ಶಿವಣ್ಣನ ಪುತ್ರಿ ನಿರ್ಮಾಣದ ಸಿನಿಮಾ 'ಫೈರ್ ಫ್ಲೈ' ಶೂಟಿಂಗ್ ಕಂಪ್ಲೀಟ್: ಏನಂದ್ರು ನಿವೇದಿತಾ ಶಿವರಾಜ್‌ಕುಮಾರ್?

ಒಂದ್ಕಡೆ ಶಿವಣ್ಣನ ಪತ್ನಿ ಗೀತಾ ಶಿವರಾಜ್‌ಕುಮಾರ್ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಅದೇ ಇನ್ನೊಂದು ಕಡೆ ಪುತ್ರಿ ನಿವೇದಿತಾ ಕೂಡ ನಿರ್ಮಾಣ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅಮ್ಮ ಹಾಗೂ ಮಗಳ ಇಬ್ಬರ ಸಿನಿಮಾ ಕೂಡ ಕಂಪ್ಲೀಟ್ ಆಗಿದೆ. ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ ಸಿನಿಮಾ 'ಭೈರತಿ ರಣಗಲ್'. ಪುತ್ರಿ ನಿವೇದಿತಾ ನಿರ್ಮಾಣದ ಸಿನಿಮಾ 'ಫೈರ್‌ ಫ್ಲೈ'.

'ಫೈರ್‌ ಫ್ಲೈ' ಶಿವಣ್ಣನ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. ಹೀಗಾಗಿ ಸಿನಿಮಾ ಬಗ್ಗೆ ಶಿವಣ್ಣನ ಅಭಿಮಾನಿಗಳಿಗೆ ಕುತೂಹಲವಿದೆ. ಸಿನಿಮಾ ಮೇಕಿಂಗ್ ಹಾಗೂ ನಿರ್ಮಾಣ ಇದ್ಯಾವುದೂ ನಿವೇದಿತಾ ಶಿವರಾಜ್‌ಕುಮಾರ್ ಅವರಿಗೆ ಹೊಸದೇನೂ ಅಲ್ಲ. ಬಾಲ್ಯದಿಂದಲೂ ಸಿನಿಮಾ ಕುಟುಂಬದಲ್ಲಿಯೇ ಬೆಳೆದು ಬಂದಿದ್ದಾರೆ. ಆದರೆ, ಮೊದಲ ಸಿನಿಮಾ ನಿರ್ಮಾಣ ಯಾವಾಗಲೂ ವಿಶೇಷವಾಗಿ ಇರುತ್ತೆ.

Niveditha Shivarajkumar debut production movie Fire Fly shooting completed

ಈ ಸಿನಿಮಾದಲ್ಲಿ ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. 'ಫೈರ್ ಫ್ಲೈ'ನಲ್ಲಿ ವಂಶಿ ನಟ ಕಮ್ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಂಶಿ ಜೊತೆ ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ ಸೇರಿದಂತೆ ಹಲವು ಹಿರಿಯ ನಟರು ಕೂಡ ಅಭಿನಯಿಸಿದ್ದಾರೆ. ಇನ್ನು ವಂಶಿಗೆ‌ ನಾಯಕಿಯಾಗಿ ರಚನಾ ಇಂದರ್ ಜೊತೆಯಾಗಿದ್ದಾರೆ.

ತನ್ನ ಮೊದಲ ನಿರ್ಮಾಣದ 'ಫೈರ್ ಫ್ಲೈ' ಸಿನಿಮಾದ ಬಗ್ಗೆ ನಿವೇದಿತಾ ಶಿವರಾಜ್‌ಕುಮಾರ್ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. "ಚಿಕ್ಕವಳು ಇದ್ದಾಗಿನಿಂದಲೂ ಸಿನಿಮಾ ಹಾಗೂ ಕಥೆಗಳೊಡನೆ ಬೆಳೆದಿದ್ದೇನೆ. ನಾನು ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ 'ಫೈರ್ ಪ್ಲೈ'. ಫೈರ್ ಫ್ರೈ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು, ಚಿತ್ರ ತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು, ಅತ್ಯದ್ಭುತ ಪ್ರತಿಭೆಗಳು ಹಾಗೂ ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರೂ ಹಾಗೂ ಅವರೊಡನೆ ಮೂಡಿದ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು." ಎಂದು ನಿವೇದಿತಾ ಶಿವರಾಜ್‌ಕುಮಾರ್ ಬರೆದು ಫೋಸ್ಟ್ ಮಾಡಿದ್ದಾರೆ.

ಹಾಗೇ "ಶುರುವಾದ ಪ್ರತಿಯೊಂದು ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ, ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ 'ಫೈರ್ ಪ್ಲೈ' ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ" ಎಂದು ಮೊದಲ ಸಿನಿಮಾ ಮುಗಿಸಿದ ಖುಷಿಯನ್ನು ಹಂಚಿಕೊಂಡಿದ್ದಾರೆ.

Niveditha Shivarajkumar debut production movie Fire Fly shooting completed

'ಫೈರ್ ಫ್ಲೈ' ಸಿನಿಮಾಗೆ ಅಭಿಲಾಷ್ ಕಳತ್ತಿ ಕ್ಯಾಮರಾ ವರ್ಕ್ ಇದ್ದರೆ, ಚರಣ್ ರಾಜ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಅವರ ಸಂಭಾಷಣೆಯಿದೆ. ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ.

ಇನ್ನೊಂದು ಕಡೆ ಗೀತಾ ಆರ್ಟ್ಸ್ ಬ್ಯಾನರ್‌ನಿಂದ ಶಿವರಾಜ್‌ಕುಮಾರ್ ನಟಿಸುತ್ತಿರುವ 'ಭೈರತಿ ರಣಗಲ್' ಸಿನಿಮಾ ರೆಡಿಯಾಗಿದೆ. ಈ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದರೆ, ನರ್ತನ್ ಸಿನಿಮಾ ಆಕ್ಷನ್ ಕಟ್ ಹೇಳಿದ್ದಾರೆ. ಇದು 'ಮಫ್ತಿ' ಸಿನಿಮಾ ಪ್ರೀಕ್ವೆಲ್ ಆಗಿದ್ದರಿಂದ ಶಿವಣ್ಣ ಫ್ಯಾನ್ಸ್ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದು, ನವೆಂಬರ್ 15ಕ್ಕೆ ಬಿಡುಗಡೆಯಾಗಲಿದೆ.

More from Filmibeat

English summary
Niveditha Shivarajkumar debut production movie Fire Fly shooting completed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X