Gold-Silver: ಬೆಳ್ಳಿ ಬೆಲೆ ಭಾರಿ ಕುಸಿತ, ಬಂಗಾರದ ದರವೂ ಜಾರುತ್ತಿದೆ: ಏರುತ್ತೆ ಅಂತ ತಗೊಂಡೋರು ಕಂಗಾಲು

By Shankrappa Parangi

ನವದೆಹಲಿ: ಭಾರತ ಮಾತ್ರವಲ್ಲದೇ, ಜಾಗತಿಕವಾಗಿ ಒಂದಷ್ಟು ಲಾಭವನ್ನೂ ನೀಡಿರುವ ಚಿನ್ನ ಮತ್ತು ಬೆಳ್ಳಿಯ ದರಗಳು ಸಾಕಷ್ಟು ಏರಿಳಿತದಿಂದ ಕೂಡಿವೆ. ಗರಿಷ್ಠ ಮಟ್ಟದಲ್ಲಿ ಹೆಚ್ಚಳ ಕಂಡಿದ್ದ ಈ ಎರಡೂ ಲೋಹಗಳು ಅಷ್ಟೇ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯ ಹಾದಿ ಹಿಡಿದಿವೆ. ಕಡಿಮೆ ವಹೀವಾಟು ನಡೆಸುವ ಮೂಲಕ ಹೂಡಿಕೆದಾರರನ್ನು ಸಂಕಷ್ಟಕ್ಕೆ ನೂಕಿವೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಗ್ರಾಫ್, ದರ ಕುರಿತು ಮುನ್ಸೂಚನೆ ಗಮನಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಚಿನ್ನ-ಬೆಳ್ಳಿಯ ಬೆಲೆಗಳಲ್ಲಿ ಕಳೆದ ಎರಡು ವಾರಗಳಲ್ಲಿ ಸಾಕಷ್ಟು ಇಳಿಕೆ, ಆಗಾಗ ಹೆಚ್ಚಳ ದಾಖಲಾಗಿದೆ. ಅಲ್ಪಾವಧಿಯ ಏರಿಕೆಯು ಕಂಡು ಬಂದಿದ್ದು, ಈ ಲೋಹಗಳ ವಹೀವಾಟು ಗರಿಷ್ಠ ಮಟ್ಟಕ್ಕಿಂತಲು ಕಡಿಮೆ ಆಗಿದೆ. ಇದಕ್ಕೆ ಅಮೆರಿಕ ದೇಶದ ಒಪ್ಪಂದ ನೀತಿಗಳು ಸೇರಿ ಒಂದಷ್ಟು ಅಂಶಗಳು ಕಾರಣ ಎನ್ನಲಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ಏರಿಳಿತಗಳ ತೀವ್ರತೆಯಿಂದಾಗಿ ಹೂಡಿಕೆದಾರರು ಇನ್ನುಮುಂದೆ ಹೊಸದಾಗಿ ಹೂಡಿಕೆ/ಖರೀದಿ ಮಾಡುವುದಿದ್ದರೆ ಅಥವಾ ಮಾರಾಟ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ತಿಳಿಸಿದ್ದಾರೆ.


Gold and Silver Prices

ಬೆಳ್ಳಿ ದರದಲ್ಲಿ ಭಾರೀ ಏರಿಳಿತ: 1.75 ಲಕ್ಷ ರೂ. ಕುಸಿತ

ಗಮನಾರ್ಹವಾಗಿ ದಾಖಲೆಯ ಮಟ್ಟದಲ್ಲಿ ಗಗನಕ್ಕೇರಿದ್ದ ಬೆಳ್ಳಿಯ ಬೆಲೆಯು ಕೆಲವು ದಿನಗಳಿಂದ ದಿಢೀರ್ ಇಳಿಕೆ ಆಯಿತು. ಜನವರಿ ಅಂತ್ಯದಲ್ಲಿ ದಾಖಲೆಯ ಗರಿಷ್ಠ (ಬೆಳ್ಳಿ ಪ್ರತಿ ಕೆಜಿಗೆ 4.20 ಲಕ್ಷ ರೂ.) ತಲುಪಿತ್ತು. ಫೆಬ್ರವರಿ 1ರ ಹೊತ್ತಿಗೆ ಎರಡೇ ದಿನದಲ್ಲಿ ದರ ಕುಸಿಯಿತು. ಹೂಡಿಕೆದಾರರಿಗೆ ಆಘಾತ ನೀಡಿತು.

