For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಬರ್ಥಡೇ ಮುನ್ನವೇ ಅಭಿಮಾನಿಗಳಿಗೆ ಧಮಾಕ ಖಚಿತ

  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿಲ್ಲ. ಅವರ ಬಯಕೆಗೆ ತಕ್ಕಂತೆ 'ಯುವರತ್ನ' ಚಿತ್ರತಂಡ ಅವರಿಗೆ ಸಿಹಿ ಸುದ್ದಿ ನೀಡಿದೆ. ಪುನೀತ್ ಅಭಿನಯದ 'ಯುವರತ್ನ' ಚಿತ್ರತಂಡ ಅವರ ಜನ್ಮದಿನದ ಸಂಭ್ರಮವನ್ನು ದುಪ್ಪಟ್ಟು ಮಾಡಲು ಸಿದ್ಧತೆ ನಡೆಸಿದೆ.

  ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಜನ್ಮದಿನ. ಅಂದು ತಮಗೆ ಗಿಫ್ಟ್ ಕೊಡಿ. ಪುನೀತ್ ಹುಟ್ಟುಹಬ್ಬಕ್ಕೆ ಇನ್ನಷ್ಟು ಕಳೆ ಬರಬೇಕೆಂದರೆ ಚಿತ್ರತಂಡದಿಂದ ಯಾವುದಾದರೂ ಹೊಸ ಸಂಗತಿ ಸಿಗಲೇಬೇಕು. ಯುವರತ್ನದ ಟೀಸರ್ ಅಥವಾ ಹಾಡು ಯಾವುದಾದರೂ ಒಂದು ಖುಷಿಯ ಅಂಶವನ್ನು ಕೊಡಿ ಎಂದು ಪುನೀತ್ ಅಭಿಮಾನಿಗಳು ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ನಿರ್ಮಾಣ ಸಂಸ್ಥೆಯನ್ನು ಒತ್ತಾಯಿಸಿದ್ದರು. ಅದಕ್ಕೆ ಒಪ್ಪಿಕೊಂಡಿರುವ ಚಿತ್ರತಂಡ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಹೊಸ ಸುದ್ದಿ ನೀಡಿದೆ.

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಕಿರೀಟಕ್ಕೆ ಇನ್ನೊಂದು ಗರಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಕಿರೀಟಕ್ಕೆ ಇನ್ನೊಂದು ಗರಿ

  ಸಂಭಾಷಣೆಯ ಟೀಸರ್

  ಸಂಭಾಷಣೆಯ ಟೀಸರ್

  ಪವರ್ ಸ್ಟಾರ್ ಹುಟ್ಟುಹಬ್ಬದ ಮುನ್ನಾದಿನ, ಅಂದರೆ ಮಾರ್ಚ್ 16ರಂದು ಯುವರತ್ನದ ಸಂಭಾಷಣೆಯ ಟೀಸರ್ ಬಿಡುಗಡೆಯಾಗುತ್ತಿದೆ ಎಂದು ಪುನೀತ್ ರಾಜ್‌ಕುಮಾರ್, 'ಯುವರತ್ನ'ದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ನ ಕಾರ್ತಿಕ್ ಗೌಡ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಮಾಹಿತಿ ನೀಡಿದ್ದಾರೆ.

  ಡೈಲಾಗ್‌ನ ಪವರ್ ಪ್ಯಾಕ್

  ಡೈಲಾಗ್‌ನ ಪವರ್ ಪ್ಯಾಕ್

  ಪುನೀತ್ ಜನ್ಮದಿನದ ಸಂಭ್ರಮಾಚರಣೆ ಮೊದಲೇ ಶುರುವಾಗುತ್ತಿದೆ. ಪವರ್ ಸ್ಟಾರ್ ಅಭಿಮಾನಿಗಳಿಗೆ ಮಾರ್ಚ್ 16ರಂದು ಪವರ್ ಪ್ಯಾಕ್‌ನಿಂದ ತುಂಬಿರುವ ಡೈಲಾಗ್ ಟೀಸರ್ ಸಿಗಲಿದೆ ಎಂದು ಚಿತ್ರತಂಡ ಸೋಮವಾರ ಮಾಹಿತಿ ನೀಡಿದೆ.

  ಟ್ರೆಂಡ್ ಆದ ಯುವರತ್ನ

  ಟ್ರೆಂಡ್ ಆದ ಯುವರತ್ನ

  ಚಿತ್ರತಂಡ ಈ ಮಾಹಿತಿ ನೀಡುತ್ತಿದ್ದಂತೆಯೇ ಪುನೀತ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರದ್ದೇ ಹವಾ ಶುರುವಾಗಿದೆ. ಯುವರತ್ನ ಟೀಸರ್ ಕುರಿತು ಸಾವಿರಾರು ಟ್ವೀಟ್‌ಗಳನ್ನು ಮಾಡಿದ್ದು, ಟ್ವಿಟ್ಟರ್‌ನಲ್ಲಿ #Yuvarathnaa ಟ್ರೆಂಡ್ ಸೃಷ್ಟಿಸಿದ್ದಾರೆ.

  ಯುವರತ್ನ ಚಿತ್ರತಂಡ

  ಯುವರತ್ನ ಚಿತ್ರತಂಡ

  'ಯುವರತ್ನ' ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಸಯ್ಯೇಶಾ ಸೈಗಲ್ ನಟಿಸಿದ್ದಾರೆ. ಜತೆಗೆ ಸೋನು ಗೌಡ, ಡಾಲಿ ಧನಂಜಯ, ಬೋಮನ್ ಇರಾನಿ, ಪ್ರಕಾಶ್ ರೈ ಮುಂತಾದವರು ಇದ್ದಾರೆ. ಎಸ್. ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

  English summary
  Yuvarathnaa movie dialogue teaser will be released on March 16 before a day of Puneeth Rajkumar's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X