ಸಿದ್ದೇಶ್ವರ ಚಿತ್ರಮಂದಿರದಲ್ಲಿ ಜೂನಿಯರ್ ಪವರ್‌ಸ್ಟಾರ್: ಯುವರಾಜ್‌ಕುಮಾರ್‌ಗೆ ಫ್ಯಾನ್ಸ್ ಬಿರುದು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಒಂದು ವರ್ಷ ಆಗಿದೆಯಷ್ಟೇ. ಆದರೆ, ಇನ್ನೂ ಅವರ ಅಭಿಮಾನಿಗಳಲ್ಲಿ ಅಪ್ಪು ನೆನಪು ಮಾತ್ರ ಮಾಸಿಲ್ಲ. ಪವರ್‌ಸ್ಟಾರ್ ಅಗಲಿಕೆ ಆಘಾತದಿಂದ ಹೊರಬಾರದ ಅಭಿಮಾನಿಗಳು ಯುವರಾಜ್‌ಕುಮಾರ್‌ ಮೂಲಕ ಪುನೀತ್ ಕಾಣಲು ಯತ್ನಿಸುತ್ತಿದ್ದಾರೆ.

ಇತ್ಥೀಚೆಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿರುವ ಕೊನೆಯ ಸಿನಿಮಾ ರಿಲೀಸ್ ಆಗಿದೆ. 'ಗಂಧದ ಗುಡಿ' ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಬಿಡುಗಡೆಯಾದ ಕಡೆಗಳಲ್ಲೆಲ್ಲಾ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರಿನ ಸಿದ್ದೇಶ್ ಚಿತ್ರಮಂದಿರದಲ್ಲಿ 'ಗಂಧದ ಗುಡಿ' ಪ್ರದರ್ಶನ ಕಾಣುತ್ತಿದೆ. ಈ ವೇಳೆ ಅಭಿಮಾನಿಗಳು ಸ್ಕ್ರೀನ್ ಮೇಲೆ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್‌ ಕುಮಾರ್‌ನಿಗೆ ಜೂ.ಪವರ್‌ಸ್ಟಾರ್ ಪಟ್ಟ ಕೊಟ್ಟು ಸಂಭ್ರಮಿಸಿದ್ದಾರೆ.

 ಅಪ್ಪು ಫ್ಯಾನ್ಸ್‌ನಿಂದ ಸ್ಪೆಷಲ್ ವಿಡಿಯೋ

ಅಪ್ಪು ಫ್ಯಾನ್ಸ್‌ನಿಂದ ಸ್ಪೆಷಲ್ ವಿಡಿಯೋ

'ಗಂಧದ ಗುಡಿ' ನೋಡಿ ಕೆಲವರು ಭಾವುಕರಾಗುತ್ತಿದ್ದಾರೆ. ಮತ್ತೆ ಕೆಲವರು ಪುನೀತ್ ರಾಜ್‌ಕುಮಾರ್‌ರನ್ನು ತೆರೆಮೇಲೆ ನೋಡಿ ಸಂಭ್ರಮಿಸುತ್ತಿದ್ದಾರೆ. ಅಪ್ಪು ಅಭಿಮಾನಿಗಳಂತೂ ಈ ವಿಶಿಷ್ಟ ಪ್ರಯತ್ನಕ್ಕೆ ತಲೆದೂಗಿದ್ದಾರೆ. ಥಿಯೇಟರ್‌ನಲ್ಲಿ ಕುಣಿಸಿದು ಕುಪ್ಪಳಿಸುತ್ತಿರುವ ಅಭಿಮಾನಿಗಳಿಂದ ವಿಶೇಷವಾದ ವಿಡಿಯೋವೊಂದನ್ನು ಸಿನಿಮಾದ ಕೊನೆಯಲ್ಲಿ ಪ್ರಸಾರ ಮಾಡಲಾಗಿದೆ. 'ಯುವ ರಣಧೀರ ಕಂಠೀರವ' ಸಿನಿಮಾದ ಟ್ರೈಲರ್ ಪ್ರದರ್ಶನ ಮಾಡಲಾಗಿದೆ.ಈ ಟ್ರೈಲರ್ ಕೊನೆಯಲ್ಲಿ ಹೊಸ ಟೈಟಲ್ ನೀಡಲಾಗಿದೆ.

 ಯುವಗೆ ಜೂ.ಪವರ್‌ಸ್ಟಾರ್ ಪಟ್ಟ?

ಯುವಗೆ ಜೂ.ಪವರ್‌ಸ್ಟಾರ್ ಪಟ್ಟ?

