ಹೊಸಪೇಟೆಯ ಅಪ್ಪು ಪುತ್ಥಳಿ ಮುಂದೆ ಯುವರಾಜ್‌ಕುಮಾರ್, ಅನುಶ್ರೀ: ಯುವರತ್ನನಿಗೆ ನಮನ!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡಿಗರು ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ. ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಮಾಡಿದ ಕಲಾಸೇವೆ ಒಂದೆಡೆಯಾದರೆ, ಅವರ ಸಮಾಜಮುಖಿ ಕೆಲಸಗಳು ಅದೆಷ್ಟೋ ಯುವಕರ ಪ್ರೇರಣೆಗೆ ಕಾರಣವಾಗಿದೆ.
ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅವರನ್ನು ಯುವರಾಜ್‌ಕುಮಾರ್‌ರಲ್ಲಿ ಕಾಣುತ್ತಿದ್ದಾರೆ. ಇತ್ತ ಅಣ್ಣಾವ್ರ ಮೊಮ್ಮಗ ಕೂಡ ಅಪ್ಪು ಅಭಿಮಾನಿಗಳನ್ನು ತನ್ನ ಅಭಿಮಾನಿಗಳು ಅಂತಲೇ ನೋಡುತ್ತಿದ್ದಾರೆ. ಯುವ ರಾಜ್‌ಕುಮಾರ್ ಹೋದಲ್ಲೆಲ್ಲಾ ಪವರ್‌ಸ್ಟಾರ್ ಅಭಿಮಾನಿಗಳು ಅವರೊಂದಿಗೆ ಮಾತಾಡಲು ತವಕಿಸುತ್ತಿದ್ದಾರೆ.
ಇತ್ತೀಚೆಗೆ ಯುವರಾಜ್‌ಕುಮಾರ್ ಹೊಸಪೇಟೆಗೆ ಭೇಟಿ ನೀಡಿದ್ದರು. ಈ ವೇಳೆ ಅಪ್ಪು ಪುತ್ಥಳಿ ಮುಂದೆ ನಿಂತು ಗೌರವ ಸಲ್ಲಿಸಿ ಬಂದಿದ್ದಾರೆ. ಇದೇ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಅಪ್ಪು ಪುತ್ಥಳಿಗೆ ಹೂವಿನ ಹಾರ
ಅಪ್ಪು ಅಗಲಿದ ದಿನದಿಂದ ಯುವ ರಾಜ್‌ಕುಮಾರ್ ಎಲ್ಲಾ ಕಾರ್ಯಕ್ಕೂ ಮುಂದೆ ನಿಂತಿದ್ದಾರೆ. ಪವರ್‌ಸ್ಟಾರ್ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ಯುವರಾಜ್‌ಕುಮಾರ್ ಹಾಗೂ ಆಪ್ತರು ಹೊಸಪೇಟೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದರು. ಈ ವೇಳೆ ತಡರಾತ್ರಿ ಅಪ್ಪು ಪುತ್ಥಳಿ ಇರುವ ಜಾಗಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಹೂವಿನ ಹಾರ ಹಾಕಿ ನಮಿಸಿ ಬಂದಿದ್ದಾರೆ.

ಜೂ. ಅಪ್ಪು ಜೊತೆ ಅನುಶ್ರೀ
ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ಪುತ್ಥಳಿ ಬಳಿ ಯುವರಾಜ್‌ಕುಮಾರ್ ಜೊತೆಯಲ್ಲಿ ಕನ್ನಡದ ನಿರೂಪಕಿ ಅನುಶ್ರೀ ಕೂಡ ಕಾಣಿಸಿಕೊಂಡಿದ್ದಾರೆ. ಪುತ್ಥಳಿ ಸಮೀಪ ಯುವ ಹಾಗೂ ಅನುಶ್ರೀ ಆಪ್ತರೊಂದಿಗೆ ಕೆಲ ಕಾಲ ಇದ್ದು, ಗೌರವ ಸಲ್ಲಿಸಿ ಹಿಂತಿರುಗಿದ್ದಾರೆ.

ಅಪ್ಪುಗೆ ಹೊಸಪೇಟೆ ಅಂದ್ರೆ ಇಷ್ಟ!
ಪುನೀತ್ ರಾಜ್‌ಕುಮಾರ್‌ಗೆ ಹೊಸಪೇಟೆ ಅಂದರೆ ಬಲು ಪ್ರೀತಿ. ಅವರ ಸಾಕಷ್ಟು ಸಿನಿಮಾಗಳು ಹೊಸಪೇಟೆಯಲ್ಲಿ ಉತ್ತಮ ಪ್ರದರ್ಶನ ಕಂಡಿವೆ. ಅಲ್ಲದೆ ಬಿಡುವು ಸಿಕ್ಕಾಗಲೆಲ್ಲಾ ಪುನೀತ್ ರಾಜ್‌ಕುಮಾರ್ ಹೊಸಪೇಟೆಗೆ ಭೇಟಿ ನೀಡುತ್ತಿದ್ದರು. ತಮ್ಮದೇ ಸಿನಿಮಾ ಕಾರ್ಯಕ್ರಮವೊಂದರ ವೇಳೆ ಅಪ್ಪು ಹೊಸಪೇಟೆ ಜನರ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. " ನನಗೆ ಹೊಸಪೇಟೆ ಅಂದ್ರೆ ಇಷ್ಟ. ನನಗೆ ಹೊಸಪೇಟೆ ಜನ ಅಂದರೆ ಇಷ್ಟ. ಯಾರೇ ಬಿಟ್ಟರೂ ಹೊಸ ಪೇಟೆ ಜನ ಅಂತೂ ನಮ್ಮನ್ನು ಬಿಡುವುದಿಲ್ಲ." ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದರು.
Recommended Video

ಯುವ ಸಿನಿಮಾ ಶೀಘ್ರದಲ್ಲೇ ಆರಂಭ
ಅಪ್ಪು ಅಗಲಿಕೆ ಬಳಿಕ ಅಭಿಮಾನಿಗಳ ಪಾಲಿಗೆ ಯುವರಾಜ್‌ಕುಮಾರ್ ಜೂ. ಅಪ್ಪು. ಹೀಗಾಗಿ ಪುನೀತ್ ಸಿನಿಮಾ ನಿರ್ದೇಶಿಸಿದ ಡೈರೆಕ್ಟರ್‌ಗಳಿಗೆ ಸಿನಿಮಾ ಮಾಡುವಂತೆ ಒತ್ತಾಯ ಮಾಡಿದ್ದರು. ಇವರ ಒತ್ತಡಕ್ಕೆ ಮಣಿದ ಸಂತೋಷ್ ಆನಂದ್‌ರಾಮ್ ಕಥೆಯನ್ನು ಸಿದ್ಧಪಡಿಸಿದ್ದು, ಯುವ ರಾಜ್‌ಕುಮಾರ್‌ರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಲಿದ್ದಾರೆ. ಹೊಂಬಾಳೆ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.


Click it and Unblock the Notifications











