ಎಮ್ಮಿ ಪ್ರಶಸ್ತಿ ಗೆದ್ದ ಈ 7 ವೆಬ್ ಸೀರಿಸ್‌ಗಳನ್ನು ನೋಡಿದ್ದೀರಾ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
77ನೇ ಪ್ರೈಮ್‌ಟೈಮ್ ಎಮ್ಮಿ ಅವಾರ್ಡ್ಸ್ ಸಮಾರಂಭ ಇತ್ತೀಚೆಗೆ ನಡೆದಿದೆ. ಟಿವಿ ತಾರೆಯರನ್ನು ಗೌರವಿಸುವುದಕ್ಕಾಗಿ ಹಮ್ಮಿಕೊಳ್ಳುವ ಈ ಪ್ರಶಸ್ತಿ ಸಮಾರಂಭದಲ್ಲಿ ಟಿವಿ ಹಾಗೂ ವೆಬ್ ಸೀರಿಸ್‌ನ ಸ್ಟಾರ್ ನಟರನ್ನು ಗೌರವಿಸಲಾಯ್ತು. ಹಾಲಿವುಡ್ ಕಂಟೆಂಟ್‌ಗಳನ್ನು ನೋಡುವವರಿಗೆ ಈ ಪ್ರಶಸ್ತಿ ಸಮಾರಂಭ ಕುತೂಹಲವನ್ನು ಕೆರಳಿಸಿತ್ತು. ಭಾರತದಲ್ಲೂ ಎಮ್ಮಿ ಪ್ರಶಸ್ತಿಯನ್ನು ವೀಕ್ಷಿಸಿ ಸಿನಿ ಪ್ರೇಮಿಗಳು ಕಣ್ತುಂಬಿಕೊಂಡಿದ್ದಾರೆ.
ಇದೂವರೆಗೂ ಎಮ್ಮಿ ಪ್ರಶಸ್ತಿ ಸಮಾರಂಭದಲ್ಲಿ ಗೆದ್ದ ಟಿವಿ ಶೋಗಳು ಹಾಗೂ ವೆಬ್ ಸೀರಿಸ್‌ಗಳನ್ನು ಭಾರತದಲ್ಲಿಯೂ ನೋಡಬಹುದು. ಜಿಯೋಹಾಟ್‌ಸ್ಟಾರ್‌ನಲ್ಲಿ 7 ಬೆಸ್ಟ್ ಎಮ್ಮಿ ಪ್ರಶಸ್ತಿ ಗೆದ್ದ ಟಿವಿ ಸೀರಿಸ್ ಹಾಗೂ ವೆಬ್ ಸೀರಿಸ್ ಅನ್ನು ಸ್ಟ್ರೀಮಿಂಗ್ ಮಾಡುತ್ತಿದೆ. ವೀಕೆಂಡ್‌ನಲ್ಲಿ ಮನೆಯಲ್ಲಿಯೇ ಕೂತು ಎಮ್ಮಿ ಪ್ರಶಸ್ತಿ ಗೆದ್ದಿರುವ ಈ ವೆಬ್ ಸೀರಿಸ್‌ಗಳನ್ನು ನೋಡಬಹುದು.

ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್ (Only Murders in the Building)
'ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್' ಇದು ಅಮೆರಿಕದ ಜನಪ್ರಿಯ ಮಿಸ್ಟರಿ, ಕಾಮಿಡಿ, ಡ್ರಾಮಾವನ್ನು ಒಳಗೊಂಡ ಅಮೆರಿಕದ ಟಿವಿ ಸೀರಿಸ್. ಒಂದೇ ಅಪಾರ್ಟ್‌ಮೆಂಟ್‌ನಲ್ಲಿರುವ ಮೂವರು ನಿವಾಸಿಗಳು ಅದೇ ಕಟ್ಟಡದಲ್ಲಿ ನಡೆಯುವ ಮರ್ಡರ್ ಮಿಸ್ಟ್ರಿಯನ್ನು ಭೇದಿಸುವುದೇ ಈ ಸೀರಿಸ್‌ನ ಒಂದೆಳೆ ಕಥೆ. ಈ ಟಿವಿ ಸೀರಿಸ್ ಆರಂಭ ಆದಲ್ಲಿಂದಲೂ ನಿರಂತರವಾಗಿ ಮೆಚ್ಚುಗೆಯನ್ನು ಗಳಿಸುತ್ತಲೇ ಇದೆ. ಈ ಟಿವಿ ಸೀರಿಸ್‌ನ ಕಥೆ, ಚುರುಕಾದ ಸಂಭಾಷಣೆ, ಹಾಸ್ಯ ನಟರ ಅಭಿನಯ ಆಕರ್ಷಕವಾಗಿವೆ. ಇದು ಎಮ್ಮಿ ಅವಾರ್ಡ್ ಗೆಲ್ಲದೇ ಹೋದರೂ, ನಿರಂತರವಾಗಿ ನಾಮಿನೇಟ್ ಆಗುತ್ತಲೇ ಇದೆ. ಹೀಗಾಗಿ ಅಮೆರಿಕನ್ ಟಿವಿ ಸೀರಿಸ್ ಪ್ರಿಯರಾಗಿದ್ದರೆ, ಇದನ್ನು ನೋಡಬಹುದು.
