ಶಿವಣ್ಣನ ದಶವತಾರ ನೋಡಿ ಕಳೆದು ಹೋದ ಯುವ ರಾಜ್‌ಕುಮಾರ್; ಮತ್ತೆ ಸೆಂಚುರಿ ಸ್ಟಾರ್ ಕ್ರೇಜ್
ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ '45' ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಂಡಿದೆ. ಸೆಂಚುರಿ ಸ್ಟಾರ್ ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಈ ಸಿನಿಮಾವನ್ನು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಕಣ್ತುಂಬಿಕೊಂಡಿದ್ದಾರೆ. ಅದರಲ್ಲೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮತ್ತೊಮ್ಮೆ ಶಿವಣ್ಣ ತಮ್ಮ ಪಾತ್ರದ ಮೂಲಕ ಕ್ರೇಜ್ ಹೆಚ್ಚಿಸಿದ್ದಾರೆ.
ಶಿವಣ್ಣನ ಕೇವಲ ಒಂದು ಲುಕ್‌ನಿಂದಲೇ ಸಿನಿಮಾ ಗೆದ್ದಿದ್ದು ಇದೆ. ಇಂತಹ ಸಾಕಷ್ಟು ಉದಾಹರಣೆಗಳು ಈಗಾಗಲೇ ಸಿಕ್ಕಿವೆ. ಈಗ '45' ಸಿನಿಮಾದಲ್ಲಿ ಶಿವಣ್ಣ ದಶವತಾರ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮಜಾ ಕೊಡುತ್ತಿದೆ. ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆಗಳ ಸದ್ದು ಥಿಯೇಟರ್ ರೂಫ್ ದಾಟಿ ಹೊರಬರುತ್ತವೆ. ಸದ್ಯ ಇದು ಟ್ರೆಂಡ್ ಆಗಿದೆ.

'45' ಸಿನಿಮಾದಲ್ಲಿ ಶಿವಣ್ಣ ಕ್ರೇಜ್ ನೋಡಿ ಸ್ವತ: ಯುವ ರಾಜ್‌ಕುಮಾರ್ ಥ್ರಿಲ್ ಆಗಿದ್ದಾರೆ. ಥಿಯೇಟರ್‌ಗೆ ಬಂದು ಅಭಿಮಾನಿಗಳ ಜೊತೆ ಕೂತು '45' ಸಿನಿಮಾವನ್ನು ನೋಡಿದ್ದಾರೆ. ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಶಿವಣ್ಣನ ದಶವತಾರದ ಬಗ್ಗೆ ಯುವ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿಮಾನಿಗಳೊಂದಿಗೆ ಸಿನಿಮಾ ನೋಡಿದ ಯುವ ರಾಜ್‌ಕುಮಾರ್ '45' ಹಾಗೂ ಶಿವಣ್ಣನ ದಶವತಾರ ಪಾತ್ರವನ್ನು ತುಂಬಾನೇ ಮೆಚ್ಚಿಕೊಂಡಿದ್ದಾರೆ. "ತುಂಬಾ ಒಳ್ಳೆಯ ಮೆಸೇಜ್ ಇದೆ. ಗರುಡ ಪುರಾಣದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಶಿವಣ್ಣ ಅವರ ದಶವತಾರಗಳ ಗೆಟಪ್‌ಗಳಂತೂ ಅದ್ಬುತವಾಗಿದೆ. ಒಂದೊಂದು ನೋಡುತ್ತಾ ಕೂರುವುದಕ್ಕೆ ಆಗಲಿಲ್ಲ. ವಿಎಫ್ಎಕ್ಸ್ ಪಾರ್ಟ್ ಅಂತೂ ಅದ್ಬುತವಾಗಿದೆ." ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ.
