"ತಪ್ಪು ನನ್ನದೇ ಅಂತ ನಾನೇ ಒಪ್ಪಿಕೊಳ್ಳುತ್ತೇನೆ, ಧ್ರುವ ಸರ್ ದೊಡ್ಡವರು"; ಯೂಟ್ಯೂಬರ್ ಸುಧಾಕರ್ ಕ್ಷಮೆ!

ಧ್ರುವ ಸರ್ಜಾ ನಟಿಸಿದ 'ಮಾರ್ಟಿನ್' ಸಿನಿಮಾ ನೋಡಿ ಯೂಟ್ಯೂಬರ್ ಸುಧಾಕರ್ ಗೌಡ ನೆಗೆಟಿವ್ ಆಗಿ ವಿಮರ್ಶೆ ಮಾಡಿದ್ದರು. ಅದು ಧ್ರುವ ಫ್ಯಾನ್ಸ್‌ ನಿದ್ದೆ ಕೆಡಿಸಿತ್ತು. ವಿಮರ್ಶೆ ಮಾಡಿದ ಬಳಿಕ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರೂ, ಫ್ಯಾನ್ಸ್ ಮಾತ್ರ ಕಾಡುವುದನ್ನು ಬಿಟ್ಟಿರಲಿಲ್ಲ. ಈ ಬೆನ್ನಲ್ಲೇ ಸುಧಾಕರ್ ಗೌಡ ಕ್ಷಮೆ ಕೇಳಿ ವಿಡಿಯೋ ಮಾಡಿದ್ದರು.

ಇಷ್ಟರ ಹೊರತಾಗಿಯೂ ಯೂಟ್ಯೂಬರ್ ಸುಧಾಕರ್ ಗೌಡರನ್ನು ಕಾಡುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ ಸುಧಾಕರ್ ಮತ್ತೊಂದು ವಿಡಿಯೋ ಮಾಡಿ ಧ್ರುವ ಸರ್ಜಾ ಫ್ಯಾನ್ಸ್ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮತ್ತೊಂದು ವಿಡಿಯೋ ಮಾಡಿದ್ದರು. ಆ ಬೆನ್ನಲ್ಲೇ ಸುಧಾಕರ್ ವಿರುದ್ಧ ದೂರ ಕೂಡ ದಾಖಲಾಗಿತ್ತು. ಆ ವೇಳೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದ ಸುಧಾಕರ್ ಬಂಧನವಾಗಿಲ್ಲ ಎಂದಿದ್ದರು.

Youtuber Sudhakar Gowda apologies Dhruva Sarja and his fans for reviewing the movie

ಈಗ ಮತ್ತೊಂದು ವಿಡಿಯೋ ಮಾಡಿ ಅದರಲ್ಲಿ ಧ್ರುವ ಸರ್ಜಾ, ಅವರ ಅಭಿಮಾನಿಗಳು, ಚಿತ್ರರಂಗ ಸೇರಿದಂತೆ ಸಂಬಂಧ ಪಟ್ಟವರಿಗೆ ಕ್ಷಮೆಯನ್ನು ಕೇಳಿದ್ದಾರೆ. ಸುಧಾಕರ್ ಗೌಡ ವಿಡಿಯೋದಲ್ಲಿ ಹೇಳಿದ ವಿಷಯಗಳ ಸಾರಾಂಶದ ಝಲಕ್ ಇಲ್ಲಿದೆ.

"ಹೀಗಾಗುತ್ತೆ ಅಂತ ಗೊತ್ತಿರಲಿಲ್ಲ"

