'83' ಸಿನಿಮಾದಿಂದ ಆದ ನಷ್ಟ ನಿಗಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್: ಒಂದೇ ಸಿನಿಮಾ 2 ಒಟಿಟಿಗಳಲ್ಲಿ ರಿಲೀಸ್

1983ಯಲ್ಲಿ ಕಪಿಲ್ ದೇವ್ ಮತ್ತು ಅವರ ತಂಡ ಭಾರತಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ತಂಡ. ಈ ಐತಿಹಾಸಿಕ ಕ್ಷಣವನ್ನು ತೆರೆಮೇಲೆ ತರಲು ಸಾಕಷ್ಟು ಶ್ರಮವಹಿಸಲಾಗಿತ್ತು. ಈ ಸಿನಿಮಾ ನೋಡಿ ಪ್ರೇಕ್ಷಕರು ಇಷ್ಟ ಪಟ್ಟೇ ಪಡುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಹಾಗಾಗಲಿಲ್ಲ. ಸಿನಿಮಾ ನೋಡಿದವರೆಲ್ಲರೂ ಉತ್ತಮ ಪ್ರತಿಕ್ರಿಯೆ ನೀಡಿದರೂ. '83' ಸಿನಿಮಾ ಮಾತ್ರ ಗಳಿಕೆಯಲ್ಲಿ 100 ಮಾಡಲು ಪರದಾಡಿತ್ತು. ರಣ್‌ವೀರ್ ಸಿಂಗ್ ಅಭಿನಯ ಕಂಡು ಸಿನಿಮಾ ನೋಡಿದವರೆಲ್ಲರೂ ಇಷ್ಟ ಪಟ್ಟಿದ್ದರು.

ಒಂದೂವರೆ ವರ್ಷದಿಂದ '83' ಸಿನಿಮಾ ರಿಲೀಸ್‌ಗೆ ಕಾದು ಕೂತಿತ್ತು. ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಬಾಕ್ಸಾಫೀಸ್ ಚಿಂದಿಯಾಗುವುದು ಗ್ಯಾರಂಟಿ ಎನ್ನಲಾಗಿತ್ತು. '83' ನೋಡಲು ಜನರು ಚಿತ್ರಮಂದಿರಕ್ಕೆ ಬರಲೇ ಇಲ್ಲ. ಹೀಗಾಗಿ '83' ನಿರ್ಮಾಪಕರಿಗೆ ಭಾರೀ ನಷ್ಟ ಆಗಿದೆ. ವಿಶೇಷ ಅಂದರೆ, ಈ ಸಿನಿಮಾ ನಿರ್ಮಾಪಕರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ಹೀಗಾಗಿ ಈ ನಷ್ಟದಿಂದ ಪಾರಾಗಲು ನಿರ್ಮಾಪಕರೆಲ್ಲರೂ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

83 ಒಟಿಟಿ ಎಂಟ್ರಿಗೆ ವೇದಿಕೆ

83 ಒಟಿಟಿ ಎಂಟ್ರಿಗೆ ವೇದಿಕೆ

ಬಾಲಿವುಡ್ ನಟ ರಣವೀರ್​ ಸಿಂಗ್ ಅಭಿನಯದ '83' ಸೋಲಿಗೆ ಕಾರಣವೇನು ಅನ್ನುವುದು ಇನ್ನೂ ಬಾಲಿವುಡ್ ಮಂದಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ವಿಮರ್ಶಕರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ, '83' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದು ದೊಡ್ಡ ನಿರಾಸೆಯನ್ನೇ ತಂದಿದೆ. ಬಾಕ್ಸಾಫೀಸ್‌ನಲ್ಲಿ ಕೇವಲ ​ 100 ಕೋಟಿ ರೂಪಾಯಿ ಗಳಿಸಲು ಈ ಸಿನಿಮಾ ಪರದಾಡಿದ್ದು, ಇಡೀ ತಂಡಕ್ಕೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ. ಹೀಗಾಗಿ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇಲ್ಲಾದರೂ ಸಿನಿಮಾ ನೋಡಿ ಜನರು ಮೆಚ್ಚಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ.

