Dhananjaya Movies: 'ಪುಷ್ಪ 2'.. 'ಉತ್ತರಕಾಂಡ'.. ಒಂದಾ.. ಎರಡಾ? ನಟ ರಾಕ್ಷಸನ ಕೈಯಲ್ಲಿರೋ ಸಿನಿಮಾಗಳೆಷ್ಟು?

ನಟರಾಕ್ಷಸ ಡಾಲಿ ಧನಂಜಯ್ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಾಲ್ಕು ವರ್ಷಗಳ ಬಳಿಕ ತಮ್ಮ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಈಗಾಗಲೇ ಸಿನಿಮಾದಲ್ಲಿ ನಟಿಸುತ್ತಿರುವ ಚಿತ್ರತಂಡಗಳು ವಿಶ್ ಮಾಡಿವೆ.

ಸೆಂಚುರಿ ಸ್ಟಾರ್ ಶಿವಣ್ಣನಂತೆಯೇ ಡಾಲಿ ಧನಂಜಯ್ ಕೈ ತುಂಬಾ ಸಿನಿಮಾಗಳಿವೆ. ಕನ್ನಡ ಹಾಗೂ ಪರಭಾಷೆಯ ಸಿನಿಮಾ ನಿರ್ಮಾಣ ಸಂಸ್ಥೆಗಳು ಕೂಡ ಧನಂಜಯ್‌ ಜೊತೆ ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.

Zeebra, Anna From Mexico Pushpa 2 list of Upcoming movies of Daali Dhananjaya

ಧನಂಜಯ್ ಕೇವಲ ಕನ್ನಡದಲ್ಲಷ್ಟೇ ಅಲ್ಲ. ಪರಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ಖುಷಿ ಸಂದರ್ಭದಲ್ಲಿ ನಟರಾಕ್ಷಸನ ಬಳಿ ಇರುವ ಸಿನಿಮಾಗಳ ಪಟ್ಟಿ ಹೀಗಿದೆ. ಇದು ಡಾಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.

ಪ್ಯಾನ್ ಇಂಡಿಯಾ ಸಿನಿಮಾ 'ಜೀಬ್ರಾ'

ಡಾಲಿ ಧನಂಜಯ್ ಹೀರೊ ಆಗಿ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ 'ಜೀಬ್ರಾ'. ಇದೊಂದು ಮಲ್ಟಿಸ್ಟಾರರ್ ಸಿನಿಮಾ ಕೂಡ ಹೌದು. ಈಶ್ವರ್ ಕಾರ್ತಿಕ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನ ನಿರ್ಮಾಣ ಸಂಸ್ಥೆ 'ಜೀಬ್ರಾ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಜೀಬ್ರಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾ ಶೇ.90ರಷ್ಟು ಶೂಟಿಂಗ್ ಮುಗಿಸಿದೆ. ಶೀಘ್ರದಲ್ಲಿಯೇ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಲಿದೆ.

Zeebra, Anna From Mexico Pushpa 2 list of Upcoming movies of Daali Dhananjaya

'ಪುಷ್ಪ 2'- ಜಾಲಿ ರೆಡ್ಡಿ

ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಸಿನಿಮಾದಲ್ಲಿ ಡಾಲಿ ಧನಂಜಯ್ ನಟಿಸಿದ್ದು ಗೊತ್ತೇ ಇದೆ. ಈ ಸಿನಿಮಾ ಜಾಲಿ ರೆಡ್ಡಿ ಪಾತ್ರದಲ್ಲಿ ಧನಂಜಯ್ ನಟಿಸಿದ್ದರು. ಈಗ 'ಪುಷ್ಪ 2' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದರೆ, ಇದೂವರೆಗೂ 'ಪುಷ್ಪ 2' ನಲ್ಲಿ ಧನಂಜಯ್ ಇದ್ದಾರಾ? ಅನ್ನೋ ಸುಳಿವು ಇರಲಿಲ್ಲ. ಈಗ ಅದೇ ತಂಡ ಧನಂಜಯ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಲುಕ್ ಅನ್ನು ಪೋಸ್ಟ್ ಮಾಡಿದೆ. ಈ ಸಿನಿಮಾ ಡಾಲಿ ವೃತ್ತಿ ಬದುಕಿನ ಮತ್ತೊಂದು ಎಕ್ಸ್‌ಪೆಕ್ಟೆಡ್ ಸಿನಿಮಾ.

'ಅಣ್ಣಾ From Mexico'

ಬರ್ತ್‌ಡೇಗೆ ಅನೌನ್ಸ್ ಆದ ಮತ್ತೊಂದು ಸಿನಿಮಾ 'ಅಣ್ಣಾ From Mexico'. ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಸಂಸ್ಥೆಯಲ್ಲಿ 'ಬಡವ ರಾಸ್ಕಲ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದೇ ತಂಡ ಸೇರಿಕೊಂಡು 'ಅಣ್ಣಾ From Mexico' ಸಿನಿಮಾವನ್ನು ಅನೌನ್ಸ್ ಮಾಡಿದೆ. ಈ ಸಿನಿಮಾವನ್ನು 'ಬಡವ ರಾಸ್ಕಲ್' ನಿರ್ದೇಶಕ ಶಂಕರ್ ಗುರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಉತ್ತರಕಾಂಡ'

ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿರುವ 'ಉತ್ತರಕಾಂಡ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರೋಹಿತ್ ಪದಕಿ ನಿರ್ದೇಶಿಸುತ್ತಿರುವ ಈ ಸಿನಿಮಾ ಟೀಸರ್‌ನಿಂದ ಕಿಕ್ ಕೊಟ್ಟಿದೆ. ಡಾಲಿಯ ಲುಕ್ ಹಾಗೂ ಮ್ಯಾನರಿಸಂಗೆ ಸಿನಿಮಾ ಮಂದಿ ಫಿದಾ ಆಗಿದ್ದಾರೆ. ಇದು ಕೂಡ ಧನಂಜಯ್ ವೃತ್ತಿ ಬದುಕಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಇದರೊಂದಿಗೆ 'ತೋತಾಪುರಿ 2' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ನಾಲ್ಕು ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಹೇಗೆ ಮೋಡಿ ಮಾಡುತ್ತವೆ ಅನ್ನೋದನ್ನು ಎದುರು ನೋಡುತ್ತಿದ್ದಾರೆ.

More from Filmibeat

English summary
Zeebra, Anna From Mexico Pushpa 2 list of Upcoming movies of Daali Dhananjaya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X