ಸಿದ್ದೇಶ್ ಚಿತ್ರಮಂದಿರದಲ್ಲಿ ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ' ಕೊನೆಯಲ್ಲಿ 'ಯುವ ರಣಧೀರ ಕಂಠೀರವ' ಟ್ರೈಲರ್ ಅನ್ನು ಪ್ರದರ್ಶನ ಮಾಡಲಾಗಿದೆ. ಈ ಟ್ರೈಲರ್‌ ಅನ್ನು ಅಪ್ಪು ಅಭಿಮಾನಿ ಸೂರ್ಯ ಎಸ್‌ಎನ್ ಎಂಬುವವರು ಕ್ರಿಯೇಟ್ ಮಾಡಿದ್ದರು. ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗಿದೆ. ಇದರಲ್ಲಿ ಯುವರಾಜ್‌ಕುಮಾರ್‌ಗೆ ಅಭಿಮಾನಿಗಳು ಜೂನಿಯರ್ ಪವರ್‌ಸ್ಟಾರ್ ಆದಷ್ಟು ಬೇಗ ಬರುತ್ತಾರೆಂದು ಹೇಳಿ ಸಂಭ್ರಮಿಸಿದ್ದಾರೆ. ಅಲ್ಲದೆ, ಪವರ್‌ಸ್ಟಾರ್ ಪರಂಪರೆ ಮುಂದುವರೆಯುತ್ತೆ ಎಂದಿದ್ದಾರೆ.

 ಯುವ ಸಿನಿಮಾ ಮೇಲೆ ಫ್ಯಾನ್ಸ್ ಕಣ್ಣು

ಯುವ ಸಿನಿಮಾ ಮೇಲೆ ಫ್ಯಾನ್ಸ್ ಕಣ್ಣು

ಕಳೆದ ಒಂದು ವರ್ಷದಿಂದ ಪವರ್‌ಸ್ಟಾರ್ ಅಭಿಮಾನಿಗಳ ಬೇಡಿಕೆ ಇದು. ಅಪ್ಪು ನಟಿಸಬೇಕಿದ್ದ ಸಿನಿಮಾದಲ್ಲಿ ಯುವರಾಜ್‌ಕುಮಾರ್ ನಟಿಸಬೇಕು ಅಂತ ಹಠ ಹಿಡಿದಿದ್ದರು. ಅದರಂತೆ ಸಂತೋಷ್ ಆನಂದ್‌ರಾಮ್ ನಿರ್ದೇಶಿಸಬೇಕಿದ್ದ ಸಿನಿಮಾದಲ್ಲಿ ಯುವ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ರನ್ನು ತೆರೆಮೇಲೆ ಪರಿಚಯಿಸೋಕೆ ಮುಂದಾಗಿದೆ. ಹೀಗಾಗಿ ಯುವ ಸ್ಯಾಂಡಲ್‌ವುಡ್ ಎಂಟ್ರಿ ಹೇಗಿರುತ್ತೆ? ಅನ್ನೋದನ್ನು ಕಣ್ತುಂಬಿಕೊಳ್ಳಲು ಅಪ್ಪು ಫ್ಯಾನ್ಸ್ ಕಾದು ಕೂತಿದ್ದಾರೆ. ಆದರೆ, ಸದ್ಯಕ್ಕೆ ಏನೂ ಅಪ್‌ಡೇಟ್ ಇಲ್ಲ.

 ರಣಧೀರ ಕಂಠೀರವ ಕಥೆಯೇನು?

ರಣಧೀರ ಕಂಠೀರವ ಕಥೆಯೇನು?

ಇಷ್ಟೊತ್ತಿಗಾಗಲೇ 'ಯುವ ರಣಧೀರ ಕಂಠೀರವ' ಸಿನಿಮಾ ಸೆಟ್ಟೇರಬೇಕಿತ್ತು. ಇದೇ ಸಿನಿಮಾ ಟ್ರೈಲರ್ ನೋಡಿ ದೊಡ್ಮನೆ ಫ್ಯಾನ್ಸ್ ಫಿದಾ ಆಗಿದ್ದರು. ಆದರೆ, ಅದ್ಯಾಕೋ ಸಿನಿಮಾ ಸೆಟ್ಟೇರಲಿಲ್ಲ. ಈಗ ಮತ್ತೆ ಅಭಿಮಾನಿಗಳು ಅದೇ ಟ್ರೈಲರ್‌ ಬಿಟ್ಟಿದ್ದಾರೆ. ಯುವ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ ಸಿನಿಮಾ ಸೆಟ್ಟೇರಿ ತೆರೆಕಂಡ ಬಳಿಕ ಯುವ ರಣಧೀರ ಕಂಠೀರ ರಿಲೀಸ್ ಆದರೂ ಅಚ್ಚರಿ ಪಡಬೇಕಿಲ್ಲ. ಸದ್ಯಕ್ಕೆ ಯುವ ಜೂನಿಯರ್ ಪವರ್‌ಸ್ಟಾರ್ ಫ್ಯಾನ್ಸ್ ಕರೆಯುತ್ತಿದ್ದಾರೆ. ಇದಕ್ಕೆ ದೊಡ್ಮನೆ ಪ್ರತಿಕ್ರಿಯೆ ಏನಿರುತ್ತೆ ಅನ್ನೋದಷ್ಟೇ ಕುತೂಹಲ.

More from Filmibeat

English summary
Yuva Rajkumar Received Jr Power Star By Puneeth Fans In Siddeshwara Theater, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X