'ಎಕ್ಕ' ರಿಲೀಸ್ ಆಗೋದು ಈ ಸಲ ಪಕ್ಕಾ; ಶಿವಣ್ಣನ ಬರ್ತ್‌ಡೇ ಆಗ್ತಿದ್ದಂತೆ ಯುವ ರಾಜ್‌ಕುಮಾರ್ ಸಿನಿಮಾ ರಿಲೀಸ್
ಸ್ಯಾಂಡಲ್‌ವುಡ್‌ನ ಯುವ ನಟ ಯುವರಾಜ್‌ಕುಮಾರ್ ಮತ್ತೊಂದು ಸಿನಿಮಾ ರಿಲೀಸ್ ಸಕಲ ಸಿದ್ಧತೆಗಳು ನಡೆಯುತ್ತಿವೆ. 'ಯುವ' ಬಳಿಕ ಅಣ್ಣಾವ್ರ ಮೊಮ್ಮಗ ನಟಿಸಿರುವ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಂದ್ಕೊಂಡಂತೆ ಆಗಿದ್ದರೆ, 'ಎಕ್ಕ' ಜೂನ್ ತಿಂಗಳಿನಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ 'ಎಕ್ಕ' ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು.
ದೊಡ್ಮನೆ ಅಭಿಮಾನಿಗಳು ಈ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆದಾಗ ನಿರಾಶರಾಗಿದ್ದರು. ಆದ್ರೀಗ ಯುವ ಹಾಗೂ ರಾಜವಂಶದ ಅಭಿಮಾನಿಗಳಿಗೆ ಹೊಸ ರಿಲೀಸ್ ಡೇಟ್ ಸಿಕ್ಕಿದೆ. ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಹೊಸ ರಿಲೀಸ್ ಡೇಟ್ ಅನ್ನು ರಿವೀಲ್ ಮಾಡಿದ್ದು, ಈ ಸಲ ಪಕ್ಕಾ ರಿಲೀಸ್ ಎಂದು ಫ್ಯಾನ್ಸ್‌ಗೆ ಭರವಸೆ ಕೊಟ್ಟಿದ್ದಾರೆ.

ಯುವ ರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದು 'ಎಕ್ಕ' ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಆ ಟೀಸರ್ ನೋಡಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಭಾವುಕರಾಗಿದ್ದರು. 'ಜಾಕಿ'ಯನ್ನು ಸಿನಿಮಾವನ್ನು ನೆನಪಿಸಿದ್ದ 'ಎಕ್ಕ' ದೊಡ್ಮನೆ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಥಿಯೇಟರ್‌ಗೆ ನುಗ್ಗುವುದೇ ಎಂದುಕೊಂಡಿದ್ದ ಫ್ಯಾನ್ಸ್ ಒಂದು ತಿಂಗಳು ಪೋಸ್ಟ್ ಪೋಸ್ ಮಾಡಿಕೊಳ್ಳಬೇಕಿದೆ.
ಪವರ್ ಫ್ಯಾನ್ಸ್ ಫುಲ್ ಖುಷ್
1 ನಿಮಿಷ 9 ಸೆಕೆಂಡ್‌ಗಳ ಸ್ಮಾಲ್ ಟೀಸರ್ ಕಿಕ್ ಕೊಟ್ಟಿತ್ತು. ಅಪ್ಪು ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ಸಿಯಾಗಿತ್ತು. ಯುವ ರಾಜ್‌ಕುಮಾರ್ ಅವರಲ್ಲಿ ಅಪ್ಪುವನ್ನು ಕಾಣುತ್ತಿದ್ದ ಅಭಿಮಾನಿಗಳು ಟೀಸರ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಈ ಟೀಸರ್‌ನಲ್ಲಿ ಯುವ ಎಂಟ್ರಿ, ಡೈಲಾಗ್ ಹಾಗೂ ಮ್ಯಾನರಿಸಂಗೆ ಪವರ್‌ಸ್ಟಾರ್ ಫ್ಯಾನ್ಸ್ ಕಳೆದು ಹೋಗಿದ್ದರು. ಇನ್ನು ಸಿನಿಮಾ ಯಾವಾಗ ರಿಲೀಸ್ ಎಂದು ಗೊಂದಲಕ್ಕೀಡಾಗಿದ್ದ ಫ್ಯಾನ್ಸ್‌ಗೆ ಖುಷಿ ವಿಷಯ ಸಿಕ್ಕೇ ಬಿಟ್ಟಿದೆ.
