Valimai: ಅಜಿತ್ OTT ಎಂಟ್ರಿಗೆ 10 ಸಾವಿರ ಚ. ಅಡಿ ಪೋಸ್ಟರ್: ಎಲ್ಲಾ ‘ವಲಿಮೈ’ ಮಹಿಮೆ

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನಿರ್ಮಿಸಿದ ತಮಿಳು ಸಿನಿಮಾ 'ವಲಿಮೈ'. ಇದು ಅಜಿತ್‌ಗಾಗಿ ಬೋನಿ ಕಪೂರ್ ನಿರ್ಮಿಸಿದ ಎರಡನೇ ಸಿನಿಮಾ. ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಳೆದ ತಿಂಗಳು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿಈ ಸಿನಿಮಾ ಬೇಜಾನ್ ಸದ್ದು ಮಾಡಿತ್ತು. ಅದೇ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ.

ತಮಿಳು ಸೂಪರ್‌ಸ್ಟಾರ್ ಅಜಿತ್ ಅಭಿನಯದ ಸೂಪರ್‌ ಹಿಟ್ ಸಿನಿಮಾ 'ವಲಿಮೈ' ಒಟಿಟಿಗೆ ರಿಲೀಸ್ ಆಗುತ್ತಿದೆ. ಜೀ5 ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದು, ಮಾರ್ಚ್ 25 ರಂದು ಬಿಡುಗಡೆಯಾಗುತ್ತಿದೆ. ಕಳೆದ ತಿಂಗಳು ಫೆಬ್ರವರಿ 25ರಂದು 'ವಲಿಮೈ' ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಈ ಸಿನಿಮಾ ಒಂದು ತಿಂಗಳ ಅಂತರದಲ್ಲಿಯೇ ಒಟಿಟಿಗೆ ಎಂಟ್ರಿಗೆ ಕೊಡುತ್ತಿದೆ.

'ವಲಿಮೈ' ಒಟಿಟಿ ಎಂಟ್ರಿಗೆ 10 ಸಾವಿರ ಚ. ಅಡಿ ಪೋಸ್ಟರ್

'ವಲಿಮೈ' ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿರುವ ಹಿನ್ನೆಲೆಯಲ್ಲಿ ಜೀ 5 ಸಂಸ್ಥೆ ಭರ್ಜರಿ ಪ್ರಚಾರ ಆರಂಭಿಸಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕುತ್ತಿದ್ದಾರೆ.

10 Thousand sq.feet Poster for Ajith Movie Valimai OTT Release

'ವಲಿಮೈ' ರಿಲೀಸ್‌ಗಾಗಿ ಬರೋಬ್ಬರಿ 10 ಸಾವಿರ ಚದರ ಅಡಿಯಲ್ಲಿ ಪೋಸ್ಟರ್ ನಿರ್ಮಿಸಲಾಗಿದೆ. ಒಟಿಟಿ ಗ್ರಾಹಕರನ್ನು ಸೆಳೆಯಲು ಜೀ 5 ಸಂಸ್ಥೆ ಚಿತ್ರರಸಿಕರ ತನ್ನೆಡೆಗೆ ಸೆಳೆಯುತ್ತಿದೆ. ಭಾರತೀಯ ಸಿನಿಮಾ ಚಿತ್ರರಂಗದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮಟ್ಟದ ಪೋಸ್ಟರ್‌ ಅನ್ನು ಯಾರೂ ರಿಲೀಸ್ ಮಾಡೇ ಇಲ್ಲ. ಆದರೆ ಈಗ ಜೀ 5 ಇಂತಹದ್ದೊಂದು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ.

ಕನ್ನಡದಲ್ಲೂ ವಲಿಮೈ ಲಭ್ಯ!

ಅಜಿತ್ ಅಭಿಯದ ತಮಿಳು ಸಿನಿಮಾ 'ವಲಿಮೈ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ತಮಿಳು ಅವತರಣಿಕೆಯನ್ನೇ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಕನ್ನಡ ಭಾಷೆಗೂ ಡಬ್ ಆಗಿತ್ತು. ಈಗ ಒಟಿಟಿಯಲ್ಲಿ ಐದೂ ಭಾಷೆಯಲ್ಲಿ ಮಾರ್ಚ್ 25ರಿಂದ 'ವಲಿಮೈ' ಸಿನಿಮಾವನ್ನು ನೋಡಬಹುದಾಗಿದೆ.

10 Thousand sq.feet Poster for Ajith Movie Valimai OTT Release

'ವಲಿಮೈ' ಸಿನಿಮಾದಲ್ಲಿ ಅಜಿತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ವಲಿಮೈ' ಸಿನಿಮಾವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದು, ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಅಜಿತ್‌ ಜೊತೆ ಬಾಲಿವುಡ್ ನಟಿ ಹುಮಾ ಖುರೇಷಿ, ತೆಲುಗು ನಟ ಕಾರ್ತಿಕೇಯ ಗುಮ್ಮಕೊಂಡ, ಕನ್ನಡದಿಂದ ನಟ ಅಚ್ಯುತ್ ಕುಮಾರ್ ನಟಿಸಿರುವುದು ವಿಶೇಷ.

More from Filmibeat

English summary
10 thousand sq.feet poster for Ajith movie Valimai Ott release. Here in more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X