"ಹೇಳೋರು ಕೇಳೋರು ಯಾರು ಇಲ್ಲ ಅಂತ ನೀವ್ ಆಡಿದ್ದೇ ಆಟ ಅನ್ಕೊಂಡ್ರಾ..?" ಯುವ ಟ್ರೈಲರ್‌ಗೆ ಹೇಗಿದೆ ರೆಸ್ಪಾನ್ಸ್?
ದೊಡ್ಮನೆ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅಪ್ಪು ಅಭಿಮಾನಿಗಳು ಕೂಡ ಯುವ ರಾಜ್‌ಕುಮಾರ್‌ರಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ. ಹೀಗಾಗಿ ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ 'ಯುವ' ಸಿನಿಮಾ ನಿರೀಕ್ಷೆಗಳನ್ನು ಹುಟ್ಟಾಕಿದೆ.
'ಯುವ' ಟ್ರೈಲರ್ ಬಿಡುಗಡೆಗೂ ಮುನ್ನ ಚಿತ್ರತಂಡ ಹಾಡುಗಳನ್ನು ರಿಲೀಸ್ ಮಾಡಿತ್ತು. ಈಗ ಮೋಸ್ಟ್ ಎಕ್ಸ್‌ಪೆಕ್ಟೆಡ್ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಯುವ ರಾಜ್‌ಕುಮಾರ್ ನಟನೆಯ ಮೊದಲನೇ ಸಿನಿಮಾ ಮೊದಲ ಟ್ರೈಲರ್ ನೋಡಿ ದೊಡ್ಮೆನೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಯುವ ಆಕ್ಷನ್, ಡ್ಯಾನ್ಸ್, ಡೈಲಾಗ್ ಡಿಲೇವರಿ ಬಗ್ಗೆ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಯುವ ಟ್ರೈಲರ್ ನೋಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಏನಿದೆ? ಎಕ್ಸ್ (ಟ್ವಿಟರ್)ನಲ್ಲಿ ಯುವ ಟ್ರೈಲರ್ ಬಗ್ಗೆ, ಯುವ ರಾಜ್‌ಕುಮಾರ್ ಎಂಟ್ರಿ ಬಗ್ಗೆ ಏನಂದಿದ್ದಾರೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ..
"ಅಪ್ಪು ತರ ಹೋಲಿಕೆ ಇದೆ"
"ಸ್ಟೈಲ್ ಇದೆ ಮಾತ್ರ. ಅಪ್ಪು ತರ ಹೋಲಿಕೆನೂ ಇದೆ. ಆದರೆ, ಬಹು ನಿರೀಕ್ಷಿತ ಸಿನಿಮಾ ಇಷ್ಟೇ ಸಾಕಾ? ಯೆಸ್, ಯುವ ಅವರ ಬಳಿ ಎಲ್ಲಾ ಸಾಮರ್ಥ್ಯವೂ ಇದೆ ಅನ್ನೋದು ನಮ್ಮೆಲ್ಲರಿಗೂ ಗೊತ್ತಿದೆ. ನಿರ್ದೇಶಕರು ಯುವ ಅವರ ಡ್ಯಾನ್ಸ್, ಸ್ಟಂಟ್ಸ್ ಹಾಗೂ ಡೈಲಾಗ್ ಹೇಳುವ ಕಲೆಯನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ."
"ಆಸ್ಕರ್ ಬರೋತರ ಆಕ್ಟಿಂಗ್ ಮಾಡ್ಬೇಕು ಅಂದ್ರೆ ಹೇಗೆ?"
"ಮೊದಲ ಸಿನಿಮಾದಲ್ಲಿ ಆಸ್ಕರ್, ನ್ಯಾಷನಲ್ ಅವಾರ್ಡ್ ಬರೋತರ ಆಕ್ಟಿಂಗ್ ಮಾಡಬೇಕು ಅಂದ್ರೆ ಹೆಗ್ರೋ. ಇದು ಕೇವಲ ಆರಂಭ ಅಷ್ಟೇ. ಸಿನಿಮಾ ಇನ್ನೂ ಬಾಕಿ ಇದೆ. ದೊಡ್ಮನೆ ಅಂದರೆ ನಿರೀಕ್ಷೆ ಜಾಸ್ತಿ ಇರುತ್ತೆ. ಸಿನಿಮಾ ಬರುವವರೆಗೂ ಕಾಯಿರಿ" ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.
