ದೊಡ್ಮನೆ 'ಯುವರಾಜ'ನಿಗೆ ಪಟ್ಟಾಭಿಷೇಕ ಫಿಕ್ಸ್: ಜೂ.ಪವರ್‌ಸ್ಟಾರ್ ಎಂಟ್ರಿಗೆ ಕ್ಷಣಗಣನೆ!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬಳಿಕ ಯುವರಾಜ್‌ಕುಮಾರ್‌ರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬರೋದಕ್ಕೆ ಸಕಲ ಸಿದ್ಧತೆಗಳನ್ನು ನಡೆಯುತ್ತಲೇ ಇತ್ತು. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅಪ್ಪು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಯುವಗಾಗಿ ಸಿನಿಮಾ ಮಾಡುತ್ತಿದ್ದಾರೆ. ಇಷ್ಟು ದಿನ ಸಸ್ಪೆನ್ಸ್ ಆಗಿಯೇ ಇದ್ದ ಯುವರಾಜ್‌ಕುಮಾರ್ ಮೊದಲ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ದೊಡ್ಮನೆ 'ಯುವರಾಜ'ನ ಗ್ರ್ಯಾಂಡ್ ಪಟ್ಟಾಭಿಷೇಕಕ್ಕೆ ಸಿದ್ಧತೆಗಳು ಜೊರಾಗಿಯೇ ನಡೆಯುತ್ತಿವೆ. ಈ ವಿಶೇಷ ಕಾರ್ಯಕ್ರಮದ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಅಣ್ಣಾವ್ರ ಮೊಮ್ಮಗನ ಚೊಚ್ಚಲ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಆಗುತ್ತಿದೆ. ನಾಳೆ (ಮಾರ್ಚ್ 03)ರಂದು ಅದ್ಧೂರಿಯಾಗಿ ಅಪ್ಪು ಅಭಿಮಾನಿಗಳ ಸಮ್ಮುಖದಲ್ಲಿ ಟೈಟಲ್ ಹಾಗೂ ಟೀಸರ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಬೆಂಗಳೂರಿನ ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಬಳಗ ಸಮಸ್ತ ರಾಜವಂಶದ ಅಭಿಮಾನಿಗಳಿಗೆ ಸ್ವಾಗತಿಸಿದೆ. ದಿಢೀರನೇ ಯಾವುದೇ ಸುಳಿವು ಇಲ್ಲದೆ ಯುವರಾಜ್‌ಕುಮಾರ್ ಮೊದಲ ಸಿನಿಮಾದ ಟೈಟಲ್ ಹಾಗೂ ಟೀಸರ್ ಅನೌನ್ಸ್ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Yuva Rajkumar Debut Movie With Santhosh Ananddram Title And Teaser Launch Siddalingeshwara Theater

ಬೆಂಗಳೂರಿನ ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ನಾಳೆ ಸಂಜೆ (ಮಾರ್ಚ್ 03) 6.30ಕ್ಕೆ ಯುವ ಮೊದಲ ಸಿನಿಮಾದ ಟೈಟಲ್ ಲಾಂಚ್ ಆಗಲಿದೆ. ಇದರೊಂದಿಗೆ ಟೀಸರ್ ರಿಲೀಸ್ ಮಾಡುವುದಕ್ಕೂ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಸಂತೋಷ್ ಆನಂದ್‌ರಾಮ್ ದೊಡ್ಮನೆಯ ಮತ್ತೊಂದು ಕುಡಿಯನ್ನು ಹೇಗೆ ಪರಿಚಯ ಮಾಡಿಕೊಡಬಹುದು? ಮೊದಲ ಸಿನಿಮಾದ ಟೈಟಲ್ ಏನಿರಬಹುದು? ಟೀಸರ್ ಹೇಗಿರುತ್ತೆ? ಅನ್ನೋದನ್ನು ತಿಳಿಯೋಕೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸೇರಿದಂತೆ, ರಾಜವಂಶದ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾಗಿರೋ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ ಮೊದಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ಚಿತ್ರರಂಗಕ್ಕೆ ಯುವರಾಜ್‌ಕುಮಾರ್ ಎಂಟ್ರಿ ಗ್ರ್ಯಾಂಡ್ ಆಗಿಯೇ ಇರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಇತ್ತ ಅಪ್ಪು ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಜೂ. ಪವರ್‌ಸ್ಟಾರ್ ಪಟ್ಟ ಕೊಟ್ಟು ವೆಲ್‌ಕಮ್ ಮಾಡುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ನಾಳೆ (ಮಾರ್ಚ್ 3) ಅಪ್ಪು ಫ್ಯಾನ್ಸ್ ಹಾಗೂ ರಾಜವಂಶದ ಅಭಿಮಾನಿಗಳು ಥಿಯೇಟರ್ ಮುಂದೆ ಹಬ್ಬ ಆಚರಿಸೋದು ಗ್ಯಾರಂಟಿ.

ಯುವರಾಜ್‌ಕುಮಾರ್ ಈ ಹಿಂದೆನೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿತ್ತು. 'ಯುವ ರಣಧೀರ ಕಂಠೀರವ' ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಅದಕ್ಕೊಂದು ಟೀಸರ್ ಕೂಡ ಸಿದ್ಧವಾಗಿತ್ತು. ಆದರೆ, ಅದ್ಯಾಕೋ ಆ ಸಿನಿಮಾ ಅಂದು ಸೆಟ್ಟೇರಲಿಲ್ಲ. ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಯುವರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲೇಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದು ಕೂತಿದ್ದರು. ಸಂತೋಷ್‌ ಆನಂದ್‌ರಾಮ್‌ಗೆ ನಿರ್ದೇಶನ ಮಾಡಬೇಕು ಅಂತ ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಯುವಗೆ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳುವುದಕ್ಕೆ ಸಜ್ಜಾಗಿದ್ದಾರೆ.

Yuva Rajkumar Debut Movie With Santhosh Ananddram Title And Teaser Launch Siddalingeshwara Theater

ಮಾರ್ಚ್ 17ಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಈ ಸಂಭ್ರಮಕ್ಕೆ ಇನ್ನು 15 ದಿನಗಳು ಬಾಕಿ ಇರುವಾಗಲೇ ಯುವರಾಜ್‌ಕುಮಾರ್ ಸಿನಿಮಾದ ಪ್ರಚಾರ ಆರಂಭ ಆಗಿದೆ. ಸದ್ಯಕ್ಕೆ ಟೈಟಲ್ ಟೀಸರ್ ರಿಲೀಸ್ ಮಾಡುತ್ತಿದ್ದು, ಅಪ್ಪು ಬರ್ತ್‌ಡೇಗೆ ಸಿನಿಮಾ ಸೆಟ್ಟೇರಿಸುವ ಪ್ಲ್ಯಾನ್ ಇದೆ ಎಂದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಏನೇ ಇದ್ರೂ, ಎಲ್ಲರ ಕಣ್ಣು ನಾಳೆ (ಮಾರ್ಚ್ 3) ನಡೆಯುತ್ತಿರುವ ಟೈಟಲ್ ಟೀಸರ್ ಲಾಂಚ್ ಕಾರ್ಯಕ್ರಮದ ಮೇಲಿದೆ.

More from Filmibeat

English summary
Yuva Rajkumar Debut Movie With Santhosh Ananddram Title And Teaser Launch At Siddalingeshwara Theater, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X