಿಗುತ್ತೆ. ಇದೇ ಯೂಟ್ಯೂಬರ್ ಒಂದು ದಿನದ ಹಿಂದಷ್ಟೇ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳೊಂದಿಗೆ ತೆಗೆಸಿಕೊಂಡ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ ಸೇರಿದಂತೆ ಹಲವು ನಟರನ್ನು ಅಚಾನಕ್‌ ಆಗಿ ಭೇಟಿಯಾಗಿದ್ದಾರೆ. ಈ ಸಂಬಂಧ ಫೋಟೊವನ್ನು ಶೇರ್ ಮಾಡಿಕೊಂಡಿದ್ದು, "ನನ್ ತುಂಬ ಚಿಕ್ಕಂದಿನಿಂದ ಇವರೆಲ್ಲರನ್ನು ನೋಡ್ತಿದ್ದೆ. ಇಂದು ಅಚಾನಕ್ಕಾಗಿ ಎಲ್ಲರನ್ನೂ ಒಟ್ಟಾಗಿ ನೋಡಿ ಸೈಕ್ ಆದೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Youtuber Dr. Bro met Kannada stars Dhananjay, Loose Mada Yogi, and Darling Krishna in Dubai

ಡಾ.ಬ್ರೋ ಇವರನ್ನು ಭೇಟಿಯಾಗಿದ್ದು ಎಲ್ಲಿ?

ಯೂಟ್ಯೂಬರ್ ಡಾ.ಬ್ರೋ ಕನ್ನಡ ಸ್ಟಾರ್‌ಗಳನ್ನು ಭೇಟಿಯಾಗಿದ್ದೆಲ್ಲಿ? ಅನ್ನೋ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ, ಮೂಲಗಳ ಪ್ರಕಾರ, ದುಬೈನಲ್ಲಿ ಧನಂಜಯ್, ಸತೀಶ್, ಲೂಸ್ ಮಾದ ಯೋಗಿ, ವಸಿಷ್ಟ ಸೇರಿದಂತೆ ಹಲವು ಸೆಲೆಬ್ರೆಟಿಗಳನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಫೋಟೊ ನೋಡಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು "ಹಿಂದೆ ನಿಂತಿರೋರು ಕನ್ನಡ ಚಿತ್ರರಂಗದವ್ರು, ಮುಂದೆ ನಿಂತಿರೋದು ಚರಿತ್ರೆಯನ್ನು ಸೃಷ್ಟಿ ಮಾಡಿದವ್ರು" ಎಂದು ಕಮೆಂಟ್ ಮಾಡಿದ್ದಾರೆ.

ಧನಂಜಯ್, ಸತೀಶ್, ಲೂಸ್ ಮಾದ ಯೋಗಿ, ವಸಿಷ್ಟ, ಡಾರ್ಲಿಂಗ್ ಕೃಷ್ಣ ಎಲ್ಲವರೂ ಸದ್ಯ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ. ಡಾ. ರಾಜ್ ಮತ್ತೆ ಆರಂಭ ಆಗುತ್ತಿರೋ ಹಿನ್ನೆಲೆಯಲ್ಲಿ ದುಬೈನಲ್ಲಿ ಸೇರಿದ್ದಾರೆ. ಕನ್ನಡ ಚಿತ್ರರಂಗದ ಪ್ರಮುಖ ನಟರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಡಾ.ಬ್ರೋ ಅಚಾನಕ್ ಆಗಿ ಭೇಟಿಯಾಗಿದ್ದಾರೆ ಎನ್ನಲಾಗಿದೆ.

'ವೀಕೆಂಡ್ ವಿತ್ ರಮೇಶ್‌'ಗೆ ಕರೆತರಲು ಬೇಡಿಕೆ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕರ್ಕೊಂಡು ಬನ್ನಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ಚರ್ಚೆಯಾಗಿತ್ತು. ಆ ವೇಳೆ ವಾಹಿನಿ ಇನ್ನಷ್ಟು ಸಮಯ ಬೇಕು ಎಂದು ಪ್ರತಿಕ್ರಿಯೆ ನೀಡಿತ್ತು. ಹೀಗಾಗಿ ಕೆಲ ಕಾಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದೂ ಇದೆ.

ಆದರೆ, ಇದ್ಯಾವುದಕ್ಕೂ ಡಾ.ಬ್ರೋ ತಲೆಕೆಡಿಸಿಕೊಂಡಿರಲಿಲ್ಲ. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ವಿದೇಶದ ಪ್ರಮುಖ ಸ್ಥಳಗಳನ್ನು ತಮ್ಮ ವಿಭಿನ್ನ ಶೈಲಿಯ ಮೂಲಕ ಪ್ರೇಕ್ಷಕರಿಗೆ ತೋರಿಸುತ್ತಿದ್ದಾರೆ. ಅದನ್ನು ನೋಡಿ ಜನರು ಕೂಡ ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Youtuber Dr. Bro met Kannada stars Dhananjay, Loose Mada Yogi, and Darling Krishna in Dubai, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X