ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
ರಾಘವೇಂದ್ರ ರಾಜ್‌ಕುಮಾರ್ ದ್ವಿತೀಯ ಪುತ್ರ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ. ದೊಡ್ಮೆನೆ ಅಭಿಮಾನಿಗಳು ಯುವ ರಾಜ್‌ಕುಮಾರ್‌ನಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ. ಹೀಗಾಗಿ ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ 'ಯುವ' ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವುದು ನಿಜ.
'ಯುವ' ತಂದೆ ಹಾಗೂ ಮಗನ ನಡುವಿನ ಸಂಬಂಧದ ಕಥೆ. ಹೀಗಾಗಿ ತನ್ನ ಮೊದಲ ಸಿನಿಮಾ ಬಗ್ಗೆ ಯುವ ರಾಜ್‌ಕುಮಾರ್ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಜೊತೆ ತಂದೆ ರಾಘಣ್ಣ, ದೊಡ್ಡಪ್ಪ ಶಿವಣ್ಣ ಹಾಗೂ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ರಾಘಣ್ಣ ಸ್ಟ್ರೋಕ್ ಆಗಿ ಗಂಭೀರಗೊಂಡಿದ್ದರು. ಈ ವೇಳೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಹೇಗೆ ನೋಡಿಕೊಂಡರು ಅನ್ನುವುದನ್ನು ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ದೊಡ್ಮೆನೆಯ ಜವಾಬ್ದಾರಿಯನ್ನೆಲ್ಲ ನೋಡಿಕೊಳ್ತಿದ್ರು. ಪುನೀತ್ ರಾಜ್‌ಕುಮಾರ್ ಸಿನಿಮಾ ಮಾಡುತ್ತಿದ್ದರೆ, ಅದರ ಹಿಂದಿನ ವ್ಯವಹಾರ ನೋಡಿಕೊಳ್ಳುತ್ತಿದ್ದಿದ್ದೇ ರಾಘಣ್ಣ. ಆದರೆ, ಬದಲಾದ ಕಾಲಘಟ್ಟದಲ್ಲಿ ರಾಘಣ್ಣ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲೇ ಅವರು ಸ್ಟ್ರೋಕ್ ಆಗಿತ್ತು.
ರಾಘಣ್ಣ ಹಾಗೂ ಪುನೀತ್ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಣ್ಣಾ ತಮ್ಮ ಬೇರೆಯಾಗಿದ್ದರ ಬಗ್ಗೆ ಮಾತಾಡಿಕೊಂಡಿದ್ದೂ ಇದೆ. ಆದರೆ, ಒಳಗೆ ಮೂವರು ಅಣ್ಣ ತಮ್ಮಂದಿರ ಬಾಂಡಿಂಗ್ ಗಟ್ಟಿಯಾಗೇ ಇತ್ತು. ರಾಘಣ್ಣಗೆ ಸ್ಟ್ರೋಕ್ ಆದಾಗ ಈ ಬಾಂಡಿಂಗ್ ಗೊತ್ತಾಗಿದ್ದು. ಅದನ್ನೇ ಯುವ ರಾಜ್‌ಕುಮಾರ್ ಕೂಡ ರಿಪೀಟ್ ಮಾಡಿದ್ದಾರೆ.