ದಿ ಪಿಟ್ (The Pitt)
ಇತ್ತೀಚೆಗೆ ಅಮೆರಿಕದಲ್ಲಿ ಮೆಡಿಕಲ್ ಹಿನ್ನೆಲೆಯುಳ್ಳ ಟಿವಿ ಶೋಗಳು ಜನಪ್ರಿಯವಾಗುತ್ತಿವೆ. ಆ ಸಾಲಿಗೆ 'ದಿ ಪಿಟ್' ಟಿವಿ ಸೀರಿಸ್ ಕೂಡ ಸೇರಿಕೊಂಡಿದೆ. ಅಮೆರಿಕದ ಮಹಾನಗರಗಳಲ್ಲಿರುವ ಆರೋಗ್ಯ ಕಾರ್ಯಕರ್ತರ ಕೆಲಸ, ಅವರ ಒತ್ತಡಗಳು, 15 ಗಂಟೆಗಳ ಶಿಫ್ಟ್, ಇವುಗಳನ್ನು ಇಟ್ಟುಕೊಂಡು ಭಾವನಾತ್ಮಕವಾಗಿ ಈ ಸೀರಿಸ್ ಅನ್ನು ಕಟ್ಟಿಕೊಡಲಾಗಿದೆ. ಈ ಸೀರಿಸ್ ಹಲವು ಎಮ್ಮಿ ಪ್ರಶಸ್ತಿಗಳನ್ನು ಮೂಲಕ ಗಮನ ಸೆಳೆದಿದೆ.
ದಿ ಪೆಂಗ್ವಿನ್ (The Penguin)
ಡಿಸಿ ಕಾಮಿಕ್ಸ್ ನಿರ್ಮಾಣದ 'ದಿ ಪೆಂಗ್ವಿನ್' ಸೀರಿಸ್ ಅಮೆರಿಕದಲ್ಲಿ ಜನಪ್ರಿಯ ಟಿವಿ ಸೀರಿಸ್. ಸೂಪರ್‌ವಿಲನ್‌ನ ಈ ಸೀರಿಸ್ ಅಮೆರಿಕನ್ನರ ಫೇವರಿಟ್ ಸೀರಿಸ್. ಹಾಗೇ ಭಾರತದಲ್ಲೂ ಯುವ ಸಮುದಾಯಗಳ ಅಚ್ಚು ಮೆಚ್ಚಿನ ಸೀರಿಸ್ ಆಗಿದೆ. ಒಬ್ಬ ಖಳನಾಯಕನ ಕಥೆಯನ್ನು ಥ್ರಿಲ್ಲಿಂಗ್ ನಿರೂಪಣೆಯ ಮೂಲಕ ವೀಕ್ಷಕರ ಮುಂದೆ ಇಡಲಾಗಿದೆ. ಈ ಸೀರಿಸ್ ಕೂಡ ಹಲವು ಎಮ್ಮಿ ಪ್ರಶಸ್ತಿಗಳನ್ನು ಗೆದ್ದಿದೆ.
ಹ್ಯಾಕ್ಸ್ (Hacks)
ಇದು ಅಮೆರಿಕದ ಮತ್ತೊಂದು ಜನಪ್ರಿಯ ಡಾರ್ಕ್ ಕಾಮಿಡಿ ಟಿವಿ ಸೀರಿಸ್. 2021ರಲ್ಲಿ ಆರಂಭವಾದ ಈ ಟಿವಿ ಸೀರಿಸ್ 2025ರವರೆಗೂ ಮುಂದುವರೆದಿದೆ. ಇಲ್ಲಿವರೆಗೂ ಸುಮಾರು 5 ಸೀಸನ್‌ಗಳು ಬಂದಿವೆ. ಪ್ರತಿಯೊಂದು ಸೀಸನ್‌ಗೂ ಅಷ್ಟೇ ಜನಪ್ರಿಯತೆಯನ್ನು ಗಳಿಸಿದೆ. ಡಾರ್ಕ್ ಕಾಮಿಡಿ ಶೈಲಿಯ ಕಥೆಗಳು ವಿಶ್ವದ ಪ್ರತಿಯೊಂದು ಕಡೆಯೂ ಸದ್ದು ಮಾಡುತ್ತಿದೆ. ಅದ್ಭುತ ಬರಹ ಹಾಗೂ ಚಿತ್ರಕಥೆಯಿಂದ ವಿಶ್ವದ ಗಮನ ಸೆಳೆದಿದೆ. ಈ ಟಿವಿ ಸೀರಿಸ್ ಮತ್ತೊಂದು ಎಮ್ಮಿ ಪ್ರಶಸ್ತಿಯನ್ನು ಗೆದ್ದಿದೆ.