2 ಒಟಿಟಿಗಳಲ್ಲಿ '83' ರಿಲೀಸ್

2 ಒಟಿಟಿಗಳಲ್ಲಿ '83' ರಿಲೀಸ್

ಭಾರತೀಯ ಚಿತ್ರರಂಗದ ಇತಿಹಾಸ ಸೃಷ್ಟಿಸಲು ಹೊರಟಿದ್ದ ಸಿನಿಮಾ ಎರಡು ಒಟಿಟಿಗಳಲ್ಲಿ ಬಿಡುಗಡೆಯಾಗುತ್ತಿದೆ. '83' ಸಿನಿಮಾ ನೆಟ್‌ಫ್ಲಿಕ್ಸ್ ಹಾಗೂ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆಯಂತೆ. '83' ಸಿನಿಮಾದ ಹಿಂದಿ ಅವತರಣಿಕೆ ನೆಟ್‌ಫ್ಲಿಕ್ಸ್‌ನಲ್ಲಿಯೂ, ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ವರ್ಷನ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ರಿಲೀಸ್ ಆಗುತ್ತಿದೆ.

'ತಲೈವಿ' 2 ಒಟಿಟಿ ವೇದಿಕೆಯಲ್ಲಿ ರಿಲೀಸ್

'ತಲೈವಿ' 2 ಒಟಿಟಿ ವೇದಿಕೆಯಲ್ಲಿ ರಿಲೀಸ್

ಒಂದೇ ಸಿನಿಮಾ ಎರಡು ಒಟಿಟಿಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಎರಡು ಒಟಿಟಿಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕಂಗನಾ ರನೌತ್ ಅಭಿನಯದ 'ತಲೈವಿ' ಸಿನಿಮಾದ ಹಿಂದಿ ಅವತರಣಿಕೆ​ ನೆಟ್​ಫ್ಲಿಕ್ಸ್ ಬಿಡುಗಡೆಯಾಗಿತ್ತು. ಬೇರೆ ಭಾಷೆಯ ಅವತರಣಿಕೆಗಳನ್ನು ಅಮೆಜಾನ್​ ಪ್ರೈಮ್​ ವಿಡಿಯೋಗೆ ನೀಡಲಾಗಿತ್ತು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.

ನಷ್ಟದಿಂದ ತಪ್ಪಿಸಿಕೊಳ್ಳಲು ಈ ಯತ್ನ

ನಷ್ಟದಿಂದ ತಪ್ಪಿಸಿಕೊಳ್ಳಲು ಈ ಯತ್ನ

'83' ಸಿನಿಮಾ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳೇ ಕೈ ಜೋಡಿಸಿದ್ದವು. ಬಿಡುಗಡೆ ವೇಳೆ ಕನ್ನಡ ಕಿಚ್ಚ ಸುದೀಪ್ ಜೊತೆಯಾಗಿದ್ದರೆ, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳಿನಲ್ಲಿ ಕಮಲ್ ಹಾಸನ್ ನಿರ್ಮಾಣ ಸಂಸ್ಥೆಗಳು ಬಿಡುಗಡೆಗೆ ಸಹಕರಿಸಿದ್ದವು. ಆದರೂ ಸಿನಿಮಾ ಸೋಲನ್ನು ಅನುಭವಿಸಿತ್ತು. ಹೀಗಾಗಿ ಈ ನಷ್ಟವನ್ನು ಭರಿಸಿಕೊಳ್ಳಲು ಎರಡು ಒಟಿಟಿ ವೇದಿಕೆಗಳಿಗೆ ಸಿನಿಮಾ ಮಾರಾಟ ಮಾಡಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಫೆಬ್ರವರಿ 18 ಅಥವಾ 25ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

More from Filmibeat

English summary
83 will be releasing in two ott platforms Netflix and Disney + hotstar. '83' Hindi version will be releasing in Netflix and Telugu, Tamil, Kannada, Mmalayalam version will be releasing on Disney + Hotstar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X