Yuva Box office: ದೊಡ್ಮನೆ ಕುಡಿಯ ಚೊಚ್ಚಲ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ದೊಡ್ಮನೆ ಫ್ಯಾನ್ ಎದುರು ನೋಡುತ್ತಿದ್ದ ಸಿನಿಮಾ 'ಯುವ' ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದೂ ಆಗಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನ. ಅಜನೀಶ್ ಲೋಕನಾಥ್ ಮ್ಯೂಸಿಕ್ ಇವರು ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡಬಹುದು ಅನ್ನೋ ಕುತೂಹಲವಿದ್ದೇ ಇದೆ.

ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಆಗಿದ್ದರಿಂದ ಮೊದಲ ದಿನ ದೊಡ್ಡ ಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿತ್ತು. ಕನ್ನಡ ಶ್ರೀಮಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋ ಪ್ರಶ್ನೆಗೆ ವಿತರಕರ ವಲಯದಲ್ಲಿ ಲೆಕ್ಕಚಾರಗಳು ನಡೆಯುತ್ತಿವೆ.

Yuva Rajkumar starrer Yuva Movie day 1 box office collection report

ದೊಡ್ಮನೆಯ ಕುಡಿಯ ಮೊದಲ ಸಿನಿಮಾ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಆಗಿದ್ದರಿಂದ 'ಯುವ' ಮೊದಲ ದಿನದ ಗಳಿಕೆ ಮೇಲೆ ಎಲ್ಲರ ಕಣ್ಣಿದೆ. ಸದ್ಯ 'ಯುವ' ಸಿನಿಮಾ ಬಗ್ಗೆ ವಿತರಕರ ವಲಯದಲ್ಲಿ ಏನು ಚರ್ಚೆಯಾಗುತ್ತಿದೆ? ಅನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಕೌಟುಂಬಿಕ ಮೌಲ್ಯಗಳಿಗೆ ಜೈ

'ಯುವ' ಸಿನಿಮಾದಲ್ಲಿ ಕೇವಲ ಆಕ್ಷನ್, ಡ್ಯಾನ್ಸ್ ಅಷ್ಟೇ ಅಲ್ಲ. ಇಲ್ಲಿ ಕೌಟುಂಬಿಕ ಮೌಲ್ಯಗಳು ಕೂಡ ಇವೆ. ತಂದೆ ಮಗನ ಸಂಬಂಧ, ಆಕ್ಷನ್, ಲವ್, ಎಮೋಷನ್ಸ್ ಇವೆಲ್ಲವೂ ಈ ಸಿನಿಮಾದ ಹೈಲೈಟ್. ಹಾಗೇ ಮೊದಲ ಸಿನಿಮಾದಲ್ಲಿಯೇ ಯುವ ರಾಜ್‌ಕುಮಾರ್ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು ಆಗಿದೆ. ಈ ಕಾರಣಕ್ಕೆ 'ಯುವ' ಈ ವರ್ಷದ ಸಕ್ಸಸ್‌ಫುಲ್ ಸಿನಿಮಾ ಆಗಬಹುದು ಎಂಬ ನಿರೀಕ್ಷೆಯಿದೆ.

Yuva Rajkumar starrer Yuva Movie day 1 box office collection report

'ಯುವ' ಮೊದಲ ದಿನದ ಕಲೆಕ್ಷನ್ ಎಷ್ಟು?

ಮೊದಲ ಸಿನಿಮಾ ಆಗಿದ್ದರಿಂದ ದೊಡ್ಡ ಕಲೆಕ್ಷನ್ ನಿರೀಕ್ಷೆ ಮಾಡದೇ ಹೋದರೂ, ನಿನ್ನೆ (ಮಾರ್ಚ್ 30) ಕರ್ನಾಟಕದಲ್ಲಿ ಶೇ.60ರಷ್ಟು ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ವಿತರಕರ ವಲಯದಲ್ಲಿ ಓಡಾಡುತ್ತಿರುವ ಸುದ್ದಿಯ ಪ್ರಕಾರ, 'ಯುವ' ಮೊದಲ ದಿನ ಕರ್ನಾಟಕದಾದ್ಯಂತ 2.10 ಕೋಟಿ ರೂಪಾಯಿಯಿಂದ 3 ಕೋಟಿ ರೂಪಾಯಿ ಆಸು ಪಾಸಿನಲ್ಲಿ ಕಲೆಕ್ಷನ್ ಮಾಡಿದೆ ಎಂದು ಹೇಳುತ್ತಿದ್ದಾರೆ. ಅದೇ ಮತ್ತೊಂದು ಮೂಲ 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ. ಆದರೆ, ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಇನ್ನೂ ಮಾಹಿತಿ ಕೊಟ್ಟಿಲ್ಲ.

ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ ಕಲೆಕ್ಷನ್?

'ಯುವ' ಮೊದಲ ದಿನ ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಅಷ್ಟೇನು ಉತ್ತಮ ರೆಸ್ಪಾನ್ಸ್ ಸಿಕ್ಕಿಲ್ಲ. ಮಂಡ್ಯ, ಮೈಸೂರು, ಹೊಸಪೇಟೆ, ಬಳ್ಳಾರಿ, ಕಲ್ಬುರ್ಗಿ, ಹುಬ್ಬಳ್ಳಿ, ತುಮಕೂರು, ಶಿವಮೊಗ್ಗ ಕಡೆಗಳಲ್ಲಿ ಸರಾಸರಿ ಶೇ.40 ರಿಂದ ಶೇ.60 ಭಾಗ ಆಕ್ಯೂಪೆನ್ಸಿ ಇದೆ. ಇನ್ನೊಂದು ಕಡೆ ಶೇ.30ರಿಂದ ಶೇ.40ರಷ್ಟು ಚಿತ್ರಮಂದಿರ ತುಂಬಿತ್ತು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಕಲೆಕ್ಷನ್

ಕರ್ನಾಟಕದ ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ಕೆಲವು ವಿತರಕರ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು ಒಂದು ಕೋಟಿ ರೂಪಾಯಿಯಿಂದ ಒಂದೂವರೆ ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ಇನ್ನು ಉಳಿದಂತೆ ಇನ್ನು ಉಳಿದಿದ್ದು ಬೇರೆ ಬೇರೆ ಜಿಲ್ಲೆಗಳಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಯುವ ಸಿನಿಮಾ ಮೊದಲ ಮೂರು ದಿನಗಳಲ್ಲಿ 6 ಕೋಟಿ ರೂಪಾಯಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ.

More from Filmibeat

English summary
Yuva day 1 box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X