Yuva Rajkumar Birthday: ಯುವ ಆಕ್ಷನ್ ಕಂಡು "ಈತ AK 47 ಅಲ್ಲ.. ಕ್ಷಿಪಣಿ" ಎಂದ ರವಿಶಂಕರ್!

ದೊಡ್ಮನೆಯ ಮತ್ತೊಂದು ಕುಡಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅಭಿಮಾನಿಗಳ ಆಶಾಕಿರಣವಾಗಿ ಚಿತ್ರರಂಗಕ್ಕೆ ಧುಮುಕುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಕೂಡ ಯುವ ರಾಜ್‌ಕುಮಾರ್‌ ಅಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ.

ಅಣ್ಣಾವ್ರ ಕುಟುಂಬದ ಯೂತ್ ಸ್ಟಾರ್ ಯುವ ರಾಜ್‌ಕುಮಾರ್ ಇಂದು (ಏಪ್ರಿಲ್ 23) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಯುವ ಅಭಿಮಾನಿಗಳು ಅಪ್‌ ಕಮಿಂಗ್‌ ಸ್ಟಾರ್‌ಗೆ ಶುಭಾಶಯವನ್ನು ಹಾರೈಸುತ್ತಿದ್ದಾರೆ.

Yuva Rajkumar Birthday: Ravishankar Says he is not Ak 47 but A missile

ಯುವ ರಾಜ್‌ಕುಮಾರ್ ಹುಟ್ಟುಹಬ್ಬದ ಸಲುವಾಗಿ ಈಗಾಗಲೇ ಅಭಿಮಾನಿಗಳು ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೇಕ್ ಕಟ್ ಮಾಡುವುದರಿಂದ ಹಿಡಿದು ಸಮಾಜಮುಖಿ ಕೆಲಸಗಳನ್ನು ಹುಟ್ಟುಹಬ್ಬದ ಪ್ರಯುಕ್ತ ಮಾಡಲಾಗುತ್ತಿದೆ.

ಯುವ 31ನೇ ಹುಟ್ಟುಹಬ್ಬ

ರಾಘವೇಂದ್ರ ರಾಜ್‌ಕುಮಾರ್ ಎರಡನೇ ಪುತ್ರ ಯುವ ರಾಜ್‌ಕುಮಾರ್ ಇಂದು (ಏಪ್ರಿಲ್ 23) 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಯುವ ಹಾಗೂ ಅಪ್ಪು ಅಭಿಮಾನಿಗಳ ಸಂಭ್ರಮದ ಮೂಡಿನಲ್ಲಿದ್ದಾರೆ. ಹೀಗಾಗಿ ಯುವ ಮನೆಯ ಬಳಿ ತೆರಳಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ಇಂದು (ಏಪ್ರಿಲ್ 23) ಯುವ ರಾಜ್‌ಕುಮಾರ್ ಮನೆಯಲ್ಲಿ ಅಭಿಮಾನಿಗಳು 31 ಕೆಜಿಯ ಕೇಕ್ ಕಟ್ ಮಾಡಿ ಸಂಭ್ರಮಿಸಲಿದ್ದಾರೆ. ಅಲ್ಲದೆ, ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ, ಜೊತೆ ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಸಸಿಯನ್ನು ವಿತರಣೆ ಮಾಡಲಿದ್ದಾರೆ. ಈ ಮೂಲಕ ಯುವ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಯುವ "AK 47 ಅಲ್ಲಾ. ಕ್ಷಿಪಣಿ"

ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ ಗ್ರ್ಯಾಂಡ್ ಎಂಟ್ರಿ ಆಗಿದೆ. ಅಲ್ಲದೇ ಆಕ್ಷನ್ ಸೀಕ್ವೆನ್ಸ್ ಮೂಲಕವೇ ಶೂಟಿಂಗ್ ಕೂಡ ಆರಂಭ ಆಗಿದೆ. ಇದೇ ವೇಳೆ ನಟ ರವಿಶಂಕರ್ ಗೌಡ 'ಯುವ' ಸೆಟ್ಟಿಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಯುವ ರಾಜ್‌ಕುಮಾರ್ ಆಕ್ಷನ್ ನೋಡಿ ಬೆರಗಾಗಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಯುವ ಬಗ್ಗೆ ಪೋಸ್ಟ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

"ಶೂಟಿಂಗ್‌ ಸೆಟ್‌ಗೆ ಹೋಗಿದ್ದೆ. ಫೈಟಿಂಗ್ ಸೀಕ್ವೆನ್ಸ್ ನೋಡ್ದೆ. ನಿರೀಕ್ಷೆ, ನಂಬಿಕೆ ಸುಳ್ಳಾಗಲಿಲ್ಲ. ಉತ್ತರಾಧಿಕಾರಿಯ ಪಟ್ಟಾಭಿಷೇಕಕ್ಕೆ ಅಣಿ ಮಾಡಿಕೊಳ್ಳಿ. ನೀವು ಅಂದುಕೊಂಡಿರೊ ಹಾಗೆ ಇದು AK 47 ಅಲ್ಲಾ. ಕ್ಷಿಪಣಿ.. ಜನುಮ ದಿನದ ಶುಭಾಶಯಗಳು ಪ್ರೀತಿಯ ಯುವ ರಾಜ" ಎಂದು ರವಿಶಂಕರ್ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.


'ಯುವ' ಮೇಲೆ ಎಲ್ಲರ ಕಣ್ಣು

ಯುವ ರಾಜ್‌ಕುಮಾರ್ ಗ್ರ್ಯಾಂಡ್ ಎಂಟ್ರಿ ಹೇಗಿರುತ್ತೆ? ಅನ್ನೋ ಕುತೂಹಲ ಅಭಿಮಾನಿಗಳಷ್ಟೇ ಅಲ್ಲ. ಇಡೀ ಕನ್ನಡ ಚಿತ್ರರಂಗಕ್ಕೆ ಇದೆ. ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಅಂತಲೇ ನಂಬಿರೋ ಅಭಿಮಾನಿಗಳು ಕೂಡ ಕಾತುರದಿಂದ 'ಯುವ' ಸಿನಿಮಾವನ್ನ ಎದುರು ನೋಡುತ್ತಿದ್ದಾರೆ.

ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ಗೆ 'ಯುವ' ಅನ್ನೋ ಟೈಟಲ್ ಇಟ್ಟಾಗಿದೆ. ಇದೊಂದು ಪಕ್ಕಾ ಆಕ್ಷನ್ ಕಮ್ ಫ್ಯಾಮಿಲಿ ಸಿನಿಮಾ. ಪುನೀತ್ ರಾಜ್‌ಕುಮಾರ್ ಕೂಡ ಹೀರೊ ಆದ ಮೊದಲ ಸಿನಿಮಾ ಕೂಡ ಇದೇ ಜಾನರ್. ಹೀಗಾಗಿ ಅಪ್ಪು ಹಾದಿಯೇಲ್ಲೇ ಸಾಗುತ್ತಿರುವ 'ಯುವ' ರಾಜ್‌ಕುಮಾರ್ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳಂತೂ ತುದಿಗಾಲಲ್ಲಿ ನಿಂತಿದ್ದಾರೆ.

More from Filmibeat

English summary
Yuva Rajkumar Birthday: Ravishankar Says he is not Ak 47 but A missile, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X