Yuva Day 4 Box Office:ವಾರದ ಆರಂಭದಲ್ಲಿ 'ಯುವ' ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ?

ಸ್ಯಾಂಡಲ್‌ವುಡ್‌ಗೆ ದೊಡ್ಮನೆ ಕುಡಿಯ ಗ್ರ್ಯಾಂಡ್ ಎಂಟ್ರಿ ಆಗಿದೆ. ಯುವ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಅದ್ಧೂರಿಯಾಗಿ ಹೆಜ್ಜೆ ಇಟ್ಟಿದ್ದೇನೋ ಆಗಿದೆ. ಆದರೆ, ಮೊದಲ ವಾರ ಯುವ ನಿರೀಕ್ಷೆ ಮಾಡಿದಷ್ಟು ಓಪನಿಂಗ್ ಸಿಕ್ಕಿರಲಿಲ್ಲ. ಹೀಗಾಗಿ ಎರಡನೇ ವಾರದ ಆರಂಭದ ದಿನ ಅಂದರೆ, ನಾಲ್ಕನೇ ದಿನ ಕಲೆಕ್ಷನ್‌ನಲ್ಲಿ ಮೇಲೆ ಎಲ್ಲರ ಕಣ್ಣಿತ್ತು.

'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ', 'ರಾಜಕುಮಾರ' ಅಂತಹ ಎರಡು ಮೆಗಾ ಸಿನಿಮಾಗಳನ್ನು ಕೊಟ್ಟಿರೋ ಸಂತೋಷ್ ಆನಂದ್‌ರಾಮ್. 'ಕೆಜಿಎಫ್' ಸೀರಿಸ್, 'ಕಾಂತಾರ'ದಂತಹ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಯುವ ರಾಜ್‌ಕುಮಾರ್‌ಗೆ ಬೆನ್ನೆಲುಬಾಗಿ ನಿಂತಿತ್ತು.'

Yuva Rajkumar debut movie Yuva day 4 Box office collection report

ಮೊದಲ ಮೂರು ದಿನ ಸಿನಿಮಾದ ಗಳಿಕೆ ಅದ್ಭುತವಾಗಿರುತ್ತೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ನಿರೀಕ್ಷಿಸಿದ ಮಟ್ಟಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಆಗಿಲ್ಲ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗ ಎರಡನೇ ವಾರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಇವರಿಗೆ ಸಿಕ್ಕ ಬಾಕ್ಸಾಫೀಸ್ ರಿಪೋರ್ಟ್ ಹೀಗಿದೆ.

ನಾಲ್ಕನೇ ದಿನ ನಿರ್ಣಾಯಕ

ಹೊಸಬರ ಸಿನಿಮಾವಿರಲಿ, ಸೂಪರ್‌ಸ್ಟಾರ್‌ಗಳ ಸಿನಿಮಾವೇ ಇರಲಿ. ಮೊದಲ ಮೂರು ದಿನ ಕಲೆಕ್ಷನ್ ಚೆನ್ನಾಗಿ ಆಗುತ್ತೆ. ಅದೇ ನಾಲ್ಕನೇ ದಿನ ಕಲೆಕ್ಷನ್ ಮೇಲೆ ಸಿನಿಮಾ ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತೆ. ಹಾಗೇ 'ಯುವ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಕೂಡ ಹೀಗೆ ಲೆಕ್ಕ ಹಾಕಲಾಗುತ್ತಿತ್ತು. ಸದ್ಯ ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ನಾಲ್ಕನೇ ದಿನದ ಬಾಕ್ಸಾಫೀಸ್‌ ರಿಪೋರ್ಟ್ ಸಿಕ್ಕಿದೆ. ನಾಲ್ಕನೇ ದಿನ ಈ ಸಿನಿಮಾ ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

ನಾಲ್ಕನೇ ದಿನ ಕಲೆಕ್ಷನ್ ಹೇಗಿದೆ?

'ಯುವ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೊದಲ ಮೂರು ದಿನ 5.5 ಕೋಟಿ ರೂಪಾಯಿ ಕಲೆ ಹಾಕಿತ್ತು. ಇದು ಇನ್ನೂ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಈ ಕಾರಣಕ್ಕೆ ನಾಲ್ಕನೇ ದಿನದ ಗಳಿಕೆ ಮೇಲೆ ಚಿತ್ರರಂಗದ ಕಣ್ಣಿತ್ತು. ವೀಕ್ ಡೇಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಸಿಕ್ಕಾಪಟ್ಟೆ ಡ್ರಾಪ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೀಗ ನಾಲ್ಕನೇ ದಿನ ಕರ್ನಾಟಕದಾದ್ಯಂತ ಸುಮಾರು 1 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

Yuva Rajkumar debut movie Yuva day 4 Box office collection report

ಮೊದಲ ನಾಲ್ಕು ದಿನಗಳ ಕಲೆಕ್ಷನ್ ಹೇಗಿದೆ?

'ಯುವ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅವರ ಸ್ಥಾನ ತುಂಬ ಬಹುದು ಎನ್ನುವ ನಿರೀಕ್ಷೆಯಿತ್ತು. ಮೊದಲ ದಿನ 2.1 ಕೋಟಿ ರೂಪಾಯಿ, ಎರಡನೇ ದಿನ 1.6 ಕೋಟಿ ರೂಪಾಯಿ, ಮೂರನೇ ದಿನ 1.8 ಕೋಟಿ ರೂಪಾಯಿ ಒಟ್ಟು 5.5 ಕೋಟಿ ರೂಪಾಯಿ ಎಂದು ಟ್ರೇಡ್ ಎಕ್ಸ್‌ಪರ್ಟ್ ಹೇಳಿದ್ದರು. ಈಗ ನಾಲ್ಕನೇ ದಿನ 1 ಕೋಟಿ ರೂಪಾಯಿ ಸೇರಿ 6.5 ಕೋಟಿ ರೂಪಾಯಿ ಎಂದು ಹೇಳುತ್ತಿದ್ದಾರೆ.

'ಯುವ' ಭವಿಷ್ಯವೇನು?

ಯುವ ರಾಜ್‌ಕುಮಾರ್ ಆಕ್ಟಿಂಗ್, ಡ್ಯಾನ್ಸ್, ಆಕ್ಷನ್ ಅನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಕಳೆದ ಮೂರು ದಿನಗಳಲ್ಲಿ ಮೌತ್ ಟಾಕ್ ಚೆನ್ನಾಗಿಯೇ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬರಬಹುದೆಂಬ ನಿರೀಕ್ಷೆಯಿದೆ. ಇದು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ ರಿಪೋರ್ಟ್ ಆಗಿದ್ದು, ಹೊಂಬಾಳೆ ಅಧಿಕೃತವಾಗಿ ಇನ್ನೂ ಬಾಕ್ಸಾಫೀಸ್‌ ರಿಪೋರ್ಟ್ ಅನ್ನು ಹೊರಹಾಕಿಲ್ಲ.

More from Filmibeat

English summary
Yuva Rajkumar movie Yuva box office:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X