"ನಾನು ಗೊತ್ತಿದ್ದೋ, ಗೊತ್ತಿಲ್ಲದೆನೋ ಒಂದು ರಿವ್ಯೂ ಕೊಟ್ಟಿದ್ದೀನಿ. ನನಗೆ ಗೊತ್ತಿರಲಿಲ್ಲ ಆ ಮಟ್ಟಿಗೆ ಪರಿಣಾಮ ಬೀರುತ್ತೆ ಅಂತ. ಯಾರದ್ದೇ ಫ್ಯಾನ್ ಆಗಿ. ಯಾರದ್ದೇ ಹೇಟರ್ ಆಗಿ ಆ ವಿಮರ್ಶೆ ಮಾಡಿರಲಿಲ್ಲ. ಧ್ರುವ ಸರ್ ಕರ್ನಾಟಕದ ಒಂದು ಮಾಸ್ ಕಟ್‌ ಔಟ್. ಅವರಿಗೆ ಒಂದೊಳ್ಳೆ ಸಿನಿಮಾ ಕೊಟ್ಟಿಲ್ವಲ್ಲ ಅಂತಷ್ಟೇ ನನ್ನ ನೋವು ಇದ್ದಿದ್ದು. ಉದಯ್ ಮೆಹ್ತಾ ಸರ್ ಪ್ರಡ್ಯೂಸರ್. ಅಷ್ಟೊಂದು ದುಡ್ಡು ಹಾಕಿ ಸಿನಿಮಾ ಮಾಡಿದರೂ ಹಣ ಬಂದಿಲ್ಲ ಅನ್ನೋ ಕಾಳಜಿಯಲ್ಲಿ , ನೋವಿನಲ್ಲಿ ಆ ವಿಮರ್ಶೆ ಮಾಡಿದ್ದು." ಎಂದಿದ್ದಾರೆ.

"ಬಹದ್ದೂರ್ ಸುಧಾಕರ್ ಅಂತ ಇಟ್ಟುಕೊಂಡಿದ್ದೆ"

"ನಾವು ಯಾರಿಗೂ ನೋವು ಮಾಡಬೇಕು ಅಂತ ಆಗಲಿ, ಯಾರಿಗೋ ನೆಗೆಟಿವ್ ಮಾಡಬೇಕು ಅಂತಾಗಲಿ ವಿಮರ್ಶೆ ಮಾಡಿದವನಲ್ಲ. ಯಾಕಂದ್ರೆ ಇದೇ ಧ್ರುವ ಸರ್‌ದು ಐದು ವರ್ಷ ಕಾಲೇಜ್‌ನಲ್ಲಿ ಓದುವಾಗ ಬಹದ್ದೂರು ಸುಧಾಕರ್ ಅಂತ ಇಟ್ಟುಕೊಂಡಿದ್ದವನು ನಾನು. ಅಷ್ಟು ಸಿನಿಮಾ ಇಷ್ಟ ಆಗಿತ್ತು. ಅದ್ಧೂರಿಯದ್ದು ಅವಾಗೊಂದು ಟ್ರೆಂಡ್ ಇತ್ತು. ಡೈಲಾಗ್‌ ಬಂದು ಆಮೇಲೆ ಸಾಂಗ್ ಬರೋದು. ಸೋ ಆ ಪ್ರತಿ ಡೈಲಾಗ್ ನನಗೆ ನೆನಪಿತ್ತು. ಈಗಲೂ ನೆನಪಿದೆ." ಎಂದು ಹೇಳಿದ್ದಾರೆ.

"ನೋವಿನಿಂದ ವಿಡಿಯೋ ಮಾಡಿದ್ದು"

"ಆ ಕಟ್‌ಔಟ್‌ಗೆ ಆ ತರಹದ ಸಿನಿಮಾ ಬೀಳುತ್ತಿಲ್ಲ ಅನ್ನೋ ನೋವಿನಿಂದ ಆ ವಿಡಿಯೋ ಮಾಡಿದ್ದು ಅಷ್ಟೇ. ಬೇರೆ ಯಾವುದೇ ರೀತಿಯ ಕೆಟ್ಟ ಉದ್ದೇಶ ಇರಲಿಲ್ಲ. ಒಂದು ಗಂಟೆಯಲ್ಲಿಯೇ ನಾನು ಡಿಲೀಟ್ ಮಾಡಿದ್ದೆ. ಯಾರೋ ದೊಡ್ಡವರು ಹೇಳಿದ್ದರು. ಇದು ಮಾಡುವುದು ತಪ್ಪು ನೀನು ಒಬ್ಬ ಸಿನಿಮಾ ನಟ ಆಗಬೇಕಾಗಿರುವವನು ಎಂದು ಹೇಳಿದ್ದರು. ಆಗ ಕ್ಷಮೆ ಕೇಳಿದ್ದೆ." ಎಂದಿದ್ದಾರೆ.