ಶಿವಣ್ಣನ ಬರ್ತ್‌ಡೇ ಆಗ್ತಿದ್ದಂತೆ ರಿಲೀಸ್
ಹೌದು ಜೂನ್‌ನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಪೋಸ್ಟ್‌ಪೋಸ್ ಮಾಡಲಾಗಿತ್ತು. ಈಗ ಹೊಸ ರಿಲೀಸ್ ಡೇಟ್ ಸಿಕ್ಕಿದೆ. ಜುಲೈ 18ರಂದು ಅದ್ಧೂರಿಯಾಗಿ ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬವನ್ನು ಮುಗಿದ ಒಂದು ವಾರದ ಬಳಿಕ 'ಎಕ್ಕ' ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರಿವೀಲ್ ಮಾಡಿದ್ದಾರೆ.
ಮಗುನೂ ಇದ್ದಾನೆ ಮೃಗನೂ ಇದ್ದಾನೆ"
ರೋಹಿತ್ ಪದಕಿ ನಿರ್ದೇಶಿಸುತ್ತಿರುವ 'ಎಕ್ಕ' ಸಿನಿಮಾ ಮಾಸ್ ಪ್ರಿಯರಿಗೆ ಹಬ್ಬ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ. ಟೀಸರ್‌ನಲ್ಲೇ ನಿರ್ದೇಶಕರು ಈ ಸುಳಿವು ಕೊಟ್ಟಿದ್ದಾರೆ. ಮಾಸ್ ಡೈಲಾಗ್ ಹೇಳುತ್ತಾ ಪೊರಕೆಯೊಳಗೆ ಗನ್ ಇಟ್ಟು ಶೂಟ್ ಮಾಡುವ ದೃಶ್ಯ ಅಪ್ಪು ಫ್ಯಾನ್ಸ್‌ಗೆ ಕಿಕ್ ಕೊಟ್ಟಿತ್ತು. ಕೆಲವು ಪಂಚಿಂಗ್ ಡೈಲಾಗ್‌ಗಳು ಪಂಚ್ ಕೊಟ್ಟಿದ್ದವು. ಮಗು-ಮೃಗದ ಡೈಲಾಗ್ ಒಂದಾದರೆ, ಇನ್ನಿಂದು "ಇದು ಇಲ್ಲಿಗೆ ನಿಲ್ಲೋದಿಲ್ಲ" ಅನ್ನೋ ಡೈಲಾಗ್ ಮಾಸ್ ಮಂದಿಗೆ ಮಸ್ತ್ ಎನಿಸಿದೆ. ಇನ್ನೂ ಪೂರ್ಣ ಪ್ರಮಾಣದ ಪ್ರಚಾರ ಶುರುವಾದ್ಮೇಲೆ 'ಎಕ್ಕ' ಕ್ರೇಜ್ ದುಪ್ಪಟ್ಟು ಆಗಬಹುದು.
'ಎಕ್ಕ' ಟೀಸರ್ ಪುನೀತ್ ರಾಜ್‌ಕುಮಾರ್ ನಟಿಸಿದ 'ಜಾಕಿ'ಯನ್ನು ಮತ್ತೆ ಮತ್ತೆ ನೆನಪಿಸುತ್ತಿದೆ. ಈ ಕಾರಣಕ್ಕೆ ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಹಿಟ್ ಆಗೋದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಸದ್ಯ ಚಿಕ್ಕದೊಂದು ತುಣುಕು ನೋಡಿ ಎಂಜಾಯ್ ಮಾಡಿರುವ ಅಪ್ಪು ಫ್ಯಾನ್ಸ್ ಟ್ರೈಲರ್ ಬಂದ್ಮೇಲೆ ಎಷ್ಟು ಖುಷಿ ಪಡಬಹುದು? ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.


Click it and Unblock the Notifications