Gold: ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ: ಬರೋಬ್ಬರಿ ₹24,500 ಇಳಿಕೆ; ಆಭರಣ ಪ್ರಿಯರಿಗೆ ನೆಮ್ಮದಿ

ಜನವರಿ 29 ರಂದು ಬೆಳ್ಳಿ ಒಂದು ಕೆಜಿ ದರವು ಸಾರ್ವಕಾಲಿಕ ಗರಿಷ್ಠ 4,20,048 ರೂಪಾಯಿಯಿಂದ ಕುಸಿಯಲು ಆರಂಭಿಸಿತು. ಅಲ್ಲಿಂದ ಕಳೆದ ವಾರದ ಶುಕ್ರವಾರದ (ಫೆ.13) ಹೊತ್ತಿಗೆ ಒಂದು ಕೆಜಿಗೆ 2,44,360 ರೂ.ಗಳ ವಹಿವಾಟು ನಡೆಸಿತು. ಈ ಮೂಲಕ ಸುಮಾರು 1.75 ಲಕ್ಷ ರೂ.ಗಳಷ್ಟು ದರ ಇಳಿಕೆಗೆ ಹೂಡಿಕೆದಾರರು ಸಾಕ್ಷಿಯಾದರು.

ಚಿನ್ನದ ದರ 37,000 ರೂ. ಇಳಿಕೆ ಹಾದಿ ಹೇಗಿದೆ?

ಚಿನ್ನದ ಬೆಲೆಯೂ ಇದೇ ಬೆಳ್ಳಿಯಂತೆ ನಿರಂತರ ಇಳಿಕೆ ಆಗಿ, ಕಡಿಮೆ ವಹೀವಾಟು ನಡೆಸುತ್ತಿದೆ. ಇದರ ಬೆಲೆಯಲ್ಲೂ ಏರಿಳಿತ ಮುಂದುವರಿದಿದೆ. ಜನವರಿ 29 ರಂದು ಈ ಹಳದಿ ಲೋಹವು 10 ಗ್ರಾಂಗೆ 1,93,000 ರೂಪಾಯಿ ಇತ್ತು. ಗರಿಷ್ಠ ಮಟ್ಟ ತಲುಪಿದ ಬಳಿಕ ದರ ಕುಸಿಯಲು ಆರಂಭಿಸಿತು. ನಂತರ ಒಂದೆರಡು ದಿನಗಳು ಬೆಲೆಯಲ್ಲಿ ಸ್ಥಿರತೆ ಕಂಡು ಬಂತು. ಕಳೆದ ಶುಕ್ರವಾರದ ಹೊತ್ತಿಗೆ (ಫೆ.13) 24 ಕ್ಯಾರಟ್ ಚಿನ್ನದ ಬೆಲೆ MCX ನಲ್ಲಿ 10 ಗ್ರಾಂಗೆ ಸುಮಾರು 1,55,895 ರೂ. ತಲುಪಿತು. ಅಂದರೆ ಗರಿಷ್ಠ ಮಟ್ಟದಿಂದ ಸುಮಾರು 37,000 ರೂ.ಗಳಷ್ಟು ದರ ಇಳಿಕೆ ಕಾಣುವಂತಾಯಿತು.

ಹೂಡಿಕೆದಾರರಿಗೆ ಮಹತ್ವದ ಸಲಹೆ

ಚಿನ್ನ-ಬೆಳ್ಳಿ ಬೆಲೆಯಲ್ಲಿ ಈ ಮೇಲಿನ ಹೆಚ್ಚಳ ಮತ್ತು ಕುಸಿತ ಗಮನಿಸಿದ ಹೂಡಿಕೆದಾರರು ತಟಸ್ಥವಾಗಿರುವುದು ಉತ್ತಮ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇವುಗಳ ವಹಿವಾಟು ಕೇವಲ ಎರಡೇ ವಾರಗಳಲ್ಲಿ ಇಷ್ಟೊಂದು ಬದಲಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಹೂಡಿಕೆ ಮತ್ತು ಖರೀದಿಗಳ ಮೇಲೆ ವ್ಯಾಪಕ ಪ್ರಭಾವ ಉಂಟು ಮಾಡುತ್ತದೆ. ದೇಶದ ಆರ್ಥಿಕತೆಯು ಮೇಲೂ ತನ್ನದೇ ಆದ ರೀತಿಯಲ್ಲಿ ಛಾಯೆ ಬೀರುತ್ತದೆ. ಆದ್ದರಿಂದ ಹೂಡಿಕೆದಾರರು ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಜಾಗತಿಕ ಬೆಳವಣಿಗೆಗಳ ಮೇಲೆ ಕಣ್ಣಿಡುವಂತೆ ಅವರು ಸಲಹೆ ನೀಡಿದ್ದಾರೆ.

Credit: Oneindia

English summary
Drastic price drops in gold and silver leave investors cautious as global market trends shift. Know more details, tips for gold-silver investors in Kannada.
Read more about: notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X