"ನೀವ್ ಆಡಿದ್ದೇ ಆಟ ಅನ್ಕೊಂಡ್ರಾ..?"
"ಹೇಳೋರು ಕೇಳೋರು ಯಾರು ಇಲ್ಲ ಅಂತ ನೀವ್ ಆಡಿದ್ದೇ ಆಟ ಅನ್ಕೊಂಡ್ರಾ..? ಹೆಸ್ರು ನೆನ್ಪ್ ಇದೆ ಅಲ್ಲ.." ಎಂದು ನೆಟ್ಟಿಗರೊಬ್ಬರು ಟ್ರೈಲರ್ ಬಗ್ಗೆ ಖುಷಿಯಿಂದ ಅಲ್ಲೇ ಬಂದ ಡೈಲಾಗ್ ಅನ್ನು ಬಿಟ್ಟಿದ್ದಾರೆ.
"ಯುವ ರಾಜ್‌ಕುಮಾರ್‌ಗೆ 100 ಮಾರ್ಕ್ಸ್"
"ಯುವ ರಾಜ್‌ಕುಮಾರ್ 100 ಮಾರ್ಕ್ಸ್. ಮೊದಲನೇ ಸಿನಿಮಾ ಆಗಿದ್ದರೂ ಕನ್ನಡಕ್ಕೆ ಒಳ್ಳೆಯ ನಟ ಸಿಕ್ಕಿದ್ದಾನೆ. ಹೊಂಬಾಳೆ ಫಿಲ್ಮ್ಸ್‌ಗೆ ಬೇಕಿರೋ ಸಖತ್ ಸಿನಿಮಾವನ್ನೇ ಕೊಟ್ಟಿದ್ದಾರೆ. ಬಿಜಿಎಂ ಚೆನ್ನಾಗಿದೆ. ಸಂತೋಷ್ ಆನಂದ್‌ರಾಮ್ ನಿರಾಸೆ ಮಾಡಿದ್ದರೂ, ಬ್ಯಾಕ್ ಟು ಬ್ಯಾಕ್ ಇಂಡಸ್ಟ್ರಿ ಹಿಟ್ ಕೊಟ್ಟ ನಿರ್ದೇಶಕ ಅದೇ ಹಳೆಯ ಟೆಂಪ್ಲೆಟ್ ಬಳಸಿದ್ದಾರೆ." ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅಪ್ಪನ ನೋವು ಅರ್ಥ ಆಗುತ್ತೆ"
"ಖರ್ಚು ಮಾಡ್ಬೇಕಾದ್ರೆ ನಮ್ ಖುಷಿ ನಮಿಗ್ ಕಾಣುತ್ತೆ.. ಅದೇ ದುಡಿಯುವಾಗ ಅಪ್ಪನ ನೋವೆನಂಥ ಅರ್ಥ ಆಗುತ್ತೆ." ಎಂದು ಇನ್ನೊಬ್ಬ ನೆಟ್ಟಿಗರು ಹೇಳಿಕೊಂಡಿದ್ದಾರೆ.
"ಡಬ್ಬಿಂಗ್ ಇನ್ನೂ ಚೆನ್ನಾಗಿರಬೇಕಿತ್ತು"
"ಯುವ ಡಬ್ಬಿಂಗ್ ಇನ್ನೂ ಚೆನ್ನಾಗಿ ಆಗಬೇಕು. ಕೆಲವು ಭಾವನೆಗಳು ಒತ್ತಡ ಪೂರ್ವಕವಾಗಿ ಮಾಡಿದಂತಿದೆ. ಅದನ್ನು ಬಿಟ್ಟು ಉಳಿದಿದ್ದು ಎಲ್ಲವೂ ಅದ್ಭುತವಾಗಿದೆ. ಫೈಟ್ಸ್, ಗುಡ್ ಲುಕಿಂಗ್ ಎಲ್ಲವನ್ನೂ ಅದ್ಭುತವಾಗಿದೆ" ಎಂದು ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications











