Horror Shows in OTT:ನೀವು ನೋಡಲೇ ಬೇಕಾದ 5 ಬೆಚ್ಚಿಬೀಳಿಸುವ ಹಾರರ್ ಶೋಗಳ ಪಟ್ಟಿ ಇಲ್ಲಿದೆ

ಕನ್ನಡದಲ್ಲಂತೂ ಇತ್ತೀಚೆಗೆ ಹಾರರ್ ಸಿನಿಮಾಗಳು ಬರೋದೇ ಕಡಿಮೆ ಆಗಿದೆ. ಒಂದು ಕಾಲದಲ್ಲಿ ಕನ್ನಡದಲ್ಲೂ ಭಯ ಹುಟ್ಟಿಸುವ ಇಂತಹ ಸಿನಿಮಾಗಳು ನೋಡಲು ಸಿಗುತ್ತಿತ್ತು. ಆದ್ರೀಗ ಹಾರರ್ ಸಿನಿಮಾಗಳು ಬರೋದೇ ಅಪರೂಪವಾಗಿಬಿಟ್ಟಿದೆ. ಆದರೆ, ಬೇರೆ ಭಾಷೆಗಳಲ್ಲಿ ಈ ಕ್ಯಾಟಗರಿಯ ಸಿನಿಮಾಗಳನ್ನು ಹೆಚ್ಚಾಗಿ ನೋಡಬಹುದು. ಅದರಲ್ಲೂ ಹಾಲಿವುಡ್, ಬಾಲಿವುಡ್‌ನಲ್ಲಿ ಹಾರರ್ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ.

ಈಗ ಓಟಿಟಿ ಜಮಾನ. ಹಾರರ್ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಸಾಕಷ್ಟು ಕಂಟೆಂಟ್ ಈ ವೇದಿಕೆಯಲ್ಲಿಯೇ ಸಿಗುತ್ತವೆ. ಜಿಯೋ ಸಿನಿಮಾ, ಹಾಟ್‌ ಸ್ಟಾರ್, ಅಮೆಜಾನ್ ಪ್ರೈಮ್ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಜನಪ್ರಿಯ ಓಟಿಟಿ ವೇದಿಕೆಗಳಲ್ಲಿ ಹಾರರ್ ಶೋಗಳನ್ನು ನೋಡಬಹುದು. ಹಾಗಿದ್ದರೆ ಈ ವೇದಿಕೆಗಳಲ್ಲಿರುವ, ನೋಡಲೇ ಬೇಕಾದ ಐದು ಹಾರರ್ ಶೋಗಳ ಪಟ್ಟಿ ಇಲ್ಲಿದೆ.

5 Must-Watch Horror Shows in Jio Cinema Hotstar Amazon Prime and Netflix


ಎಂಟಿವಿ- ಡಾರ್ಕ್ ಸ್ಕ್ರೋಲ್‌

ಡಾರ್ಕ್‌ ಸ್ಕ್ರೋಲ್ ಅನ್ನೋದು ಒಂದು ರಿಯಾಲಿಟಿ ಶೋ. ಎಂಟಿವಿಯಲ್ಲಿ ಈ ರಿಯಾಲಿಟಿ ಶೋ ಪ್ರಸಾರ ಆಗಿತ್ತು. ಇದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ಉತ್ತರಾಖಂಡದಲ್ಲಿರುವ ಕೆಲವು ಭಯಾನಕ ಪ್ರದೇಶಗಳಿಗೆ ಭೇಟಿ ಕೊಡುತ್ತಾರೆ. ಅಲ್ಲಿರುವ ಭಯಾನಕ ಜೀವಿಗಳೊಂದಿಗೆ ಮಾತಾಡುವುದಕ್ಕೆ ಪ್ರಯತ್ನ ಪಡುತ್ತಾರೆ. ಈ ವೇಳೆ ಅವರು ತಮಗೆ ಎದುರಾಗುವ ಅಡೆ ತಡೆಗಳನ್ನು ಹೇಗೆ ಎದುರಿಸು ಮುನ್ನುಗ್ಗುತ್ತಾರೆ? ಅನ್ನೋದನ್ನು ತೋರಿಸಲಾಗಿದೆ. ಇದೊಂದು ಭಯಾನಕ ಅನುಭವ. ಇದನ್ನು ಜಿಯೋ ಸಿನಿಮಾದಲ್ಲಿ ನೋಡಬಹುದು.

ಅಮೆರಿಕನ್ ಹಾರರ್ ಸ್ಟೋರಿ

ಅಮೆರಿಕನ್ ಹಾರರ್ ಸ್ಟೋರಿ ವಿಭಿನ್ನ ಪರಿಕಲ್ಪನೆಯಲ್ಲಿ ಸ್ಟೋರಿಯನ್ನು ಹೇಳಲಾಗಿದೆ. ಈ ಸರಣಿ ವೀಕ್ಷಕರನ್ನು ಮಾನಸಿಕವಾಗಿ ತುಂಬಾನೇ ಕಾಡುತ್ತೆ. ಆತ್ಮಗಳು, ಭಯ ಹುಟ್ಟಿಸುವ ಮನೆ ವೀಕ್ಷಕರನ್ನು ಕಾಡುತ್ತವೆ. 'ಅಮೆರಿಕನ್ ಹಾರರ್ ಸ್ಟೋರಿ'ಯನ್ನು ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ನಟಿಸುವವರು ಕೂಡ ಗಮನ ಸೆಳೆಯುತ್ತಾರೆ. ಹಾಗೇ ದೃಶ್ಯಗಳು ಕೂಡ ಅಷ್ಟೇ ನಿದ್ದೆ ಕೆಡಿಸುತ್ತವೆ. ಇದು ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ಫ್ರಮ್

'ಫ್ರಮ್' ಇದೊಂದು ಭಯಾನಕ ಹಾರರ್ ಸೀರಿಸ್ ಎನ್ನುಬಹುದು. ರಾತ್ರಿಯ ವೇಳೆ ಗ್ರಾಮಸ್ಥರಿಗೆ ಭಯಾನಕ ಜೀವಿಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಕಣ್ಣು ತಪ್ಪಿಸಿ ಅವರೂ ಕೂಡ ತಪ್ಪಿಸಿಕೊಳ್ಳಬೇಕಾಗುತ್ತೆ. ಇಂತಹ ದೃಶ್ಯಗಳು ವೀಕ್ಷಕರ ಮುಂದೆ ಬಿಗಿಯಾದ ವಾತಾವರಣವನ್ನು ಸೃಷ್ಟಿ ಮಾಡುತ್ತೆ. ಈ ಸರಣಿಯಲ್ಲಿ ಭಯ ಹುಟ್ಟಿಸುವ ಜೀವಿಗಳ ವಿರುದ್ಧ ಹೋರಾಡುವ ಪಾತ್ರಗಳು ನೋಡುಗಳನ್ನು ತುದಿ ಸೀಟಿನಲ್ಲಿ ಕೂರುವಂತೆ ಮಾಡುತ್ತೆ. ಈ ಟಿವಿ ಸೀರಿಸ್ ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು.

ದಿ ಟೇಕಿಂಗ್ ಆಫ್ ಡೆಬೋರಾ ಲೋಗನ್

'ದಿ ಟೇಕಿಂಗ್ ಆಫ್ ಡೆಬೋರಾ ಲೋಗನ್' ಇದು ಓಟಿಟಿಯಲ್ಲಿ ಇರುವ ಹಾರರ್ ಸಿನಿಮಾಗಳ ಪೈಕಿ ಭಯ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಅಲ್ಝೈಮರ್ ಖಾಯಿಲೆಯನ್ನೇ ಪ್ರಧಾನ ವಿಷಯವಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಮಾನಸಿಕ ಖಾಯಿಲೆಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಸಿನಿಮಾ ತೆಗೆಯಲಾಗಿದೆ. ಇದು ಬಾಕ್ಸಾಫೀಸ್‌ನಲ್ಲಿ ಸೋತಿದ್ದರೂ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದು ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.

ದಿ ಹಾಂಟಿಂಗ್ ಆಫ್ ಹಿಲ್ ಹೌಸ್

'ದಿ ಹಾಂಟಿಂಗ್ ಆಫ್ ಹಿಲ್ ಹೌಸ್' ಇದು ಶಿರ್ಲಿ ಜಾಕ್ಸನ್ ಅವರ ಕಾದಂಬರಿಯನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. ಬೆಟ್ಟದ ಮೇಲಿರುವ ಒಂಟಿ ಮನೆಯಲ್ಲಿ ಅವರ ಹಿಂದಿನ ಘಟನೆಗಳು ಕಾಡುವುದಕ್ಕೆ ಶುರು ಮಾಡುತ್ತವೆ. ಸೈಕಾಲಜಿಕಲ್ ಹಾರರ್ ಹಾಗೂ ಕಥೆ ಹೇಳುವ ಶೈಲಿ ಗಮನ ಸೆಳೆಯುತ್ತೆ. 'ದಿ ಹಾಂಟಿಂಗ್ ಆಫ್ ಹಿಲ್ ಹೌಸ್' ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

More from Filmibeat

English summary
5 Must-Watch Horror Shows in Jio Cinema, Hotstar, Amazon Prime, and Netflix
Read more about: ott movies filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X