"ಏನೇ ವಿಷಯ ಬರಲಿ, ನಾವು ಫ್ಯಾಮಿಲಿಯಾಗಿ ಜೊತೆಗೆ ಇದ್ದೇ ಇರುತ್ತೇವೆ. ನಮ್ಮ ತಂದೆಗೆ ಸ್ಟ್ರೋಕ್ ಆದಾಗಲೂ ನಮ್ಮ ದೊಡ್ಡಪ್ಪ ಆಗಲಿ, ಚಿಕ್ಕಪ್ಪ ಆಗಲಿ ಅವರೇ ನೋಡಿಕೊಂಡಿದ್ದು." ಎಂದು ಸಂತೋಷ್ ಆನಂದ್‌ರಾಮ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಇದೇ ವೇಳೆ ರಾಘಣ್ಣನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ಶಿವಣ್ಣ ಹಾಗೂ ಅಪ್ಪು ಹೇಗೆಲ್ಲ ಸಹಾಯ ಮಾಡಿದ್ರು? ಅನ್ನೋದನ್ನು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
"ನಮ್ಮ ತಂದೆ ಸಿಂಗಾಪುರಕ್ಕೆ ಚಿಕಿತ್ಸೆಗೆ ಹೋಗಬೇಕಿತ್ತು. ಸಿಂಗಾಪುರದಲ್ಲಿ ಸುಮಾರು ಎರಡು ತಿಂಗಳು ಅಲ್ಲೇ ಇದ್ದರು. ಆಗ ನಮ್ಮ ದೊಡ್ಡಪ್ಪನ ಸಿನಿಮಾ ನಡೆಯುತ್ತಿರಬೇಕಾದರೆ, ಜೊತೆಗೆ ಒಬ್ಬರೇ ಇರುವುದು ಬೇಡ ಅಂದ್ಬಿಟ್ಟು, ಅವರೂ ಸಿಂಗಾಪುರಕ್ಕೆ ಬಂದರು. ಸಿನಿಮಾ ಶೂಟಿಂಗ್ ಅನ್ನೇ ಸಿಂಗಾಪುರಕ್ಕೆ ಹಾಕಿಕೊಂಡರು. ಒಂದೇ ಮನೆಯಲ್ಲಿ ಇದ್ಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಲಿ, ಮೆಡಿಸಿನ್ ಕೊಡಿಸುವುದಾಗಲಿ, ಪೂರ್ವ ಅವರೇ ನೋಡಿಕೊಂಡರು. ಅವರಿಗೆ ಬ್ರೇಕ್ ಸಿಕ್ಕಾಗ ದೊಡ್ಡಪ್ಪ (ಶಿವಣ್ಣ) ಬೆಂಗಳೂರಿಗೆ ಬಂದರು. ಅಲ್ಲಿಗೆ ಚಿಕ್ಕಪ್ಪ ಬಂದರು. ಅವರು ಎಲ್ಲಾ ನೋಡಿಕೊಂಡರು." ಎಂದು ಯುವ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ಬಗ್ಗೆನೂ ಹೇಳಿಕೊಂಡಿದ್ದಾರೆ. ಎದುರಿಗೆ ಏನೂ ಹೇಳದೇ ಹೋದರೂ, ಹಿಂದಿನಿಂದ ಸಪೋರ್ಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
"ನಮ್ಮ ಚಿಕ್ಕಪ್ಪ (ಪುನೀತ್) ಎಷ್ಟು ಸಪೋರ್ಟ್ ಮಾಡಿದ್ದಾರೆ ಅಂದರೆ, ನಾನು ಏನೇ ಮಾಡಿದರೂ, ಅದನ್ನು ನೋಡಿ ಚೆನ್ನಾಗಿದೆ. ಚೆನ್ನಾಗಿ ಮಾಡುತ್ತೀಯ,ಒಳ್ಳೆಯ ಫ್ಯೂಚರ್ ಇದೆ ಅಂತ ಅಷ್ಟೇ ಹೇಳೋರು. ಆಮೇಲೆ ಆಮೇಲೆ ನನಗೆ ಗೊತ್ತಾಗಿದ್ದು ಅಂದರೆ, ಬೇರೆ ನಿಮ್ಮ ಚಿಕ್ಕಪ್ಪ ವಿಡಿಯೋ ತೋರಿಸಿದರು. ಎಷ್ಟು ಚೆನ್ನಾಗಿ ಮಾಡುತ್ತೀಯಾ ಅನ್ನೋರು." ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ.


Click it and Unblock the Notifications