ದಿ ವೈಟ್ ಲೋಟಸ್ (The White Lotus)
ಐಷಾರಾಮಿ ರೆಸಾರ್ಟ್‌ನಲ್ಲಿ ಅತಿಥಿಗಳು ಹಾಗೂ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಫೋಕಸ್ ಮಾಡಲಾಗಿದೆ. ಪ್ರತಿಯೊಂದು ಸೀಸನ್ ಅನ್ನು ಬೇರೆ ಬೇರೆ ಲೋಕೇಶನ್‌ನಲ್ಲಿ ಶೂಟ್ ಮಾಡಲಾಗಿದೆ. ಈ ಸೀರಿಸ್‌ನಲ್ಲಿ ರೆಸಾರ್ಟ್ ಬರುವ ಅತಿಥಿಗಳು ಹಾಗೂ ಅಲ್ಲಿನ ಕೆಲಸಗಾರರು ತಮ್ಮ ವೈಯಕ್ತಿಕ ಜೀವನವನ್ನು ಹೇಗೆ ಡೀಲ್ ಮಾಡುತ್ತಾರೆ ಅನ್ನೋದನ್ನು ತೋರಿಸಲಾಗಿದೆ. ಈ ಸೀರಿಸ್ ಕೂಡ ಹಲವು ಬಾರಿ ಎಮ್ಮಿ ಪ್ರಶಸ್ತಿಗೆ ನಾಮಿನೇಟ್ ಆಗಿವೆ. ಹಾಗೇ ಕೆಲವು ಪ್ರಶಸ್ತಿಗಳನ್ನು ಗೆದ್ದಿವೆ.

ದಿ ಲಾಸ್ಟ್ ಆಫ್ ಅಸ್ (The Last of Us)
ನಾಟಿ ಡಾಗ್‌ನ ಜನಪ್ರಿಯ ವಿಡಿಯೋ ಗೇಮ್ ಸೀರಿಸ್ ಅನ್ನು ಟಿವಿ ಸೀರಿಸ್ ಪರಿವರ್ತಿಸಲಾದ ಶೋನೇ 'ದಿ ಲಾಸ್ಟ್ ಆಫ್ ಅಸ್'. ಟಿವಿ ಸೀರಿಸ್ ಅನ್ಯ ಲೋಕದ ಜಗತ್ತನ್ನು ಜೀವಂತವಾಗಿ ಇರಿಸಿದೆ. ಆಳವಾದ ಭಾವನಾತ್ಮಕ ದೃಶ್ಯಗಳು ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿತ್ತು. ಈ ಟಿವಿ ಸೀರಿಸ್ ಕೂಡ ಹಲವು ಬಾರಿ ಎಮ್ಮಿಗೆ ನಾಮಿನೇಟ್ ಆಗಿ, ಕಿರುತೆರೆಯ ಉನ್ನತ ಮಟ್ಟದ ಬ್ಲಾಕ್ ಬಸ್ಟರ್ ಸೀರಿಸ್ ಎಂದು ಸಾಬೀತು ಮಾಡಿದೆ.
ಅಂಡೋರ್ (Andor)
'ಅಂಡೋರ್' ಇದು 2016ರಲ್ಲಿ ತೆರೆಕಂಡಿದ್ದ 'ದಿ ರೋಗ್ ಒನ್'ನ ಪ್ರೀಕ್ವೆಲ್. ಈ ಟಿವಿ ಸೀರಿಸ್ ಪೊಲಿಟಿಕಲ್ ಸೈ ಥ್ರಿಲ್ಲರ್ ಆಗಿದ್ದು, ವಿಮರ್ಶಕರಿಂದ ಮೆಚ್ಚುಗೆ ಪಡೆದಿಕೊಂಡಿದೆ. ಅಲ್ಲದೆ ಎಮ್ಮಿ ಪ್ರಶಸ್ತಿಯನ್ನು ಗೆದ್ದಿರುವುದು ಇದರ ಜನಪ್ರಿಯತೆಯನ್ನು ಸಾಬೀತು ಮಾಡುತ್ತದೆ.
ಸಂಬಡಿ ಸಮ್‌ವೇರ್ (Somebody Somewhere)
'ಸಂಬಡಿ ಸಮ್‌ವೇರ್' ಇದು ಕಾಮಿಡಿಯನ್ ಬ್ರಿಡ್ಜೆಟ್ ಎವೆರೆಟ್ ಅವರ ಬದುಕಿನಿಂದ ಪ್ರೇರಣೆ ಪಡೆದು ಹೆಣೆದ ಕಥೆ. ವಿಶೇಷ ಅಂದರೆ, ಈ ವೆಬ್ ಸೀರಿಸನಲ್ಲಿ ಬ್ರಿಡ್ಜೆಟ್ ಎವೆರೆಟ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಂಗೀತದ ಮೂಲಕ ಸಂತೋಷವನ್ನು ಕಂಡುಕೊಳ್ಳುವ ಮಹಿಳೆಯ ಜರ್ನಿಯನ್ನು ಪ್ರತಿಬಿಂಬಿಸುತ್ತೆ. ಈ ಸೀರಿಸ್ ಪೋಷಕ ನಟ ವಿಭಾಗಲ್ಲಿ ಎಮ್ಮಿ ಪ್ರಶಸ್ತಿಯನ್ನು ಗಳಿಸಿದೆ.


Click it and Unblock the Notifications