"ಚರ್ಚೆ ಬೇಡ ತಪ್ಪು ನನ್ನದೆ"

"ಮೂರು ದಿನ ಆದರೂ ನನಗೆ ಕಾಲ್ ಬರುತ್ತಲೇ ಇತ್ತು. ಇದರಿಂದ ನಾನು ಡಿಸ್ಟರ್ಬ್ ಆಗಿ ಅದಕ್ಕೆ ಪ್ರತ್ಯುತ್ತರವಾಗಿ ನಾನು ಎರಡನೇ ವಿಡಿಯೋ ಮಾಡಿದ್ದು. ನನಗೆ ಕೆಟ್ಟ ಪದಗಳಿಂದ ಬೈದಿದ್ದು ತಡೆದುಕೊಳ್ಳುವುದಕ್ಕೆ ಆಗಿರಲಿಲ್ಲ. ಮೊದಲ ಬಾರಿಗೆ ನಾನು ಇದನ್ನೆಲ್ಲ ಎದುರಿಸುತ್ತಿದ್ದರಿಂದ ನನಗೆ ತೆಗೆದುಕೊಳ್ಳಲು ಆಗಿಲ್ಲ. ಅದಕ್ಕೆ ನನ್ನ ಕಡೆಯಿಂದ ತಪ್ಪು ಆಗಿ ಹೋಗಿದೆ. ಧ್ರುವ ಸರ್ಜಾ ಸರ್‌ಗೆ ಮತ್ತು ಅವರ ಫ್ಯಾನ್ಸ್‌ಗೆ ಹಾಗೇ ಸುಧಾಕರ್‌ ಮಾಡಿದ್ದು ತಪ್ಪು ಯಾರಿಗೆಲ್ಲ ಅನಿಸಿದೆಯೋ, ಕನ್ನಡ ಚಿತ್ರರಂಗ ಇರಬಹುದು, ಮಾಧ್ಯಮದವರು ಇರಬಹುದು, ಯಾರಿಗೆ ತಪ್ಪು ಅನಿಸಿದೆಯೋ ಅದರ ಬಗ್ಗೆ ಚರ್ಚೆನೇ ಬೇಡ. ತಪ್ಪು ನನ್ನದೇ ಅಂತ ನಾನೇ ಒಪ್ಪಿಕೊಳ್ಳುತ್ತೇನೆ. ಧ್ರುವ ಸರ್ ದೊಡ್ಡವರು. ನಾನು ಏನೂ ಅಲ್ಲ. ಅವರು ಸಮುದ್ರ ಆದರೆ, ಬಾವಿಯಲ್ಲಿರೋ ಕಪ್ಪೆ ಲೆಕ್ಕ ಸರಿನಾ? " ಎಂದು ಹೇಳಿದ್ದಾರೆ.

"ನಾನು ಮುಂದುವರೆಸುವುದಿಲ್ಲ"

"ನನ್ನ ಕಡೆಯಿಂದ ನಾನು ಇದನ್ನು ಮುಂದುವರೆಸುವುದಿಲ್ಲ. ನಿಮ್ಮ ಕಡೆಯಿಂದನೂ ಆಗದೇ ಇರಲಿ ಅಂತ ಮನವಿ ಮಾಡಿಕೊಳ್ಳುತ್ತೇನೆ. ಇದರ ಮೇಲೆ ನೀವು ಏನಾದರೂ ಮಾಡಿದರೆ ನಾನು ಪ್ರತಿಕ್ರಿಯೆ ನೀಡಲ್ಲ. ವಾರಕ್ಕೆ ಎರಡು ಮೂರು ಕಂಟೆಂಟ್ ಮಾಡುತ್ತಿದ್ದೆ. ಅದನ್ನು ಮಾಡುತ್ತೇನೆ." ಎಂದು ಹೇಳಿದ್ದಾರೆ.

More from Filmibeat

English summary
Youtuber Sudhakar Gowda apologies Dhruva Sarja and his fans for reviewing the movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X