ಇನ್ನು ಇದೇ ವೇಳೆ 'ಸಾರಥಿ' ಹಾಗೂ 'ಲ್ಯಾಂಡ್ ಲಾರ್ಡ್' ಸಿನಿಮಾದ ನಿರ್ಮಾಪಕ ಸತ್ಯ ಪ್ರಕಾಶ್ ಕೂಡ ಸಿನಿಮಾವನ್ನು ವೀಕ್ಷಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇವರಿಗೂ ಕೂಡ '45' ಸಿನಿಮಾದಲ್ಲಿ ಶಿವಣ್ಣ ಅವರ ದಶವತಾರ ಲುಕ್ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಶಿವಣ್ಣನ ಎನರ್ಜಿಗೆ, ಲುಕ್‌ಗೆ, ಮ್ಯಾನರಿಸಂಗೆ ಮನೆ ಸೋತಿದ್ದಾರೆ.
"ದಶಾವತಾರ ಮಾಡಿದ್ದಾರಲ್ಲ ಎಷ್ಟು ಅದ್ಭುತವಾಗಿ ಮಾಡಿದ್ದಾರೆ. ಅರ್ಜುನ್ ಜನ್ಯ ಅವರು ಕೂಡ ಸಂಗೀತ ನಿರ್ದೇಶಕರಾಗಿ ಇದೇ ಮೊದಲ ಬಾರಿಗೆ ಸಿನಿಮಾವನ್ನು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಿಜವಾಗಿಯೂ ಸಖತ್ ಆಗಿದೆ. ಪ್ರತಿಯೊಬ್ಬರು ಬಂದು ಸಿನಿಮಾವನ್ನು ನೋಡಬೇಕು." ಎಂದು ಸಿನಿಪ್ರಿಯರಲ್ಲಿ 'ಲ್ಯಾಂಡ್ ಲಾರ್ಡ್ ನಿರ್ಮಾಪಕ ಮನವಿ ಮಾಡಿಕೊಂಡಿದ್ದಾರೆ.
ಹಾಗೇ '45' ಸಿನಿಮಾ ಹಾಗೂ 'ಮಾರ್ಕ್' ಒಂದೇ ದಿನ ಬಿಡುಗಡೆಯಾಗಿದ್ದರ ಬಗ್ಗೆನೂ ಸತ್ಯ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ, ಎರಡೂ ಸಿನಿಮಾಗಳ ಬಾಕ್ಸಾಫೀಸ್‌ನಲ್ಲಿ ಚೆನ್ನಾಗಿ ಓಡುತ್ತವೆ ಎಂದು ಹೇಳಿದ್ದಾರೆ. "ಕಂಟೆಂಟ್ ಚೆನ್ನಾಗಿದ್ದಾಗ ಸಿನಿಮಾವನ್ನು ಗೆಲ್ಲಿಸಿಯೇ ಗೆಲ್ಲಿಸುತ್ತಾರೆ. ಎರಡೂ ಸಿನಿಮಾಗಳು ಗೆಲ್ಲಬೇಕು. ನನ್ನ ಅಭಿಪ್ರಾಯವನ್ನು ಕೇಳಿದರೆ, ಈ ಎರಡು ಸಿನಿಮಾಗಳಲ್ಲಿ ಯಾವುದಾದರೊಂದು ವಾರ ಬಿಟ್ಟು ಬಂದಿದ್ದರೆ, ಎರಡೂ ಸೂಪರ್ ಡೂಪರ್ ಹಿಟ್ ಆಗಿರೋದು. ರಾಜ್ ಬಿ ಶೆಟ್ಟಿಯವರು ಯಾವುದೇ ಪಾತ್ರವನ್ನು ಕೊಟ್ಟರೂ ನಿಭಾಯಿಸುತ್ತಾರೆ. ಅವರನ್ನು ನೋಡುವುದಕ್ಕೆಂದೇ ಬಂದೆ." ಎಂದು ಹೇಳಿದ್ದಾರೆ.


Click it and Unblock the Notifications











