5 ಭಾಷೆಯಲ್ಲಿ 'ಜಿರೋ ಟೂ ಒನ್' ನಿರ್ಮಾಣ; ಇದು ಮೋಟಿವೇಶನ್‌ ಜಾನರ್ ಸಿನಿಮಾ

ಹೊಸ ಪ್ರಯತ್ನಗಳು ಸ್ಯಾಂಡಲ್‌ವುಡ್‌ನಲ್ಲಿ ಬಹಳಷ್ಟು ಆಗುತ್ತಲೇ ಇರುತ್ತವೆ. ಅಂತಹ ಸಿನಿಮಾಗಳಲ್ಲಿ 'ಜಿರೋ ಟೂ ಒನ್' ಸಿನಿಮಾ ಕೂಡ ಒಂದು. ಈ ಸಿನಿಮಾವೀಗ ಬೆಂಗಳೂರಿನಲ್ಲಿ ಅದ್ಧುರಿಯಾಗಿ ಸೆಟ್ಟೇರಿದೆ. ಕನ್ನಡದವರೇ ಆಗಿರುವ ನಾಗವೇಣಿ ಸಂತೋಷ್ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ.

'ಜೀರೋ ಟು ಒನ್' ಟೈಟಲ್‌ನಿಂದಲೇ ಈ ಸಿನಿಮಾ ಗಮನ ಸೆಳೆಯುತ್ತಿದೆ. ಯುವ ಜನತೆಗೆ ಪ್ರೇರಣೆ ನೀಡುವ ಮೋಟಿವೇಶನ್‌ ಜಾನರ್ ಸಿನಿಮಾ ಎಂದು ಚಿತ್ರಂಡ ಹೇಳಿಕೊಂಡಿದೆ. ಈ ಸಿನಿಮಾ ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ 5 ಭಾಷೆಯಲ್ಲಿ ಇದೇ ವರ್ಷ ಸೆಟ್ಟೇರಲು ರೆಡಿಯಾಗ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲಗು ಹೀಗೆ 5 ಭಾಷೆಗಳಲ್ಲಿ 'ಜೀರೋ ಟು ಒನ್' ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ.

Zero to One Motivational Genre movie will be releasing in Kannada Hindi English Tamil Telugu

ಬೆಂಗಳೂರಿನಲ್ಲಿ 'ಜೀರೋ ಟು ಒನ್' ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ನಾಗವೇಣಿ ಸಂತೋಷ್ ಅವರ ಹಿತೈಷಿಗಳಾದ ಅವಧೂತ ಅರ್ಜುನ್ ಗುರೂಜಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾ ಸೆಟ್ಟೇರಿದ ಸಮಯದಲ್ಲಿ ನಾಯಕ ಮತ್ತು ನಿರ್ದೇಶಕ ನಾಗವೇಣಿ ಸಂತೋಷ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ನಮಗೆ ತುಂಬಾ ಮುಖ್ಯ ಕನ್ನಡ ಮತ್ತು ಇಂಗ್ಲೀಷ್ 2 ಭಾಷೆ ಜೊತೆಗೆ ಭಾರತೀಯ ಭಾಷೆಯಲ್ಲಿ ಬರ್ತಿದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಸಿನಿಮಾ ಬರುತ್ತೆ. ನಿಮ್ಮೆಲ್ಲರ ಸಪೋರ್ಟ್ ಮುಖ್ಯ. ನಾನೇ ಎಲ್ಲ ಜವಾಬ್ದಾರಿ ತಗೊಂಡು ಮುಂದೆ ಬರ್ತಿದ್ದೀನಿ. ನನ್ನ 13 ವರ್ಷದ ಕನಸಿದು. ತುಂಬಾನೇ ಪ್ರಯತ್ನಪಟ್ಟೆ.. ಆದರೆ, ಯಾರೂ ನನ್ನ ಬೆಂಬಲಕ್ಕೆ ಬಂದಿಲ್ಲ. ಎಲ್ಲದಕ್ಕೂ ಟೈಮ್ ಬೇಕು. ನನ್ನ ಜೀವನದ ಜೊತೆ ನಡೆದಿದ್ದು ಆಗಿರಬಹುದು, ನಾನೇ ಎಲ್ಲದನ್ನು ಡಿಸೈಡ್ ಮಾಡಿದ್ದೀನಿ. ಹಿಂದಿಯಲ್ಲೂ ಮಾಡ್ತಿದ್ದೀನಿ. ಆದರೆ ಕನ್ನಡ ಮೊದಲು. ನಾವು ಕನ್ನಡದ ಜೊತೆಗೆ ಇಂಗ್ಲಿಷ್ ಸಿನಿಮಾವನ್ನು ಕೂಡ ಮಾಡ್ತಿದ್ದೀನಿ." ನಾಯಕ ಮತ್ತು ನಿರ್ದೇಶಕ ನಾಗವೇಣಿ ಸಂತೋಷ ಹೇಳಿದ್ದಾರೆ.

ಇನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವಧೂತ ಅರ್ಜುನ್ ಗುರೂಜಿ ಕೂಡ ಹೊಸ ತಂಡಕ್ಕೆ ಶುಭ ಹಾರೈಸಿದ್ದಾರೆ. "ಯಾವುದೇ ವ್ಯಕ್ತಿಗೆ ತಾನು ಹುಟ್ಟಿದ ನೆಲ ಮಣ್ಣು ಇದರ ಮೇಲೆ ಬಹಳ ಅಭಿಮಾನ ಇರುತ್ತೆ. ನನಗೂ ಕೂಡ ಕನ್ನಡ ಅನ್ನೋ ಶಬ್ದದ ಮೇಲೆ ತುಂಬಾ ಅಭಿಮಾನ. ಹೊಸಬರ ತಂಡ ಒಳ್ಳೆ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ನಮ್ಮೆಲ್ಲರಿಗೂ ಆಸೆ ನಮ್ಮ ಕನ್ನಡ ಸಿನಿಮಾ ಮುಂದೆ ಬರಬೇಕು ಮುಂದಿನ ದಿನಗಳಲ್ಲಿ ನಮ್ಮ ಕನ್ನಡ ಸಿನಿಮಾ ರಂಗ ಬೆಳಿಬೇಕು ಎತ್ತರಕ್ಕೆ ಹೋಗ್ಬೇಕು.. ಎಷ್ಟೋ ಜನ ಕಲಾವಿದರೂ ಕಷ್ಟಪಟ್ಟಿದ್ದಾರೆ. ದರ್ಶನ್, ಸುದೀಪ್ ರಾಜ್ ಕುಮಾರ್, ವಿಷ್ಣು ವರ್ಧನ್ ಹೀಗೆ ತುಂಬಾ ಜನ ಇದ್ದಾರೆ. ನಾವೆಲ್ಲರೂ ಕಲಾಭಿಮಾನಿಗಳು ಈ ಸಿನಿಮಾರಂಗ ತುಂಬಾ ಕಷ್ಟ ಪಡ್ತಿದ್ದೆ ಅದು ನಿಲ್ಲಬೇಕು ಒಳ್ಳೊಳ್ಳೆ ಸಿನಿಮಾಗಳು ಬರಬೇಕು ಹೊಸಬರ ಸಿನಿಮಾ ಚನ್ನಾಗಿ ಆಗಿದೆ.. ಈ ಸಿನಿಮಾರಂಗಕ್ಕೆ ಒಳ್ಳೆಯದಾಗಲಿ" ಎಂದು ಹರಸಿದ್ದಾರೆ.

"ಸಿನಿಮಾ ಅಂದ ತಕ್ಷಣ ಪಾಸಿಟಿವ್ ವೈಬ್ಸ್. ಈ ತಂಡ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ನಾವು ಓದ್ಕೊಂಡು ಕೆಲಸ ಮಾಡ್ಕೊಂಡು ಸಿನಿಮಾದಲ್ಲಿ ತುಂಬಾ ಕಷ್ಟಪಟ್ಟು ನಟಿಸಿದ್ದೇನೆ. ನಮ್ಮನ್ನ ಬೆಂಬಲಿಸಿ ಪ್ರೋತ್ಸಾಹಿಸಿ" ಎಂದು ಸಿನಿಮಾದ ನಾಯಕಿ ಮನಿಷಾ ಭಟ್ ಹೇಳಿದ್ದಾರೆ. ಮತ್ತೊಬ್ಬ ನಾಯಕಿ ರಕ್ಷಿತಾ ಗೌಡ ಕೂಡ "ನನ್ನ ಮೊದಲ ಸಿನಿಮಾ. ತುಂಬಾ ಖುಷಿ ಇದೆ. ನಮ್ಮ ಈಗೀನ ಯಂಗ್ ಸ್ಟರ್ಸ್ ಗೆ ಈ ಮೂವಿ ಡೆಡಿಕೇಟ್ ಮಾಡ್ತೀವಿ. ಸಕ್ಸಸ್ ನಾ ತುಂಬಾ ಖುಷಿಯಿಂದ ಸ್ವಾಗತ ಮಾಡ್ತಾರೋ ಫೆಲ್ಯೂರ್ ಅನ್ನೂ ಕೂಡ ಹಾಗೆ ತಗೋಬೇಕು." ಎಂದರು.

ಎ.ಯು. ಮೂವೀಸ್ ಮೂಲಕ ನಾಗವೇಣಿ ಸಂತೋಷ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಕೂಡ ಹೇಳುತ್ತಿದ್ದಾರೆ. ಹಾಗೇ ಚೊಚ್ಚಲ ಬಾರಿಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ಆಗಸ್ಟ್ ಇಲ್ಲವೇ, ಸೆಪ್ಟೆಂಬರ್‌ನಲ್ಲಿ ತೆರೆಗೆ ತರುವುದಕ್ಕೆ ಪ್ಲಾನ್ ಮಾಡಿಕೊಂಡಿದೆ.

More from Filmibeat

English summary
Zero to One Motivational Genre movie will be releasing in Kannada, Hindi, English, Tamil, Telugu.
Read more about: kannada movie new movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X